ಫ್ಯಾಷನ್ ಡಿಸೈನರ್ ಆಗಿದ್ದ ಮಧು, ವಿಕಲಾಂಗ ಮಕ್ಕಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಕಥೆ

ಫ್ಯಾಷನ್ ಡಿಸೈನರ್ ಆಗಿದ್ದ ಮಧು ತುಗ್ನೈಟ್ ಎಂಬುವವರು 2010ರಲ್ಲಿ ಇಚಾ ಫೌಂಡೇಶನ್‌ ಒಂದನ್ನು ಸ್ಥಾಪಿಸಿ ಅದಕ್ಕಾಗಿ ತಮ್ಮ ಸಮಯ, ಹಣ ಹಾಗೂ ಪ್ರೀತಿಯನ್ನು ಮೀಸಲಿಟ್ಟು ಸುಮಾರು 20 ವಿಕಲಾಂಗ ಮಕ್ಕಳನ್ನು ಪೋಷಿಸುತ್ತಿದ್ದಾರೆ.

12th Sep 2019
  • +0
Share on
close
  • +0
Share on
close
Share on
close

ಸೀಳು ತುಟಿ ಮತ್ತು ಎಡಗೈ ಇಲ್ಲದೆ ಜನಿಸಿರುವ ಐದು ವರ್ಷದ ರಾಣಿ ಎಂಬ ಬಾಲಕಿಯ ಹೆಬ್ಬೆರಳು ಹೊರತುಪಡಿಸಿ ಅವಳ ಬಲಗೈಯಲ್ಲಿರುವ ಎಲ್ಲ ಬೆರಳುಗಳು ಜೋಡಿಸಲ್ಪಟ್ಟಿವೆ ಇಂತಹ ವಿಕಲಾಂಗೆ ಹಾಗೂ ಹುಟ್ಟಿನಿಂದಲೇ ತ್ಯಜಿಸಲ್ಪಟ್ಟ ರಾಣಿ ಈಗ ಸಾಮಾನ್ಯರಂತೆ ಶಾಲೆಗೆ ಹೋಗುತ್ತಾಳೆ. ಅವಳೊಂದಿಗೆ ಮಾತು ಬಾರದ ಮಹೇಶ್ ಮತ್ತು ಇತರ ಎಂಟು ಅನಾಥ ಮಕ್ಕಳು ಶಾಲೆಗೆ ಹೋಗುತ್ತಾರೆ. ಶಾಲೆ ಮುಗಿದನಂತರ, ಅವರು ವಿಶಾಖಪಟ್ಟಣಂನಲ್ಲಿರುವ ಇಚಾ ಫೌಂಡೇಶನ್ ನ ಮನೆಗೆ ಮರಳುತ್ತಾರೆ.


ದೈಹಿಕವಾಗಿ ಅಥವಾ ಮಾನಸಿಕ ಸವಾಲುಳ್ಳ ಇತರ ಹತ್ತು ಮಕ್ಕಳು ಪ್ರತಿದಿನ ಫಿಸಿಯೋಥೆರೆಪಿ ಚಿಕಿತ್ಸೆಗೆ ಒಳಪಡುತ್ತಾರೆ. ಈ ನಡುವೆ, ಇಚಾ ಫೌಂಡೇಶನ್ ತನ್ನ ಸಣ್ಣ ವಿಶೇಷ ಶಿಕ್ಷಣ ಕೇಂದ್ರದಲ್ಲಿ ಆಟಗಳು ಮತ್ತು ಚಟುವಟಿಕೆಗಳ ಮೂಲಕ ಮಕ್ಕಳಿಗೆ ಬಣ್ಣಗಳು ಮತ್ತು ಇತರ ಸಣ್ಣಪುಟ್ಟ ಕಲಿಕೆಗಳನ್ನು ಬೋಧಿಸಲಾಗುತ್ತಿದೆ.


60 ವರ್ಷದ ಮಾಜಿ ಫ್ಯಾಷನ್ ಡಿಸೈನರ್ ಮಧು ತುಗ್ನೈಟ್ ಅವರು 2010 ರಲ್ಲಿ ವಿಶೇಷ ಚೇತನ ಮಕ್ಕಳಿಗೆ ಸುರಕ್ಷತೆ ಮತ್ತು ಗೌರವನ್ನು ರೂಪಿಸುವ ಗುರಿಯನ್ನು ಹೊಂದಿರುವ ಸ್ವಯಂಸೇವಾ ಸಂಸ್ಥೆಯೊಂದಕ್ಕೆ ಬುನಾದಿ ಹಾಕಿದರು. ಪ್ರಸ್ತುತ, ಇಲ್ಲಿ 20 ಮಕ್ಕಳಿದ್ದು, ಅವರಿಗೆ ಆಹಾರ, ವಸತಿ, ವೈದ್ಯಕೀಯ ಸೌಲಭ್ಯಗಳು ಮತ್ತು ಶಾಲಾ ಶಿಕ್ಷಣವನ್ನು ಒದಗಿಸುತ್ತದೆ.


ಎಲ್ಲವನ್ನು ಒಬ್ಬರೆ ನಿಭಾಯಿಸಿತ್ತಿರುವ ಮಧು

ಮಧುರವರ ಕನಸಿನ‌ಕೂಸಾದ‌ ಫೌಂಡೇಶನ್, ಅನಾಥ ಹಾಗೂ ವಿಕಲಚೇತನ ಮಕ್ಕಳು ಮನೆ ಮತ್ತು ಕುಟುಂಬವನ್ನು ಹೊಂದಿರಬೇಕೆಂಬುದು ಅವರ ಆಸೆಯಾಗಿತ್ತು. ಹಾಗಾಗಿ ಅವರು ಇದಕ್ಕೆ ಇಚಾ ಫೌಂಡೇಶನ್ (ಇಚಾ ಎಂದರೆ ಬಯಕೆ ಎಂದರ್ಥ) ಎಂದು ಹೆಸರಿಟ್ಟರು.
ಮಧುರವರು ತನ್ನ ಕೆಲವು ವೈಯಕ್ತಿಕ ಆಸ್ತಿಗಳನ್ನು ಮಾರಿ ಎಕರೆ ಭೂಮಿಯನ್ನು ಖರೀದಿಸಿದರು, ಆದರೆ ಅದು ಜಲಾನಯನ ಪ್ರದೇಶವಾಗಿತ್ತು. ಅಲ್ಲಿ ಸಂಪನ್ಮೂಲಗಳು ವಿರಳವಾಗಿದ್ದವು ಆದರೂ ಅಲ್ಲಿ ವಾಸ್ತುಶಿಲ್ಪಿಗಳು ಅತಿಯಾದ ಹಣವನ್ನು ಕೇಳಿದರು. ಇನ್ನೂ ಕೆಲವರು ಈ ಭೂಮಿ‌ಯಿಂದ ಫೌಂಡೇಶನ್ ಸಾಧ್ಯವಿಲ್ಲ ಎಂದು ಕೊಂಕು ನುಡಿದರು. ಇದಕ್ಕೆಲ್ಲ‌ ತಲೆಕೆಡಿಸಿಕೊಳ್ಳದ ಮಧು ತನ್ನ ‘ಹೃದಯದ ಕರೆ' ಯಂತೆ ನಡೆದರು. ಅದರ ಪ್ರತಿರೂಪವಾಗಿ ಇಂದು ಇಚಾ ಫೌಂಡೇಶನ್ ಹಲವು ಮುದ್ದು ಮಕ್ಕಳ ಸಂತಸದ ಗೂಡಾಗಿದೆ.


ಇಂಟೀರಿಯರ್ ಡಿಸೈನರ್ ಆಗಿದ್ದ ಮಧುರವರ ಸ್ನೇಹಿತ ಅವರನ್ನು ವಾಸ್ತುಶಿಲ್ಪಿಯೊಬ್ಬರಿಗೆ ಸಂಪರ್ಕಿಸಿದರು. "ಅವರು ಫೌಂಡೇಶನ್ ಸ್ಥಾಪಿಸಲು ನನಗೆ ಸಹಾಯ ಮಾಡಿದರು, ಆದರೆ ನಾನು ನಿಜವಾಗಿಯೂ ಬಯಸಿದ್ದನ್ನು ಅವರಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ವಿನ್ಯಾಸಗೊಳಿಸಲು ಪ್ರಾರಂಭಿಸಿದಾಗಲಿಂದಲೂ ನಾನು ನಿರಂತರವಾಗಿ ಎಲ್ಲವನ್ನು ಪ್ರಶ್ನಿಸುತ್ತಿದ್ದೆ” ಎಂದು ಮಧು ನೆನಪಿಸಿಕೊಳ್ಳುತ್ತಾರೆ.


ಅಂತಿಮವಾಗಿ, ಮಧು ಅವರ ಫೌಂಡೇಶನ್‌‌ ಕನಸಿನಂತೆ ನಿರ್ಮಾಣಗೊಳ್ಳದ ಕಾರಣ ಅವರನ್ನು ಬಿಟ್ಟುಬಿಡಬೇಕಾಯಿತು. ನಂತರ ಕೆಲಸಗಳನ್ನು ತನ್ನ ಕೈಗೆ ತೆಗೆದುಕೊಂಡು ಹಳ್ಳಿಯಿಂದ ಕೆಲವು ಕಲ್ಲುಕೆಲಸ ಮಾಡುವವರನ್ನು ನೇಮಿಸಿಕೊಂಡರು. ಫೌಂಡೇಶನ್ ನಲ್ಲಿ ನಿರ್ಮಿಸಿದ ಐದು ಕಾಟೇಜ್ ಗಳು ಭೂಮಿಯ ಸಾಕಷ್ಟು ಭಾಗವನ್ನು ಆವರಿಸಿಕೊಂಡಿತು. ಉಳಿದ ಸ್ಥಳದಲ್ಲಿ ಮಕ್ಕಳು ಆಟವಾಡಲು ಒಳಾಂಗಣ ವಿನ್ಯಾಸ ರೂಪಿಸಲು ಇಂಟರ್ನೆಟ್ ನಿಯತಕಾಲಿಕೆಗಳಲ್ಲಿನ ಡಿಸೈನ್ ಗಳಿಗೆ ಮೊರೆಹೋದರು.


"ನನಗೆ ಇಷ್ಟವಾಗುತಿದ್ದ ಯಾವುದೇ ಡಿಸೈನನ್ನು ಕೂಡ, ನಾನು ಫೋಟೋ ತೆಗೆದುಕೊಳ್ಳುತ್ತಿದ್ದೆ ಅಥವಾ ಅದನ್ನು ಒಂದು ಕಾಗದದ ಮೇಲೆ ಬರೆದುಕೊಳ್ಳುತ್ತಿದ್ದೆ. ಮರುದಿನ ಬೆಳಿಗ್ಗೆ ಅದನ್ನು ಮೇಸ್ತ್ರಿಗಳಿಗೆ ವಿವರಿಸುತ್ತಿದ್ದೆ" ಎಂದು ಅವರು ಹೇಳುತ್ತಾ, ಇಚಾ ಫೌಂಡೇಶನ ಪ್ರತಿ ಹೆಜ್ಜೆಗಳನ್ನು ನೆನಪಿಸಿಕೊಳ್ಳುತ್ತಾರೆ.


ಮಧುರವರು ಧೀರ್ಘ ಸಮಯದಿಂದ ತಮ್ಮ‌ ಐಡಿಯಾಗಳನ್ನು ಚಿತ್ರಿಸುತ್ತಿದ್ದರಿಂದ ಅವರ ಮನೆಯ (ಕುಟೀರಗಳು) ಬಗ್ಗೆ ತನ್ನದೇ ಆದ ಐಡಿಯಾವನ್ನು ಹೊಂದಿದ್ದರು. ಇದು ಸಂಪೂರ್ಣವಾಗಿ ಸ್ವಾತಂತ್ರ್ಯ, ಬಾಹ್ಯಾಕಾಶ, ಪ್ರಕೃತಿ ಮತ್ತು ಪ್ರಾಣಿಗಳನ್ನು ಒಳಗೊಂಡಿತ್ತು. ಆದರೆ‌ ಅವರ ಚಿತ್ರಗಳು ಕೇವಲ‌ ಕನಸಾಗಿ ಮಾರ್ಪಟ್ಟಿತು ಕಾರ್ಯಾರೂಪಕ್ಕೆ ಬರಲಿಲ್ಲ, ಅದು ಅವರನ್ನು ಹಗಲು ರಾತ್ರಿ ಕಾಡಿತು.


ಮಧು ತಮ್ಮ ಭೂಮಿಯಲ್ಲಿ ಮಣ್ಣಿನ ಮನೆಗಳನ್ನು ನಿರ್ಮಿಸಲು‌ ಕನಸು‌ ಕಂಡಿದ್ದರು, ಆದರೆ ಈ ಮನೆಗಳು ಜಲಾನಯನ ಪ್ರದೇಶಗಳಲ್ಲಿ ಉಳಿಯುವುದಿಲ್ಲ‌ ಎಂಬ ವಿರುದ್ಧ ಸಲಹೆಗಳು ಕೇಳಲ್ಪಟ್ಟವು. ಆದಾಗ್ಯೂ, ಅಂತಿಮವಾದ ನಿರ್ಮಾಣಕ್ಕೆ ಒಂದೂವರೆ ವರ್ಷ ಬೇಕಾಯಿತು, 2011 ರಲ್ಲಿ ಆರಂಭವಾದ ಕೆಲಸ 2013ರವರೆಗೂ ಮುಂದೂಡಿತು.

ಮಧುರವರ ಸ್ಫೂರ್ತಿ‌ ಹಾಗೂ ಕನಸು

ಮಧು ಅವರಿಗೆ ಬಾಲಿವುಡ್ ತಾರೆ ನರ್ಗಿಸ್ ದತ್‌ರವರು ವಿಕಲಾಂಗ ಮಕ್ಕಳಿಗೆ ನಡೆಸುತ್ತಿದ್ದ ಫೌಂಡೇಶನ್ ಬಹಳಷ್ಟು ಮೆಚ್ಚುಗೆಯಾಗಿತ್ತು. 1970 ರ ದಶಕದಲ್ಲಿ ಸ್ಥಾಪಿತವಾಗಿದ್ದ ಇಲ್ಲಿಗೆ, ಉತ್ಸಾಹಭರಿತರಾಗಿದ್ದ 25 ವರ್ಷದ ಮಧು ಸ್ವಯಂಸೇವಕರಾಗಿ‌ ಕಾರ್ಯನಿರ್ವಹಿಸಲು ಭೇಟಿ ನೀಡಿದ್ದರು.


ವಿಶಾಕಪಟ್ಟಣಂನಲ್ಲಿ ಇಚಾ ಫೌಂಡೇಶನ್
ಬಾಲಿವುಡ್ ನಟಿ‌‌ ಮಧುರವರ ಮನವಿಗೆ ಸ್ವಲ್ಪ‌ ಹಿಂದೇಟು ಹಾಕಿದರು‌. ಆದರೆ, ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಮಕ್ಕಳಿಗಾಗಿ ಏನಾದರೂ ಮಾಡಲು ಸಿದ್ಧರಾಗಿದ್ದರೆಂದು ಮಧು ತಿಳಿಸಿದರು. ವಿಶೇಷ ಚೇತನ ಹಾಗೂ ಮಾನಸಿಕ ಅಸ್ವಸ್ಥತೆ ಹೊಂದಿರುವ ಮಕ್ಕಳ ಬಗ್ಗೆ ತಮಗೆ ಏನಾದರೂ ಕಲ್ಪನೆ ಇದೆಯೇ ಎಂದು ನಟಿ ಕೇಳಿದಾಗ, ಮಧು ಅವರು ಇಂತಹ ಮಕ್ಕಳ ಬಗ್ಗೆ ಸಾಕಷ್ಟು ಚಲನಚಿತ್ರಗಳನ್ನು ನೋಡಿದ್ದೇನೆ ಎಂದು ಉತ್ತರಿಸಿದರು. ಆದರೂ, ನರ್ಗಿಸ್‌ ಮಧುರವರನ್ನು ಫೌಂಡೇಶನ್ ಒಳಗೆ ಹೋಗಿ ಮಕ್ಕಳನ್ನು‌ ಒಂದು ಸುತ್ತು ನೋಡಿ ಆನಂತರ ನಿರ್ಧರಿಸಲು ಕೇಳಿಕೊಂಡರು.


ಮಧುರವರು ಒಳಗೆ ನಡೆದು ಸ್ಥಿತಿಯನ್ನು ನೋಡಿದರು. ಇಡೀ ಕೋಣೆ ಮೂತ್ರ ಮತ್ತು ವಾಂತಿಯಿಂದ ಕೂಡಿತ್ತು. "ಇದು ನನಗೆ, ಸಹಾನುಭೂತಿಯ ಹಾಗು ನಾನು ನಿರ್ವಹಿಸಲು ಸಾಧ್ಯವಾಗದಂತಹ ಮಿಶ್ರ ಭಾವನೆ‌ ಮೂಡಿಸಿತು. ಹಾಗಾಗಿ ನಾನು ಒಂದು ವಾರದಲ್ಲಿ ಹಿಂತಿರುಗುತ್ತೇನೆ ಎಂದು ನಾನು ಅವರಿಗೆ ಹೇಳಿ ಬಂದೆ, ಆದರೆ ಎಂದಿಗೂ ಮರಳಿ ಹೋಗಲೇ‌‌ ಇಲ್ಲ. ಆದರೆ ಆ ಸಮಯದಲ್ಲಿಯೇ ನನ್ನ ಪೌಂಡೇಶನ್ ಕನಸಿನ ಬೀಜವನ್ನು ಬಿತ್ತಲಾಯಿತು" ಎಂದು ಅವರು ಹೇಳುತ್ತಾರೆ.

ಮನೆಯಲ್ಲಿಯೇ ಆರಂಭವಾದ ಕಾಳಜಿಕಾರ್ಯ

ಫೌಂಡೇಶನ್ ಸಿದ್ಧವಾಗುವ ಮೊದಲು, 2012ರ ಏಪ್ರಿಲ್ ರಲ್ಲಿ ಮೂರು ಮಕ್ಕಳನ್ನು ತಮ್ಮ ಮನೆಗೆ ಕರೆತಂದರು ಹಾಗೂ ಸೆಪ್ಟೆಂಬರ್ ವೇಳೆಗೆ ಅವರು ಒಟ್ಟು ಐದು ಮಕ್ಕಳು ಸೇರಿದರು. ಅವರಲ್ಲಿ ಮೂವರು ಶಿಶುಗಳು ಮತ್ತು ಉಳಿದ ಇಬ್ಬರು ನಾಲ್ಕರಿಂದ ಐದು ವರ್ಷ ವಯಸ್ಸಿನವರಿದ್ದರು.


ಬೀದಿಯಿಂದ ಅನಾಥ ಮಕ್ಕಳನ್ನು ಕರೆದುಕೊಂಡು ಹೋಗಲು ಪರವಾನಗಿ ಇಲ್ಲದ ಕಾರಣ, ಮಧು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕೇಂದ್ರದಿಂದ ಈ ಮಕ್ಕಳನ್ನು ಪಡೆದುಕೊಂಡರು. ನರ್ಗಿಸ್ ದತ್ ಅವರ ಫೌಂಡೇಶನ್ ಗೆ ಮೊದಲ ಭೇಟಿಯಲ್ಲಿನ ಕನಸು ತನ್ನ ಭೂಮಿಯಲ್ಲಿ ಪುನರುಜ್ಜೀವನಗೊಂಡಿತು, ಆದರೆ ಆಕೆ‌ ಇನ್ನು ಮುಂದೆ ಎಂದಿಗೂ 25 ವರ್ಷದವಳ ಹಾಗೇ ಆಲೋಚಿಸಬಾರದು ಎಂದು ಸ್ವತಃ ಸಲಹೆ ನೀಡಿಕೊಳ್ಳುತ್ತಾರೆ.


ಅಷ್ಟೆ ಅಲ್ಲದೇ, "ಹಲವರು ದತ್ತು ಪಡೆಯುವಾಗ, ಮಾನಸಿಕವಾಗಿ ಮತ್ತು ದೈಹಿಕವಾಗಿ ಸವಾಲಾಗಿರುವ ಮಕ್ಕಳಿಗೆ ಅವಕಾಶವನ್ನು ನೀಡುವುದಿಲ್ಲ. ಆದ್ದರಿಂದ, ಇಂತಹ ಮಕ್ಕಳನ್ನು ಕರೆದುಕೊಂಡು ಹೋಗಿ ಅವರಿಗೆ ಮನೆ ನಿರ್ಮಿಸಿದವರಲ್ಲಿ ನಾನು ಮೊದಲಿಗರು” ‌ಎಂದು‌ ಸಂತಸ‌‌ ಪಡುತ್ತಾರೆ.


ಅನಾಥರು, ನಿರ್ಗತಿಕ ಮಹಿಳೆಯರು ಮತ್ತು ವೃದ್ಧರಿಗೆ ಸೇರಿದಂತೆ ಕುಟುಂಬವನ್ನು‌ ನಿರ್ಮಿಸಿ‌ ಕೊಡುವ ಸಂಯೋಜಿತ ಸ್ಥಳವನ್ನಾಗಿಸಲು ಆಸೆ‌ ಇತ್ತಂತೆ, ಆದರೆ ಅದಕ್ಕೆಲ್ಲ ಬಹು ಪರವಾನಗಿಗಳ ಅಗತ್ಯವಿರುವುದರಿಂದ ಅದು ಸಾಧ್ಯವಾಗಲಿಲ್ಲ.

ಸುಸ್ಥಿರ ವಾತಾವರಣ ರಚನೆ

ಫೌಂಡೇಶನ್ ನ ಐದು ಕುಟೀರಗಳಲ್ಲಿ ವಾಸಿಸುವ ಎಲ್ಲ ಮಕ್ಕಳ ಕೊನೆಯ ಚಟುವಟಿಕೆಯ ಭಾಗವಾಗಿ ಹೊರಾಂಗಣವನ್ನು ಆಯ್ಕೆಮಾಡಿದ್ದಾರೆ. ಕೆಲ ಸಮಯ ಮಕ್ಕಳು ಆಟದ ಮೈದಾನಗಳಲ್ಲಿ ಕಂಡುಬಂದರೆ, ಗಾಲಿಕುರ್ಚಿಯಲ್ಲಿರುವವರು ಉಸ್ತುವಾರಿ‌ ಸಿಬ್ಬಂದಿಗಳೊಂದಿಗೆ ಅಡ್ಡಾಡುತ್ತಾರೆ. ಈ ಸ್ಥಳಕ್ಕೆ ಹಸಿರನ್ನು ನಿರ್ಮಿಸಲು ಮಧುರವರು ವಿನ್ಯಾಸಗೊಳಿಸಿದ ಪೌಂಡೇಶನ್ ಆವರಣದಲ್ಲಿ ಒಂದು ದೊಡ್ಡ ಹುಲ್ಲುಹಾಸು ಎರಡು ಉಯ್ಯಾಲೆ, ಹಸುಗಳು ಹಾಗೂ ವ್ಯಾಪಕವಾದ ಪಕ್ಷಿಗಳನ್ನು ಹೊಂದಿಸಲಾಗಿದೆ. ಕೆಲವೊಮ್ಮೆ, ಅವರುಗಳನ್ನು ಫೌಂಡೇಶನ್ ನಿಂದ ಹೊರಗೆ ಉದ್ಯಾನವನ ಮತ್ತು ಈಜುಕೊಳಕ್ಕೆ ಕೂಡಾ ಕರೆದೊಯ್ಯಲಾಗುತ್ತದೆ.


ಪ್ರಸ್ತುತ 20 ಮಕ್ಕಳನ್ನು ಬೆಳೆಸುತ್ತಿರುವ ಈ ಫೌಂಡೇಶನ್ ಆರಂಭದಲ್ಲಿ ತನ್ನ ಸ್ನೇಹಿತರು ಮತ್ತು ಕುಟುಂಬದವರಿಂದ ದೇಣಿಗೆ ಪಡೆಯಿತು. ಆದರೆ ಇದೀಗ ಜನರು ಊಟವನ್ನು ಆಯೋಜಿಸುವುದು ಅಥವಾ ಒಂದು ದಿನಕ್ಕೆ ಊಟವನ್ನು ಒದಗಿಸುವುದು ಮುಂತಾದ ನೆರವಿನ ಮೂಲಕ ಅನೇಕರು ಅವರಿಗೆ ಸಹಾಯ ಮಾಡುತ್ತಿದ್ದಾರೆ.


ಮಧುರವರು‌ ಕೇವಲ ಸಾವಯವ ಆಹಾರಕ್ಕೆ ಪ್ರಾಮುಖ್ಯತೆ ನೀಡಿ ಹೊರಗಿನ ಊಟಕ್ಕೆ ಅವರು‌ ಕಡಿವಾಣ ಹಾಕಿದ್ದಾರೆ. ಆದ್ದರಿಂದ, ಸಹಾಯ ಮಾಡುವವರು ಊಟದ ವೆಚ್ಚವನ್ನು ಭರಿಸಬಹುದು.


'ಇಚಾ'ವನ್ನು ಪ್ರಾರಂಭಿಸುವ ಮೊದಲು, ಮಧು ಮುಂಬೈ ಮೂಲದ ವೈ-ಝೆಡ್ ಕಸೂತಿ ಕೆಲಸ ಮಾಡುತ್ತಿದ್ದರು ಅಲ್ಲದೇ ಸುಮಾರು 18 ವರ್ಷಗಳ ಕಾಲ ತನ್ನದೇ ಆದ ಅಂಗಡಿ ಹೊಂದಿದ್ದರು. ಭಾಗವತುಲಾ ಚಾರಿಟೇಬಲ್ ಟ್ರಸ್ಟ್ ಎಂಬ ಲಾಭರಹಿತ ಸಂಸ್ಥೆಯಲ್ಲಿ ಕೆಲಸ ಮಾಡುವ ಪ್ರಸ್ತಾಪದೊಂದಿಗೆ, ಮಧು ತನ್ನ ನಿಷ್ಠಾವಂತ ಟೈಲರ್‌ಗಳಿಗೆ ಅಂಗಡಿಯನ್ನು ಬಿಟ್ಟುಕೊಟ್ಟು ಬಂದಿದ್ದಾರೆ. ಅಂದಿನಿಂದ ಅಂಗಡಿಯ ಕಡೆಗೆ ಹಿಂತಿರುಗಿ ನೋಡಿಲ್ಲ ಎನ್ನುತ್ತಾರೆ. ಅನಾಥ ಮತ್ತು ನಿರ್ಗತಿಕರಿಗೆ ಆರಾಮದಾಯಕವಾದ ಮನೆ ಮಾಡಲು ಮಧು ಎಲ್ಲಾ ರೀತಿಯಲ್ಲಿಯೂ ಶ್ರಮಿಸಿದರು.


ಕನಸಿನ ಮುಂದುವರೆದ ಭಾಗವಾಗಿ, ಹತ್ತಿರದ ಹಳ್ಳಿಗಳಲ್ಲಿನ ಶಾಲೆಗೆ ಹೋಗಲು ಕಷ್ಟಪಡುವ ರೈತರ ಮಕ್ಕಳು ಮತ್ತು ಇತರರ ಮಕ್ಕಳಿಗಾಗಿ ವಿಶೇಷ ಶಿಕ್ಷಣ ಕೇಂದ್ರವನ್ನು ನಿರ್ಮಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಇಚಾ ಫೌಂಡೇಶನ್‌ನ ಪಕ್ಕದಲ್ಲಿ ದಾನ ಮಾಡಿರುವ ಮತ್ತೊಂದು ಎಕರೆ ಭೂಮಿಯಲ್ಲಿ ಈ ಸೌಲಭ್ಯವನ್ನು ನಿರ್ಮಿಸಲಾಗುವುದು. ಅಲ್ಲದೆ ಯೋಗ ಕೇಂದ್ರ ಮತ್ತು ಇತರ ಚಟುವಟಿಕೆ ಕೊಠಡಿಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದಾರೆ, ಅಲ್ಲಿ ಮಕ್ಕಳು ಚಿತ್ರಕಲೆ ಮತ್ತು ನೃತ್ಯವನ್ನು ಕಲಿಯಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳುತ್ತಾರೆ.


ಪೋಷಕರು ಮತ್ತು ಮಕ್ಕಳಿಗಾಗಿ ಮನಶ್ಶಾಸ್ತ್ರಜ್ಞರನ್ನು ಮಂಡಳಿಯಲ್ಲಿ ಸೇರಿಸುವ ಕನಸನ್ನೂ ಕೂಡ ಹೊಂದಿರುವ ಮಧುರವರ ಈ ಕಲ್ಪನೆಯು ಅದರ ಶಿಶು ಹಂತದಲ್ಲಿದ್ದು, ಈ ಮಾರ್ಗದಲ್ಲಿ ಸಹಾಯ ಮಾಡಲು ಸಹಾಯ ಹಸ್ತಗಳು ಬೇಕಿದೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, kannada.ys@yourstory.com ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.
  • +0
Share on
close
  • +0
Share on
close
Share on
close

Our Partner Events

Hustle across India