Kannada Latest

ತಮ್ಮ ಮಗನಿಗೆ ಬಂದ ಜನ್ಮಜಾತ ಖಾಯಿಲೆ ಇನ್ನಾರಿಗೂ ಬರದಂತೆ ತಡೆಯಲು ಪ್ರಯತ್ನಿಸುತ್ತಿರುವ ದಂಪತಿಗಳು

ಪ್ರೇಮಾ ಮತ್ತು ಜ್ಯೋತಿ ಸಾಗರ್ ಎಂಬ ಈ ದಂಪತಿಗಳು ಜನ್ಮಜಾತ ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ಮಗನನ್ನು ಕಳೆದುಕೊಂಡಿದ್ದಾರೆ. ಪುತ್ರ ವಿಯೋಗದ ಆ ನೋವಿನಿಂದ ಹೊರಬರಲು, ಬೇರಾವ ತಂದೆ-ತಾಯಿಗಳೂ ಇಂಥಾ ನೋವನ್ನು ಅನುಭವಿಸಬಾರದೆಂದು ಜೆನೆಸಿಸ್ ಸಂಸ್ಥೆಯ ಮುಖಾಂತರ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ.

Team YS Kannada
13th Aug 2019
1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಕೋಮಲ್ ಮತ್ತು ಗಣಪತಿ ದಂಪತಿಗಳಿಗೆ ಜನಿಸಿದ ಕಿರಿಯ ಮಗ ವಿರಾಜ್ ಸಾಗತ್. ಮಹಾರಾಷ್ಟ್ರದ ಲಾತೂರ್ ಮೂಲದ ಈ ಕುಟುಂಬವು ಕೇವಲ ಗಣಪತಿಯೊಬ್ಬರ ಬೇಸಾಯದ ದುಡಿಮೆಯ ಮೇಲೆಯೇ ಅವಳಂಬಿತವಾಗಿತ್ತು. ಅವರ ಅದಾಯ ತಿಂಗಳಿಗೆ ಬರೀ 5,000 ರೂಗಳು ಮಾತ್ರ. 2016 ರಲ್ಲಿ ಬರಗಾಲಕ್ಕೆ ಅವರ ಭೂಪ್ರದೇಶವು ತುತ್ತಾದ ಬಳಿಕ, ಕುಟುಂಬದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಬೆಳೆ ಹಾನಿಯ ಹೊರೆ ಹೆಚ್ಚಾಗಿ, ಕುಟುಂಬದ ಆರ್ಥಿಕ ಅಸ್ಥಿರತೆಗೂ ದಾರಿಯಾಯಿತು.


ವಿರಾಜ್‌ ಕೇವಲ ಒಂದು ತಿಂಗಳ ಮಗುವಾಗಿದ್ದಾಗ ತೀವ್ರವಾದ ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ. ಕೋಮಲ್ ಮತ್ತು ಗಣಪತಿ ಅವನನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಾಗ, ಅಲ್ಲಿಯ ಶಿಶುವೈದ್ಯರು ಕೆಲವು ಚಿಕಿತ್ಸೆ ಮಾಡಿ ಕೆಲ ಸೂಚನೆಗಳನ್ನು ಕೊಟ್ಟರು.


q

ಜೆನೆಸಿಸ್ ಫೌಂಡೇಶನ್‌ ನೀಡಿದ ಧನಸಹಾಯದಿಂದ ಶಸ್ತ್ರಚಿಕಿತ್ಸೆ ಪಡೆದ ಮಗುವೊಂದರ ಹೂನಗು.


ಏನೆಲ್ಲಾ ಮಾಡಿದರೂ, ಮಗುವಿನ ಆರೋಗ್ಯ ಸುಧಾರಿಸುತ್ತಿರಲಿಲ್ಲ. ಕೊನೆಗೆ, ಆ ತಂದೆ-ತಾಯಿಗಳು ಹೆಚ್ಚಿನ ವೈದ್ಯಕೀಯ ತಪಾಸಣೆಗಾಗಿ ಮಗುವನ್ನು ಪುಣೆಯ ಜೂಪಿಟರ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಎಕೊ ಪರೀಕ್ಷೆಗೆ ಒಳಪಡಿಸಿದ ನಂತರ, ಟೋಟಲ್ ಅನಾಮಲಸ್ ವೇನಸ್ ಕನೇಕ್ಷನ್ (ಟಿಎಪಿವಿಸಿ) ಎಂಬ ಜನ್ಮಜಾತ ಹೃದಯ ಕಾಯಿಲೆಯಿಂದ (ಸಿ.ಎಚ್‌.ಡಿ) ವಿರಾಜ್ ಬಳಲುತ್ತಿದ್ದಾಗಿ ಮತ್ತು ಗುಣಪಡಿಸಲು ತೆರೆದ ಹೃದಯದ ಶಸ್ತ್ರಚಿಕಿತ್ಸೆ ಮಾಡಿಸಲೇ ಬೇಕಾಗಿತ್ತು.


ಕೋಮಲ್ ಮತ್ತು ಗಣಪತಿ ಅಷ್ಟು ಹಣವನ್ನು ಸಂಗ್ರಹಿಸುವುದು ಹೇಗೆಂದು ತಲೆಗೆ ಕೈಹೊತ್ತು ಕೂತಾಗ, ಗುರುಗ್ರಾಮ್ ಮೂಲದ ಸರ್ಕಾರೇತರ ಸಂಸ್ಥೆಯಾದ (ಎನ್‌.ಜಿ.ಒ) ಜೆನೆಸಿಸ್ ಸಂಸ್ಥೆ ಇವರಿಗೆ ಧನಸಹಾಯ ಮಾಡುವ ಮೂಲಕ ವಿರಾಜ್ ಚೇತರಿಸಿಕೊಳ್ಳಲು ಸಹಕಾರಿಯಾಯಿತು. ಇಂದು, ಪುಟ್ಟ ವಿರಾಜ್ ತನ್ನ ವಯಸ್ಸಿನ ಇತರೆ ಮಕ್ಕಳಂತೆ ಉಲ್ಲಾಸಭರಿತನಾಗಿ, ಆರೋಗ್ಯವಂತನಾಗಿ ಇದ್ದಾನೆ.


ಜನ್ಮಜಾತ ಹೃದ್ರೋಗವು ಭಾರತದಲ್ಲಿ ಅತಿ ಹೆಚ್ಚಾಗಿ ಸಂಭವಿಸುವ ಹೃದಯ ಸಂಬಂಧೀ ಕಾಯಿಲೆಯಾಗಿದ್ದು, ಪ್ರತಿಶತ 28 ರಷ್ಟು ಇತರೆ ಜನ್ಮಜಾತ ನೂನ್ಯತೆಗಳಿಗೆ ಕಾರಣವಾಗುತ್ತದೆ. ಭಾರತೀಯ ಪೀಡಿಯಾಟ್ರಿಕ್ಸ್ ಅಕಾಡೆಮಿ (ಐಎಪಿ) ನೀಡಿದ ವರದಿಯ ಪ್ರಕಾರ, ಭಾರತದಲ್ಲಿನ ಪ್ರತಿ 1,000 ಮಕ್ಕಳ ಪೈಕಿ ಒಂಬತ್ತು ಮಕ್ಕಳು ಈ ಕಾಯಿಲೆಯಿಂದ ಜನಿಸುತ್ತಾರೆ ಎಂದು ತಿಳಿದುಬಂದಿದೆ. ಹೀಗಾಗಿ ಒಂದು ವರ್ಷಕ್ಕೆ ಎರಡು ಸಾವಿರ ಮಕ್ಕಳು ಈ ಗುಂಪಿಗೆ ಸೇರಿದವರಾದರೆ, ಅವರಲ್ಲಿ ಸುಮಾರು ನಾಲ್ಕುನೂರು ಮಕ್ಕಳನ್ನು ಮೊದಲ ವರ್ಷದಲ್ಲೇ ತುರ್ತು ಚಿಕಿತ್ಸೆಗೆ ಒಳಪಡಿಸಬೇಕಾಗುತ್ತದೆ.


q

ಜನ್ಮಜಾತ ಹೃದ್ರೋಗವು ಭಾರತದಲ್ಲಿ ಅತಿ ಹೆಚ್ಚಾಗಿ ಸಂಭವಿಸುವ ಹೃದಯ ಸಂಬಂಧೀ ಕಾಯಿಲೆ.


ಕಳೆದೊಂದು ದಶಕದಿಂದ ಹೃದಯ ಚಿಕಿತ್ಸೆ ಹಾಗೂ ಆ ಬಗೆಗಿನ ಆರೈಕೆಗಳು ಹೆಚ್ಚಾಗಿವೆಯಾದರೂ, ಆರ್ಥಿಕ ನಿರ್ಬಂಧನೆ, ಜಾಗೃತಿಯ ಕೊರತೆ, ವಿರಳವಾಗಿರುವ ಹೃದಯ ಆಸ್ಪತ್ರೆಗಳು ಮುಂತಾದ ಕಾರಣಗಳಿಂದಾಗಿ ಕೆಲವರು ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ. ಜೆನೆಸಿಸ್ ಸಂಸ್ಥೆ ಈ ಸಮಸ್ಯೆಯನ್ನು ತೊಡೆದುಹಾಕಲು ಪ್ರಯತ್ನಿಸುತ್ತಿದೆ.


"ಜನ್ಮಜಾತ ಹೃದಯ ಕಾಯಿಲೆಯಿಂದಾಗಿ ಸುಮಾರು 80,000 ದಷ್ಟು ಮಕ್ಕಳು ಭಾರತದಲ್ಲಿ ಪ್ರತಿ ವರ್ಷ ಅಸುನೀಗುತ್ತಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಿಸಲು ಸುಮಾರು ಒಂದರಿಂದ ಆರು ಲಕ್ಷದಷ್ಟು ಹಣ ಬೇಕಾಗುತ್ತದೆ. ಕಡು ಬಡತನದ ಕುಟುಂಬದವರಿಗೆ ಇದು ಬಾರೀ ಮೊತ್ತವೇ ಸರಿ. ಹಾಗಾಗಿ ಜೆನೆಸಿಸ್ ಸಂಸ್ಥೆ ಅಂತಹ ಕುಟುಂಬದ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಎಲ್ಲಾ ತರನಾದ ಅಗತ್ಯ ಸಂಪನ್ಮೂಲಗಳನ್ನು ಕೊಟ್ಟು ಸಹಾಯ ಮಾಡುತ್ತದೆ." ಎನ್ನುತ್ತಾರೆ ಜೆನೆಸಿಸ್ ಸಂಸ್ಥೆಯ ಸಹ ಸಂಸ್ಥಾಪಕರಾದ ಜ್ಯೋತಿ ಸಾಗರ್ ಯುವರ್ ಸ್ಟೋರಿ ಗೆಜೆನೆನಿಸ್ ಸಂಸ್ಥೆಯ ಉಗಮ


ಜೆನೆಸಿಸ್ ಸಂಸ್ಥೆ ಶುರುವಾದದ್ದು 2001 ರಲ್ಲಿ. ಪ್ರೇಮಾ ಮತ್ತು ಜ್ಯೋತಿ ಸಾಗರ್ ಇದರ ಸಹ ಸಂಸ್ಥಾಪಕರು. ಈ ದಂಪತಿಗಳು 1983 ರಲ್ಲಿ ತಮ್ಮ ಕಿರಿಯ ಮಗನಾದ ಸಮೀರ್ ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಜನ್ಮಜಾತ ಹೃದ್ರೋಗದಿಂದ ತೀರಿಕೊಂಡ ನೆನಪಿನಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದರು.


ಕ

ಜ್ಯೋತಿ ಸಾಗರ್ (ಎಡಕ್ಕೆ) ಮತ್ತು ಪ್ರೇಮ ಸಾಗರ್ (ಬಲಕ್ಕೆ) ಜೆನೆಸಿಸ್ ಸಂಸ್ಥೆಯ ಸಂಸ್ಥಾಪಕರು.


“ಒಂದು ವೇಳೆ ನನ್ನ ಮಗನಿಂದು ಬದುಕಿದ್ದರೆ ಅವನಿಗೆ ಮುವ್ವತ್ತೈದು ವರ್ಷ ತುಂಬಿರುತ್ತಿತ್ತು ಎಂದು ಯೋಚಿಸಿದಾಗಲೆಲ್ಲಾ ನನ್ನ ಎದೆ ನೀರಾಗುತ್ತದೆ. ಹೆತ್ತ ಮಕ್ಕಳ ಸಾವನ್ನು ಸಹಿಸಿಕೊಳ್ಳುವುದು ಯಾವ ತಂದೆತಾಯಿಗೂ ಸಾಧ್ಯವಿಲ್ಲ. ಆ ದಿನಗಳಲ್ಲಿ ಇಂಥಾ ಕಾಯಿಲೆಗಳಿಗೆ ಏನು ಪರಿಹಾರವೆಂದು ಯಾರಿಗೂ ಮಾಹಿತಿ ಇರುತ್ತಿರಲಿಲ್ಲ, ಮಾಹಿತಿ ಇದ್ದರೂ ಚಿಕಿತ್ಸೆಗೆ ಬೇಕಾದಷ್ಟು ಹಣ ಕೈಗೂಡುತ್ತಿರಲಿಲ್ಲ.” ಎಂದು ನೆನೆಸಿಕೊಳ್ಳುತ್ತಾರೆ ತಂದೆ ಜ್ಯೋತಿ ಸಾಗರ್.


ತಮ್ಮ ಬದುಕಿಗೆ ಹೊಸ ಅರ್ಥವನ್ನು ಕಟ್ಟಿಕೊಡುವ ಪ್ರಯತ್ನದಲ್ಲಿ, ಇವರಿಬ್ಬರೂ ಮಿಷನರೀಸ್ ಆಫ್ ಚಾರಿಟಿ, ಎಂಬ ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಸ್ವಯಂ ಸೇವಕರಾಗಿ ತಮ್ಮ ಕಾರ್ಯ ಆರಂಭಿಸಿದರು. ಮುಂದೆ, ಜೆನೆಸಿಸ್ ಸಂಸ್ಥೆಯನ್ನು ಪ್ರಾರಂಭಿಸಿದರು.


ಕ

ಜೆನಿಸಿಸ್ ಸಂಸ್ಥೆಯ ತಂಡ


"ಮೊದಲಿಗೆ ಕ್ಯಾನ್ಸರ್, ಥಲಸ್ಸೆಮಿಯಾ, ಮತ್ತು ಹೃದಯರಕ್ತನಾಳದ ಸಮಸ್ಯೆ ಹೀಗೆ ಎಲ್ಲಾ ತರದ ದೀರ್ಘಕಾಲದ ರೋಗಗಳ ಚಿಕಿತ್ಸೆಗಳಿಗೆ ಸಹಾಯ ನೀಡಬೇಕೆಂಬುದು ನಮ್ಮ ಆಶಯವಾಗಿತ್ತು. ತದನಂತರ ಕೇವಲ ಜನ್ಮಜಾತ ಹೃದಯ ಕಾಯಿಲೆಗಳಿಗೆ ಮಾತ್ರ ಸೀಮಿತಗೊಳಿಸಿದೆವು. ಸದ್ಯ ನಾವು ಅನುಭವಿಸುತ್ತಿರುವ ಈ ನೋವು ಯಾವ ತಂದೆ ತಾಯಿಗೂ ಬಾರದಿರಲಿ ಎಂಬುದೇ ನಮ್ಮ ಕಾಳಜಿ" ಎಂದು ವಿವರಿಸುತ್ತಾರೆ ಜ್ಯೋತಿ.


ಕಳೆದ ಹದಿನೆಂಟು ವರ್ಷಗಳಿಂದ, ಜನ್ಮಜಾತ ಹೃದಯ ರೋಗಗಳಿಂದ ಬಳಲುತ್ತಿರುವ ಸುಮಾರು 2,100 ಮಕ್ಕಳ ಚಿಕಿತ್ಸೆಗೆ ಹಣ ಸಹಾಯ ಮಾಡಿ, ಈ ದಂಪತಿಗಳು ಅವರಿಗೆ ಮರುಜನ್ಮ ನೀಡಿದ್ದಾರೆ.


ಸಹಕಾರಿ ವ್ಯವಸ್ಥೆಯ ರಚನೆ


ರಾಯ್ಪುರದ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರಿನ ಕೊಲಂಬಿಯಾ ಏಷ್ಯಾ ಸಂಸ್ಥೆ, ಕೊಚ್ಚಿಯ ಅಮೃತಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, ನೋಯ್ಡಾದ ಜಯಪೀ ಆಸ್ಪತ್ರೆ, ಚೆನ್ನೈನ ಮಿಯಾಟ್ ಆಸ್ಪತ್ರೆ, ಮುಂಬೈನ ಜುಪೀಟರ್ ಆಸ್ಪತ್ರೆ ಸೇರಿದಂತೆ ಭಾರತದ ಹಲವಾರು ಪ್ರಸಿದ್ಧ ಆಸ್ಪತ್ರೆಗಳೊಂದಿಗೆ ಜೆನೆಸಿಸ್ ಸಂಸ್ಥೆ ಸಹಯೋಗವನ್ನು ಹೊಂದಿದೆ.


ಮೊದಲಿಗೆ ಈ ಆಸ್ಪತ್ರೆಗಳ ಸಾಮಾಜಿಕ ಸೇವಾ ಮತ್ತು ಆಡಳಿತಾತ್ಮಕ ಘಟಕಗಳು ಜನ್ಮಜಾತ ಹೃದಯ ಕಾಯಿಲೆಯುಳ್ಳ ಮಕ್ಕಳ ವಿವರಗಳನ್ನು ಎನ್‌ಜಿಒಗೆ ತಿಳಿಸುತ್ತವೆ. ನಂತರ, ಜೆನೆಸಿಸ್ ಸಂಸ್ಥೆ ಈ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತದೆ.


ಕ

ಜನ್ಮಜಾತ ಹೃದಯ ಕಾಯಿಲೆಗಳಿಂದ ಬಳಲುತ್ತಿರುವ ಬಡ ಮಕ್ಕಳನ್ನು ಗುರುತಿಸಿ ಚಿಕಿತ್ಸೆ ನೀಡಲು ಜೆನೆಸಿಸ್ ಸಂಸ್ಥೆ ಅನೇಕ ಆಸ್ಪತ್ರೆಗಳೊಂದಿಗೆ ಕೈಜೋಡಿಸಿದೆ.


"ನಾವು ಮುಖ್ಯವಾಗಿ ತಿಂಗಳಿಗೆ 10,000 ರೂ. ಗಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ಮಕ್ಕಳನ್ನು ಪರಿಗಣಿಸುತ್ತೇವೆ. ಅರ್ಹರಿಗೆ ಸಹಾಯವನ್ನು ಒದಗಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು, ನಾವು ಪಾಲಕರ ಕುಟುಂಬದ ಹಿನ್ನೆಲೆ ಮತ್ತು ಆದಾಯ ಪ್ರಮಾಣಪತ್ರವನ್ನು ಪರಿಶೀಲಿಸುತ್ತೇವೆ” ಎನ್ನುತ್ತಾರೆ ಜ್ಯೋತಿ.


ಮೊದಲಿಗೆ ಅತ್ಯಂತ ಕಡಿಮೆ ಸಂಪನ್ಮೂಲಗಳಿಂದಲೇ ಶುರುವಾದ ಈ ಸಂಸ್ಥೆಯು ಈಗ ಖಾಸಗಿ ವ್ಯಕ್ತಿಗಳಿಂದ, ಸಾರ್ವಜನಿಕ ಸಂಗ್ರಹದಿಂದ, ಒರಾಕಲ್, ಎ ಸಿ ಆರ್ ಇ ಮತ್ತು ಡಬ್ಲ್ಯುಪಿಪಿ ಇಂಡಿಯಾ ಫೌಂಡೇಶನ್ನಂತಹ ಮುಂತಾದ ಕಾರ್ಪೊರೇಟ್‌ ಸಂಸ್ಥೆಗಳಿಂದ ಹಣವನ್ನು ಪಡೆಯುತ್ತಿದೆ. ಇದಲ್ಲದೆ, ‘ರಿದಮ್ ಮತ್ತು ಬ್ಲೂಸ್ (ಆರ್ & ಬಿ) ಸಂಗೀತೋತ್ಸವ’ ಮತ್ತು ‘ಸಿಇಒ ಸಿಂಗ್’ ಗಳಂತಹ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ನಿಧಿಸಂಗ್ರಹಣೆ ಮಾಡುತ್ತದೆ.


ಜೆನಿಸಿಸ್ ಸಂಸ್ಥೆ ಇಂತಹ ಜನ್ಮಜಾತ ಹೃದಯ ಕಾಯಿಲೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸಹ ಕಾರ್ಯನಿರ್ವಹಿಸುತ್ತಿದೆ. ಅನೇಕ ಭಾರತೀಯ ತಂದೆತಾಯಿಗಳಿಗೆ ಇಂತಹ ಕಾಯಿಲೆಗಳನ್ನು ತಪಾಸಣೆ ಮಾಡಿಸುವ, ಚಿಕಿತ್ಸೆಗೆ ಒಳಪಡಿಸುವ ಬಗ್ಗೆ ಯಾವ ಜ್ಞಾನವೂ ಇಲ್ಲ. ಮಗು ಹುಟ್ಟಿದ ಏಳು ದಿನಗಳೊಳಗೆ ಇಂಥಾ ಕಾಯಿಲೆಗಳಿವೆಯೆಂದು ಗೊತ್ತಾಗುತ್ತದೆಯಾದರೂ, ಆಸ್ಪತ್ರೆಗಳಾಗಲಿ, ಆರೋಗ್ಯ ಕೇಂದ್ರಗಳಾಗಲೀ ತಪಾಸಣೆ ಮಾಡಿ ತಿಳಿದುಕೊಳ್ಳಲು ಈ ನಿಟ್ಟಿನಲ್ಲಿ ಹೆಚ್ಚು ಶ್ರದ್ಧೆ ವಹಿಸುಸುವುದಿಲ್ಲ.


ಕ

ಹಣವನ್ನು ಸಂಗ್ರಹಿಸಲು ಜೆನೆಸಿಸ್ ಸಂಸ್ಥೆ ಆಯೋಜಿಸಿರುವ ರಿದಮ್ ಮತ್ತು ಬ್ಲೂಸ್ ಸಂಗೀತ ಉತ್ಸವದಲ್ಲಿ ಪ್ರದರ್ಶಿಸುತ್ತಿರುವುದು.


ಈ ಪರಿಸ್ಥಿತಿಯನ್ನು ಸುಧಾರಿಸಲು ನಾವು ನಮ್ಮ ಪಾಲುದಾರಿಕೆಗಳನ್ನು ಬೇರಿನ ಮಟ್ಟಕ್ಕೆ ಹಂಚಿಕೊಂಡಿದ್ದೇವೆ. ಅನೇಕ ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಲ್ಲಿ ಅಗತ್ಯವಾದ ಜಾಗೃತಿ ಮತ್ತು ವೈದ್ಯಕೀಯ ಸೌಲಭ್ಯಗಳು ತಕ್ಕ ಮಟ್ಟಿಗೆ ಇಲ್ಲವಾದ್ದರಿಂದ, ನಾವು ಕೆಲವು ಆಸ್ಪತ್ರೆಗಳ ಸಹಾಯ ಪಡೆದು ಶಿಬಿರಗಳನ್ನು ನಡೆಸಿದ್ದೇವೆ. ಕಳೆದ ವರ್ಷ ತಿರುನೆಲ್ವೇಲಿ, ಪಾಟ್ನಾ, ಭಟಿಂಡಾ, ತಂಜಾವೂರು, ರಾಂಚಿ, ಹಲ್ದ್ವಾನಿ ಮತ್ತು ಕಡ್ಡಲೂರುಗಳಲ್ಲಿ ಒಟ್ಟು ಏಳು ಶಿಬಿರಗಳನ್ನು ನಡೆಸುವ ಮೂಲಕ ನಾವು ಸುಮಾರು 137 ಮಕ್ಕಳನ್ನು ಪತ್ತೆಮಾಡಿದ್ದೇವೆ. ” ಎನ್ನುತ್ತಾರೆ ಜ್ಯೋತಿ.ಇಂದು, ಎಂಟು ಜನರ ತಂಡದೊಂದಿಗೆ, ನಮ್ಮ ಎನ್.ಜಿ.ಒ ಜನ್ಮಜಾತ ಹೃದಯ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ನೀಡಲು ಅವರ ಕುಟುಂಬಗಳಿಗೆ ಸಹಾಯ ಮಾಡುವುದರತ್ತ ಗಮನ ಹರಿಸುತ್ತಿದೆ.


ಮತ್ತೊಬ್ಬರ ಜೀವವನ್ನು ಉಳಿಸುವುದಕ್ಕಿಂತ ಉದಾತ್ತವಾದ ಕೆಲಸ ಬೇರೆ ಇಲ್ಲ. ಆದ್ದರಿಂದ, ಜೆನೆಸಿಸ್ ಸಂಸ್ಥೆಯಲ್ಲಿ ನಾವು ಹೆಚ್ಚೆಚ್ಚು ಆಸ್ಪತ್ರೆಗಳೊಂದಿಗೆ ಕೈಜೋಡಿಸಿ, ನಮ್ಮ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಈ ದಿಕ್ಕಿನಲ್ಲಿ ನಮ್ಮಯ ಪ್ರಯತ್ನಗಳನ್ನು ಮುಂದುವರಿಸಲಿದ್ದೇವೆ" ಎನ್ನುತ್ತಾರೆ ಜ್ಯೋತಿ.

1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags

Latest

Latest Stories