ಬುಂದೇಲ ಖಂಡದ ರೈತರ ನೀರಿನ ಸಮಸ್ಯೆ ನೀಗಿಸುವ ಜತೆ ಒಣ ಪ್ರದೇಶಕ್ಕೆ ಮರುಜೀವವನ್ನು ನೀಡಿದ್ದಾರೆ ಈ ವ್ಯಕ್ತಿ

ಅವನಿ ಮೋಹನ್‌ ಸಿಂಗ್‌ರವರ ಎನ್‌ಜಿಓ ಹರಿತಿಕ ಕಳೆದ 25 ವರ್ಷಗಳಿಂದ ನೀರಿನ ಸಮಸ್ಯೆಗಳನ್ನು ಬಗೆಹರಿಸಿದೆ, ನೀರಿನ ಲಭ್ಯತೆ ಹೆಚ್ಚಿಸಿದೆ ಮತ್ತು ಕೃಷಿ ಭೂಮಿಯನ್ನು ಹೆಚ್ಚಿಸುವ ಜತೆ ಬುಂದೇಲ ಖಂಡದ ಹಿಂದುಳಿದ ಜಿಲ್ಲೆಗಳಲ್ಲಿ ವಾಸಿಸುವ ಗ್ರಾಮಸ್ಥರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದರೊಂದಿಗೆ ಅಭಿವೃದ್ದಿಗೆ ಸಹಾಯ ಮಾಡುತ್ತಿದೆ.

ಬುಂದೇಲ ಖಂಡದ ರೈತರ ನೀರಿನ ಸಮಸ್ಯೆ ನೀಗಿಸುವ ಜತೆ ಒಣ ಪ್ರದೇಶಕ್ಕೆ ಮರುಜೀವವನ್ನು ನೀಡಿದ್ದಾರೆ ಈ ವ್ಯಕ್ತಿ

Monday September 09, 2019,

6 min Read

ಬುಂದೇಲಖಂಡದಲ್ಲಿ 2030ರ ವೇಳೆಗೆ ನೀರಿನ ಕೊರತೆ ಎದುರಾಗಬಹುದೆಂಬ ಗಂಭೀರ ಸಮಸ್ಯೆಯನ್ನು ಅಲ್ಲಿನ ಕೃಷಿ ಸಮುದಾಯದವರು ಎದುರಿಸುತ್ತಿದ್ದಾರೆ. ಸಮಯ, ಸಂಪನ್ಮೂಲದ ಜತೆ ಮದ್ಯಸ್ಥಿಕೆಯು ಈ ವಿಪತ್ತನ್ನು ತಪ್ಪಿಸಬಹುದು. ಅವನಿ ಮೋಹನ್‌ ಸಿಂಗ್‌ರವರು ಈ ಸಮಸ್ಯೆಯನ್ನು ನಿವಾರಿಸಲು ದಣಿವರಿಯದೇ ಶ್ರಮಿಸುತ್ತಿದ್ದಾರೆ. ಈ ಸ್ಥಳೀಯ ಹೀರೋ ಉತ್ತರ ಪ್ರದೇಶದ ಬರಡು ಭೂಮಿ ಪ್ರದೇಶದವರ ಕೂಗಿಗೆ ನೆರವಾಗಿ ಇತರರಿಗೆ ದಾರಿ ತೋರಿಸುವ ಬಯಕೆ ಹೊಂದಿದ್ದಾರೆ.


50 ವರ್ಷದ ಅವನಿಯವರು 1994 ರಲ್ಲಿ ಹರಿತಿಕಾ ಎಂಬ ಸರ್ಕಾರೇತರ ಸಂಸ್ಥೆಯನ್ನು ಸ್ಥಾಪಿಸಿ ಗ್ರಾಮೀಣ ಪ್ರದೇಶದ ಬಡವರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತಿದ್ದಾರೆ. ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯ ಮಧ್ಯಸ್ಥಿಕೆಗಳಿಂದ ಮತ್ತು ಬುಂದೇಲ ಖಂಡ ಪ್ರದೇಶದ ಹಿಂದುಳಿದ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಗ್ರಾಮಸ್ಥರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮೂಲ ಸೌಕರ್ಯಗಳ ಪೂರ್ವಸಿದ್ಧತೆಯೊಂದಿಗೆ ಅವನಿ ಮತ್ತವರ ಹರಿತಿಕಾ ಮಾಡಿರುವ ಪ್ರಯತ್ನಗಳು ಈಗಾಗಲೇ ಅವರಲ್ಲಿ ಬದಲಾವಣೆ ತರುವ ಕೆಲಸ ಮಾಡುತ್ತಿದೆ.


ಬುಂದೇಲ ಖಂಡದ ನಿವಾಸಿಗಳಿಗೆ ಸಹಾಯ ಮಾಡುತ್ತಿರುವ ಅವನಿ ಮೋಹನ್‌ ಸಿಂಗ್ ಮತ್ತವರ ಹರಿತಿಕಾ ಸಂಸ್ಥೆ.


“ಮಧ್ಯ ಭಾರತದ ಬುಂದೇಲ ಖಂಡ ಪ್ರದೇಶವು ನೀರಿನ ಕೊರತೆ, ಭೂ ಕುಸಿತ ಮತ್ತು ಕಳಪೆ ಸಾಮಾಜಿಕ-ಆರ್ಥಿಕ ಸ್ಥಿತಿಯ ಪ್ರದೇಶವಾಗಿದೆ. ಇಡೀ ಪ್ರದೇಶವು ಬರ ಪೀಡಿತ ವಲಯದಡಿ ಬರುತ್ತದೆ ಮತ್ತು ಕೊಳವೆ ಬಾವಿಗಳ ಮೂಲಕ ಅಂತರ್ಜಲವನ್ನು ಕೃಷಿ ಉದ್ದೇಶಗಳಿಗಾಗಿ ತೆಗೆಯಲಾಗಿದೆ, ಇದರ ಪರಿಣಾಮವಾಗಿ ಅಂತರ್ಜಲ ಕ್ಷೀಣಿಸುತ್ತದೆ,” ಎಂದು ಅವನಿಯವರು ಹೇಳುತ್ತಾರೆ.


“ಪ್ರಮುಖವಾಗಿ ಕೃಷಿಗಾಗಿಯೇ ಭೂ ಬಳಕೆ ಮಾಡಲಾಗುತ್ತಿದೆ (68 ಪ್ರತಿಶತ), ಅದರಲ್ಲಿ 57 ಪ್ರತಿಶತಕ್ಕಿಂತಲೂ ಹೆಚ್ಚು ಮಳೆ-ಆಧಾರಿತ/ಮತ್ತು ನೀರಾವರಿ ಕೃಷಿಯಾಗಿದೆ. ಇದಲ್ಲದೆ, ನೀರಾವರಿ ನೀರಿನ ಕೊರತೆಯಿಂದಾಗಿ ಕಳಪೆ ಮಣ್ಣಿನ ಪ್ರದೇಶವನ್ನು ಹೊಂದಿರುವ ಗಟ್ಟಿಯಾದ ಕಲ್ಲು ಪ್ರದೇಶದಲ್ಲಿ ಕೃಷಿ ಮಾಡಲಾಗುವುದಿಲ್ಲ. ನೀರಾವರಿ ಉದ್ದೇಶಕ್ಕಾಗಿ, ರೈತರು ಸಾಲವನ್ನು ನೀಡುವ ಸ್ಥಳೀಯರಿಂದ ಸಾಲವನ್ನು ತೆಗೆದುಕೊಂಡು ಹೆಚ್ಚಿನ ಬಡ್ಡಿದರದೊಂದಿಗೆ ಹಿಂದಿರುಗಿಸುತ್ತಾರೆ,” ಎಂದು ಅವರು ಸೇರಿಸುತ್ತಾರೆ


ನೀರಿಲ್ಲದ ಭೂಮಿ

ಯುಪಿಎ ಸರ್ಕಾರ ನಿಯೋಜಿಸಿದ ವಿಷನ್‌ ಡಾಕ್ಯುಮೆಂಟ್ ಫಾರ್‌ ಬುಂದೇಲ ಖಂಡ ನಡೆಸಿದ ಅಧ್ಯಯನವು 2030ರ ವೇಳೆಗೆ ಬುಂದೇಲ ಖಂಡದಲ್ಲಿ ನೀರಿನ ಕೊರತೆ ಉಂಟಾಗಬಹುದೆಂದು ಎಚ್ಚರಿಸಿದೆ. ಯಮುನಾ ನದಿ ಮತ್ತು ವಿಂಧ್ಯ ಬಯಲು ಪ್ರದೇಶದ ಉತ್ತರ ಭಾಗದ ನಡುವಿನ ಪ್ರದೇಶ ಏಳು ಜಿಲ್ಲೆಗಳನ್ನೊಳಗೊಂಡಿದೆ - ಬಂಡಾ, ಚಿತ್ರಕೂಟ, ಹಮೀರ್‌ಪುರ, ಜಲಾನ್‌, ಝಾನ್ಸಿ, ಲಲಿತ್‌ಪುರ, ಮಹೋಬಾ, ಇತ್ಯಾದಿ. ಅಂದಾಜು 78 ಲಕ್ಷ ಜನರು ನೀರಿಗಾಗಿ ಶಾಶ್ವತವಾಗಿ ಯಮುನಾ, ಕೆನ್‌, ಬೆತ್ವಾ, ಸಿಂಧೂ ಮತ್ತು ಪಹುಜ್‌ ನದಿಗಳನ್ನು ಅವಲಂಬಿಸಿದ್ದಾರೆ. ಶೇಕಡಾ 75ರಷ್ಟು ಜನರು ಕೃಷಿಯನ್ನು ಜೀವನೋಪಾಯದ ಪ್ರಾಥಮಿಕ ಮೂಲವನ್ನಾಗಿ ಅವಲಂಬಿಸಿದ್ದಾರೆ, ಕೃಷಿ ಮತ್ತು ಜಾನುವಾರುಗಳಿಂದ ಇವರಿಗೆ ಶೇಕಡಾ 96ರಷ್ಟು ಆದಾಯ ಬರುತ್ತದೆ. ಚರ್ಚ್ಸ್‌ ಆಕ್ಸಿಲಿಯರಿ ಫಾರ್ ಸೋಷಿಯಲ್ ಆಕ್ಷನ್ (ಸಿಎಎಸ್ಎ) ಮತ್ತು ಜನ್ ಕೇಂದ್ರಿತ ವಿಕಾಸ ಮಂಚವು (ಬುಂದೇಲಖಂಡದ ಎನ್‌ಜಿಒಗಳ ಜಾಲ) ಈ ಅಧ್ಯಯನವನ್ನು ನಡೆಸಿದೆ.


“ಮಳೆಯಾಶ್ರಿತ ಪ್ರದೇಶವಾಗಿರುವುದರಿಂದ ಮಳೆಯ ಮೇಲೆಯೇ ಇದು ಗಮನಾರ್ಹವಾಗಿ ಅವಲಂಬಿತವಾಗಿದೆ, ಕಳೆದ ಒಂದು ದಶಕದಲ್ಲಿ ಮಳೆಯು ಕ್ರಮೇಣ ಕಡಿಮೆಯಾಗಿ ತೀವ್ರ ಬರಗಾಲಕ್ಕೆ ಕಾರಣವಾಗಿದೆ” ಎಂದು ಅವನಿಯವರು ಹೇಳುತ್ತಾರೆ.

ವರದಿಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಮಳೆಯ ಪ್ರಮಾಣವು 60 ಪ್ರತಿಶತದಷ್ಟು ಕುಸಿದಿದೆ, ಮತ್ತು ಇದರ ಕುರಿತು ಚಿಂತಿಸಿದ ಅವನಿಯವರು ಹರಿತಿಕಾವನ್ನು ಪ್ರಾರಂಭಿಸಲು ಮತ್ತು ಬುಂದೇಲ್‌ಖಂಡ್‌ನ ನೀರಿನ ಸಮಸ್ಯೆಗಳನ್ನು ಪರಿಹರಿಸಲು ಕಾರಣವಾಯಿತು.


“ಈ ಸಂಸ್ಥೆ ಯೋಜನಾ ಅನುಷ್ಠಾನ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು 1994 ರಿಂದ ನೂರಾರು ನೀರಿನ ಸಂಬಂಧಿತ ಯೋಜನೆಗಳನ್ನು ಮಾಡಿದೆ ಮತ್ತು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ 500 ಹಳ್ಳಿಗಳಲ್ಲಿ ಏಳು ಲಕ್ಷ ಜನರ ಜೀವನವನ್ನು ತಲುಪುವಲ್ಲಿ ಯಶಸ್ವಿಯಾಗಿದೆ,” ಎಂದು ಅವನಿಯವರು ಹೇಳುತ್ತಾರೆ.


ಪ್ರಾರಂಭವಾದ ಬಗೆ

ತಳಮಟ್ಟದಲ್ಲಿ ಏನನ್ನಾದರೂ ಪ್ರಾರಂಭಿಸಲು, ಒಂದು ಪ್ರದೇಶದ ಕುರಿತು ತಿಳಿದುಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ. ಅವನಿಯವರು ದೇಶದಾದ್ಯಂತ ಸಂಚರಿಸುತ್ತರುವುದರಿಂದ ಮತ್ತು ಅವರ ತಂದೆ ವಾಯುಸೇನೆಯಲ್ಲಿದ್ದುದ್ದರಿಂದ, ಸಮಸ್ಯೆಗಳು ಮತ್ತು ಪರಿಹಾರದ ಕುರಿತು ಒಳನೋಟವನ್ನು ಪಡೆಯಲು ಇದು ಅವರಿಗೆ ಸಹಾಯ ಮಾಡಿತು.


ಅಸ್ಸಾಂನಲ್ಲಿ ಜನಿಸಿದ ಅವನಿಯವರು ಗೋರಖ್‌ಪುರ, ದೆಹಲಿ, ಹೈದರಾಬಾದ್‌ ಮತ್ತು ಕಾನ್ಫುರದಲ್ಲಿ ವಿದ್ಯಭ್ಯಾಸ ಮಾಡಿದರು, ಅವರ ಹುಟ್ಟೂರಾದ ಬಾಲಿಯಾ(ಯುಪಿ)ಯಲ್ಲಿ ಸಣ್ಣ ಶಾಲೆಯಲ್ಲಿ (ಪ್ರಾಥಮಿಕ ಶಾಲೆ) ಮುಂದುವರೆದು ತಮ್ಮ ತಂದೆಯವರ ಜತೆಯಲ್ಲಿದ್ದು ಅನಾರೋಗ್ಯದ ಬಳಲುತ್ತಿದ್ದ ಅಜ್ಜಿಯನ್ನು ಸಹ ನೋಡಿಕೊಂಡರು. ಅವನಿಯವರು ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ವೇಳೆ ಕೇಂದ್ರದಿಂದ (ಪರಿಸರ ಮತ್ತು ಅರಣ್ಯ ಸಚಿವಾಲಯದ ಬೆಂಬಲದೊಂದಿಗೆ) ಒಂದು ವರ್ಷದ ಪರಿಸರ ಶಿಕ್ಷಣ ತರಬೇತಿ ನೀಡಲಾಗುವುದೆಂದು ವೃತ್ತ ಪತ್ರಿಕೆಯಲ್ಲಿ ಜಾಹೀರಾತನ್ನು ಹೊರಡಿಸಿರುವಿದನ್ನು ಗಮನಿಸಿದರು. ತರಬೇತಿಯ ಸಮಯದಲ್ಲಿ, ಅವರು ವಿವಿಧ ಪರಿಸರ ಅಡಿಪಾಯ ಮತ್ತು ದತ್ತಿ ಟ್ರಸ್ಟ್‌ಗಳೊಂದಿಗೆ ಕೆಲಸ ಮಾಡಿದರು ಮತ್ತು ದೇಶಾದ್ಯಂತ ಸಮಗ್ರ ಅಭಿವೃದ್ಧಿ ಕ್ಷೇತ್ರದ ಕಾರ್ಯಗಳನ್ನು ಮಾಡಿದರು.


ಒಂದು ವರ್ಷದ ತೀವ್ರ ಕ್ಷೇತ್ರಕಾರ್ಯದ ನಂತರ, ಅವನಿಯವರಿಗೆ ‘ಸರಿಯಾದ’ ಕೆಲಸ ಸಿಕ್ಕಿತು, ಮತ್ತು ಮುಂಬೈನ ಔಷಧೀಯ ಕಂಪನಿಯಲ್ಲಿ ಸೇರಿಕೊಂಡರು. ಆದರೂ ಅವರ ಮನಸ್ಸು ಅಭಿವೃದ್ಧಿ ಕಾರ್ಯಗಳಿಗಾಗಿಯೇ ತುಡಿಯುತ್ತಿತ್ತು, ಮತ್ತವರ ಹರಿತಿಕಾವು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ವ್ಯಕ್ತಪಡಿಸುವ ಸಾಧನವಾಗಿ ಬದಲಾಯಿತು.


"ನಾನು ನನ್ನ ಚಿಕ್ಕಪ್ಪನನ್ನು ಭೇಟಿ ಮಾಡಲು ಬುಂದೇಲ ಖಂಡಕ್ಕೆ ಹೋದ ಸಂದರ್ಭದಲ್ಲಿ ಅನುಭವಿಸಿದ ತೊಂದರೆಗಳಿಂದಾಗಿ ನಾನು ಆ ಪ್ರದೇಶವನ್ನು ಆಯ್ಕೆ ಮಾಡಿಕೊಂಡೆ. ತೀರಾ ಹಿಂದುಳಿದ ಪ್ರದೇಶವಾಗಿರುವುದರಿಂದ ನಾನು ಅಲ್ಲಿಂದಲೇ ಪ್ರಾರಂಭಿಸಿದೆ," ಎಂದು ಅವನಿಯವರು ಹೇಳುತ್ತಾರೆ.

ಈ ಪ್ರದೇಶದ ಹಳ್ಳಿಗಳಿಗೆ ಕುಡಿಯುವ ನೀರನ್ನು ಪೂರೈಸಲು ಸರ್ಕಾರಕ್ಕೆ ಸಹಾಯ ಮಾಡುವುದು ಅವರ ಮೊದಲ ಯೋಜನೆಯಾಗಿದೆ.


ಪ್ರಕೃತಿಯನ್ನು ಉಳಿಸುವುದು

ಹಣಕಾಸಿನ ತೊಂದರೆಗಳು ಅವರ ಯೋಜನೆಗಳನ್ನು ಹಳಿ ತಪ್ಪಿಸಬಹುದು. ಆದರೆ ಇದನ್ನು ಪರಿಹರಿಸಲು ಅವನಿಯವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಾರಿಟಬಲ್ ಟ್ರಸ್ಟ್‌ಗಳೊಂದಿಗೆ ಕೆಲಸ ಮಾಡಿದರು. ಯೋಜನಾ ಅಭಿವೃದ್ಧಿ, ಅನುಷ್ಠಾನ, ಕಾರ್ಯಾಚರಣೆಗಳು ಮತ್ತು ನಿರ್ವಹಣೆಯನ್ನು ಒಳಗೊಂಡಿರುವ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ ಚಟುವಟಿಕೆಗಳಲ್ಲಿ ಕೋಕಾ ಕೋಲಾ ಇಂಡಿಯಾ, ಲೈವ್‌ಪ್ಯೂರ್, ರಿಯೊ ಟಿಂಟೊ, ಮಹೀಂದ್ರಾ ಮತ್ತು ಮಹೀಂದ್ರಾ, ಎಚ್‌ಡಿಎಫ್‌ಸಿ ಬ್ಯಾಂಕ್ ಮುಂತಾದ ಕಾರ್ಪೊರೇಟ್‌ಗಳಿಗೆ ಹರಿತಿಕವು ಸಹಾಯ ಮಾಡುತ್ತದೆ.


"ಸಂಬಂಧಪಟ್ಟ ಪಕ್ಷಗಳೊಂದಿಗಿನ ಸಂವಾದದ ಮೂಲಕ ಸಮಸ್ಯೆಯನ್ನು ನಿರ್ಣಯಿಸಿದ ನಂತರ ಹರಿತಿಕವು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ನೀರು ಮತ್ತು ನೈರ್ಮಲ್ಯಕ್ಕೆ ಒತ್ತು ನೀಡಿ ಸಮಗ್ರ ನೀರಿನ ನಿರ್ವಹಣೆ, ಸ್ಥಳೀಯ ಆಡಳಿತ ಸಮಸ್ಯೆಗಳು, ಕೃಷಿ ವಿಸ್ತರಣೆ, ಮಕ್ಕಳ ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಸ್ವಾಸ್ಥ್ಯಕ್ಕೆ ಒತ್ತು ನೀಡುವ ಕಾರ್ಯಗಳಲ್ಲಿ ಮಧ್ಯಸ್ಥಿಕೆ ವಹಿಸುತ್ತದೆ," ಎಂದು ಅವನಿಯವರು ಹೇಳುತ್ತಾರೆ.


ರೈತರ ದಾಹವನ್ನು ನೀಗಿಸುತ್ತಿದೆ

2013ರಲ್ಲಿ ಕೋಕಾ ಕೋಲಾ ಇಂಡಿಯಾ ಫೌಂಡೇಷನ್‌ ಆರಂಭಿಸಿದ ಸಂಯೋಜಿತ ಜಲಾನಯನ ಯೋಜನೆಯಲ್ಲಿ ಹರಿತಿಕಾದ ಪಾತ್ರದ ಕುರಿತು ಅವನಿಯವರು ತುಂಬಾ ಹೆಮ್ಮೆ ಪಡುತ್ತಾರೆ. ಇದು ಬುಂದೇಲ ಖಂಡ ಪ್ರದೇಶದಲ್ಲಿ ಮಳೆನೀರು ಕೊಯ್ಲು ಮತ್ತು ನೀರಿನ ಸಂರಕ್ಷಣೆಯನ್ನು ಒಳಗೊಂಡಿತ್ತು. ಈ ಯೋಜನೆಯು ಕೋಕಾ-ಕೋಲಾ ಇಂಡಿಯಾ, ಇಂಟರ್‌ನ್ಯಾಷನಲ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಸೆಮಿ-ಆರಿಡ್ ಟ್ರಾಪಿಕ್ಸ್ (ಐಸಿಆರ್‌ಐಎಸ್‌ಎಟಿ), ಮತ್ತು ಹರಿತಿಕಾ ಹಾಗೂ ರಾಷ್ಟ್ರೀಯ ಪಾಲುದಾರರು ರಾಷ್ಟ್ರೀಯ ಕೃಷಿ-ಅರಣ್ಯ ಸಂಶೋಧನಾ ಕೇಂದ್ರ (ಎನ್ಆರ್‌ಸಿಎಎಫ್), ಜಿಲ್ಲಾಡಳಿತ ಮತ್ತು ಸ್ಥಳೀಯ ಸಮುದಾಯದ ಜಂಟಿ ಪ್ರಯತ್ನವಾಗಿದೆ.


“ಇದು ನೀರಿನ ಲಭ್ಯತೆ ಮತ್ತು ಕೃಷಿ ಭೂಮಿಯನ್ನು ಹೆಚ್ಚಿಸುವ ಮೂಲಕ ಪರಸಾಯಿ-ಸಿಂಧ್ ಪ್ರದೇಶದ ನಿವಾಸಿಗಳ ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸಲು ಇದು ಸಹಾಯ ಮಾಡಿತು,” ಎಂದು ಅವನಿಯವರು ಹೇಳುತ್ತಾರೆ.


“ಎಂಟು ಚೆಕ್‌ ಡ್ಯಾಮ್‌ಗಳ ಸರಣಿಯನ್ನು ನಿರ್ಮಿಸಲಾಗಿದೆ, ಅವು 1,25,000 ಮೀಟರ್ ಕ್ಯೂಬ್‌ ಸಂಗ್ರಹ ಸಾಮರ್ಥ್ಯವನ್ನು ಹೊಂದಿವೆ. ಪರಸಾಯಿ-ಸಿಂಧ್ ಜಲಾನಯನ ಪ್ರದೇಶ ಪೂರ್ಣಗೊಂಡ ನಂತರ, ಮಧ್ಯಪ್ರವೇಶಿಸದ ನಿಯಂತ್ರಣ ಜಲಾನಯನ ಪ್ರದೇಶಗಳಿಗೆ ಹೋಲಿಸಿದರೆ ಅಂತರ್ಜಲ ಕೋಷ್ಟಕವು ಸರಾಸರಿ ಎರಡರಿಂದ ನಾಲ್ಕು ಮೀಟರ್ ಹೆಚ್ಚಾಗಿದೆ. ಇದು ಮಳೆಗಾಲದ ನಂತರದ ಅವಧಿಯಲ್ಲಿ ಬೆಳೆಯ ವೇಗವನ್ನು 30-50 ರಷ್ಟು ಹೆಚ್ಚಿಸಿದೆ,” ಎಂದು ಅವರು ಹೇಳುತ್ತಾರೆ.


ಯೋಜನೆಗೆ ಧನ್ಯವಾದಗಳು, ರೈತರು ಹೆಕ್ಟೇರಿಗೆ 3,500-4,000 ಕೆ.ಜಿ (ಸರಾಸರಿ) ಗೋಧಿ ಕೊಯ್ಲು ಪ್ರಾರಂಭಿಸಿದ್ದಾರೆ, ಇದು ಆದಾಯ ಮತ್ತು ಜೀವನೋಪಾಯವನ್ನು ಗಮನಾರ್ಹವಾಗಿ ಸುಧಾರಿಸಿದೆ. ರೈತರು ಕಡಿಮೆ ನೀರಿನ ಬೆಳೆಗಳಿಂದ ಹೆಚ್ಚಿನ ಮೌಲ್ಯದ ಬೆಳೆಗಳಿಗೆ ಬದಲಾಗಿದ್ದಾರೆ.


ಪರಸಾಯಿ – ಸಿಂಧ್‌ ಪ್ರದೇಶದಲ್ಲಿರುವ ಚೆಕ್‌ ಡ್ಯಾಮ್‌


“ಮೊದಲು, ಕಡಿಮೆ ನೀರಿನ ಕಾರಣ ರಾಬಿ ವೇಳೆಯಲ್ಲಿ ತೆರೆದ ಬಾವಿಗಳ ನೀರು ಒಂದರಿಂದ ಎರಡು ಗಂಟೆ ಬರುವುದೂ ಕಷ್ಟವಾಗಿತ್ತು. ರೈತರು (ಮುಖ್ಯವಾಗಿ ಮಹಿಳೆಯರು) 10 ರಿಂದ 15 ದಿನಗಳು ಅಥವಾ 40-50 ಗಂಟೆಗಳ ಕಾಲ ಒಂದು ಹೆಕ್ಟೇರ್ ಗೋಧಿ ಬೆಳೆಗೆ ನೀರಾವರಿ ಮಾಡಿದರು. ಈಗ, ಬಹುಪಾಲು ಬಾವಿಗಳು ಎಲ್ಲ ಸಮಯದಲ್ಲೂ ನೀರಾವರಿಯನ್ನು ಬೆಂಬಲಿಸುತ್ತವೆ ಮತ್ತು ಇದನ್ನು ಒಂದು ದಿನದಲ್ಲಿ ಮಾಡಲಾಗುತ್ತದೆ (15-20 ಗಂಟೆಗಳು)” ಎಂದು ಅವನಿಯವರು ವಿವರಿಸುತ್ತಾರೆ.

ಸಂಸ್ಥೆಗಳ ಸಾಮಾಜಿಕ ಜವಬ್ದಾರಿಯ ವಿಷಯ 

“ಬುಂದೇಲ ಖಂಡವು ನೀರಿನ ಒತ್ತಡವನ್ನು ಎದುರಿಸುತ್ತಲೇ ಇದೆ, ಇದು ಈ ಪ್ರದೇಶದ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ. ಪರಸಾಯಿ-ಸಿಂಧ್ ಪ್ರದೇಶದ ಜನರ ಮುಖ್ಯ ಉದ್ಯೋಗವೆಂದರೆ ಕೃಷಿ, ಆದಾಗ್ಯೂ ಅಸಮರ್ಪಕ ಮಳೆನೀರು ಕೊಯ್ಲಿನ ಕಾರಣ ನೀರಿನ ಕೊರತೆಯಿಂದಾಗಿ ರಾಬಿ ಬೆಳೆಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರಿ ಧಾನ್ಯಗಳ ಬೆಳವಣಿಗೆ ಕುಂಟಿತವಾಗಿದೆ. ಸಂಯೋಜಿತ ಜಲಾನಯನ ಯೋಜನೆಯು ನೀರಿನ ಲಭ್ಯತೆಯನ್ನು ಹೆಚ್ಚಿಸಿದೆ, ಜಾನುವಾರುಗಳನ್ನು ಉತ್ತೇಜಿಸಿದೆ ಮತ್ತು ಪ್ರಾಣಿಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಈ ಮಧ್ಯಸ್ಥಿಕೆಗಳು ಹೆಚ್ಚಿನ ಬೆಳೆ ಇಳುವರಿಯ ಮೂಲಕ ರೈತರಿಗೆ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡಿದೆ,” ಎಂದು ಕೋಕಾ-ಕೋಲಾ ಇಂಡಿಯಾ ಫೌಂಡೇಷನ್‌ನ ಪ್ರೋಗ್ರಾಂ ಮ್ಯಾನೇಜರ್ ರಾಜೀವ್‌ ಗುಪ್ತಾರವರು ಹೇಳುತ್ತಾರೆ.


ಚೆಕ್‌ ಡ್ಯಾಮ್‌ಗಳು ಮತ್ತು ಸಾಂಪ್ರದಾಯಿಕ ನೀರು ಕೊಯ್ಲು ಟ್ಯಾಂಕ್‌ಗಳ ನವೀಕರಣದಿಂದಾಗಿ ಇಳುವರಿಯಲ್ಲಿ 50-65 ಶೇಕಡಾದಷ್ಟು ಹೆಚ್ಚಾಗಿದೆ ಎಂದು ಪರಸಾಯಿ-ಸಿಂಧ್ ಪ್ರಾಂತದ ಬಚ್ಚೌನಿ ಹಳ್ಳಿಯ 57 ವರ್ಷದ ನಿವಾಸಿ ಕಾಳುರವರು ಹೇಳುತ್ತಾರೆ. “ಇದು ಮಳೆನೀರಿನ ಶೇಖರಣಾ ಸಾಮರ್ಥ್ಯವನ್ನು ತೀವ್ರವಾಗಿ ಹೆಚ್ಚಿಸಿದೆ (ಇಂದು 100,000 ಘನ ಮೀಟರ್‌ಗಳವರೆಗೆ), ಮತ್ತು ಅಂತರ್ಜಲ ಕೋಷ್ಟಕವನ್ನು 3-5 ಮೀಟರ್‌ಗಳಷ್ಟು ಹೆಚ್ಚಿಸುವ ಮೂಲಕ ಬೆಳೆಯ ಬೆಳವಣಿಗೆಗೆ ಅನುಕೂಲವಾಗುತ್ತಿದೆ (ಶೇಕಡಾ 80 ರಿಂದ 140 ಕ್ಕೆ), ಇದರಿಂದಾಗಿ ಖಾರಿಫ್ ಮತ್ತು ರಾಬಿ ಎರಡೂ ಕಾಲಗಳಲ್ಲಿ ಬೆಳೆ ಇಳುವರಿ 30 ಪ್ರತಿಶತದಷ್ಟು ಹೆಚ್ಚಾಗುತ್ತದೆ” ಎಂದು ಅವನಿಯವರು ಹೇಳುತ್ತಾರೆ.


ಇನ್ನೊಬ್ಬ ರೈತ ಲಲ್ಲು ಪಾಲ್ (40) ಹಳ್ಳಿಗಳಿಗೆ ತಮ್ಮ ಸ್ವಂತ ಬಳಕೆಗಾಗಿ ಸಾಕಷ್ಟು ಗೋಧಿ ಇಲ್ಲದ ಸಮಯವನ್ನು ನೆನಪಿಸಿಕೊಳ್ಳುತ್ತಾರೆ. ಈಗ, ಈ ಯೋಜನೆಯೊಂದಿಗೆ, ರೈತರು ತಮ್ಮ ಸ್ವಂತ ಬಳಕೆಗಾಗಿ ಗೋಧಿಯನ್ನು ಬೆಳೆಸಬಹುದು, ಮಾರಾಟ ಮಾಡಬಹುದು ಮತ್ತು ಅವರು ತಮ್ಮ ಸ್ವಂತ ಬಳಕೆಗೂ ಹೊಂದಬಹುದಾಗಿದೆ. ಈಗ ಗೋಧಿಯನ್ನು ಹೊರತುಪಡಿಸಿ ಕಡಲೆಕಾಯಿ ಮತ್ತು ಉದ್ದಿನ ಬೇಳೆಯನ್ನು ಸಹ ಬೆಳೆಯುತ್ತಾರೆ.


“ಈ ಮೊದಲು, ಉತ್ಪಾದನೆಯು ಆರರಿಂದ ಏಳು ಕ್ವಿಂಟಾಲ್‌ಗಳಷ್ಟಿತ್ತು ಆದರೆ ಈಗ ಅದು ಸುಮಾರು ಒಂಬತ್ತರಿಂದ 10 ಕ್ವಿಂಟಾಲ್‌ಗಳಿಗೆ ಏರಿಕೆಯಾಗಿದೆ,” ಎಂದು ಪಾಲ್‌ರವರು ಹೇಳುತ್ತಾರೆ.


ಬುಂದೇಲ ಖಂಡದ ರೈತ ಲಲ್ಲು ಪಾಲ್‌


ಜಲಾನಯನ ನಿರ್ವಹಣಾ ಯೋಜನೆಯನ್ನು 2018ರ ಅತ್ಯುತ್ತಮ ಜಲ ಸಂರಕ್ಷಣ ಯೋಜನೆ ಎಂದು ಶ್ಲಾಘಿಸಿರುವ ನೀತಿ ಆಯೋಗ ಚೆಕ್‌ ಡ್ಯಾಮ್‌, ಕೃಷಿ ಹೊಂಡ ನಿರ್ಮಾಣ ಮತ್ತು ಪ್ರಸ್ತುತ ರಚನೆಗಳ ನವೀಕರಣದಿಂದಾಗಿ ಹೆಚ್ಚಿದ ಅಂತರ್ಜಲ ಮಟ್ಟದಿಂದ (2 ರಿಂದ 5 ಮೀಟರ್‌ಗೆ) 100 ಎಕರೆ ಭೂಮಿಯನ್ನು ಕೃಷಿಯೋಗ್ಯವಾಗಿಸಲಾಗಿದೆ ಎಂದು ಹೇಳಿದೆ.


“ಹರಿತಿಕಾವು 300 ಹಳ್ಳಿಗಳಿಗೆ ಸುರಕ್ಷಿತ ಕುಡಿಯುವ ನೀರನ್ನು ಪೂರೈಕೆ ಮಾಡುತ್ತಿದೆ. ಝಾನ್ಸಿ, ಛತ್ರಪುರ, ಯುಪಿ ಮತ್ತು ಎಂಪಿಯಲ್ಲಿರುವ 33 ಹಳ್ಳಿಗಳಲ್ಲಿ 2,000 ಎಕರೆ ಹಣ್ಣಿನ ತೋಪುಗಳನ್ನು ಅಭಿವೃದ್ಧಿಪಡಿಸಿ ಅಲ್ಲಿನ ರೈತರಿಗೆ ಜೋವನೋಪಾಯವನ್ನು ಒದಗಿಸಲಾಗಿದೆ,” ಎಂದು ಅವನಿಯವರು ಹೇಳುತ್ತಾರೆ.


ಅಂತಹ ಮಧ್ಯಸ್ಥಿಕೆಗಳು ಜೀವನೋಪಾಯವನ್ನು ಹೇಗೆ ಬದಲಾಯಿಸಬಹುದು ಎಂಬುದನ್ನು ಒತ್ತಿಹೇಳುತ್ತದೆ, “ ಹಿಂದುಳಿದ ಪ್ರದೇಶಗಳಲ್ಲಿ ಕೆಲಸಮಾಡುವುದು ಕಷ್ಟವೆಂಬ ಹಲವರ ನಂಬಿಕೆಗೆ ವಿರುದ್ಧವಾಗಿ ನೀವು ಈ ಕ್ಷೇತ್ರದಲ್ಲಿ ಇರುವುದನ್ನು (ನಿರಂತರವಾಗಿ) ಅನ್ಯತಾ ಭಾವಿಸದೇ ಕೆಲಸ ಮಾಡಿದರೆ ಮುಂದುವರೆಯಲು ಸಾಧ್ಯವಿದೆ. ಇದರಿಂದಲೇ ನಾನು ಹರಿತಿಕಾವನ್ನು 25 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರಲು ಕಾರಣವಾಗಿದೆ,” ಎಂದು ಅವನಿಯವರು ಹೇಳುತ್ತಾರೆ. ಅವನಿಯವರಿಗೆ, ಸಾಮಾಜಿಕ ಉದ್ಯಮಶೀಲತೆ ಮತ್ತು ಜವಾಬ್ದಾರಿಯು ಕಠಿಣ ಕೆಲಸವಾಗಿದೆ, ಆದರೆ ಇದು ಉತ್ತಮ ಮನುಷ್ಯನಾಗಿ ವಿಕಸನಗೊಳ್ಳಲು ಸಹಾಯ ಮಾಡಿದೆ ಎಂದು ಅವರು ನಂಬುತ್ತಾರೆ.