ತಮ್ಮ ಪ್ರಾಣವನ್ನು ಲೆಕ್ಕಿಸದೆ ಮಹಿಳೆಯ ರಕ್ಷಣೆಗೆ ಧಾವಿಸಿದ ಕೊಲ್ಕತ್ತಾದ ಮಹಿಳೆ

- +0
- +0
ಈ ತಿಂಗಳ ಪ್ರಾರಂಭದಲ್ಲಿ ಕೊಲ್ಕತ್ತಾದ ನಿವಾಸಿ ನೀಲಂಜನಾ ಚಟರ್ಜೀ(46) ಯವರ ಕಾಲಿಗೆ ಬಲವಾದ ಗಾಯವಾಗಿತ್ತು, ಆದರೆ ಇದು ಅಪಘಾತದಿಂದ ಸಂಭವಿಸಿದ್ದಾಗಿರಲಿಲ್ಲ.
ನೀಲಂಜನಾ ಅವರು ಸಾಮಾಜಿಕ ಸಭೆಯಿಂದ ತಮ್ಮ ಪತಿ ದೀಪ್ ಸತಪಾಠಿ ಮತ್ತು ಮಗಳು ಶ್ರೇಯಸಿ ಜತೆ ಮರಳುತ್ತಿದ್ದಾಗ ದಕ್ಷಿಣ ಕೊಲ್ಕತ್ತಾದ ಆನಂದಪುರ್ ಪ್ರದೇಶದಲ್ಲಿ ಕಾರೊಂದರಿಂದ ಸಹಾಯಕ್ಕಾಗಿ ಯಾಚಿಸುತ್ತಿರುವ ಮಹಿಳೆಯ ಧ್ವನಿ ಕೇಳಿತು, ಇವರು ತಕ್ಷಣ ತಮ್ಮ ಕಾರನ್ನು ಅಲ್ಲೆ ನಿಲ್ಲಿಸಿದರು.
ನೀಲಂಜನಾ, ಆ ಮಹಿಳೆಯ ಸಹಾಯಕ್ಕೆ ಧಾವಿಸುತ್ತಿದ್ದಂತೆ ಆ ಕಾರಿನ ಚಾಲಕ ಗಾಡಿ ಚಾಲೂ ಮಾಡಿ, ನೀಲಂಜನಾ ಅವರ ಎಡ ಗಾಲಿನ ಮೇಲೆ ಗಾಡಿ ಹತ್ತಿಸಿ ಪರಾರಿಯಾಗಿದ್ದಾನೆ. ಅವರನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಲಾಯಿತು.
ಹೊಡೆದು ಕಾರಿನಿಂದ ಹೊರಕ್ಕೆ ಎಸೆಯಲಾಗಿದ್ದ 31 ರ ಮಹಿಳೆ, ಅಭಿಷೇಕ ಕುಮಾರ ಪಾಂಡೇ ಎಂಬ ಆರೋಪಿಯ ವಿರುದ್ಧ ದೂರು ನೀಡಿದ್ದರು. ಹಾಗೂ ಆರೋಪಿಯನ್ನು ಬಂಧಿಸಲಾಗಿದೆ. ಆ ಮಹಿಳೆಗೂ ಅಲ್ಲಲ್ಲಿ ಗಾಯಗಾಳಾಗಿದ್ದವು ಮತ್ತು ಕೆಲವು ಕಡೆ ಹೊಲಿಗೆಗಳು ಬಿದ್ದವು.
ನೀಲಂಜನಾ ಅವರ ಧೈರ್ಯವನ್ನು ಇಡೀ ಕೊಲ್ಕತ್ತಾ ಮೆಚ್ಚಿಕೊಂಡಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ನೀಲಂಜನಾ ಅವರ ಕಷ್ಟ ಕಾಲದಲ್ಲಿ ಸರ್ಕಾರ ಅವರ ನೆರವಿಗಿರುತ್ತದೆ ಎಂದಿದ್ದಾರೆ.

ಆಸ್ಪತ್ರೆಯಲ್ಲಿ ನೀಲಂಜನಾ ಚಟರ್ಜೀ (ಚಿತ್ರಕೃಪೆ: ದಿ ಬೆಟರ್ ಇಂಡಿಯಾ)
“ಇನ್ನೊಬ್ಬ ಮಹಿಳೆಯನ್ನು ಕಾಪಾಡಲು ಹೋಗಿ ಅಪಘಾತಕ್ಕೊಳಗಾದ ಮಹಿಳೆಯನ್ನು ರುಬಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಚಿಕಿತ್ಸೆಯ ಖರ್ಚನ್ನು ಸರ್ಕಾರ ಭರಿಸುತ್ತದೆ. ಅವರ ಸಹಾಯಕ್ಕೆ ನಾವಿದ್ದೇವೆ. ಅವರಿಗೆ ಏನಾದರೂ ತೊಂದರೆಯಾದರೆ ಪೊಲೀಸರು ತಕ್ಷಣ ಕ್ರಮ ಜರುಗಿಸುತ್ತಾರೆ,” ಎಂದಿದ್ದಾರೆ ಮಮತಾ ಬ್ಯಾನರ್ಜೀ, ವರದಿ ದಿ ಟೆಲೆಗ್ರಾಫ್ ಇಂಡಿಯಾ.
ದಿ ಬೆಟರ್ ಇಂಡಿಯಾ ಜತೆ ಮಾತನಾಡಿದ ನೀಲಂಜನಾ ಅವರ ಮಗಳು ಶ್ರೇಯಸಿ ತಾಯಿಯ ಆರೋಗ್ಯದಲ್ಲಿ ಸುಧಾರಣೆಯಾಗಿದೆ, ಕಟ್ಟಿಗೆಯ ಸಹಾಯದಿಂದ ಅವರು ಕೆಲ ದಿನಗಳಿಂದ ಓಡಾಡುತ್ತಿದ್ದಾರೆ. ವೈದ್ಯರು ಪೂರ್ತಿಯಾಗಿ ಗುಣಮುಖರಾಗಲು 15 ರಿಂದ 18 ವಾರಗಳು ಬೇಕಾಗುತ್ತವೆ ಎಂದಿದ್ದಾರೆ ಎಂದರು.
ಕಷ್ಟಕಾಲದಲ್ಲಿ ಯಾವತ್ತೂ ಕೈಬಿಡಬಾರದು ಎಂದು ಕಲಿಸಿದ ನನ್ನ ತಾಯಿ ನನ್ನ ದೊಡ್ಡ ಪ್ರೇರಣೆ. ಇದೇನು ಅನಾಮಿಕರಿಗೆ ಅವರು ಮಾಡಿದ ಮೊದಲ ಸಹಾಯವಲ್ಲ ಅಥವಾ ಇದು ಕೊನೆಯ ಸಹಾಯವೂ ಅಲ್ಲ ಎನ್ನುತ್ತಾರೆ ಶ್ರೇಯಸಿ.
- +0
- +0