ಬೆಳಗಾವಿ ಪ್ರವಾಹದಲ್ಲಿ 2.5 ಕಿ ಮೀ ಈಜಿ ರಾಜ್ಯ ಮಟ್ಟದ ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡ ನಿಶಾನ್

ಹಿಂದೆಂದೂ ಕಾಣದಂತಹ ಮಳೆಗೆ ಬೆಳಗಾವಿ ಬಲಿಯಾಗಿದೆ. ರಸ್ತೆ, ಮನೆ ಹೀಗೆ ಎಲ್ಲಂದರಲ್ಲಿ ನೀರು ನುಗ್ಗಿ ಊರು ಕೆರೆಯಂತಾದ ಸಂದರ್ಭದಲ್ಲಿ ಒಂದು ಪ್ರತಿಭೆ ಬೆಳಕಿಗೆ ಬಂತು, ಅವರೇ ರಾಜ್ಯ ಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ನಿಶಾನ್ ಮನೋಹರ್ ಕದಮ್.

ಬೆಳಗಾವಿ ಪ್ರವಾಹದಲ್ಲಿ 2.5 ಕಿ ಮೀ ಈಜಿ ರಾಜ್ಯ ಮಟ್ಟದ ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡ ನಿಶಾನ್

Wednesday August 14, 2019,

2 min Read

q

ನಿಶಾನ್ ಮನೋಹರ್ ಕದಮ್ (ಚಿತ್ರ:ಟೈಮ್ಸ್ ಆಫ್ ಇಂಡಿಯಾ)

ಒಂದು ಕಡೆ ಎಡಬಿಡದೇ ಸುರಿಯುತ್ತಿರುವ ಮಳೆಗೆ ಊರಿಗೆ ಊರೇ ಮುಳುಗುವಂತಾಗಿ ಎಲ್ಲ ರಸ್ತೆಗಳು ಜಲಾವೃತಗೊಂಡಿದೆ ಇನ್ನೊಂದು ಕಡೆ ಹಲವು ವರ್ಷಗಳ ಕನಸಾದ ಬೆಂಗಳೂರಿನ ರಾಜ್ಯ ಮಟ್ಟದ ಬಾಕ್ಸಿಂಗ್ ಪಂದ್ಯ ಕೈ ಚೆಲ್ಲಿ ಹೋಗುತ್ತಿದೆ ಇಂತಹ ಪರಿಸ್ಥಿತಿಯಲ್ಲಿ ಸಿಕ್ಕ ಅವಕಾಶವನ್ನು ಬಿಟ್ಟು ಸುಮ್ಮನಿರಬೇಕೋ? ಅಥವಾ ಅದನ್ನು ಮೆಟ್ಟಿ ನಿಂತು ಕನಸನ್ನು ಸಾಕಾರಗೊಳಿಸಿಕೊಳ್ಳಬೇಕೋ?


ಇಂತಹ ಕವಲು ದಾರಿಯಲ್ಲಿ ಸಿಕ್ಕಿದ್ದವರು ಬೆಳಗಾವಿಯ ಯುವಕ ನಿಶಾನ್ ಮನೋಹರ ಕದಮ.


ಬೆಳಗಾವಿ ಪ್ರವಾಹದಲ್ಲಿ ತನ್ನ ಹಳ್ಳಿಯಾದ ಮಣ್ಣೂರ್ ಪೂರ್ತಿ ಮುಳುಗಿದ್ದರ ಕಾರಣ ಆಗಸ್ಟ್ 7 ರಂದು ಬಾಕ್ಸರ್ ನಿಶಾನ್ 2.5 ಕಿ ಮೀ ಈಜಿ ರಾಜ್ಯ ಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಬೆಳ್ಳಿ ಪದಕ ಗೆದ್ದು ರಾಜ್ಯಕ್ಕೆ ಹೆಮ್ಮೆ ತಂದಿದ್ದಾನೆ.


ಕ

ನಿಶಾನ್ ಮನೋಹರ್ ಕದಮ್ (ಚಿತ್ರ:ಟೈಮ್ಸ್ ಆಫ್ ಇಂಡಿಯಾ)

ವರದಿಯ ಪ್ರಕಾರ 19 ವರ್ಷದ ಬೆಳಗಾವಿ ನಗರದ ಮಣ್ಣೂರ್ ನ ನಿಶಾನ್ ಮನೋಹರ ಕದಮ ನಗರದ ಜ್ಯೋತಿ ಕಾಲೇಜಿನಲ್ಲಿ 12 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಳೆದ ಎರಡು ವರ್ಷದಿಂದ ಎಮ್ ಜಿ ಸ್ಪೋರ್ಟಿಂಗ್ ಅಕಾಡೆಮಿಯಲ್ಲಿ ಎಮ್ ಜಿ ಕಿಲ್ಲೆಕರ್ ಅವರ ಕೆಳಗೆ ಬಾಕ್ಸಿಂಗ್ ಅಭ್ಯಾಸ ಮಾಡುತ್ತಿದ್ದರು ಅಲ್ಲದೆ ರಾಜ್ಯ ಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕೆಂದು ಕೊಂಡಿದ್ದರು.


ಆದರೆ ತಮ್ಮ ಹಳ್ಳಿಗೆ ಪ್ರವಾಹ ಬಂದದ್ದಕ್ಕಾಗಿ ಅಲ್ಲಿಂದ ಪಾರಾಗುವ ದಾರಿ ಹುಡುಕಬೇಕಾಗಿತ್ತು. ನಿಶಾನ್ ಮತ್ತು ಅವರ ತಂದೆ ಮನೋಹರ್ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಧೃತಿಗೆಡದೆ ಬಾಕ್ಸಿಂಗ್ ಕಿಟ್ ಅನ್ನು ಪ್ಲಾಸ್ಟಿಕ್ ನಲ್ಲಿ ಸುತ್ತಿ ಮುಖ್ಯ ರಸ್ತೆಯವರೆಗೂ ಈಜಿ ಬೆಳಗಾವಿ ನಗರದ ತಂಡವನ್ನು ಸೇರಿ ಬೆಂಗಳೂರಿಗೆ ಬಂದು ತಲುಪಿದರು.


ಇದರ ಬಗ್ಗೆ ಮಾತನಾಡುತ್ತಾ ನಿಶಾನ್


“ನಾನು ಈ ಅವಕಾಶಕ್ಕಾಗೆ ಕಾಯುತ್ತಿದ್ದೆ ಮತ್ತು ಎಂತಹ ಪರಿಸ್ಥಿತಿಯಲ್ಲೂ ನಾನು ಇದನ್ನು ಬಿಡಲು ಸಿದ್ಧನಿರಲಿಲ್ಲ. ನಾವಿರುವ ಜಾಗ ಪೂರ್ತಿ ಜಲಾವೃತ ಗೊಂಡು ಯಾವುದೇ ವಾಹನ ಪ್ರವೇಶವಾಗದಂತಹ ಸ್ಥಿತಿ ನಿರ್ಮಾಣವಾಗಿತ್ತು, ಇಂತಹ ಪರಿಸ್ಥಿತಿಯಲ್ಲಿ ಈಜುವುದನ್ನು ಬಿಟ್ಟು ನಮಗೆ ಬೇರೆ ದಾರಿಯೇ ಇರಲಿಲ್ಲ” ಎಂದು ವರದಿಗೆ ಹೇಳಿದರು.


ಮೂರು ದಿನ ನಡೆದ ರಾಜ್ಯ ಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ 19 ತಂಡದಿಂದ ಒಟ್ಟು 248 ಸ್ಪರ್ಧಿಗಳು 6 ವಿಭಾಗಗಳಲ್ಲಿ ಭಾಗವಹಿಸಿದ್ದರು. ಪ್ರವಾಹದಿಂದ ಪಾಲಕರು ತಮ್ಮ ಮಕ್ಕಳನ್ನು ಸ್ಪರ್ಧೆಗೆ ಕಳಿಸಲಿಲ್ಲದ ಕಾರಣ ಹಲವಾರು ಸ್ಪರ್ಧಾಳುಗಳು ಮನೆಯಲ್ಲಿ ಇರಬೇಕಾಯಿತು ಎಂದು ತಂಡದ ನಾಯಕ ಗಜೇಂದ್ರ ಎಸ್ ತ್ರಿಪಾಠಿ ತಿಳಿಸಿದರು.

ಭಾರಿ ಮಳೆ ಮತ್ತು ಪಕ್ಕದ ರಾಜ್ಯದ ನೀರು ಅದೇ ಸಮಯದಲ್ಲಿ ಸುಳಿದಿದ್ದರಿಂದ ಬೆಳಗಾವಿ ಮತ್ತು ಅದರ ಸುತ್ತಲಿನ ಪ್ರದೇಶಗಳು ಸಂಪೂರ್ಣವಾಗಿ ಮುಳುಗಿದ್ದವು, ಇಂತಹ ಪರಿಸ್ಥಿತಿಯಲ್ಲಿ ಯಾವ ಪೋಷಕರು ಅವರ ಮಕ್ಕಳನ್ನು ಕಲಿಸಲು ಸಿದ್ಧರಿರಲಿಲ್ಲ. ಇಷ್ಟೆಲ್ಲಾ ಸಮಸ್ಯೆಗಳ ಮಧ್ಯೆ ನಿಶಾನ್ ಪಂದ್ಯದಲ್ಲಿ ಭಾಗವಹಿಸಲೇಬೇಕೆಂದು ನಿರ್ಧರಿಸಿಯಾಗಿತ್ತು, ಅದರಂತೆ ನಾವು ಅವನನ್ನು ಕರೆತರಲು ಮುಖ್ಯ ರಸ್ತೆಯ ಬಳಿ ವಾಹನ ವ್ಯವಸ್ಥೆಯನ್ನು ಕಲ್ಪಿಸಿದ್ದೆವು ಎಂದು ತ್ರಿಪಾಠಿ ವರದಿ ಗೆ ತಿಳಿಸಿದರು.