500 ಶ್ವಾನಗಳಿಗೆ ಆಹಾರ ನೀಡಿ ಮದುವೆ ಸಂಭ್ರಮಿಸಿಕೊಂಡ ಒಡಿಷಾ ದಂಪತಿಗಳು

By Team YS Kannada|15th Oct 2020
ಭುವನೇಶ್ವರದ ಯುರೆಕಾ ಗುಪ್ತಾ ಮತ್ತು ಜೊನಾ ವಾಂಗ್‌ ಸರಳವಾಗಿ ದೇವಸ್ಥಾನದಲ್ಲಿ ಮದುವೆಯಾಗಿ ಪ್ರಾಣಿ ಆರೈಕೆ ಗುಂಪಿನೊಂದಿಗೆ ಕೈಜೋಡಿಸಿ ನಗರದ ಸುತ್ತಮುತ್ತಲಿನ 500 ಶ್ವಾನಗಳಿಗೆ ಆಹಾರ ನೀಡಿದ್ದಾರೆ.
Clap Icon0 claps
 • +0
  Clap Icon
Share on
close
Clap Icon0 claps
 • +0
  Clap Icon
Share on
close
Share on
close

ಸಾಂಕ್ರಮಿಕದ ದಾಳಿಯ ನಂತರ ಅದ್ಧೂರಿ ಸಮಾರಂಭವಿಲ್ಲದೆ, ಜಾಸ್ತಿ ಖರ್ಚಿವೆಚ್ಚವಿಲ್ಲದೆ ಸರಳವಾಗಿ ಮದುವೆ ಮಾಡಿಕೊಳ್ಳುತ್ತಿರುವುದು ಈಗಿನ ಯುವಜನತೆಯಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.


ಭುವನೇಶ್ವರದ ಯುರೆಕಾ ಗುಪ್ತಾ ಮತ್ತು ಜೊನಾ ವಾಂಗ್‌ 500 ಶ್ವಾನಗಳಿಗೆ ಆಹಾರ ನೀಡಿವು ಮೂಲಕ ವಿಭಿನ್ನವಾಗಿ ತಮ್ಮ ಮದುವೆಯನ್ನು ಸಂಭ್ರಮಿಸಿದ್ದಾರೆ.


ಎನಿಮಲ್‌ ವೆಲ್‌ಫೆರ್‌ ಟ್ರಸ್ಟ್‌ ಎಕಾಮ್ರಾ ಎಂಬ ಪ್ರಾಣಿ ಆರೈಕೆ ತಂಡದೊಂದಿಗೆ ಸೇರಿ 500 ಶ್ವಾನಗಳಿಗೆ ಆಹಾರ ನೀಡಲಾಗಿದೆ. ಆಹಾರ ನೀಡುವುದರ ಜತೆಗೆ ನಗರದ ನಿರಾಶ್ರಿತ ನಾಯಿಗಳನ್ನು ರಕ್ಷಿಸುವ ಆಶ್ರಮಕ್ಕೂ ಅವರು ದಾನ ಮಾಡಿದ್ದಾರೆ.


“ಸೆಪ್ಟೆಂಬರ್‌ 25ರಂದು ನಮ್ಮ ವಿವಾಹ ನಿಶ್ಚಯವಾಗಿತ್ತು, ಈ ಶುಭ ಸಂದರ್ಭದಲ್ಲಿ ಸಮಾಜಕ್ಕೆ ಏನಾದರು ಒಳ್ಳೆಯದನ್ನು ಮಾಡಬೇಕೆಂದು ನಮಗನಿಸಿತು. ನಾವು ಎನಿಮಲ್‌ ವೆಲ್‌ಫೆರ್‌ ಟ್ರಸ್ಟ್‌ ಎಕಾಮ್ರಾ ಜತೆ ಸೇರಿದೆವು, ಅದರ ಸಂಸ್ಥಾಪಕಿ ಪುರ್ವಿಯವರು ಭುವನೇಶ್ವರದ ತುಂಬ 500 ಶ್ವಾನಗಳಿಗೆ ಆಹಾರ ನೀಡುವ ಉಪಕ್ರಮವನ್ನು ಆಯೋಜಿಸಿದರು. ಅದಲ್ಲದೆ ನಾವು ಆಶ್ರಮಕ್ಕೆ ಔಷಧಿ, ಆಹಾರ ಮತ್ತು ಸ್ವಲ್ಪ ಧನಸಹಾಯವನ್ನು ನೀಡಿದೆವು,” ಎಂದು ಜೊನಾ ಎಎನ್‌ಐಗೆ ಹೇಳಿದರು.

ಯುರೆಕಾ ಗುಪ್ತಾ ಮತ್ತು ಜೊನಾ ವಾಂಗ್‌ (ಚಿತ್ರಕೃಪೆ: ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌)


ಆಶ್ರಮವನ್ನು ನೋಡಿ ಸ್ಪೂರ್ತಿಗೊಂಡ ಇಬ್ಬರು ತಮ್ಮ ಮದುವೆಯನ್ನು ಪ್ರಾಣಿಗಳಿಗೆ ಆಹಾರ ನೀಡಿ ಸಂಭ್ರಮಿಸಬೇಕೆಂದು ನಿರ್ಧರಿಸಿದರು. ಇಬ್ಬರು ಇತ್ತ ದೇವಸ್ಥಾನದಲ್ಲಿ ಮದುವೆಯಾದರೆ ಪ್ರಾಣಿ ಆರೈಕೆ ತಂಡ ನಗರದ ಸುತ್ತ ಶ್ವಾನಗಳಿಗೆ ಆಹಾರ ನೀಡಿದರು.


“ಈ ವರ್ಷದ ಪ್ರಾರಂಭದಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ನಾಯಿಯನ್ನು ನಾವು ರಕ್ಷಿಸಿದ್ದೇವು. ಆಗ ನಾವು ಆಶ್ರಮಕ್ಕೆ ಭೇಟಿ ನೀಡಿದಾಗ ಅಲ್ಲಿನ ಪ್ರಾಣಿಗಳನ್ನು ನೋಡಿ ನಮ್ಮ ಮನಕಲುಕಿತು. ಆಗಲೆ ನಾವು ಪ್ರಾಣಿಗಳಿಗೆ ದಾನ ನೀಡುವ ಬದಲಾಗಿ ಬೇರೆ ತರಹದ ಸಹಾಯ ಮಾಡಲು ನಿರ್ಧರಿಸಿದೆವು,” ಎಂದು ಯುರೇಕಾ ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.


ಲಾಕ್‌ಡೌನ್‌ ಜಾರಿಗೊಂಡಾಗ ಈ ಜೋಡಿ ಬೀದಿಯಲ್ಲಿ ಆಹಾರವಿಲ್ಲದೆ ಬಳಲುತ್ತಿದ್ದ ಹಲವು ಪ್ರಾಣಿಗಳಿಗೆ ಸಹಾಯ ಮಾಡಿದ್ದರು. ಮನೆಯಿಂದ ಯಾರು ಹೊರಬರಲಾಗಂದತಹ ಪರಿಸ್ಥಿತಿಯಲ್ಲಿ ಈ ಜೋಡಿ ಆಹಾರ ತಯಾರಿಸಿ ಶ್ವಾನಗಳಿಗೆ ನೀಡಿದ್ದಾರೆ.

Get access to select LIVE keynotes and exhibits at TechSparks 2020. In the 11th edition of TechSparks, we bring you best from the startup world to help you scale & succeed. Join now! #TechSparksFromHome

Clap Icon0 Shares
 • +0
  Clap Icon
Share on
close
Clap Icon0 Shares
 • +0
  Clap Icon
Share on
close
Share on
close

Latest

Updates from around the world