ಸಾವಯವ ಕೃಷಿಯಲ್ಲಿ ಹೊಸ ಭಾಷ್ಯ ಬರೆಯುತ್ತಿರುವ ಈ ಯುವಕ

ಕೇರಳದ ವಯನಾಡಿನಲ್ಲಿ ವಾಸಿಸುತ್ತಿರುವ ಸೂರಜ್ CS ಸಾವಯವ ಕೃಷಿಯನ್ನು ಉತ್ತೇಜಿಸುತ್ತಾ‌ ತಮ್ಮ‌ ನಾಲ್ಕುವರೆ ಎಕರೆ ಜಮೀನಿನಲ್ಲಿ ವಿವಿಧ ಬಗೆಯ ತರಕಾರಿಗಳು ಹಾಗೂ ಹಣ್ಣುಗಳನ್ನು ಬೆಳೆಸಿದ್ದಾರೆ.

ಸಾವಯವ ಕೃಷಿಯಲ್ಲಿ ಹೊಸ ಭಾಷ್ಯ ಬರೆಯುತ್ತಿರುವ ಈ ಯುವಕ

Saturday July 20, 2019,

2 min Read

ಈಗ ಉತ್ತರ ಪ್ರಾಮಾಣಿಕವಾಗಿರಲಿ- ನಾವೆಲ್ಲ ಆರೋಗ್ಯದಿಂದಿರಲು ಮತ್ತು ತಾಜಾ ಇರುವಂತಹದನ್ನು ತಿನ್ನಲು ಬಯಸುತ್ತೇವೆ ನಿಜ. ಆದರೆ ನಮ್ಮ ಸಾವಯವ ಖಾದ್ಯಗಳು ಎಲ್ಲಿಂದ ಬರುತ್ತವೆ ಎಂದು ತಿಳಿಯಲು ನಾವು ಉತ್ಸುಕರಾಗಿದ್ದೇವೆಯೆ? ನಮ್ಮಲ್ಲಿ ಕೆಲವರು ಆಸಕ್ತಿ ಹೊಂದಿರಬಹುದು ಆದರೆ‌ ಎಲ್ಲರೂ ಅಲ್ಲ. ಯಾವುದೇ ರಾಸಾಯಿನಿಕ ಗೊಬ್ಬರ ಹಾಗೂ ಕೀಟನಾಶಕವನ್ನು ಬಳಸದೇ ವಿವಿಧ ರೀತಿಯ ಹಣ್ಣು, ಭತ್ತ, ತರಕಾರಿಗಳನ್ನು ಬೆಳೆಯುತ್ತಿರುವ‌ 22 ವರ್ಷದ ಸೂರಜ್ ಸಿ ಎಸ್ ಅವರನ್ನು ಭೇಟಿ ಮಾಡಲೇಬೇಕು ಏಕೆಂದರೆ ಸಾವಯವ ಪದ್ಧತಿಯ ಮೂಲಕ ಬೆಳೆದ ಹಣ್ಣು ಹಾಗೂ ತರಕಾರಿಗಳು ನಿಮ್ಮ‌ ತಟ್ಟೆಯನ್ನು ತಲುಪುತ್ತವೆಯೆ ಎಂದು ಖಚಿತಪಡಿಸಿಕೊಳ್ಳಲು.


ವಯನಾಡಿನಲ್ಲಿ ಬಿ.ಎಸ್ಸಿ(ಕೃಷಿ) ಓದುತ್ತಿರುವ ವಿದ್ಯಾರ್ಥಿ ಸೂರಜ್ ತಮ್ಮ ನಾಲ್ಕುವರೆ ಎಕರೆ ಭೂಮಿಯಲ್ಲಿ ಕಳೆದ ಒಂಭತ್ತು ವರ್ಷಗಳಿಂದ ಸಾವಯವ ಕೃಷಿಯನ್ನು ಪ್ರಾಯೋಗಿಕವಾಗಿ ಅಭ್ಯಸಿಸುತ್ತಿದ್ದಾರೆ. ಅಲ್ಲದೇ ಸೂರಜ್ ಇತರೆ ರೈತರಿಗೆ ರಾಸಾಯಿನಿಕ ಕೀಟನಾಶಕಗಳ ಬಗ್ಗೆ ತಿಳಿಸುತ್ತಾ, ಸಾವಯವ ಕೃಷಿ ಹಾಗೂ ಪರಿಸರಸ್ನೇಹಿ ಕೀಟನಾಶಕಗಳ ಮಹತ್ವದ ಬಗ್ಗೆ ತಿಳಿಸಿ ಕೊಡುತ್ತಾರೆ.


d

ಸೂರಜ್ ಸಿಎಸ್ (ಚಿತ್ರ: ಎಡೆಕ್ಸ್ ಲೈವ್)

'ಎಡೆಕ್ಸ್ ಲೈವ್' ಜೊತೆ ಮಾತನಾಡಿದ ಸೂರಜ್,


"ಸಸ್ಯಗಳು ಬೆಳೆಯಲು ಮುಖ್ಯವಾಗಿ ಸೂಕ್ಷ್ಮ ಪೋಷಕಾಂಶಗಳು ಬೇಕಾಗುತ್ತವೆ. ‌ಅದಕ್ಕೆ ಪೊಟ್ಯಾಸಿಯಂ ಮತ್ತು ರಂಜಕವು ಬೇಕಾಗುತ್ತದೆ. ಆದರೆ ಇವುಗಳನ್ನು ಕರಗಬಲ್ಲ ರೂಪದಲ್ಲಿ ಮಾತ್ರ ಸಸ್ಯಗಳು ಹೀರಿಕೊಳ್ಳಬಹುದು. ಇದಕ್ಕೆ ಅನುಕೂಲವಾಗುವಂತೆ ರಾಸಾಯನಿಕ ಗೊಬ್ಬರಗಳನ್ನು ಬಳಸುವ ಬದಲು ನಾವು ಸೂಕ್ಷ್ಮಜೀವಿಗಳನ್ನು ಮಣ್ಣಿಗೆ ಪರಿಚಯಿಸಬಹುದು. ಬಹುತೇಕರು ಉತ್ತಮ ಇಳುವರಿಯನ್ನು ಪಡೆಯಲು ರಸಗೊಬ್ಬರಗಳನ್ನು ಬಳಸುವುದು ಸುಲಭ ಪರಿಹಾರ ಎಂದೇ ನಂಬಿದ್ದಾರೆ. ವಾಸ್ತವವಾಗಿ ಅದು ನಿಜವಲ್ಲ. ನಮ್ಮಲ್ಲಿ ಸಾಕಷ್ಟು‌ ಪರಿಸರಸ್ನೇಹಿ ಪರಿಹಾರಗಳಿವೆ".


ಬಾಲ್ಯದಿಂದಲೇ ಸಾವಯವ ಕೃಷಿಯ ಮೇಲೆ ಆಸಕ್ತಿ ಬೆಳಸಿಕೊಂಡಿದ್ದ ಸೂರಜ್ ಅವರು 13 ವರ್ಷದ ಬಾಲಕರಾಗಿದ್ದಾಗ ಅವರ ತಾಯಿ ಕಾಲಕಾಲಕ್ಕೆ ಗೊಬ್ಬರದೊಂದಿಗೆ ನೀರು ಮತ್ತು ಪ್ಯಾಡಿಂಗ್ ಅನ್ನು ಮಾತ್ರ ಬಳಸಿ ಟೊಮ್ಯಾಟೊ ಬೀಜಗಳನ್ನು ನೆಡುವ ಅವರ ನಡೆಯನ್ನು ಕಂಡ ಸೂರಜ್ ಸ್ಪೂರ್ತಿಗೊಂಡು ತನ್ನದೇ ಆದ ರೀತಿಯಲ್ಲಿ ಟೊಮ್ಯಾಟೊ ನೆಡಲು‌‌ ಪ್ರಯತ್ನಿಸಿ ಅದರಲ್ಲಿ ಉತ್ತಮ ಫಲಿತಾಂಶವನ್ನು ಪಡೆದರು. ಇದರಿಂದಲೇ ಸಾವಯವ ಕೃಷಿ ಅವನ ಉತ್ಸಾಹವಾಯಿತು. ಸೂರಜ್ ಅವರಿಗೆ ಅವರ ತಾಯಿ ಮಾತ್ರವಲ್ಲದೇ, ಶೂನ್ಯ-ಬಜೆಟ್ ನೈಸರ್ಗಿಕ ಕೃಷಿ ಪರಿಕಲ್ಪನೆಯ ಪ್ರವರ್ತಕರಾದ ಸುಭಾಷ್ ಪಾಲೇಕರ್ ಅವರ ಕಟ್ಟಾ ಅನುಯಾಯಿಯಾಗಿದ್ದಾರೆ.


ಕ

ಚಿತ್ರ: ಎಡೆಕ್ಸ್ ಲೈವ್

ಇದಕ್ಕಾಗಿ ತಮ್ಮ 17ನೇ ವಯಸ್ಸಿನಲ್ಲಿಯೆ ಸೂರಜ್ ರಾಜ್ಯ ಸರ್ಕಾರದಿಂದ ಕೊಡಲ್ಪಡುವ 'ಅತ್ಯುತ್ತಮ ವಿದ್ಯಾರ್ಥಿ ರೈತ' ಎಂದು ‌'ಕಾರ್ಷಕ‌ ಜ್ಯೋತಿ' ಪ್ರಶಸ್ತಿಯನ್ನು ಪಡೆದಿದ್ದಾರೆ. ಇದಾದ ನಂತರ ಆರೋಗ್ಯಕರವಾದ ಆಹಾರ ಪದ್ಧತಿಯನ್ನು ಉತ್ತೇಜಿಸುವುದಕ್ಕಾಗಿ ಅವರು ಫೇಸ್‌ಬುಕ್‌ ಪುಟವೊಂದನ್ನು‌‌ ಪ್ರಾರಂಭಿಸುತ್ತಾರೆ.


"ತನ್ನ ಸ್ವಂತ ಬಳಕೆಗಾಗಿ ತರಕಾರಿ ಅಥವಾ ಹಣ್ಣುಗಳನ್ನು ಬೆಳೆಸುವ ವ್ಯಕ್ತಿಯನ್ನು ವೈಭವೀಕರಿಸುವ ಅಗತ್ಯವಿಲ್ಲ. ಇದು ಕೃಷಿಯ ಬಗ್ಗೆ ನಮ್ಮ ಸಮಾಜ ಅರಿತಿರುವ ತಪ್ಪು ಗ್ರಹಿಕೆಗಳ ಬಗ್ಗೆ ಹೇಳುತ್ತದೆ. ಸಾವಯವ ಆಹಾರವನ್ನು ಬೆಳೆಸುವ ಮತ್ತು ತಿನ್ನುವ ಅಭ್ಯಾಸವನ್ನು ಬೆಳೆಸುವ ಮೂಲಕ ಪ್ರತಿಯೊಬ್ಬ ವ್ಯಕ್ತಿಯು ಸಮಾಜದಲ್ಲಿ ವ್ಯತ್ಯಾಸವನ್ನು ತರಬಹುದು" ಎಂದು 'ತಿರುವನಂತಪುರಂ ಫರ್ಸ್ಟ್' ವರದಿ ಮಾಡಿದೆ.


ಈಗ, ಸೂರಜ್ ಅವರ ಜಮೀನಿನಲ್ಲಿ‌ 50ಕ್ಕೂ ಹೆಚ್ಚು ಬಗೆಯ ಹಣ್ಣುಗಳು, ‌60 ಬಗೆಯ ಜೌಷಧೀಯ ಸಸ್ಯಗಳು ಮತ್ತು ವ್ಯಾಪಕ ಬಗೆಯ ತರಕಾರಿಗಳನ್ನು ಬೆಳೆಯಲಾಗುತ್ತದೆ.