ಆಕ್ಸ್‌ಫರ್ಡ್‌ನಲ್ಲಿ ಅಧ್ಯಯನ ಮಾಡಿ, ಭಾರತಕ್ಕೆ ಮರಳಿ ಐಪಿಎಸ್ ಪಾಸ್‌ ಮಾಡಿದ ಹಳ್ಳಿ ಹುಡುಗಿ

ಇಲ್ಮಾ ಅಫ್ರೋಜ್ ತಮ್ಮ ಕುಟುಂಬದ ಆರ್ಥಿಕ ತೊಂದರೆಗಳನ್ನು ಸರಿಪಡಿಸಿಕೊಂಡು, ದೆಹಲಿಯ ಸೇಂಟ್ ಸ್ಟೀಫನ್ಸ್ ಮತ್ತು ಯುಕೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಡುವಷ್ಟು ಸ್ವಯಂ ಶಕ್ತರಾಗಿದ್ದಾರೆ. 2017 ರಲ್ಲಿ, ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡರು; ಅವರು ಈಗ ಪೋಲೀಸ್‌ ಪಡೆ ಸೇರಿಕೊಂಡು ದೇಶಕ್ಕೆ ಸೇವೆ ಸಲ್ಲಿಸಲಿದ್ದಾರೆ.

ಆಕ್ಸ್‌ಫರ್ಡ್‌ನಲ್ಲಿ ಅಧ್ಯಯನ ಮಾಡಿ, ಭಾರತಕ್ಕೆ ಮರಳಿ ಐಪಿಎಸ್ ಪಾಸ್‌ ಮಾಡಿದ ಹಳ್ಳಿ ಹುಡುಗಿ

Friday January 31, 2020,

2 min Read

ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳಿಗೆ ಎರಡು ಕನಸುಗಳು ಸಾಮಾನ್ಯವಾಗಿರುತ್ತವೆ: ಭವಿಷ್ಯದ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುವುದು ಅಥವಾ ಸರ್ಕಾರಿ ಸೇವೆಗಳಿಗೆ ಸೇರಲು ಯುಪಿಎಸ್ಸಿ ಪರೀಕ್ಷೆಯನ್ನು ಬರೆಯುವುದು.


26 ವರ್ಷದ ಇಲ್ಮಾ ಅಫ್ರೋಜ್ ಎರಡೂ ಕನಸುಗಳನ್ನು ಈಡೇರಿಸಿಕೊಂಡಿದ್ದಾರೆ. ವೈಯಕ್ತಿಕ ತೊಂದರೆಗಳು ಎದುರಿಸಿ ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿರುವುದಲ್ಲದೆ; ಭಾರತಕ್ಕೆ ಮರಳಿ ರಾಷ್ಟ್ರದ ಸೇವೆಗಾಗಿ ನಾಗರಿಕ ಸೇವೆಗಳ ಪರೀಕ್ಷೆಯನ್ನು ಬರೆದು ಪಾಸಾಗಿದ್ದಾರೆ.


ಉತ್ತರಪ್ರದೇಶದ ಮೊರಾದಾಬಾದ್ ಜಿಲ್ಲೆಯ ಹುಡುಗಿ ಹೇಗೆ ಕಠಿಣ ಜೀವನವನ್ನು ನಿಭಾಯಿಸಿದಳು ಎಂಬುದು ಅವರ ಜೀವನ ಪ್ರಯಾಣವನ್ನು ತಿಳಿಸುತ್ತದೆ. ಇಲ್ಮಾ 14 ವರ್ಷದವರಿದ್ದಾಗ ಅವರ ತಂದೆ ತೀರಿಕೊಂಡರು, ಮತ್ತು ತಾಯಿ ಒಂಟಿಯಾಗಿ ಅವರನ್ನು ಮತ್ತು ಅವರ ಕಿರಿಯ ಸಹೋದರನನ್ನು ಸಾಕಿಬೆಳೆಸಿದರು.


ಇಲ್ಮಾ ಆಫ್ರೋಜ್ (ಚಿತ್ರಕೃಪೆ: ದಿ ಬೆಟರ್‌ ಇಂಡಿಯಾ)


ದಿ ಬೆಟರ್‌ ಇಂಡಿಯಾ ಜೊತೆ ಮಾತನಾಡಿದ ಇಲ್ಮಾ, “ನನ್ನ ತಾಯಿ ನನಗೆ ಕಠಿಣ ಪರಿಶ್ರಮದ ಮೌಲ್ಯವನ್ನು ಕಲಿಸಿದರು. ನನ್ನ ವರದಕ್ಷಿಣೆಗಾಗಿ ನನ್ನ ಸಹೋದರ ಹಣವನ್ನು ಉಳಿಸಲಿಲ್ಲ. ಬದಲಾಗಿ, ಅವರು ಅದನ್ನು ನನ್ನ ಶಿಕ್ಷಣಕ್ಕಾಗಿ ಖರ್ಚು ಮಾಡಿದರು. ನನಗೆ ಶಿಕ್ಷಣ ನೀಡಲು ಅಮ್ಮಿ ಮತ್ತು ಭೈಯಾ ಹಲವಾರು ತ್ಯಾಗಗಳನ್ನು ಮಾಡಿದರು,” ಎಂದಿದ್ದಾರೆ.


ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ಇಲ್ಮಾ, ತಾನು ಕುಂದಾರ್ಕಿ ಪಟ್ಟಣದಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದೇನೆ ನವದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಕೋರ್ಸ್ ಮಾಡದೆ ಎಂದು ಹೇಳುತ್ತಾರೆ.


"ಸೇಂಟ್ ಸ್ಟೀಫನ್ನಲ್ಲಿ ನಾನು ತತ್ವಶಾಸ್ತ್ರವನ್ನು ಅಧ್ಯಯನ ಮಾಡಲು ಕಳೆದ ಮೂರು ವರ್ಷಗಳು ನನ್ನ ಜೀವನದ ಅತ್ಯುತ್ತಮ ವರ್ಷಗಳು. ಪ್ರಾಧ್ಯಾಪಕರು ವಿದ್ಯಾರ್ಥಿಗಳೊಂದಿಗೆ ನಿಕಟವಾಗಿ ತೊಡಗಿಸಿಕೊಳ್ಳುವಂತಹ ವಾತಾವರಣದಲ್ಲಿ ವಿಷಯವನ್ನು ಕಲಿಯುವುದು ನನಗೆ ಪ್ರಮುಖ ಪಾಠಗಳನ್ನು ಅಳವಡಿಸಿಕೊಳ್ಳಲು ಸಹಾಯ ಮಾಡಿತು. ನಾವು ತರಗತಿಯ ಹೊರಗೆ ತುಂಬಾ ಕಲಿತಿದ್ದೇವೆ. ತತ್ವಶಾಸ್ತ್ರವನ್ನು ಕಲಿಯುವುದು ಒಬ್ಬರನ್ನು ಯೋಚನಾ ಪ್ರಕ್ರಿಯೆಯನ್ನು ಪ್ರೋತ್ಸಾಹಿಸುತ್ತದೆ,” ಎಂದು ಅವರು ದಿ ಬೆಟರ್ ಇಂಡಿಯಾಕ್ಕೆ ತಿಳಿಸಿದರು.


ಸೇಂಟ್ ಸ್ಟೀಫನ್ಸ್‌ನಿಂದ ಆಕ್ಸ್‌ಫರ್ಡ್ವರೆಗೆ

ಇಲ್ಮಾ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಕೋರ್ಸ್‌ಗೆ ಸೇರಲು ವಿದ್ಯಾರ್ಥಿವೇತನವನ್ನು ಗಳಿಸಿದರು.


ಆದರೂ ಸಹ ಅವರಿಗೆ ಇದ್ದ ಅಡೆತಡೆ ಒಂದೆ: ಹಣ. ಇಲ್ಮಾ ಅವರ ಕುಟುಂಬ ಸದಸ್ಯರು ಹಣವನ್ನು ಸಂಗ್ರಹಿಸಿ ವಿಶ್ವವಿದ್ಯಾನಿಲಯಕ್ಕೆ ಕಳುಹಿಸುವಲ್ಲಿ ಯಶಸ್ವಿಯಾದರು, ಆದರೆ ಹಣಕಾಸಿನ ನಿರ್ಬಂಧಗಳಿದ್ದವು. ಅಂದರೆ ಅವರು ಮನೆಗೆ ಬರಲಾಗದಂತಹ ನಿರ್ಬಂಧಗಳಿದ್ದವು ಎಂದು ನ್ಯೂಸ್ ಟ್ರ್ಯಾಕ್ ವರದಿ ಮಾಡಿದೆ.


ಅವರು ವೋಲ್ಫ್ಸನ್ ಕಾಲೇಜಿನಲ್ಲಿ ತಮ್ಮ ಸ್ನಾತಕೋತ್ತರ ಪದವಿ ಪಡೆದರು ಮತ್ತು ಕೋರ್ಸ್ ಸಮಯದಲ್ಲಿ “ವಿದ್ವಾಂಸರೊಂದಿಗೆ ಸಂವಹನ ನಡೆಸಲು ಅದ್ಭುತ ಅವಕಾಶಗಳನ್ನು,” ಹೊಂದಿದ್ದರು. ಪದವಿ ಪಡೆದ ನಂತರ, ಮ್ಯಾನ್‌ಹ್ಯಾಟನ್ ಪ್ರದೇಶದಲ್ಲಿ ಸ್ವಯಂಪ್ರೇರಿತ ಸೇವಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವರು ನ್ಯೂಯಾರ್ಕ್‌ಗೆ ತೆರಳಿದರು.


(ಚಿತ್ರಕೃಪೆ: ದಿ ಬೆಟರ್‌ ಇಂಡಿಯಾ)


ಆದರೆ ಅವರ ಮನಸ್ಸು ಭಾರತದಲ್ಲಿತ್ತು. "ಅಮ್ಮಿ ಮತ್ತು ನನ್ನ ಸುತ್ತಮುತ್ತಲಿನ ಎಲ್ಲರೊಂದಿಗೆ ನನ್ನ ಸಂತೋಷವು ಭಾರತದಲ್ಲಿತ್ತು ಎಂದು ನನಗೆ ಯಾವಾಗಲೂ ತಿಳಿದಿತ್ತು," ಎಂದೆನ್ನುತ್ತಾರೆ, ವರದಿ ದಿ ಬೆಟರ್ ಇಂಡಿಯಾ.


2017 ರಲ್ಲಿ, ಇಲ್ಮಾ ಯುಪಿಎಸ್ಸಿಯನ್ನು ಪಾಸ್‌ಮಾಡಿದರು ಮತ್ತು ಒಟ್ಟಾರೆ 217 ಶ್ರೇಯಾಂಕವನ್ನು ಪಡೆದರು. ಐಪಿಎಸ್ನಲ್ಲಿ ಅವರಿಗೆ ಸೇರಿಸಿಕೊಳ್ಳಲಾಗಿದೆ. ಅವರಿಗೆ ಹಿಮಾಚಲ ಪ್ರದೇಶದಲ್ಲಿ ಕಾರ್ಯಸ್ಥಾನವನ್ನು ನಿಯೋಜಿಸಲಾಗಿದ್ದು, ಮುಂದಿನ 16 ತಿಂಗಳು ತರಬೇತಿ ಪಡೆಯಲಿದ್ದಾರೆ.


ಇಲ್ಮಾ ತಮ್ಮ ಹಳ್ಳಿಯ ಯುವ ಪೀಳಿಗೆಗೆ ಮರಳಿ ಏನನ್ನಾದರು ನೀಡಲು ಉತ್ಸುಕರಾಗಿದ್ದಾರೆ ಮತ್ತು ಹೋಪ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಇದು ದೀನದಲಿತ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುತ್ತದೆ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.