105ರ ರೈತ ಮಹಿಳೆಗೆ ಪದ್ಮಶ್ರೀ ಪುರಸ್ಕಾರ

ಕಳೆದ 70 ವರ್ಷಗಳಿಂದ ಕೃಷಿಯಲ್ಲಿ ನಿರತರಾಗಿರುವ ತಮಿಳುನಾಡಿನ ಪಪ್ಪಮಲ್‌ ಅವರಿಗೆ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿದೆ.

105ರ ರೈತ ಮಹಿಳೆಗೆ ಪದ್ಮಶ್ರೀ ಪುರಸ್ಕಾರ

Thursday January 28, 2021,

1 min Read

ತಮಿಳುನಾಡಿನ ನೀಲಗಿರಿ ಬೆಟ್ಟಗಳಡಿ ಭವನಿ ನದಿಯ ದಡದಲ್ಲಿರುವ ಥೆಕ್ಕಂಪಟ್ಟಿ ನಿವಾಸಿಗಳು ಈ ವರ್ಷ ತುಸು ಹೆಮ್ಮೆಯಿಂದ ಗಣರಾಜ್ಯೋತ್ಸವವನ್ನು ಆಚರಿಸಿದರು. ಈ ಹಳ್ಳಿಯ 105 ರ ಅಜ್ಜಿಗೆ ಸರ್ಕಾರದಿಂದ ಪದ್ಮಶ್ರೀ ಪುರಸ್ಕಾರ ಲಭಿಸಿರುವುದೆ ಇದಕ್ಕೆ ಕಾರಣ. ಆರ್‌ ರಂಗಮ್ಮನಿಗೆ ಶುಭಾಶಯ ಕೊರಲು ಹಲವರು ಮನೆಗೆ ಆಗಮಿಸುತ್ತಿದ್ದಾರೆ.

ತಮ್ಮ ಸಾವಯವ ಕೃಷಿಗಾಗಿ ಪದ್ಮಶ್ರೀ ಪಡೆದ ಆರ್‌. ರಂಗಮ್ಮ (ಚಿತ್ರಕೃಪೆ: ಟ್ವಿಟ್ಟರ್‌/ವಿವಿಎಸ್‌ ಲಕ್ಷ್ಮಣ)

ಕಳೆದ ಏಳು ದಶಕದಿಂದ ಸಾವಯವ ಕೃಷಿಯಲ್ಲಿ ನಿರತರಾಗಿರುವ ರಂಗಮ್ಮ 30ನೇ ವಯಸ್ಸಿನಲ್ಲಿ ಹಳ್ಳಿಯಲ್ಲಿ ಅಂಗಡಿ ನಡೆಸಿ ಕೂಡಿಟ್ಟ ಹಣದಿಂದ 10 ಎಕರೆ ಜಮೀನು ಖರೀದಿಸಿ ಕೃಷಿ ಪ್ರಾರಂಭಿಸಿದರು.


ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯೊಂದಿಗೆ ಮಾತನಾಡುತ್ತಾ ಅವರು ಈಗಲೂ 2.5 ಎಕರೆ ಭೂಮಿಯಲ್ಲಿ ರಾಗಿ, ಒಕ್ರಾ ಮತ್ತು ಬಾಳೆಹಣ್ಣಿನಂತಹ ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ ಎಂದರು. ಬೆಳಿಗ್ಗೆ 5.30 ಕ್ಕೆ ಎದ್ದು 6 ಗಂಟೆಗೆ ಕೃಷಿ ಭೂಮಿಯಲ್ಲಿ ಹಾಜರಾಗುವುದರಿಂದ ಅವರ ದಿನ ಪ್ರಾರಂಭವಾಗುತ್ತದೆ. ಅವರ ಇಷ್ಟದ ಆಹಾರ ಮಟನ್‌ ಬಿರ್ಯಾನಿ, ಅದನ್ನು ಎಲೆಯ ಮೇಲೆ ತಿನ್ನುತ್ತಾರೆ ಎಂದು ಹಿಂದೂಸ್ತಾನ್ ಟೈಮ್ಸ್‌ ವರದಿ ಮಾಡಿದೆ.


ಶತಾಯುಷಿ ಆರ್‌ ರಂಗಮ್ಮನವರು ತಮಿಳುನಾಡಿನ ಕೃಷಿ ವಿಶ್ವವಿದ್ಯಾಲಯದ ಸಲಹಾ ಮಂಡಳಿಯ ಭಾಗಿದಾರರು ಆಗಿದ್ದು, ಕೃಷಿಯಲ್ಲಿನ ಹೊಸ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ ಸಭೆಗಳಲ್ಲೂ ಭಾಗವಹಿಸುತ್ತಾರೆ. ರಾಜಕೀಯಕ್ಕೂ ಪ್ರವೇಶ ಮಾಡಿದ್ದ ಇವರು ಥೆಕ್ಕಂಪಟ್ಟಿ ಪಂಚಾಯತಿಯ ಮಾಜಿ ವಾರ್ಡ್‌ ಸದಸ್ಯರಾಗಿದ್ದರು ಮತ್ತೆ ಕರಮಾದಾಯಿ ಪಂಚಾಯತಿ ಘಟಕದ ಕೌನ್ಸಲರ್‌ ಆಗಿಯೂ ಚುನಾಯಿತರಾಗಿದ್ದರು.


ಹಲವು ಪ್ರತಿಷ್ಠಿತ ವ್ಯಕ್ತಿಗಳಿಂದ ಶುಭಾಶಯದ ಸಂದೇಶಗಳು ಬರುತ್ತಿದ್ದು, ಡಿಎಮ್‌ಕೆ ಅಧ್ಯಕ್ಷ ಎಮ್‌ಕೆ ಸ್ಟ್ಯಾಲಿನ್‌ ಮಂಗಳವಾರ ಟ್ವಿಟರ್‌ನಲ್ಲಿ ತಮ್ಮ ಸೇವೆಗಾಗಿ ಪಪ್ಪಮ್ಮಲ್‌ನ ಅವರನ್ನು ಗುರುತಿಸಿದ್ದನ್ನು ನೋಡಲು ಖುಷಿಯಾಗುತ್ತದೆ. ಅವರಿಗೆ ವಯಸ್ಸು ಅಡ್ಡಿಯಾಗಲಿಲ್ಲ ಎಂದಿದ್ದಾರೆ.

ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ ವಯಸ್ಸು ಕೇವಲ ಒಂದು ಸಂಖ್ಯೆ. ಸಾವಯವ ಕೃಷಿಯಲ್ಲಿ 105ರ ಪಪ್ಪಮ್ಮಲ್‌ ಅವರದು ದೊಡ್ಡ ಹೆಸರು. ತಮಿಳುನಾಡಿನ ಥೆಕ್ಕಂಪಟ್ಟಿಯ ತಮ್ಮ 2.5 ಎಕರೆ ಜಮೀನಿನಲ್ಲಿ ರಾಗಿ, ಧಾನ್ಯಗಳು ಮತ್ತು ತರಕಾರಿಗಳನ್ನು ಬೆಳೆಯುತ್ತಾರೆ ಮತ್ತು ತಿಂಡಿ ಮತ್ತು ಕಿರಾಣಿ ಅಂಗಡಿಯನ್ನು ನಡೆಸುತ್ತಾರೆ. ಅವರಿಗೆ ಪದ್ಮಶ್ರೀ ಪುರಸ್ಕಾರ ಲಭಿಸಿದೆ. ನಮನ ಎಂದು ಟ್ವೀಟ್‌ ಮಾಡಿದ್ದಾರೆ.