ರಸ್ತೆ ನಿರ್ಮಾಣದಲ್ಲಿ ಪ್ಲಾಸ್ಟಿಕ್ ಬಳಕೆ, ಹಸಿರು ಹಾದಿಯತ್ತ ಕೇರಳ.

ಕೇರಳ ರಾಜ್ಯ ಸರ್ಕಾರ 2014ರಲ್ಲಿ ಪ್ರಾರಂಭಿಸಿದ 'ಸುಚಿತ್ವಾ ಮಿಷನ್' ಅಡಿಯಲ್ಲಿ 9, 700 ಟನ್ ಪುನರ್ಬಳಕೆ ಮಾಡಲು ಸಾಧ್ಯವಾಗದಂತಹ ಪ್ಲಾಸ್ಟಿಕ್ ಬಳಸಿ 246 ಕಿ.ಮೀನಷ್ಟು ರಸ್ತೆ ನಿರ್ಮಾಣ ಮಾಡಿದೆ.

21st Jul 2019
  • +0
Share on
close
  • +0
Share on
close
Share on
close

ಪ್ಲಾಸ್ಟಿಕ್ ಮಾಲಿನ್ಯವು ಪ್ರಾಣಿಗಳು ಹಾಗೂ ಜಲಚರಗಳ ಮೇಲೆ ದುಷ್ಪರಿಣಾಮ ಬೀರುವುದಲ್ಲದೇ, ಅದರ ವಿಲೇವಾರಿ ಪರಿಸರಕ್ಕೆ ಇಂದಿಗೂ ದುಃಸ್ವಪ್ನವೇ. ಒಂದು ವರದಿಯ ಪ್ರಕಾರ ವರ್ಷಕ್ಕೆ ಸುಮಾರು ಎಂಟು ಮಿಲಿಯನ್ ಟನ್ ಗಳಷ್ಟು ಪ್ಲಾಸ್ಟಿಕ್ ಸಮುದ್ರ ಸೇರುತ್ತಿದೆ.


ಪ್ಲಾಸ್ಟಿಕ್ ನ್ನು ತ್ಯಾಜ್ಯ ಎಂದೇ ಪರಿಗಣಿಸಲಾಗುತ್ತದೆ. ಆದರೆ ಕೇರಳ ರಾಜ್ಯವು ಈ ಕುರಿತು ಪರಿಣಾಮಕಾರಿ ಬಳಕೆಯ ಮಾರ್ಗವನ್ನು ಕಂಡುಕೊಂಡಿದೆ.


"ರಾಜ್ಯವು ಸುಮಾರು 9,700 ಮರುಬಳಕೆ ಮಾಡಲಾಗದಂತಹ ಆಹಾರ ಧಾರಕ (ಫುಡ್ ಕಂಟೇನರ್), ಡೈಪರ್, ಬಾಟಲಿ ಮುಚ್ಚಳಗಳು ಮುಂತಾದ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ 246 ಕಿ.ಮೀ. ಉದ್ದದ ರಸ್ತೆಯನ್ನು ನಿರ್ಮಿಸಿದೆ."


ಈ ರಸ್ತೆ ನಿರ್ಮಾಣ ಕಾರ್ಯವು ರಾಜ್ಯದ ಸುಚಿತ್ವಾ ಮಿಶನ್ ನ ಒಂದು ಭಾಗವಾಗಿದೆ. ಈ ಸುಚಿತ್ವಾ ಮಿಶನ್ನನ್ನು 2014 ರಲ್ಲಿ ಪ್ರಾರಂಭಿಸಿದ್ದು ಸಂಪೂರ್ಣ ಸ್ವಚ್ಛ ಮತ್ತು ಹಸಿರು ರಾಜ್ಯವನ್ನಾಗಿ ಮಾಡುವುದು ಈ ಮಿಶನ್ ನ ಗುರಿಯಾಗಿದೆ.


q

ಚಿತ್ರ: ದ ಹಿಂದೂ

ಎನ್ ಡಿ ಟಿವಿ ಜೊತೆ ಮಾತನಾಡುತ್ತಾ ಸುಚಿತ್ವಾ ಮಿಶನ್ ನ ರೆಂಜಿತ್ ಅಬ್ರಾಹಂ ಹೀಗೆ ಹೇಳಿದರು.


"ಕೇರಳ ಯಾವಾಗಲೂ ತ್ಯಾಜ್ಯ ನಿರ್ವಹಣೆಯಲ್ಲಿ ಮುಂದಿದೆ. ಹಿಂದಿನ ವರ್ಷ ನವೆಂಬರ್ 1 ಕೇರಳ ಸ್ಥಾಪಕ ದಿನದಂದು ರಾಜ್ಯದಲ್ಲಿ ಭಾರತದ ಮೊದಲ ಕಸ ಮುಕ್ತ ರಾಜ್ಯವನ್ನಾಗಿಸುವ ಗುರಿ ಹಾಕಿಕೊಂಡಿತು. ಕೇರಳವನ್ನು ತ್ಯಾಜ್ಯ ಮುಕ್ತ ರಾಜ್ಯವನ್ನಾಗಿಸಲು ಅಧಿಕಾರಿಗಳು ಕೇವಲ ಒಂದು ವರ್ಷದ ಅವಧಿಯನ್ನು ನಿಗದಿಗೊಳಿಸಿದರು. ಅಂದಿನಿಂದ ತ್ಯಾಜ್ಯವನ್ನು ಕಡಿಮೆ ಮಾಡಲು ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ"


ಪ್ರಾರಂಭದಲ್ಲಿ ಕೇರಳದ ರಾಜಗಿರಿ ಕಾಲೇಜಿನಲ್ಲಿ 500 ಮೀ ಉದ್ದದ ರಸ್ತೆಯನ್ನು ಬ್ಲಾಕ್ ಟಾಪ್ ಮಾಡಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿಕೊಂಡು ಪಾಲಿಮರಿಕರಿಸಲಾಯಿತು. ಆ ಪ್ಲಾಸ್ಟಿಕ್ ತ್ಯಾಜ್ಯವು ಪ್ಲಾಸ್ಟಿಕ್ ಬಾಟಲಿಗಳು, ಪ್ಯಾಕೇಜಿಂಗ್ ವಸ್ತುಗಳು, ಮುಚ್ಚಳಗಳು ಮತ್ತು ಇತರ ಅನುಪಯುಕ್ತ ವಸ್ತುಗಳನ್ನು ಒಳಗೊಂಡಿತ್ತು.


ಈ ತ್ಯಾಜ್ಯದ ರಸ್ತೆ ಪ್ರಯೋಗವು ಯಶಸ್ವಿಯಾದ ನಂತರ ಈ ಸುದ್ದಿ ಎಲ್ಲಾ ಕಡೆ ಹರಡಿತ್ತು. ಮತ್ತು ಈ ಸುದ್ದಿ ಗ್ರಾಮ ಪಂಚಾಯತಿಯ ಅಧ್ಯಕ್ಷರನ್ನು ಬೇರೆ ಸ್ಥಳಗಳಲ್ಲಿಯೂ ಇಂತಹ ರಸ್ತೆಯನ್ನು ಮಾಡಲು ಪ್ರೇರೇಪಿಸಿತು.


ನಂತರ ಆ ಗ್ರಾಮ ಪಂಚಾಯತಿಯವರು ಪ್ಲಾಸ್ಟಿಕ್ ತ್ಯಾಜ್ಯದಿಂದ ರಸ್ತೆಯನ್ನು ನಿರ್ಮಿಸಲು ಬೇಕಾದ ತಾಂತ್ರಿಕತೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಹೇಗೆ ಕಾರ್ಯಗತಗೊಳಿಸಬೇಕು ಎಂಬುದನ್ನು ತಿಳಿಯಲು ಸಾರ್ವಜನಿಕ ಕಾರ್ಯ ಇಲಾಖೆ (ಪಿ.ಡಬ್ಲೂ. ಡಿ) ಯನ್ನು ಸಂಪರ್ಕಿಸಿದರು.


ಒಮ್ಮೆ ಈ ಯೋಜನೆ ಅಂಗೀಕೃತವಾದ ನಂತರ ಚೂರುಚೂರು ಪ್ಲಾಸ್ಟಿಕ್ ಜೊತೆಯಲ್ಲಿ ಡಾಂಬರನ್ನು ಸೇರಿಸಿ ರಸ್ತೆಗೆ ಟಾರ್ ಹಾಕಲಾಯಿತು. "ಪ್ರತಿ ನಿತ್ಯ ಈ ರಸ್ತೆಗಾಗಿ ಸುಮಾರು 500 ಕೆ.ಜಿ ಚೂರುಚೂರಾದ ಪ್ಲಾಸ್ಟಿಕ್‌ ಬಳಸಲಾಗುತ್ತಿತ್ತು" ಎಂದು 'ಪ್ಲಸ್ ಅಪ್ರೊಚ್' ತನ್ನ ವರದಿಯಲ್ಲಿ ಹೇಳಿದೆ.ಕ

ಚಿತ್ರ:ಕ್ಲೀನ್ ಕೇರಳ ಕಂಪೆನಿ

ತದನಂತರದಲ್ಲಿ ಬೇಡದ ಪ್ಲಾಸ್ಟಿಕ್ ಗಳನ್ನು ಪಿ.ಡಬ್ಲೂ.ಡಿ. ಗೆ ಮಾರಲಾಯಿತು. ಮತ್ತು ಪಿ.ಡಬ್ಲೂ.ಡಿ ಅದನ್ನು ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳತೊಡಗಿತು. ಇಲ್ಲಿಯವರೆಗೆ ಪಂಚಾಯತಿಯು 800 ಕೆ.ಜಿ ಪ್ಲಾಸ್ಟಿಕನ್ನು ಕೆ.ಜಿ.ಗೆ 20ರೂ ನಂತೆ ಮಾರಾಟ ಮಾಡಿದೆ.


ರೆಂಜಿತ್ ಹೀಗೆ ವಿವರಿಸುತ್ತಾರೆ,


"ಈ ನಡುವೆಯೇ ಸರ್ಕಾರವೂ 'ಕದುಂಬಶ್ರೀ' ಆಂದೋಲನವನ್ನು ಪ್ರಾರಂಭಿಸಿದೆ. ಈ ಆಂದೋಲನದಲ್ಲಿ ಪ್ರತಿ ಹದಿನೈದು ದಿನಕ್ಕೊಮ್ಮೆ ಕೆಲಸಗಾರರು ಪ್ರತಿ ಮನೆ ಮನೆಗೂ ತೆರಳಿ ಮರುಬಳಕೆಗೆ ಸಾಧ್ಯವಾಗದಂತಹ ಪ್ಲಾಸ್ಟಿಕ್ ಗಳನ್ನು ಸಂಗ್ರಹಿಸುತ್ತಿದ್ದಾರೆ. ಮರುಬಳಕೆ ಮಾಡಬಹುದಾದ ಮತ್ತು ಮಾಡಲಾಗದ ಪ್ಲಾಸ್ಟಿಕ್ ಗಳನ್ನು ಸುಲಭವಾಗಿ ಪ್ರತ್ಯೇಕಿಸಲು ರಾಜ್ಯ ಸರ್ಕಾರವೂ ಸಹಿತ ಚೂರುಚೂರಾದ ಹರಿದ ಪ್ಲಾಸ್ಟಿಕ್ ಗಳ ರಚನೆಗಳ ಮೇಲೆ ಹೂಡಿಕೆ ಮಾಡಿ 418 ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ಮೂಲಗಳನ್ನು ಪತ್ತೆ ಮಾಡಿದೆ" ಎನ್ ಡಿ ಟಿವಿ ವರದಿ.


‌‌ಕೇರಳ ರಾಜ್ಯ ಸರ್ಕಾರವು ಪ್ರತಿ ಬ್ಲಾಕ್, ಹಳ್ಳಿ ಮತ್ತು ಗ್ರಾಮಗಳಲ್ಲಿ ಈ ಪ್ಲಾಸ್ಟಿಕ್ ವಿಂಗಡಿಸುವಲ್ಲಿ ಮಹಿಳಾ ಸದಸ್ಯರಿರಬೇಕೆಂದು ನಿಯಮವನ್ನು ರೂಪಿಸಿತು‌. ಆ ನಿಯಮವನ್ನು 'ಹರಿಥಾ ಕರ್ಮ ಸೇನಾ'(ಗ್ರೀನ್ ವಾರಿಯರ್ಸ್/ಹಸಿರು ಸೇನೆ) ಎಂದು ಕರೆಯಲಾಯಿತು. ಅವರಿಗೆ ಪ್ರತಿ ಮನೆಯಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಅದನ್ನು ಪ್ರತ್ಯೇಕಿಸುವ ಜವಾಬ್ದಾರಿಯನ್ನು ನೀಡಲಾಗಿದೆ.


ಪ್ಲಾಸ್ಟಿಕ್ ನ ಇಂತಹ ಪರಿಣಾಮಕಾರಿ ಮರುಬಳಕೆಯ ಆರಂಭದಿಂದ ಕೇರಳವು ದೇಶದ ಇತರ ರಾಜ್ಯಗಳಿಗೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ ಮಾದರಿಯಾಗಿದೆ.

  • +0
Share on
close
  • +0
Share on
close
Share on
close

Our Partner Events

Hustle across India