3-4 ವರ್ಷಗಳವರೆಗೆ ಮರುಬಳಕೆ ಮಾಡಬಹುದಾಂತಹ ಸ್ಯಾನಿಟರಿ ಪ್ಯಾಡ್‌ಗಳನ್ನು ತಯಾರಿಸಿದ ಪುಣೆಯ ಪ್ಯಾಡ್‌ಮ್ಯಾನ್

ಮರುಬಳಕೆ ಮಾಡಬಹುದಾದಂತಹ ಬಟ್ಟೆಯಿಂದ ತಯಾರಿಸಿದ ಸ್ಯಾನಿಟರಿ ಪ್ಯಾಡ್ ಬ್ರಷ್ ಮಾಡಿದ ಅಥವಾ ಈರಿದ ಹತ್ತಿ ಬಟ್ಟೆಯ ಎಳು ಪದರಗಳನ್ನು ಹೊಂದಿದೆ. ಬ್ರಷ್‌ ಮಾಡಿದ್ದರಿಂದ ಈ ಹತ್ತಿಯು ಮೃದುವಾಗಿದ್ದು, ಹೆಚ್ಚು ಹೀರಿಕೊಳ್ಳುವ ಗುಣವನ್ನು ಹೊಂದಿದೆ. ಕೆಳಗಿನ ಪದರವು PUL ಅಂದ್ರೆ ಪಾಲಿಯುರೇಥೆನ್ ಲ್ಯಾಮಿನೇಟ್ ಬಟ್ಟೆಯನ್ನು ಹೊಂದಿದ್ದು, ಇದು ಸೋರಿಕೆ ನಿರೋಧಕವಾಗಿದೆ.

16th Jan 2020
  • +0
Share on
close
  • +0
Share on
close
Share on
close

ಭಾರತದ ಪ್ಯಾಡ್‌ಮ್ಯಾನ್ ಎಂದೇ ಕರೆಯಲ್ಪಡುವ ಅರುಣಾಚಲಂ ಮುರುಗಾನಂತಂ ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯವನ್ನು ಉತ್ತೇಜಿಸುವಲ್ಲಿ ಅವರು ಮಾಡಿದ ಪ್ರಯತ್ನಕ್ಕೆ ಶ್ಲಾಘನೆಯನ್ನು ವ್ಯಕ್ತಪಡಿಸಲೆಬೇಕು. ಇದರಿಂದಾಗಿಯೇ ಈ ವಿಷಯದ ಕುರಿತು ಗ್ರಾಮೀಣ‌ ಮತ್ತು ನಗರ ಪ್ರದೇಶಗಳಲ್ಲಿ ಮುಕ್ತವಾಗಿ ಮಾತನಾಡಲಾಗುತ್ತಿದೆ.


ಅವರ ಹಾದಿಯನ್ನು ಅನುಸರಿಸಿ, ಇನ್ನೂ ಅನೇಕರು ಮುಟ್ಟಿನ ಉತ್ಪನ್ನಗಳ ಯೋಜನೆಯೊಂದಿಗೆ ಮುಂದೆ ಬಂದಿದ್ದಾರೆ.


ಪುಣೆಯ ಮೂಲದ 45 ವರ್ಷದ ಓಂಕಾರ್ ಸಾಥೆ ಕಳೆದ ಎರಡು ವರ್ಷಗಳಿಂದ ಮರುಬಳಕೆ‌ ಮಾಡಬಹುದಾದ ನೈರ್ಮಲ್ಯ ಕರವಸ್ತ್ರ ಅಥವಾ ಸ್ಯಾನಿಟರಿ ಪ್ಯಾಡಿನ ಬಳಕೆಯ ಕುರಿತಾಗಿ ಧ್ವನಿ ಎತ್ತಿದ್ದಾರೆ. ಇತ್ತೀಚೆಗೆ ನಡೆದ ಕಿರ್ಲೋಸ್ಕರ್ ವಸುಂಧರಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ(ಕೆವಿಐಎಫ್‌ಎಫ್) ಅಂಗವಾಗಿ ಓಂಕಾರ್ ‘ಯೂಸ್ಡ್ ಸ್ಯಾನಿಟರಿ ಪ್ಯಾಡ್ಸ್- ಪ್ಲಾಸ್ಟಿಕ್ ವಿಥ್ ಎ ವೆಂಜನ್ಸ್' ಎಂಬ ಕಾರ್ಯಾಗಾರವನ್ನು ನಡೆಸಿದರು. ಇದು ಜನರನ್ನು ಸಂವೇದನಾಶೀಲಗೊಳಿಸುವ ಗುರಿಯನ್ನು ಹೊಂದಿತ್ತು.


ಓಂಕಾರ್ ಸಾಥೆ (ಚಿತ್ರಕೃಪೆ: ದಿ ಲಾಜಿಕಲ್ ಇಂಡಿಯನ್)
2010ರಲ್ಲಿ ಪ್ರಾರಂಭಿಸಿದ ‘ಆಲ್ ಫಾರ್ ಎ ಸ್ಮೈಲ್' ಸಂಸ್ಥೆಯಲ್ಲಿ ಎಲ್ಲಾ ಸ್ಯಾನಿಟರಿ ಪ್ಯಾಡ್‌ಗಳನ್ನು ತಯಾರಿಸಲಾಗುತ್ತಿದ್ದು, ಇದು ಕೌಶಲ್ಯ ಹೊಂದಿರುವ ಮಹಿಳೆಯರಿಗೆ ಅನೇಕ ಅವಕಾಶಗಳನ್ನು ಒದಗಿಸುತ್ತಿದೆ.


ಇದರ ಕುರಿತಾಗಿ ದಿ ಲಾಜಿಕಲ್ ಇಂಡಿಯನ್ ಜೊತೆ ಮಾತಾಡಿದ ಓಂಕಾರ್,


"ಹತ್ತಿಯಿಂದ ತಯಾರಿಸಿದ ಸ್ಯಾನಿಟರಿ ಪ್ಯಾಡ್, ಬ್ರಷ್ ಮಾಡಿದ ಅಥವಾ ಈರಿದ ಹತ್ತಿ ಬಟ್ಟೆಯ ಎಳು ಪದರಗಳನ್ನು ಹೊಂದಿದೆ. ಬ್ರಷ್‌ ಮಾಡಿದ್ದರಿಂದ ಈ ಹತ್ತಿಯು ಮೃದುವಾಗಿದ್ದು, ಹೆಚ್ಚು ಹೀರಿಕೊಳ್ಳುವ ಗುಣವನ್ನು ಹೊಂದಿದೆ. ಕೆಳಗಿನ ಪದರವು ಪಿಯುಎಲ್‌ ಅಂದರೆ ಪಾಲಿಯುರೇಥೆನ್ ಲ್ಯಾಮಿನೇಟ್ ಬಟ್ಟೆಯನ್ನು ಹೊಂದಿದ್ದು, ಇದು ಸೋರಿಕೆ ನಿರೋಧಕವಾಗಿದೆ," ಎಂದರು.


ಅವರ ಪ್ರಕಾರ, ಪ್ಯಾಡ್‌‌ನಲ್ಲಿರುವ ಪದರುಗಳನ್ನು 75 ಬಾರಿ ಸ್ವಚ್ಛಗೊಳಿಸಬಹುದಾಗಿದೆ. ಅಂದರೆ ಇದು ಕನಿಷ್ಟ ಮೂರು-ನಾಲ್ಕು ವರ್ಷಗಳವರೆಗೆ ಬಾಳಿಕೆ ಬರುತ್ತದೆ.


ಎರಡು ವರ್ಷಗಳ ಹಿಂದೆ ಪುಣೆಯ ಸಿಎಸ್‌ಆರ್ ಸಂಘಟನೆಯು ಓಂಕಾರ್‌ರವರಿಗೆ ಇದರ ಕುರಿತಾಗಿ ತಿಳಿಸಿದಾಗ, ಈ ಉಪಕ್ರಮ ಪ್ರಾರಂಭವಾಯಿತು. ಇದರ ನಂತರ, ಪುದುಚೇರಿ ಮೂಲದ ಇಕೋ ಫೆಮ್ಮೆ ತಂಡವು ಸ್ಯಾನಿಟರಿ ಪ್ಯಾಡ್‌ಗಳನ್ನು ಅಭಿವೃದ್ದಿಪಡಿಸಲು ಅಗತ್ಯವಾದ ಮಾಹಿತಿ ಮತ್ತು ಕೌಶಲ್ಯ ವಿಧಾನಗಳನ್ನು ಹೇಳಿ ಕೊಟ್ಟಿತು.


ಮರುಬಳಕೆ‌ ಮಾಡಬಹುದಾದಂತಹ ಪ್ಯಾಡ್‌ಗಳ ಜೊತೆ ವಿದ್ಯಾರ್ಥಿನಿಯರು (ಚಿತ್ರಕೃಪೆ: ದಿ ಲಾಜಿಕಲ್ ಇಂಡಿಯನ್)


ಈ ಸಂಸ್ಥೆ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ‘ಪ್ಯಾಡ್ಸ್ ಫಾರ್ ಡಾಟರ್ಸ್' ಪ್ರಾಜೆಕ್ಟ್‌ನ ಅಡಿಯಲ್ಲಿ, ಗ್ರಾಮೀಣ ಪ್ರದೇಶದ ಶಾಲಾ ಹುಡುಗಿಯರು ಮರುಬಳಕೆ ಮಾಡಬಹುದಾಂತಹ ಸ್ಯಾನಿಟರಿ ಪ್ಯಾಡ್‌ಗಳ ಬಳಕೆಯ ಕುರಿತಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಸಂಸ್ಥೆಯು 400 ರೂಗಳಿಗೆ ನಾಲ್ಕು ಪ್ಯಾಡ್‌ಗಳನ್ನು ಹೊಂದಿದಂತಹ ಸೆಟ್‌ನ್ನು ವಿತರಿಸುತ್ತದೆ.


ಓಂಕಾರ್ ಅವರ ತಂಡವು ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯದ ಕುರಿತಾಗಿ ಜಾಗೃತಿ ಸಭೆಗಳನ್ನು ಸಹ ನಡೆಸುತ್ತದೆ. ತಂಡವು ಮುಟ್ಟಿನ ನೈರ್ಮಲ್ಯದ ಕುರಿತಾಗಿ ಪ್ರಶ್ನೆಗಳನ್ನು ಹೊಂದಿರುವ ಜನರನ್ನು ಸಂಪರ್ಕಿಸಿ ಅವುಗಳನ್ನು ಬಗೆಹರಿಸುವ ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತದೆ.


ಓಂಕಾರ್ ಹೇಳುವಂತೆ,

"ನಾವು ಅವರೊಂದಿಗೆ ಹಲವಾರು ತಿಂಗಳು ನಿರಂತರವಾಗಿ ಕೆಲಸ ಮಾಡುತ್ತೇವೆ. ನಾವು ಅವರೊಂದಿಗೆ ಮಾತನಾಡಲು ಪ್ರಾರಂಭಿಸಿದಾಗ, ಸಭೆಗಳನ್ನು ನಡೆಸುತ್ತೇವೆ ಮತ್ತು ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸುತ್ತೇವೆ. ನಂತರ ಒಂದೂವರೆ ತಿಂಗಳ ಬಳಿಕ ಅದೇ ಹುಡುಗಿಯರ ಬಳಿಗೆ ಹೋಗಿ, ಅವರ ಅನುಭವ ಹೇಗಿದೆ, ಏನಾದರೂ ಸಮಸ್ಯೆಗಳಿದೆಯೇ ಎಂದು ತಿಳಿದುಕೊಳ್ಳುತ್ತೆವೆ," ವರದಿ ದಿ ಲಾಜಿಕಲ್ ಇಂಡಿಯನ್.


How has the coronavirus outbreak disrupted your life? And how are you dealing with it? Write to us or send us a video with subject line 'Coronavirus Disruption' to editorial@yourstory.com

  • +0
Share on
close
  • +0
Share on
close
Share on
close

Our Partner Events

Hustle across India