ಪುಣೆಯಲ್ಲಿದೆ ನುಡಿದಂತೆ ನಡೆದು ಗ್ರಾಹಕರಿಗೆ ಮಾದರಿಯಾಗಿರುವ ತ್ಯಾಜ್ಯ ರಹಿತ ಅಂಗಡಿ

ಅಕ್ಷಯ್ ಅಗರ್ವಾಲ್ ಹಾಗು ಗಜೇಂದ್ರ ಚೌಧರಿ ಅವರಿಂದ ಆರಂಭಗೊಂಡ ‘ಅದ್ರಿಶ್’, ಪ್ಲಾಸ್ಟಿಕ್ ಮತ್ತು ಇತರೆ ಕೊಳೆಯದ ತ್ಯಾಜ್ಯ ವಸ್ತುಗಳ ಉತ್ಪತ್ತಿಯನ್ನು ಕಡಿಮೆಗೊಳಿಸಿ, ಪರಿಸರ ಸ್ನೇಹಿ ವಾತಾವರಣವನ್ನು ಸೃಷ್ಟಿಸುತ್ತಿದೆ.

ಪುಣೆಯಲ್ಲಿದೆ ನುಡಿದಂತೆ ನಡೆದು ಗ್ರಾಹಕರಿಗೆ ಮಾದರಿಯಾಗಿರುವ ತ್ಯಾಜ್ಯ ರಹಿತ ಅಂಗಡಿ

Monday July 22, 2019,

2 min Read

ಇಂದು ಪ್ಲಾಸ್ಟಿಕ್ ಮನೆಗಳಲ್ಲಿ, ರಸ್ತೆಗಳಲ್ಲಿ, ಸಮುದ್ರಗಳಲ್ಲಿ, ಅಷ್ಟೇ ಅಲ್ಲದೆ ಪ್ರಾಣಿಗಳ ದೇಹದಲ್ಲಿ ಹಾಗೂ ನಾವು ತಿನ್ನುವ ಆಹಾರದಲ್ಲೂ ಅಡಕವಾಗಿದೆ.


ಪ್ಲಾಸ್ಟಿಕ್ ನಿಂದ ನಮ್ಮ ಆರೋಗ್ಯಕ್ಕೆ ಮಾತ್ರ ಕೆಟ್ಟ ಪರಿಣಾಮವಾಗುತ್ತಿಲ್ಲ. ಹವಾಮಾನದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ. ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಮಾಡುವ ಬಗ್ಗೆ ಸಾಕಷ್ಟು ಮಾತುಕತೆಗಳು ನಡೆದಿದ್ದರೂ ಸಹ, ಅದು ಯಶಸ್ವಿಯಾಗಿ ಕಾರ್ಯರೂಪಕ್ಕೆ ಬರುವುದು ದೂರದ ಮಾತು.


ವ

‘ಅದ್ರಿಶ್’ ನಲ್ಲಿ ಅಕ್ಷಯ್ ಅಗರ್ ವಾಲ್ (ಚಿತ್ರ- ವಾಟ್ ಶಾಟ್)

ಪ್ರಾಥಮಿಕ ಹಂತದಲ್ಲಿಯೇ ಪ್ಲಾಸ್ಟಿಕ್ ಬಳಕೆಯನ್ನು ವಿರೋಧಿಸಿ, ಹಸಿರು ಮಾರ್ಗವನ್ನು ಆಯ್ದುಕೊಂಡವರು 26 ವರ್ಷದ ಚಾರ್ಟರ್ಡ್ ಅಕೌಂಟೆಂಟ್, ಅಕ್ಷಯ್ ಅಗರ್ವಾಲ್. ಇದು ಸಾಧ್ಯವಾಗಿದ್ದು ಶೂನ್ಯ ತ್ಯಾಜ್ಯ ಉತ್ಪಾದಿಸುವ ಸಾವಯವ ಶೈಲಿಯ ಅಂಗಡಿಯಾದ ‘ಅದ್ರಿಶ್’ ನಿಂದ. ಹಾಗೆಯೇ ಈ ಕೆಲಸಕ್ಕೆ ಸಾಥ್ ನೀಡಿದವರು ಅಕ್ಷಯ್ ಅವರ ಗೆಳೆಯ ಹಾಗು ‘ಅದ್ರಿಶ್’ನ ಸಹ-ಸಂಸ್ಥಾಪಕರಾದ ಗಜೇಂದ್ರ ಚೌಧರಿ.



ದಿ ಲಾಜಿಕಲ್ ಇಂಡಿಯನ್ ನೊಂದಿಗಿನ ಮಾತುಕತೆಯಲ್ಲಿ ಮಹಾರಾಷ್ಟ್ರ, ಕೊಲ್ಹಾಪುರದ ಅಕ್ಷಯ್ ಹೀಗೆ ಹೇಳಿದರು,


ಹಸಿರನ್ನು ಉಳಿಸಿ ಬೆಳೆಸಬೇಕೆಂಬ ಒಂದು ಮಹತ್ತಾದ ಉದ್ದೇಶದ ಫಲವೇ “ಅದ್ರಿಶ್”. ಹೀಗಾಗಿ ಜನ ತಮ್ಮ ಮೂಲಗಳೊಂದಿಗೆ ಮತ್ತೆ ಬೆಸೆದುಕೊಳ್ಳಲು ಸಹಾಯವಾಗುವಂತೆ, ಅವರ ಯೋಚನೆಗಳು ಚಿಗುರೊಡೆಯುವ ರೀತಿಯ ಪದ್ಧತಿಗಳನ್ನು ವೃದ್ಧಿಗೊಳಿಸುತ್ತಿದ್ದೇವೆ.”


ಇತರೆ ಅಂಗಡಿಗಳಂತೆ ಅಲ್ಲದೆ ‘ಅದ್ರಿಶ್’ ತ್ಯಾಜ್ಯ ರಹಿತ ಸಾವಯವ ಖರೀದಿಯ ಅನುಭವ ನೀಡುತ್ತದೆ ಎಂದರೆ ನೀವು ನಂಬಲೇಬೇಕು. ಯಾಕೆಂದೆರೆ ಇಲ್ಲಿ ಯಾವ ವಸ್ತುಗಳನ್ನೂ ಪ್ಲಾಸ್ಟಿಕ್ ನಲ್ಲಿ ಸಂಗ್ರಹಿಸಿಡುವುದೂ ಇಲ್ಲ , ಮಾರುವುದೂ ಇಲ್ಲ! ಗ್ರಾಹಕರು ತಮ್ಮ ಚೀಲ ಅಥವಾ ಬುಟ್ಟಿಗಳನ್ನು ತಾವೇ ತರಬೇಕು. ಇಲ್ಲವಾದಲ್ಲಿ ಚೀಲವನ್ನು ಅಂಗಡಿಯಲ್ಲಿ ಖರೀದಿಸಬೇಕು.


ಗಾಜಿನ ಡಬ್ಬಿಗಳಲ್ಲಿ ಕೊಳ್ಳಬೇಕೆಂದಿರುವ ದವಸ, ಧಾನ್ಯ, ಗಿಡಮೂಲಿಕೆಗಳ ಚಹಾ, ಎಣ್ಣೆ ಇತ್ಯಾದಿಗಳನ್ನು ತುಂಬಿ, ತೂಕ ಹಾಕಿ, ಕೌಂಟರ್ ನಲ್ಲಿ ಹಣವನ್ನು ಪಾವತಿ ಮಾಡಿ ತೆರಳಬಹುದು ಎಂದು ವಾಟ್ ಶಾಟ್ ವರದಿ ಮಾಡಿದೆ.



ಕ

ಪ್ಲಾಸ್ಟಿಕ್ ಬ್ಯಾಗ್ ಹಾಗು ಡಬ್ಬಿಗಳಿಗೆ ‘ಅದ್ರಿಶ್’ ನಲ್ಲಿ ಜಾಗವಿಲ್ಲ (ಚಿತ್ರ-ವಾಟ್ ಶಾಟ್)

ಇದಲ್ಲದೆ ಬಿದಿರಿನ ಟೂತ್ ಬ್ರಶ್ಗಳು, ಕಬ್ಬಿಣದ ಸ್ಟ್ರಾ ಗಳು, ಖಾದಿ ಬ್ಯಾಗ್ ಗಳು ಹಾಗು ಪ್ಲಾಸ್ಟಿಕ್ ನಿಂದ ತಯಾರಿಸದ ಹಲವು ಅಡಿಗೆ ಸಾಮಾನುಗಳೂ ಇಲ್ಲಿ ಲಭ್ಯ.


ತಾವು ಮಾರುತ್ತಿರುವ ಉತ್ಪನ್ನಗಳು ಸಂಪೂರ್ಣವಾಗಿ ಸಾವಯವವಾಗಿ ಇರಬೇಕು ಎಂಬ ಕಾರಣಕ್ಕೆ, ಭಾರತದಾದ್ಯಂತ ಸುಮಾರು 8,000 ರೈತರಿಂದ ಸಾವಯವ ಉತ್ಪನ್ನಗಳನ್ನು ಖರೀದಿ ಮಾಡಲಾಗುತ್ತದೆ. ಉತ್ತಮ ಆರೋಗ್ಯ ಹಾಗೂ ಸ್ವಚ್ಛ ಪರಿಸರ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು ಎನ್ನುವುದು ಅಕ್ಷಯ್ ಅವರ ನಂಬಿಕೆ.


ಇದರ ಕುರಿತು ಮಾತನಾಡುತ್ತಾ ಅವರು ಹೀಗೆ ವಿವರಿಸಿದರು,


“ನಾವು ರೈತರಿಗೆ ನೈಸರ್ಗಿಕ ಹಾಗು ಸಾವಯವ ಕೃಷಿ ವಿಧಾನಗಳನ್ನು ಬಳಸಿ, ವಿವಿಧ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ ನೀಡುತ್ತೇವೆ. ಬೆಳೆಗಾರರೂ ಸಹ ಉತ್ಪನ್ನಗಳಲ್ಲಿ ಅವಶ್ಯಕ ಪೋಷಕಾಂಶಗಳನ್ನು ಹಿಡಿದಿಡಲು ಸಹಾಯಕವಾಗುವ ನಿಧಾನವಾದ ವಿಧಾನವನ್ನು ಕೈಗೊಳ್ಳಲು ಪ್ರೇರಿತರಾಗುತ್ತಾರೆ. ಇವೆಲ್ಲದರ ಫಲಿತಾಂಶವೇ ಹಸಿರು ಭವಿಷ್ಯದ ಬಾಗಿಲಿನೆಡೆಗೆ ಕರೆದ್ಯೊಯ್ಯುವ ಸಾವಯವ ಪದ್ಧತಿಯ ದಾರಿ.”


ಇಷ್ಟೇ ಅಲ್ಲದೆ ಅವರು ಮತ್ತೆ ಒಂದಷ್ಟು ವಿವರಗಳನ್ನು ಸೇರಿಸಿದರು, "ಆದ್ದರಿಂದಲೇ ನಾವು ಮಾರಾಟ ಮಾಡುವ ಉತ್ಪನ್ನಗಳು, ರೈತರಿಗೆ ಬೆಳೆ ಬೆಳೆಯಲು ಸೂಚಿಸುವ ವಿಧಾನಗಳು ಎಲ್ಲವೂ, ನೈಸರ್ಗಿಕ , ಸಾವಯವ ಹಾಗು ಆರೋಗ್ಯಕರ. ಉದಾಹರಣೆಗೆ ಎಣ್ಣೆಯನ್ನು ಮರದಿಂದ ಒತ್ತಿ ಪಡೆಯಲಾಗುತ್ತದೆ, ಹಿಟ್ಟುಗಳನ್ನು ಕಲ್ಲುಗಳಿಂದ ಪುಡಿ ಮಾಡಲಾಗುತ್ತದೆ ಹಾಗು ಉತ್ತಮ ಬೀಜಗಳನ್ನು ಹಾಕಲಾಗುತ್ತದೆ.” ದಿ ಲಾಜಿಕಲ್ ಇಂಡಿಯನ್ ನ ವರದಿ