ಮಹಿಳೆಯರ ರಕ್ಷಣೆಗಾಗಿ ಸಿದ್ಧವಾಯ್ತು ‘ಕ್ವೀನ್-ಬೆಲ್ಟ್'

ಮಹಿಳೆಯರು ಅಪಾಯದಲ್ಲಿ ಸಿಲುಕಿದಾಗ ಈ ಬೆಲ್ಟ್‌ ಅವರ ಆಪ್ತರಿಗೆ ತುರ್ತುಕರೆ ಮಾಡುತ್ತದೆ ಮತ್ತು ಅವರಿರುವ ಸ್ಥಳದ ಬಗ್ಗೆ ಮಾಹಿತಿ ನೀಡಿ ಸಹಾಯ ಮಾಡುತ್ತದೆ.

ಮಹಿಳೆಯರ ರಕ್ಷಣೆಗಾಗಿ ಸಿದ್ಧವಾಯ್ತು ‘ಕ್ವೀನ್-ಬೆಲ್ಟ್'

Thursday November 21, 2019,

2 min Read

ಭಾರತದ ವಿವಿಧ ನಗರಗಳಲ್ಲಿ ಪ್ರತಿದಿನ 106 ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ ಮತ್ತು ಇದಕ್ಕೆ ಬಲಿಯಾಗುವ ಪ್ರತಿ 10 ರಲ್ಲಿ ನಾಲ್ವರು ಅಪ್ರಾಪ್ತ ವಯಸ್ಸಿನವರಾಗಿದ್ದಾರೆ.


ಮಹಿಳೆಯರ ಮೇಲಿನ ಈ ಆಘಾತಕಾರಿ ಮತ್ತು ಆತಂಕಕಾರಿ ಅಪರಾಧವೇ ಬಿ.ಎಸ್.ಸಿ. ಕಂಪ್ಯೂಟರ್ ಸೈನ್ಸ್ ಓದುತ್ತಿರುವ ಘರುವಾನ್‌ನ ಚಂಡೀಘರ್ ವಿಶ್ವವಿದ್ಯಾಲಯದ ಮೂವರು ವಿದ್ಯಾರ್ಥಿಗಳಿಗೆ ಭಾರತದಲ್ಲಿ ಹೆಚ್ಚುತ್ತಿರುವ ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಪ್ರೇರೆಪಿಸಿತು.


ತಮ್ಮ ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ಜಾವತೇಶ್ ಸಿಂಗ್ ಮುಕ್ತಸರ್ ಸಾಹಿಬ್‌ಗೆ ಸೇರಿದವರಾಗಿದ್ದರೆ, ಲಲಿತಾ ಠಾಕೂರ್ ಮತ್ತು ಸುಶೀಲ್ ಕುಮಾರ್ ಅವರು ಪಥಾನ್‌ಕೋಟ್‌ಗೆ ಸೇರಿದವರಾಗಿದ್ದಾರೆ. ಇವರೆಲ್ಲರು ಸೇರಿ ವಿಶೇಷವಾದ 'ಕ್ವೀನ್-ಬೆಲ್ಟ್' ಅನ್ನು ಕಂಡುಹಿಡಿದಿದ್ದಾರೆ, ಇದು ಭೀಕರ ಅಪರಾಧದಿಂದ ಮಹಿಳೆಯರನ್ನು ರಕ್ಷಿಸುವಲ್ಲಿ ಒಂದು ಮೈಲಿಗಲ್ಲಾಗಲಿದೆ.


ಈ ಬೇಲ್ಟ್‌ ಹೇಗೆ ಕೆಲಸ ಮಾಡುತ್ತದೆ?

'ಕ್ವೀನ್-ಬೆಲ್ಟ್' ಸಾಮಾನ್ಯ ಬೆಲ್ಟ್ ನಂತೆಯೇ ಕಾಣುತ್ತದೆ ಆದರೆ ಸರ್ಕ್ಯೂಟ್ ನೊಂದಿಗೆ ಮೊಬೈಲ್ ಸಿಮ್ ಹೊಂದಿರುತ್ತದೆ ಮತ್ತು ಜಿಪಿಎಸ್ ಟ್ರ್ಯಾಕಿಂಗ್ ಸಿಸ್ಟಮ್ ಅನ್ನು ಕೂಡ ಅಳವಡಿಸಲಾಗಿದೆ.


ಸುರಕ್ಷತಾ ಬೆಲ್ಟ್ ನ ಕಾರ್ಯವನ್ನು ವಿವರಿಸುತ್ತ, ಜಾವತೇಶ್, 


“ಈ ಬೆಲ್ಟ್ ಎಲೆಕ್ಟ್ರಾನಿಕ್ ಸರ್ಕ್ಯೂಟ್ ಬ್ರೇಕರ್ ಸಿಸ್ಟಮ್ ಹೊಂದಿರುತ್ತದೆ, ಯಾರಾದರೂ ಬೆಲ್ಟ್ ಅನ್ನು ಬಲವಂತವಾಗಿ ತೆಗೆಯಲು ಪ್ರಯತ್ನಿಸಿದ ನಂತರ ಅದು ಸಕ್ರಿಯಗೊಳ್ಳುತ್ತದೆ ಮತ್ತು ಅದರಲ್ಲಿ ಅಳವಡಿಸಲಾದ ಮೊಬೈಲ್ ಸಿಮ್ ನಿಂದ ಯಾವ ಮೂರು ಸಂಖ್ಯೆಗಳು ಅದರಲ್ಲಿ ಸೇವ್ ಮಾಡಲಾಗಿರುತ್ತದೆ ಆ ಸಂಖ್ಯೆಗೆ ತುರ್ತು ಕರೆ ಮಾಡುತ್ತದೆ. ಕರೆಯ ಜೊತೆಗೆ, ಕರೆ ಮಾಡುವವರು ಜಿಪಿಎಸ್ ಟ್ರ್ಯಾಕಿಂಗ್ ಸಿಸ್ಟಮ್ ಮೂಲಕ ಆ ಮಹಿಳೆ ಯಾವ ಸ್ಥಳದಲ್ಲಿ ಇದ್ದಾರೆ ಎಂಬ ಮಾಹಿತಿಯನ್ನು ಸಹ ಪಡೆಯಬಹುದು. ಅದನ್ನು ಯಾವುದೇ ಮೊಬೈಲ್ ಬಳಸಿ ಟ್ರ್ಯಾಕ್ ಮಾಡಬಹುದು ಮತ್ತು ಆದ್ದರಿಂದ ಯಾವುದೇ ಸಹಾಯಕ್ಕಾಗಿ ಮಹಿಳೆಯನ್ನು ತಲುಪಬಹುದು,” ಎಂದರು.


ಲಲಿತ ಠಾಕೂರ್ ಮಾತನಾಡುತ್ತಾ,


"ನಾನೊಬ್ಬ ಹುಡುಗಿಯಾಗಿದ್ದರಿಂದ, ಪ್ರತಿದಿನ ಮಾಧ್ಯಮಗಳಲ್ಲಿ ನಡೆಯುತ್ತಿರುವ ಅತ್ಯಾಚಾರ ಘಟನೆಗಳ ಸುದ್ದಿಗಳನ್ನು ಓದಿ ಓದಿ ನಾನು ತುಂಬಾ ಅಸಮಾಧಾನಗೊಂಡಿದ್ದೇನೆ ಮತ್ತು ಅದಕ್ಕಾಗಿ ಏನಾದರೂ ಮಾಡಲು ಬಯಸಿದೆ" ಎಂದರು.


"ನಾವು 2017 ರ ಡಿಸೆಂಬರ್‌ನಲ್ಲಿ ಬೆಲ್ಟ್ ಅಭಿವೃದ್ಧಿಪಡಿಸುವ ಕೆಲಸವನ್ನು ಪ್ರಾರಂಭಿಸಿದ್ದೇವು ಮತ್ತು ಈ ವರ್ಷದ ಏಪ್ರಿಲ್ ವೇಳೆಗೆ ನಾವು ಮೂಲಮಾದರಿಯನ್ನು ತಯಾರಿಸಿದ್ದೇವೆ ಎಂದು ಅವರು ಹೇಳಿದರು. ಈ ಮೂವರು ಭಾರತ ಸರ್ಕಾರಕ್ಕೆ ಪೇಟೆಂಟ್ ಸಲ್ಲಿಸಿದ್ದಾರೆ, ಇದು ಪ್ರಸ್ತುತ ಚಂಡೀಘರ್ ವಿಶ್ವವಿದ್ಯಾಲಯದಲ್ಲಿ ಆರಂಭಿಸಿರುವ ತಮ್ಮ ಸ್ಟಾರ್ಟ್ ಅಪ್ ಕಂಪನಿ ಅರ್ಬಾದ್ ಎಲೆಕ್ಟ್ರಾನಿಕ್ಸ್ ಮೂಲಕ ಉತ್ಪನ್ನವನ್ನು ವಾಣಿಜ್ಯಿಕವಾಗಿ ಪ್ರಾರಂಭಿಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ.