ಸದ್ದಿಲ್ಲದೆ ಸೇವೆ ಮಾಡುವವರಿಗೆ ಥ್ಯಾಂಕ್ಸ್‌ ಹೇಳುತ್ತಿದೆ ದೆಹಲಿಯ ರಬ್‌ ಶುಕ್ರನ್

ಅಭಿನವ್ ಮಲ್ಹೋತ್ರಾ ಅವರು ಸ್ಥಾಪಿಸಿದ ರಬ್ ಶುಕ್ರನ್ ಎಂಬ ಸಂಸ್ಥೆಯ ಸ್ವಯಂಸೇವಕರು ರಿಕ್ಷಾ ಎಳೆಯುವವರು, ಚಾಲಕರು, ಕ್ಲೀನರ್‌ಗಳನ್ನು ಸಂಪರ್ಕಿಸಿ ಅವರ ಸೇವೆಗಳಿಗೆ ಅವರಿಗೆ ಕೃತಜ್ಞತೆಯ ಕಾರ್ಡ್‌ಗಳನ್ನು ನೀಡುತ್ತಾರೆ. ಇಂತಹ ಶುಭಾಶಯ ಪತ್ರಗಳಲ್ಲದೆ, ಇವರು ತುರ್ತು ಪರಿಸ್ಥಿತಿಗಳಿಗೆ ಸಹಾಯವಾಣಿಯನ್ನು ಸಹ ಹೊಂದಿದ್ದಾರೆ.

ಸದ್ದಿಲ್ಲದೆ ಸೇವೆ ಮಾಡುವವರಿಗೆ ಥ್ಯಾಂಕ್ಸ್‌ ಹೇಳುತ್ತಿದೆ ದೆಹಲಿಯ ರಬ್‌ ಶುಕ್ರನ್

Wednesday January 22, 2020,

2 min Read

ಕೃತಜ್ಞರಾಗಿರಲು ಜೀವನದಲ್ಲಿ ಹಲವು ಸಂಗತಿಗಳಿವೆ? ಆದರೆ ಎಷ್ಟು ಮಂದಿ ಪಡೆದ ಸಹಾಯಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ, ಕೆಲಸ ಉತ್ತಮವಾಗಿ ಆಗಿದ್ದಕ್ಕೆ ಅಥವಾ ನಮ್ಮ ಜೀವನವನ್ನು ಸುಲಭಗೊಳಿಸಿದ್ದಕ್ಕಾಗಿ ಎಷ್ಟು ಜನರಿಗೆ ಕೃತಜ್ಞರಾಗಿರಬೇಕು?


ದೆಹಲಿಯ ಮೂವತ್ತಮೂರು ವರ್ಷದ ಅಭಿನವ್ ಮಲ್ಹೋತ್ರಾ ಅವರು ತಮ್ಮ ಸ್ನೇಹಿತರೊಂದಿಗೆ 2018 ರಿಂದ ಸಣ್ಣ ಸಂದೇಶಗಳೊಂದಿಗೆ ‘ಕೃತಜ್ಞತೆಯ ಕಾರ್ಡ್‌ಗಳನ್ನು’ ತಯಾರಿಸುತ್ತಿದ್ದಾರೆ, ಅದರ ಮೇಲೆ ‘ನೀವು ಅದ್ಭುತ ಕೆಲಸ ಮಾಡುತ್ತಿದ್ದೀರಿ. ನಮ್ಮ ಜೀವನವನ್ನು ಸುಲಭಗೊಳಿಸಿದ್ದಕ್ಕಾಗಿ ನಞಾು ನಿಮಗೆ ಕೃತಜ್ಞರಾಗಿರುತ್ತೇವೆ’, ‘ಜೀವನವು ಮುಂದೊಮ್ಮೆ ಕಷ್ಟಕರವಾಗಬಹುದು ಎಂದು ನಮಗೆ ತಿಳಿದಿದೆ, ŕ˛Şŕłŕ˛°ŕ˛¤ŕ˛ż ಬಾರಿಯೂ ನಿಮ್ಮ ಮೇಲೆ ಬೇಸರವಾದಾಗ ಈ ಕಾರ್ಡ್ ಅನ್ನು ನೋಡಿ ಮತ್ತು ನೀವು ಎಞಥುಾ ಕೆಲಸಕ್ಕೆ ನಞಾು ನಿಮಗೆ ಕೃತಜ್ಞರಾಗಿರುತ್ತೇವೆ ಎಂದು ತಿಳಿಯಿರಿ,Ęź ಎಂಬ ಸಂದೇಶವಿದೆ. ಇಂಥಹ ಕಾರ್ಡ್ ಗಳನ್ನು ಚಲಾಞರು ಜನರಿಗೆ ತಲುಪಿಸಬೇಕು. ಇದರಿಂದ ಅವರಿಗೆ ಅಪರೂಪವಾಗಿ ಧನ್ಯವಾದಾಗಳನ್ನು ಹೇಳಬಹುದಾಗಿದೆ ಎನ್ನುತ್ತಾರೆ ಅಭಿನವ್‌.


Q

ಅಭಿನವ್ ಮಲ್ಹೋತ್ರಾ (ಚಿತ್ರಕೃಪೆ: ದಿ ಲಾಜಿಕಲ್ ಇಂಡಿಯನ್)


ಕೃತಜ್ಞತೆಯ ಈ ಸಂದೇಶಗಳ ಕುರಿತು ದಿ ಲಾಜಿಕಲ್ ಇಂಡಿಯನ್ ಜೊತೆ ಮಾತನಾಡಿದ ಅಭಿನವ್,


“ನಾವು ಈ ಸುಂದರವಾದ, ವರ್ಣರಂಜಿತ ಕಾರ್ಡ್‌ಗಳನ್ನು ತಯಞರಿಸಿ, ಅವುಗಳೊಂದಿಗೆ ದೆಹಲಿಯ ಬೀದಿಗಳಲ್ಲಿ ಹೊರಟೆವು, ಅವುಗಳನ್ನು ಸಂಚಾರಿ ಪೊಲೀಸರಿಗೆ ಹಸ್ತಾಂತರಿಸಿದ್ದೇವೆ ಮತ್ತು ಅದನ್ನು ಅವರಿಗೆ ಓದಿ ಹೇಳಿದೆವು. ಅವರ ಪ್ರತಿಕ್ರಿಯೆ, ಅವರ ಕಣ್ಣಲ್ಲಿನ ಆನಂದ ಅವರ ಧ್ವನಿಯಲ್ಲಿನ ಸಂತೋಷವೇ ಈಗ 25 ಸಾವಿರಕ್ಕೂ ಹೆಚ್ಚು ಸ್ವಯಂಸೇವಕರನ್ನು ಹೊಂದಿರುವ ಎನ್‌ಜಿಒ ರಬ್ ಶುಕ್ರಾನ್ ಸ್ಥಾಪಿಸಲು ಕಾರಣವಾಯಿತು,” ಎಂದರು. 


ನಗರದಾದ್ಯಂತ ಸಕಾರಾತ್ಮಕ ಭಾವನೆಗಳನ್ನು ಹರಡುವ ಅಭಿನವ್ ಅವರ ಧ್ಯೇಯದ ಆರಂಭ ಅದಾಗಿತ್ತು. ಆಜಾದ್ ದಿಲ್ಲಿ ಪ್ರಕಾರ, ಈ ಸಂಸ್ಥೆ ಈಗ ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ್, ಗುವಾಹಟಿ, ಬೆಂಗಳೂರು ಮತ್ತು ಮುಂಬೈಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.


ರಬ್ ಶುಕ್ರನ್ ಸಂಸ್ಥೆಯ ಸ್ವಯಂಸೇವಕರು ರಿಕ್ಷಾ ಎಳೆಯುವವರು, ಚಾಲಕರು, ಕ್ಲೀನರ್ಗಳು ಮತ್ತು ಇತರರನ್ನು ಸಂಪರ್ಕಿಸುತ್ತಾರೆ ಮತ್ತು ಅವರ ಸೇವೆಗಳಿಗೆ ಧನ್ಯವಾದಗಳನ್ನು ಹೇಳಿ ಕಾರ್ಡ್ಗಳನ್ನು ನೀಡುತ್ತಾರೆ. ಇದಲ್ಲದೆ, ತುರ್ತು ಪರಿಸ್ಥಿತಿಗಳಿಗೆ ಸಹಾಯವಾಣಿ ಸಂಖ್ಯೆಯನ್ನು ಸ್ವಯಂಸೇವಕರು ಹಸ್ತಾಂತರಿಸುತ್ತಾರೆ. ಅಲ್ಲದೇ ಶುಭಾಶಯ ಪತ್ರಗಳು ಕೃತಜ್ಞತೆಯ ಸಂಕೇತವಾಗಿ ಹೂವುಗಳನ್ನು ಸಹ ನೀಡುತ್ತಾರೆ.


“ನಾನು ಒಂದು ದಿನ ಪ್ರಧಾನಿ ನರೇಂದ್ರ ಮೋದಿಯವರ ಮನೆಯ ಮುಂದೆ ಹಾದುಹೋಗುತ್ತಿದ್ದೆ ಮತ್ತು ಅಲ್ಲಿ ಸುಮಾರು 10 ಬಿಎಸ್ಎಫ್ ಸೈನಿಕರು ಗೇಟ್ ಹೊರಗೆ ನಿಂತಿರುವುದನ್ನು ನಾನು ನೋಡಿದೆ. ನಾನು ಈ ಕಾರ್ಡ್‌ಗಳನ್ನು ಅವರೆಲ್ಲರಿಗೂ ನೀಡಿದ್ದೇನೆ. ಕೆಲವು ದಿನಗಳ ನಂತರ, ಅವರಲ್ಲಿ ಒಬ್ಬರು ನನಗೆ ದೂರವಾಣಿ ಕರೆ ಮಾಡಿ ತುಂಬಾ ನೋವಿನಿಂದ ಅವರನ್ನು ಕೆಲಸಕ್ಕಾಗಿ ಮೂರು ವಿಭಿನ್ನ ನಗರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು. ಆದರೆ ಯಾರೊಬ್ಬರೂ ಅವರನ್ನು ಇಷ್ಟು ವಿಶೇಷ ರೀತಿಯಲ್ಲಿ ನೋಡಿಲ್ಲ. ಪ್ರತಿದಿನ ಅವರು ತುಂಬಾ ಜನರನ್ನು ನೋಡುತ್ತಾರೆ ಆದರೆ ಯಾರೂ ಅವರ ಗಮನವನ್ನು ಕೊಡುವುದಿಲ್ಲ,” ಎಂದು ಅಭಿನವ್ ಹೇಳಿದರು.


ಸ್ವಯಂಸೇವಕರು ಕೆಲಸ ಮಾಡುತ್ತಿರುವುದು (ಚಿತ್ರಕೃಪೆ: ದಿ ಲಾಜಿಕಲ್ ಇಂಡಿಯನ್)


ತಂಡವು ಅವರು ಕಾರ್ಡ್‌ಗಳನ್ನು ನೀಡುವ ಎಲ್ಲ ಜನರ ದೂರವಾಣಿ ಸಂಖ್ಯೆಗಳನ್ನು ಸಹ ತೆಗೆದುಕೊಳ್ಳುತ್ತದೆ. ಇದರಿಂದ ಅವರ ಜನ್ಮದಿನದಂದು ಸಹ ಹಾರೈಸುತ್ತಾರೆ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಎಞಥಿ.