ಬೀದಿಯಲ್ಲಿ ಭಿಕ್ಷೆ ಬೇಡುತಿದ್ದ 450 ಮಕ್ಕಳಿಗೆ ಶಿಕ್ಷಣ ನೀಡಲು ಶಾಲೆ ಪ್ರಾರಂಭಿಸಿದ ರಾಜಾಸ್ಥಾನದ ಪೋಲಿಸ್ ಪೇದೆ

ರಾಜಾಸ್ಥಾನದ ಚಾರು ಜಿಲ್ಲೆಯ ಪೋಲಿಸ್ ಪೇದೆ ಧರ್ಮವೀರ ಜಾಖರ್ ಸುತ್ತಮುತ್ತಲಿನ ದುರ್ಬಲ ವರ್ಗದ ಮಕ್ಕಳಿಗಾಗಿ ಅಪ್ನಿ ಪಾಠಶಾಲಾ ಎಂಬ ಉಚಿತ ಶಾಲೆಯನ್ನು ಪ್ರಾರಂಭಿಸಿದ್ದಾರೆ. ಪರಿಸ್ಥಿತಿಯ ವಿಕೋಪಕ್ಕೆ ಬಲಿಯಾಗದಂತೆ ಮಕ್ಕಳಿಗೆ ಉಚಿತ ಶಿಕ್ಷಣದ ಸೌಲಭ್ಯ ಮತ್ತು ಬೇಕಾದ ಶಾಲಾ ಪರಿಕರಗಳನ್ನು ಈ ಪೋಲಿಸ್ ಪೇದೆ ಒದಗಿಸುತಿದ್ದಾರೆ.

8th Nov 2019
  • +0
Share on
close
  • +0
Share on
close
Share on
close

ಬದಲಾವಣೆಯೆಂಬುದು ಕಲಿಯುವಿಕೆ ಮತ್ತು ಶಿಕ್ಷಣದಿಂದ ಮಾತ್ರ ಸಾಧ್ಯವೆಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಶಿಕ್ಷಣವೋಂದೇ ಬಡವರು ಮತ್ತು ದುರ್ಬಲ ವರ್ಗದ ಮಕ್ಕಳ ಪ್ರಗತಿಯ ಮೂಲಮಂತ್ರ ಎಂಬುದನ್ನು ಅರಿತ ರಾಜಾಸ್ಥಾನದ ಪೋಲಿಸ್ ಪೇದೆ ಶಿಕ್ಷಣ ಪಡೆಯಲು ಸುತ್ತಮುತ್ತಲಿನ ಅಂತಹ ಮಕ್ಕಳಿಗೆ ಸಹಾಯ ಮಾಡುತಿದ್ದಾರೆ.


ರಾಜಾಸ್ಥಾನದ ಚಾರು ಜಿಲ್ಲೆಯ ಧರ್ಮವೀರ್ ಜಾಖರ್ ಸುತ್ತಮುತ್ತಲಿನ ದುರ್ಬಲ ವರ್ಗದ ಮಕ್ಕಳಿಗೆ ಶಿಕ್ಷಣ ನೀಡಲು ಅಪ್ನಿ ಪಾಠಶಾಲಾ ಎಂಬ ಉಚಿತ ಶಾಲೆಯನ್ನು 1 ನೇ ಜನವರಿ 2016 ರಂದು ಪ್ರಾರಂಭಿಸಿದರು. ಚಾರು ಜಿಲ್ಲಾ ಕೇಂದ್ರದ ಮಹಿಳಾ ಪೋಲಿಸ್ ಠಾಣೆಯ ಬಳಿಯಿರುವ ಶಾಲೆ ಈಗ ಬೀದಿಯಲ್ಲಿ ಭಿಕ್ಷೆ ಬೇಡುತಿದ್ದ 450 ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ.


ಧರ್ಮವೀರ್ ಜಾಖರ್ (ಚಿತ್ರಕೃಪೆ: ನ್ಯೂ ಇಂಡಿಯನ್ ಎಕ್ಸ್ ಪ್ರೆಸ್)
ಶಾಲೆಯಲ್ಲಿ ಶಿಕ್ಷಣ ಮಾತ್ರವಲ್ಲದೆ ಉಚಿತ ಸಮವಸ್ತ್ರ, ಪುಸ್ತಕ, ಬ್ಯಾಗುಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.


ಶಾಲೆಯನ್ನು ಪ್ರಾರಂಭಿಸಲು ಈ ಪೋಲಿಸ್ ಪೇದೆಗೆ ಸ್ಫೂರ್ತಿ ನೀಡಿದ ಅಂಶ ಯಾವುದು?

“ನಾನು ಈ ಮಕ್ಕಳೊಂದಿಗೆ ಮಾತನಾಡಿದಾಗ ಅವರಿಗೆ ತಂದೆ-ತಾಯಿಯಾಗಲೀ ಇತರ ಬಂಧು-ಬಾಂಧವರಾಗಲೀ ಇಲ್ಲವೆಂಬುದನ್ನು ಅವರು ತಿಳಿಸಿದರು. ಪ್ರಾರಂಭದಲ್ಲಿ ನನಗೆ ಅವರು ಸುಳ್ಳು ಹೇಳುತ್ತಿರಬಹುದೆಂದು ಅನಿಸಿತು. ಆದರೆ ನಾನು ಅವರು ವಾಸಿಸುತಿದ್ದ ಕೊಳಗೇರಿಗೆ ಭೇಟಿ ನೀಡಿದಾಗ ಅವರು ನಿಜ ಹೇಳುತಿದ್ದಾರೆಂದು ನನಗೆ ಮನವರಿಕೆಯಾಯಿತು. ನಾನು ಈ ಮಕ್ಕಳಿಗೆ ಸಹಾಯ ಮಾಡದಿದ್ದರೆ ಅವರು ಜೀವನಪೂರ್ತಿ ಭಿಕ್ಷುಕರಾಗಿ ತಮ್ಮ ಅಮೂಲ್ಯ ಜೀವನವನ್ನು ಹಾಳುಮಾಡಿಕೊಳ್ಳುತ್ತಾರೆಂದು ಅನಿಸಿತು. ನಾನು ಅವರಿಗೆ ಪ್ರತಿದಿನ ಒಂದು ಗಂಟೆಯ ಹೊತ್ತು ಬೋಧಿಸಲು ಶುರು ಮಾಡಿದೆ,” ಎಂದು ಧರ್ಮವೀರ್ ಹೇಳಿದರು, ವರದಿ ನ್ಯೂ ಇಂಡಿಯನ್ ಎಕ್ಸಪ್ರೆಸ್.


ಈಗ ಧರ್ಮವೀರರ ಶಾಲೆಯು ಒಂದರಿಂದ ಏಳನೆಯ ತರಗತಿಯವರಗೆ ಈ ದುರ್ಬಲ ವರ್ಗದ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ಪ್ರಾಥಮಿಕ ತರಗತಿಗಳಲ್ಲಿ 360 ಮಕ್ಕಳು ಮತ್ತು 4 ನೇ ತರಗತಿಯಿಂದ 7 ನೇ ತರಗತಿಯವರಗೆ 90 ಮಕ್ಕಳು ಓದುತಿದ್ದಾರೆ.


ಈ ಮಕ್ಕಳು ಶಾಲೆಗೆ ಬರಲು ಮತ್ತು ಶಾಲೆಯಿಂದ ಮನೆಗೆ ಅವರನ್ನು ತಲುಪಿಸಲು ಒಂದು ಶಾಲಾ ವಾಹನದ ವ್ಯವಸ್ಥೆ ಮಾಡಲಾಗಿದೆ. ಗೈರುಹಾಜರಿಯನ್ನು ತಡೆಯಲು ಶಾಲೆ ಮತ್ತು ಮಕ್ಕಳ ಪೋಷಕರೊಂದಿಗೆ ನಿರಂತರ ಸಂಪರ್ಕವನ್ನು ಏರ್ಪಡಿಸಲಾಗಿದೆ. ಈ ಮಹತ್ಕಾರ್ಯದಲ್ಲಿ ಧರ್ಮವೀರರಿಗೆ ಇಬ್ಬರು ಮಹಿಳಾ ಪೋಲಿಸ್ ಪೇದೆಗಳು ನೆರವಾಗುತಿದ್ದಾರೆ.


(ಚಿತ್ರಕೃಪೆ: ನ್ಯೂ ಇಂಡಿಯನ್ ಎಕ್ಸ್ ಪ್ರೆಸ್)


“ಉತ್ತರ ಪ್ರದೇಶ ಮತ್ತು ಬಿಹಾರದಿಂದ ಇಲ್ಲಿಗೆ ಕೂಲಿ ಮಾಡಲು ಬರುವ ಸಾಕಷ್ಟು ಕುಟುಂಬಗಳಿವೆ. ನಾವು ಅವರು ತಮ್ಮ ತವರೂರಿಗೆ ಮರಳಿದಾಗ ಮಕ್ಕಳಿಗೆ ಶಿಕ್ಷಣ ಕೊಡಿಸುವುದನ್ನು ನಿಲ್ಲಿಸಬಾರದೆಂದು ಅವರನ್ನು ಹುರಿದುಂಬಿಸಿ ಪ್ರೋತ್ಸಾಹಿಸುತಿದ್ದೇವೆ. ನಾವು ಕೆಲವೊಂದು ಮಕ್ಕಳಿಗೆ ಕಸವನ್ನು ಸಂಗ್ರಹಿಸುವ ಕೆಲಸವನ್ನು ಮಾಡಲು ಅನುಮತಿ ನೀಡಿದ್ದೇವೆ ಏಕೆಂದರೆ ಅವರ ಪೋಷಕರು ಈ ಕೆಲಸ ಮಾಡದಿದ್ದರೆ ಆ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಆದುದರಿಂದ ಶಾಲೆ ಮುಗಿದ ಬಳಿಕ ಈ ಕೆಲಸ ಮಾಡಲು ಮಕ್ಕಳಿಗೆ ಅನುಮತಿ ನೀಡಿದ್ದೇವೆ. ಇದರಿಂದಾಗಿ ಅವರು ಶಾಲೆಗೆ ಬರುತಿದ್ದಾರೆ” ಎಂದು ಧರ್ಮವೀರ್ ಹೇಳಿದರು, ವರದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್.


ಶಾಲೆ ನಡೆಸಲು ಪ್ರತಿ ತಿಂಗಳು ಸುಮಾರು 1.5 ಲಕ್ಷ ರೂಪಾಯಿಗಳು ಬೇಕಾಗಿರುವುದರಿಂದ ಇದು ಧರ್ಮವೀರರಿಗೆ ಸುಲಭದ ಕೆಲಸವೇನೂ ಆಗಿಲ್ಲ. ಆದರೆ ಅವರು ಫೇಸ್ ಬುಕ್ ಮೂಲಕ ಈ ಸಮಾಜಮುಖಿ ಕಾರ್ಯದ ಅಭಿಯಾನ ನಡೆಸಿ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಖರ್ಚು-ವೆಚ್ಚಗಳನ್ನು ನಿರ್ವಹಿಸುತಿದ್ದಾರೆ ವರದಿ ಸ್ಟೋರಿ ಪಿಕ್.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, kannada.ys@yourstory.com ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.
  • +0
Share on
close
  • +0
Share on
close
Share on
close
Report an issue
Authors

Related Tags

ಸೈನ್ ಅಪ್ ನಮ್ಮ ದೈನಂದಿನ ಸುದ್ದಿಪತ್ರಕ್ಕಾಗಿ

Our Partner Events

Hustle across India