ತಮಗೆ ‘ಮಗು’ ಎಂದು ಕಮೆಂಟ್ ಮಾಡಿದ ಯುವತಿಯ ಬೆಂಬಲಕ್ಕೆ ನಿಂತ ರತನ ಟಾಟಾ

ಸಾಮಾಜಿಕ ಮಾಧ್ಯಮಗಳಲ್ಲಿ ಛೋಟು ಎಂದು ಕರೆದು ವಿವಾದಕ್ಕೊಳಗಾಗಿದ್ದ ಯುವತಿಯ ರಕ್ಷಣೆಗೆ ನಿಂತ ರತನ ಟಾಟಾ ವಿನಶೀಲತೆಯಿಂದ ಉತ್ತರಿಸಿ ಹೊಸ ಪಾಠ ಮಾಡಿದ್ದಾರೆ.

12th Feb 2020
  • +0
Share on
close
  • +0
Share on
close
Share on
close

ಕಳೆದ ವರ್ಷದ ಅಕ್ಟೋಬರ್‌ ನಲ್ಲಿ ತಮ್ಮ ಇನ್ಸ್ಟಾಗ್ರಾಂ ಖಾತೆತೆರೆದು ಸಾಮಾಜಿಕ ಮಾಧ್ಯಮಕ್ಕೆ ಕಾಲಿಟ್ಟ ರತನ್‌ ಟಾಟಾ ಕೆಲವೇ ತಿಂಗಳುಗಳಲ್ಲಿ 10 ಲಕ್ಷ ಹಿಂಬಾಲಕರನ್ನು ಪಡೆದುಕೊಂಡಿದ್ದಾರೆ. ಈ ಖುಷಿಯನ್ನು ತಮ್ಮ ಆನ್‌ಲೈನ್‌ ಕುಟುಂಬದೊಂದಿಗೆ ಹಂಚಿಕೊಳ್ಳಲೆಂದು ಟಾಟಾ ನೆಲದ ಮೇಲೆ ಕೂತಿರುವ ವಿರಳವಾದ ಫೋಟೊ ಒಂದನ್ನು ಇನ್ಸ್ಟಾಗ್ರಾಂನಲ್ಲಿ ನಿನ್ನೆ 11 ಫೆಬ್ರುವರಿಯಂದು ಪೋಸ್ಟ್‌ ಮಾಡಿ,


“ನನ್ನ ಖಾತೆಯ ಹಿಂಬಾಲಕರ ಸಂಖ್ಯೆ ಮೈಲಿಗಲ್ಲನ್ನು ತಲುಪಿದೆ. ಈ ಆನ್‌ಲೈನ್‌ ಕುಟುಂಬ ಇಷ್ಟು ದೊಡ್ಡದಾಗುತ್ತೆ ಎಂದು ನಾನೆಂದುಕೊಂಡಿರಲಿಲ್ಲ, ಅದಕ್ಕಾಗಿ ನಿಮಗೆ ಧನ್ಯವಾದ ಹೇಳಬಯಸುತ್ತೇನೆ. ಈ ಇಂಟರ್ನೆಟ್‌ ಯುಗದಲ್ಲಿ ನಾವು ಬೆಳೆಸಿಕೊಳ್ಳುವ ಒಳ್ಳೇಯ ಸಂಪರ್ಕಗಳು ಯಾವ ಸಂಖ್ಯೆಗಳಿಗಿಂತಲೂ ಮಿಗಿಲಾಗಿವೆ. ಈ ಸಮುದಾಯದ ಭಾಗವಾಗಿರುವುದು ಮತ್ತು ನಿಮ್ಮಿಂದ ನಾನು ಕಲಿಯುತ್ತಿರುವುದು ನನಗೆ ತುಂಬಾ ಖುಷಿಯನ್ನುಂಟು ಮಾಡಿದೆ, ಈ ಪ್ರಯಾಣ ಹೀಗೆ ಸಾಗುತ್ತಿರಲಿ,” ಎಂದು ಬರೆದುಕೊಂಡಿದ್ದಾರೆ.


ಈ ಚಿತ್ರ ಇನ್ಸ್ಟಾಗ್ರಾಂ ಪ್ರೇಮಿಗಳಿಂದ ಭಾರಿ ಮೆಚ್ಚುಗೆ ಪಡೆದು 5 ಲಕ್ಷ ಲೈಕ್‌ಗಳನ್ನು ಪಡೆದುಕೊಳ್ಳುವ ಸನಿಹದಲ್ಲಿದೆ. ರತನ್‌ ಅವರ ಸರಳತೆಯನ್ನು ಮೆಚ್ಚಿ ಅನೇಕರು ತಮ್ಮ ಪ್ರೀತಿಯ ಶುಭಾಶಯಗಳನ್ನು ಕಮೆಂಟ್‌ನಲ್ಲಿ ಹಂಚಿಕೊಂಡಿದ್ದರು. ಆ ಎಲ್ಲ ಕಮೆಂಟ್‌ಗಳಲ್ಲಿ ಒಬ್ಬರು ಮಾಡಿದ ಕಮೆಂಟ್‌ ವಿಶೇಷವಾಗಿತ್ತು.


ಅವರು ರತನ್‌ ಟಾಟಾ ಅವರ ಫೋಸ್ಟ್‌ ಗೆ “ಶುಭಾಶಯಗಳು ಛೋಟು” ಎಂದು ಕಮೆಂಟ್‌ ಮಾಡಿದ್ದರು. ಇಂತಹ ದೊಡ್ಡ ವ್ಯಕ್ತಿಗೆ ಛೋಟು ಎಂದು ಕರೆದು ಅವಮಾನ ಮಾಡಿದೆ ಎಂದು ಹಲವರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತ ಕಮೆಂಟ್‌ ಮಾಡಿದ ಮಹಿಳೆಗೆ ನಿಂದಿಸುತ್ತಿದ್ದರು.


ಈ ಕಮೆಂಟ್‌ಗಳ ಅವಾಂತರವನ್ನು ಗಮನಿಸಿದ ಟಾಟಾ ಸ್ವತಃ ತಾವೇ ಈ ಗೊಂದಲಕ್ಕೆ ತೆರೆಯೆಳೆಯಲು ಮುಂದಾಗಿ,


“ಎಲ್ಲರಲ್ಲೂ ಒಂದು ಮಗುವಿರುತ್ತದೆ. ದಯವಿಟ್ಟು ಈ ಯುವತಿಯನ್ನು ಗೌರವದಿಂದ ಕಾಣಿರಿ,” ಎಂದು ಕಮೆಂಟ್‌ಗೆ ಉತ್ತರಿಸಿ ತಮ್ಮ ಜ್ಞಾನದ ವಿಶಾಲತೆಯನ್ನು ಮೆರೆದರು.ನಿಂದನೆಗಳಿಂದ ಒತ್ತಡಕ್ಕೊಳಗಾಗಿ ಆ ಯುವತಿ ತನ್ನ ಕಮೆಂಟ್‌ ಅನ್ನು ಅಳಿಸಿದಳು.


ಈ ಎಲ್ಲ ಬೆಳವಣಿಗೆಯಿಂದ ಬೇಸತ್ತ ಟಾಟಾರವರು ಈ ವಿಷಯದ ಮೇಲಿನ ತಮ್ಮ ಅನಿಸಿಕೆಗಳನ್ನು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಳ್ಳುತ್ತ, ಹೀಗೆ ಬರೆದರು,


“ನಿನ್ನೆ ಒಬ್ಬಳು ಮುಗ್ಧ ಯುವತಿ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತ ನನ್ನನ್ನು “ಛೋಟು”(ಮಗು) ಎಂದು ಕಮೆಂಟ್‌ನಲ್ಲಿ ಕರೆದಳು.”“ಹಾಗೆಂದಿದ್ದಕ್ಕೆ ಅವಳನ್ನು ಅವಮಾನಿಸಲಾಯಿತು ಮತ್ತು ಬೇದರಿಸಲಾಯಿತು, ಕೊನೆಗೆ ಅವಳು ಕಮೆಂಟ್‌ನ್ನು ಅಳಿಸಿದಳು”“ಆ ಯುವತಿಯ ಪ್ರಾಮಾಣಿಕವಾದ ಮಾತುಗಳನ್ನು ನಾನು ಮೆಚ್ಚುತ್ತೇನೆ ಮತ್ತು ಗೌರವಿಸುತ್ತೇನೆ. ಅವಳು ಮುಂದೆ ಹೀಗೆ ಪೋಸ್ಟ್‌ ಮಾಡುವುದನ್ನು ನಿಲ್ಲಸಬಾರದೆಂದು ಆಶಿಸುತ್ತೇನೆ," ಎಂದು ತಮ್ಮ ಅಭಿಪ್ರಾಯಯವನ್ನು ಹಂಚಿಕೊಂಡಿದ್ದಾರೆ.


ಈ ವಿನಯಶೀಲತೆ, ಗೌರವ ಸೂಚಿಸುವ ರತನ್‌ ಟಾಟಾರವರ ಗುಣಗಳು ಅವರ ಮೇಲಿನ ಗೌರವವನ್ನು ಇಮ್ಮಡಿಗೊಳಿಸುತ್ತದೆ ಮತ್ತು ಎಲ್ಲರನ್ನು ಗೌರವದಿಂದ ಕಾಣಬೇಕೆಂದನ್ನು ನೆನಪಿಸುತ್ತದೆ.Want to make your startup journey smooth? YS Education brings a comprehensive Funding Course, where you also get a chance to pitch your business plan to top investors. Click here to know more.

  • +0
Share on
close
  • +0
Share on
close
Share on
close

Our Partner Events

Hustle across India