6000 ಅನಾಥ ಹೆಣಗಳ ಅಂತ್ಯಕ್ರಿಯೆ ನಡೆಸಿದ ರವಿ ಕರ್ಲಾ

ರವಿ ಕರ್ಲಾ ರವರ ಟಿಸಿಎಸ್‌ಎಫ್ ಎನ್ ಜಿ ಓ ಮಕ್ಕಳಿಗೆ, ಹಿರಿಯರಿಗೆ ಮತ್ತು ಎಚ್‌ ಐ ವಿ ಪೀಡಿತರಿಗೆ ಆಶ್ರಯ ನೀಡುತ್ತಿದೆ.

11th Sep 2019
  • +0
Share on
close
  • +0
Share on
close
Share on
close

ದೆಹಲಿಯ ರಸ್ತೆಗಳಲ್ಲಿ ಅನಾಥ ಹೆಣ ಬಿದ್ದಿದ್ದರೆ ಅದು ಜನರ ಗಮನ ಸೆಳೆಯುತ್ತದೆ. ಆದರೆ ಕೆಲವು ಮಾತುಗಳಾಡುವುದನ್ನು ಬಿಟ್ಟರೆ, ಯಾರೂ ಸಹಾಯ ಮಾಡುವುದಕ್ಕೆ ಮುಂದೆ ಬರುವುದಿಲ್ಲ.


ಸಮಾಜಿಕ ಕಾರ್ಯಕರ್ತ ರವಿ ಕರ್ಲಾ ಒಬ್ಬರೆ ಈ ವಿಷಯದಲ್ಲಿ ಸಹಾಯಕ್ಕೆ ನಿಂತು ಅನಾಥ ಹೆಣಗಳಿಗೆ ಅಂತಿಮ ವಿಧಿವಿಧಾನಗಳನ್ನು ಸಲ್ಲಿಸುವ ವ್ಯವಸ್ಥೆ ಮಾಡುತ್ತಿರುವುದು.


ಮೂಲ : ಲೈಫ್‌ ಬಿಯಾಂಡ್‌ ನಂಬರ್ಸ್


ದಿ ಅರ್ಥ್‌ ಸೇವಿಯರ್ಸ್‌ ಫೌಂಡೇಶನ್‌ ನ ಸ್ಥಾಪಕರಾದ ರವಿ, 6,000 ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡುವ ಕಾರ್ಯ ನೆರವೇರಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಂಡಿರುವ ಅವರ ಸರಕಾರೇತರ ಸಂಸ್ಥೆ ಬೀದಿಗೆ ಬಿದ್ದ ಅನಾಥ ಮಕ್ಕಳಿಗೆ, ಹಿರಿಯರಿಗೆ ಹಾಗೂ ಮನೆಯಿಂದ ಹೊರದೂಡಲ್ಪಟ್ಟ ಹಿರಿಯ ನಾಗರಿಕರಿಗೆ ಆಶ್ರಯ ನೀಡುತ್ತಿದೆ.


ಗುರ್ಗಾವ್‌ ಮೂಲದ ಟಿಎಸ್‌ಎಎಫ್‌, ಅಂತಹ 500 ಜನ ನಾಗರಿಕರಿಗೆ ಆಶ್ರಯವಾಗಿದೆ.


ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ರವಿ, ಹಲವಾರು ಸಾಧನೆಗಳನ್ನು ಮಾಡಿದ್ದಾರೆ. 1987ರಲ್ಲಿ ಅವರು ಟೇಕ್ವಾಂಡೋ ಮಾರ್ಷಲ್ ಆರ್ಟ್ಸ್ನಲ್ಲಿ ಪ್ರತಿಷ್ಠಿತ ಮಟ್ಟದ 4 ನೇ ಡಾನ್ ಬ್ಲ್ಯಾಕ್ ಬೆಲ್ಟ್ ಅನ್ನು ಪಡೆದರು. ಕೆಲವೇ ವರ್ಷಗಳಲ್ಲಿ, ಅವರು ಭಾರತೀಯ ಹವ್ಯಾಸಿ ಟೇಕ್ವಾಂಡೋ ಒಕ್ಕೂಟದ ಅಧ್ಯಕ್ಷರಾದರು. ಅವರು 43 ವಿವಿಧ ದೇಶಗಳ ಸೈನಿಕರಿಗೆ ಕಲಾ ಪ್ರಕಾರದಲ್ಲಿ ತರಬೇತಿ ನೀಡಿದ್ದಾರೆ. ಸಮರ ಕಲೆಗಳಲ್ಲಿ ಅದ್ಭುತವಾಗಿ ಯಶಸ್ಸುಗಳಿಸಿದ ಇವರು ಕಸದತೊಟ್ಟಿಯಲ್ಲಿ ಆಹಾರ ಹುಡುಕುವುದನ್ನು ನೋಡಿದಾಗ ತಮ್ಮ ನಿಜವಾದ ಉದ್ದೇಶವನ್ನು ಕಂಡುಕೊಂಡರು. ಈ ಘಟನೆಯಿಂದಾಗಿ ಅವರು ತಮ್ಮ ಸರಕಾರೇತರ ಸಂಸ್ಥೆಯನ್ನು ಸ್ಥಾಪಿಸಿದರು.


ವೃದ್ಧರ ಹೊರತಾಗಿ ಟಿಇಎಸ್ಎಫ್ ದೀನದಲಿತ ಮಕ್ಕಳಿಗೆ ಪುನರ್ವಸತಿ ಶಾಲೆಯನ್ನು ಒದಗಿಸುತ್ತದೆ ಮತ್ತು ದೈಹಿಕ ಮತ್ತು ಮಾನಸಿಕ ವಿಕಲಚೇತನರಿಗೆ ಮತ್ತು ಸಮಾಜದಿಂದ ಕೈಬಿಡಲ್ಪಟ್ಟ ಎಚ್ಐವಿ-ಏಡ್ಸ್ ರೋಗಿಗಳಿಗೆ ವೈದ್ಯಕೀಯ ಮತ್ತು ಅವರಿಗೆ ಬೇಕಾಗುವ ಆರೈಕೆಯನ್ನು ಸಹ ನೀಡುತ್ತದೆ.


ಫೇಸ್‌ಬುಕ್‌ನ ಪೋಸ್ಟ್‌ವೊಂದರಲ್ಲಿ, ಲಾಭರಹಿತ ಸಂಸ್ಥೆಯಾದ ಟಿಇಎಸ್‌ಎಫ್ 90 ವರ್ಷದ ವೃದ್ಧೆಯನ್ನು ತನ್ನ ಕುಟುಂಬದೊಂದಿಗೆ ಮತ್ತೆ ಒಂದಾಗಲು ಸಹಾಯ ಮಾಡಿದ ಘಟನೆಯನ್ನು ಹಂಚಿಕೊಂಡಿದೆ. ಅದರಲ್ಲಿ,


“ಹಿರಿಯ ನಾಗರಿಕರ ದಿನದಂದು - ಅಕ್ಟೋಬರ್ 1, 2018 ರಂದು 90 ವರ್ಷದ ಮಹಿಳೆ ಅನಾರೋ ದೇವಿ ಅವರನ್ನು ಮತ್ತೆ ತಮ್ಮ ಕುಟುಂಬದೊಂದಿಗೆ ಒಂದುಗೂಡಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಆಗಸ್ಟ್ 19 ರಂದು ಮಾನೇಸರ್ ಪೊಲೀಸರು (ಮಹಿಳಾ ವಿಭಾಗ) ನಮ್ಮ ಗುರುಕುಲಕ್ಕೆ ಬಂದಿದ್ದರು. ಜಿಪ್ನೆಟ್.ಇನ್‌ ನ ಸಹಾಯದಿಂದ (ವಲಯ ಸಂಯೋಜಿತ ಪೊಲೀಸ್ ನೆಟ್‌ವರ್ಕ್), ನಮ್ಮ ಗುರುಕುಲದ ತಂಡವು ಅವರ ಕಳೆದುಹೋದ ಕುಟುಂಬವನ್ನು ಕಂಡುಹಿಡಿಯಲು ಸಾಧ್ಯವಾಯಿತು” ಎಂದಿತ್ತು.


ಗುರುಕುಲ, ಟಿಇಎಸ್ಎಫ್ ನಡೆಸುತ್ತಿರುವ ಆಶ್ರಮವಾಗಿದೆ. ಎಡೆಕ್ಸ್ ಲೈವ್ ನೊಂದಿಗೆ ಮಾತನಾಡುತ್ತಾ ರವಿ, "ಮೊದಲಿಗೆ, ಈ ಜನರನ್ನು ನಾವೇ ರಕ್ಷಿಸುತ್ತಿದ್ದೆವು, ಈಗ ಪೊಲೀಸರು ಸಹ ಅವರನ್ನು ನಮ್ಮ ಬಳಿಗೆ ತರುತ್ತಾರೆ"


200 ಜನರಿಗೆ ಆಶ್ರಯ ನೀಡಲು ಕಟ್ಟಿದ್ದ ಆಶ್ರಮವಿಗ 450 ಜನರಿಗೆ ಇರುವಂತೆ ಸ್ಥಳಾವಕಾಶ ಕಲ್ಪಿಸಿದೆ.


ರವಿ ಈಗ ವಿಶ್ವದ ಅತಿದೊಡ್ಡ ದತ್ತಿ ದೇವಾಲಯದ ನಿರ್ಮಾಣಕ್ಕೆ ಕೆಲಸ ಮಾಡುತ್ತಿದ್ದಾರೆ, ಇದು ಮನೆಯೊಳಗೇ ಆಸ್ಪತ್ರೆ, ಪೊಲೀಸ್ ನಿಯಂತ್ರಣ ಕೊಠಡಿ ಹೊಂದಿರಲಿದ್ದು ಸಾವಿರ ಜನರಿಗೆ ಸ್ಥಳಾವಕಾಶ ಕಲ್ಪಿಸುತ್ತದೆ, ಎಂದು ದಿ ಬೆಟರ್‌ ಇಂಡಿಯಾ ವರದಿ ಮಾಡಿದೆ.
  • +0
Share on
close
  • +0
Share on
close
Share on
close

Our Partner Events

Hustle across India