ರೆಪೊ ದರದಲ್ಲಿ ಕಡಿತ, ಇಎಮ್‌ಐ 3 ತಿಂಗಳ ಮುಂದೂಡಿಕೆ: ಆರ್‌ಬಿಐ

ಬೆಳವಣಿಗೆಗೆ ಸಹಕಾರಿಯಾಲೆಂದು ಹಣಕಾಸು ಸಮಿತಿಯ ಸಭೆಯಲ್ಲಿ ಸರ್ವಾನುಮತದಿಂದ ರೆಪೊ ದರವನ್ನು ಕಡಿತಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ.

ರೆಪೊ ದರದಲ್ಲಿ ಕಡಿತ, ಇಎಮ್‌ಐ 3 ತಿಂಗಳ ಮುಂದೂಡಿಕೆ: ಆರ್‌ಬಿಐ

Friday May 22, 2020,

2 min Read

ಕೋವಿಡ್‌-19 ಬಿಕ್ಕಟ್ಟಿನಿಂದ ಪಾರಾಗಲು ಭಾರತೀಯ ರಿಸರ್ವ್‌ ಬ್ಯಾಂಕ್‌ ರೆಪೊ ದರವನ್ನು 40 ಅಂಕಗಳಿಂದ ಕಡಿತಗೊಳಿಸಿದೆ.


ಬೆಳವಣಿಗೆಗೆ ಸಹಕಾರಿಯಾಗಲೆಂದು ಹಣಕಾಸು ಸಮಿತಿಯ ಸಭೆಯಲ್ಲಿ ಸರ್ವಾನುಮತದಿಂದ ರೆಪೊ ದರವನ್ನು ಕಡಿತಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ.


ಈ ಕಡಿತದಿಂದ ರೆಪೊ ದರವು ಶೇ. 4 ಕ್ಕೆ ಇಳಿಕೆಯಾಗಿದೆ ಮತ್ತು ರಿವರ್ಸ್‌ ರೆಪೊ ದರವನ್ನು ಶೇ 3.35 ರಷ್ಟು ಕಡಿಮೆಮಾಡಲಾಗಿದೆ.


ಚಿತ್ರ: ಎಎಫ್‌ಪಿ


ಆರ್‌ಬಿಐ ಗವರ್ನರ್‌ ಶಶಿಕಾಂತ ದಾಸ್‌ ಅವರ ನೇತೃತ್ವದಲ್ಲಿ ಹಣಕಾಸು ಸಮಿತಿ ಮಾರ್ಚ್‌ 27 ರಂದು ರೆಪೊ ದರವನ್ನು ಶೇ. 4.14 ರಷ್ಟು ಇಳಿಸಲಾಗಿತ್ತು.


ಬಾಕಿ ಇರುವ ಎಲ್ಲಾ ಸಾಲಗಳಿಗೆ ಮಾಸಿಕ ಕಂತುಗಳನ್ನು(ಇಎಮ್‌ಐ) ಪಾವತಿಸಲು ಮೂರು ತಿಂಗಳ ನಿಷೇಧವನ್ನು ನೀಡಲು ಎಲ್ಲಾ ಬ್ಯಾಂಕುಗಳಿಗೆ ನೀಡಲಾದ ಅನುಮತಿಯನ್ನು ಮತ್ತೆ 3 ತಿಂಗಳವರೆಗೆ ಅಂದರೆ ಅಗಸ್ಟ್‌ 31 ರವರೆಗೆ ವಿಸ್ತರಿಸಿದೆ.


ಇನ್ನೊಂದು ಘೋಷಣೆಯಲ್ಲಿ ಶಶಿಕಾಂತ ದಾಸ್‌ ಕೋವಿಡ್‌-19 ಆಸ್ಪೋಟದಿಂದ ಹಣದುಬ್ಬರವು ಅನಿಶ್ಚಿತವಾಗಿದೆ, ಇದರಿಂದ ಧಾನ್ಯಗಳ ಬೆಲೆಯಲ್ಲಿ ಏರಿಕೆ ಕಂಡು ಬರಲಿದೆ ಎಂದಿದ್ದಾರೆ.


ಆಮದು ಸುಂಕವನ್ನು ಪರಿಶೀಲಿಸಿ ಬೆಲೆಗಳಲ್ಲಿ ಬದಲಾವಣೆ ತರುವುದು ಅವಶ್ಯಕವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.


ವರ್ಷದ ಮೊದಲ ಅರ್ಧ ಭಾಗದಲ್ಲಿ ಹಣದುಬ್ಬರವು ಸ್ಥಿರವಾಗಿರಲಿದ್ದು, ಎರಡನೇ ಭಾಗದಲ್ಲಿ ಪರಿಸ್ಥಿತಿ ಸುದಾರಣೆಯಾಗಬಹುದು. ಪ್ರಸಕ್ತ ಹಣಕಾಸು ವರ್ಷದ 3 ನೇ ಅಥವಾ 4 ನೇ ತ್ರೈಮಾಸಿಕದಲ್ಲಿ ಹಣದುಬ್ಬರವು 4 ಪ್ರತಿಶತಕ್ಕಿಂತ ಕಡಿಮೆಯಾಗಬಹುದು ಎಂದು ದಾಸ್‌ ತಿಳಿಸಿದ್ದಾರೆ.


ಮಹಾಮಾರಿಯಿಂದಾಗಿ ನಿಧಾನಗೊಂಡಿರುವ ಆರ್ಥಿಕ ಚಟುವಟಿಕೆಗಳಿಂದ ಸರ್ಕಾರಿ ಆದಾಯಕ್ಕೆ ಭಾರಿ ಹೊಡೆತಬಿದ್ದಿದೆ ಎಂದಿದ್ದಾರೆ ದಾಸ್.‌


ದೂರದರ್ಶನದಲ್ಲಿ ಮಾತನಾಡಿದ ಶಶಿಕಾಂತ್‌ ದಾಸ್‌, ಜಾಗತಿಕ ಆರ್ಥಿಕತೆಯು ಆರ್ಥಿಕ ಹಿಂಜರಿತದತ್ತ ಸಾಗುತ್ತಿದೆ ಎಂದಿದ್ದಾರೆ.


“ಎರಡು ತಿಂಗಳ ಲಾಕ್‌ಡೌನ್‌ ದೇಶಿಯ ಆರ್ಥಿಕ ಚಟುವಟಿಕೆಗಳ ಮೇಲೆ ತೀವ್ರವಾದ ಪರಿಣಾಮವನ್ನು ಬೀರಿದೆ. ಭಾರತದ ಕೈಗಾರಿಕಾ ಉತ್ಪಾದನೆಗೆ 60 ಪ್ರತಿಶತ ಕೊಡುಗೆ ನೀಡುವ ಆರು ಅಗ್ರ ಕೈಗಾರಿಕೀಕರಣಗೊಂಡಿರುವ ರಾಜ್ಯಗಳು ಹೆಚ್ಚಾಗಿ ಕೆಂಪು ಮತ್ತು ಕಿತ್ತಳೆ ವಲಯಗಳಲ್ಲಿದೆ,” ಎಂದರು ಅವರು.


ತಗ್ಗಿದ ಬೇಡಿಕೆ ಮತ್ತು ಪೂರೈಕೆಯಲ್ಲಿರುವ ಅಡೆತಡೆಗಳು ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ಚಟುವಟಿಕೆಗಳನ್ನು ಕುಂಠಿತಗೊಳಿಸಲಿದೆ ಎನ್ನುತ್ತಾರೆ ದಾಸ್.‌

“2020-21 ರಲ್ಲಿ ಜಿಡಿಪಿ ಬೆಳವಣಿಗೆಯು ನಕಾರಾತ್ಮಕವಾಗಿಯೇ ಉಳಿಯಲಿದ್ದು, ಈ ವರ್ಷದ ಎರಡನೇ ಭಾಗದಲ್ಲಿ ತುಸು ಚೇತರಿಕೆ ಕಾಣಬಹುದು,” ಎಂದಿದ್ದಾರೆ.