ಗ್ರ್ಯಾಫೀನ್ ಆಕ್ಸೈಡ್‌ನೊಂದಿಗೆ ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್‌ಗಳನ್ನು ಉತ್ಪಾದಿಸುತ್ತಿದೆ ಉತ್ತರಾಖಂಡ ಮೂಲದ ಈ ಸ್ಟಾರ್ಟ್ಅಪ್

ಫ್ಲೋರಿಶ್ ಪ್ಯಾಡ್‌ಗಳನ್ನು ನೈಸರ್ಗಿಕ ಪದಾರ್ಥಗಳಾದ ಬಿದಿರು, ಬಾಳೆ ಹತ್ತಿ ಮತ್ತು ಜೈವಿಕ ವಿಘಟನೀಯ ಸಾಪ್‌ಗಳಿಂದ ತಯಾರಿಸಲಾಗುತ್ತದೆ, ಈ ವಸ್ತುಗಳು ಪ್ಯಾಡ್ ಗಳನ್ನು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳ ದಾಳಿಯನ್ನು ತಡೆಯುತ್ತದೆ.

ಗ್ರ್ಯಾಫೀನ್ ಆಕ್ಸೈಡ್‌ನೊಂದಿಗೆ ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್‌ಗಳನ್ನು ಉತ್ಪಾದಿಸುತ್ತಿದೆ ಉತ್ತರಾಖಂಡ ಮೂಲದ ಈ ಸ್ಟಾರ್ಟ್ಅಪ್

Friday January 03, 2020,

2 min Read

ಭಾರತದಲ್ಲಿ, ಸ್ಯಾನಿಟರಿ ಪ್ಯಾಡ್ಗಳನ್ನು ಇನ್ನೂ ಬಹಳಷ್ಟು ಪ್ರದೇಶಗಳಲ್ಲಿ ಬಳಸಲಾಗುತ್ತಿಲ್ಲ, ವಿಶೇಷವಾಗಿ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಕಡಿಮೆ ತಿಳುವಳಿಕೆಯ ಕಾರಣದಿಂದ ಬಳಸುತ್ತಿಲ್ಲ. ನಗರ ಪ್ರದೇಶಗಳಲ್ಲಿ, ಕಳಪೆ ತ್ಯಾಜ್ಯ ನಿರ್ವಹಣೆಯಿಂದಾಗಿ, ಪ್ಯಾಡ್ಗಳು ಪ್ಲಾಸ್ಟಿಕ್ ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಮತ್ತು ಭೂ ಒಡಲನ್ನು ಉಸಿರುಗಟ್ಟಿಸುತ್ತಿದೆ.


ಉತ್ತರಾಖಂಡದ ಹಲ್ದ್ವಾನಿ ಮೂಲದ ಆರ್‌ಐ ನ್ಯಾನೊಟೆಕ್ ಎನ್ನುವ ಸ್ಟಾರ್ಟ್ ಅಪ್, ಫ್ಲೋರಿಶ್ ಪ್ಯಾಡ್ಸ್ ಎಂಬ ಜೈವಿಕ ವಿಘಟನೀಯ ಪ್ಯಾಡ್ಗಳನ್ನು ತಯಾರಿಸುತ್ತಿದೆ, ಅದು ಬಳಕೆಗೆ ಮತ್ತು ಪರಿಸರಕ್ಕೆ ಸುರಕ್ಷಿತವಾಗಿದೆ.


ಆರ್ ಐ ನ್ಯಾನೊಟೆಕ್ನಲ್ಲಿ ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್ನ ಹಿಂದಿನ ತಂಡ (ಚಿತ್ರಕೃಪೆ: ಆರ್ ಐ ನ್ಯಾನೊಟೆಕ್)

ಈ ಪ್ಯಾಡ್ಗಳನ್ನು ವಿಭಿನ್ನವಾಗಿಸುವ ಅಂಶಗಳೆಂದರೆ, ಅವು ಬಿದಿರು, ಬಾಳೆ ಹತ್ತಿ ಮತ್ತು ಜೈವಿಕ ವಿಘಟನೀಯ ಸಾಪ್ ಅನ್ನು ಒಳಗೊಂಡಿರುವ ನೈಸರ್ಗಿಕ ಪದಾರ್ಥಗಳಿಂದ ಮಾಡಲ್ಪಟ್ಟಿದೆ, ಇದು ಪ್ಯಾಡ್ಗಳನ್ನು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತವೆ. 


ಎನ್‌ಡಿಟಿವಿಯೊಂದಿಗೆ ಮಾತನಾಡಿದ ಆರ್‌ಐ ನ್ಯಾನೊಟೆಕ್ ಸಿಇಒ ರಾಜೇಂದ್ರ ಜೋಶಿ,


“ನಮ್ಮ ಸ್ಯಾನಿಟರಿ ಪ್ಯಾಡ್ನ ಯುಎಸ್ಪಿ (ಯುನಿಕ್ ಸೆಲ್ಲಿಂಗ್ ಪಾಯಿಂಟ್) ಎಂದರೆ, ಇದು ಗ್ರ್ಯಾಫೀನ್ ಆಕ್ಸೈಡ್ ಅನ್ನು ಹೊಂದಿರುತ್ತದೆ, ಇದು ಒಂದು ಅದ್ಭುತ ವಸ್ತುವಾಗಿದ್ದು ಸಾಮಾನ್ಯ ಪ್ಯಾಡ್ಗಳಿಗಿಂತ ಐದು ಪಟ್ಟು ಹೆಚ್ಚು ಮುಟ್ಟಿನ ರಕ್ತವನ್ನು ಹಿಡಿದಿಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಪ್ಯಾಡ್ ಅನ್ನು ವಾಸನೆಯಿಂದ ಮುಕ್ತವಾಗುವಾಗಿಸುದಲ್ಲದೆ, ಗಾಳಿಯ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ ಮತ್ತು ಇದರಿಂದಾಗಿ ಮಹಿಳೆಯರಿಗೆ ದದ್ದು ಮತ್ತು ಕಜ್ಜಿ ಮುಕ್ತ ಮುಟ್ಟಿನ ಅನುಭವ ನೀಡುತ್ತದೆ. ಇದು ಜೈವಿಕ ವಿಘಟನೀಯ, ಅಂದರೆ ಮೂರರಿಂದ ಆರು ತಿಂಗಳಲ್ಲಿ ಗೊಬ್ಬರವಾಗಿ ಪರಿವರ್ತನೆಗೊಳ್ಳುತ್ತದೆ,” ಎಂದರು.


ಮತ್ತೊಂದೆಡೆ, ಈಗ ಮಾರುಕಟ್ಟಡಯಲ್ಲಿರುವ ಬಹುತೇಕ ಪ್ಯಾಡ್ಗಳನ್ನು ಪ್ಲಾಸ್ಟಿಕ್‌ನಿಂದ ತಯಾರಿಸಲಾಗಿದ್ದು ಅದು ಪರಿಸರಕ್ಕೆ ಹಾನಿಕಾರಕವಾಗಿದೆ ಮತ್ತು ಬಳಸಲು ಅನಾನುಕೂಲವಾಗಿದೆ.


10 ಪ್ಯಾಡ್ಗಳನ್ನು ಒಳಗೊಂಡ ಈ ಸ್ಯಾನಿಟರಿ ಪ್ಯಾಡ್‌ಗಳ ಪ್ಯಾಕ್‌ಗೆ 50 ರೂ. ಇದು ಮುಂದಿನ ತಿಂಗಳ ವೇಳೆಗೆ ನ್ಯೂಜಿಲೆಂಡ್‌ನಲ್ಲೂ ಬಿಡುಗಡೆಯಾಗಲಿದೆ.

"ಸರಿಯಾದ ತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆಗಾಗಿ ದೇಶದಲ್ಲಿ ಹಲವಾರು ಪ್ರಯತ್ನಗಳು ನಡೆಯುತ್ತಿವೆ, ಆದರೂ, ಬಹಳಷ್ಟು ತ್ಯಾಜ್ಯ ನಮ್ಮ ಭೂ ಒಡಲಲ್ಲಿ ಮತ್ತು ಜಲಮೂಲಗಳಲ್ಲಿ ಸೇರಿಕೊಳ್ಳುತ್ತದೆ. ಸ್ಯಾನಿಟರಿ ಪ್ಯಾಡ್‌ಗಳು ಅಂತಹ ಒಂದು ರೀತಿಯ ತ್ಯಾಜ್ಯವಾಗಿದ್ದು, ಇದು ಸಾಮಾನ್ಯವಾಗಿ ಎಲ್ಲ ಕಡೆ ಕಂಡುಬರುತ್ತದೆ, ಅಲ್ಲದೇ ಇವು ಪರಿಸರವನ್ನು ಕೆಡಿಸುತ್ತದೆ ಮತ್ತು ರೋಗಗಳನ್ನು ಹರಡುತ್ತದೆ. ಮಾರುಕಟ್ಟೆಯಲ್ಲಿನ ಜನಪ್ರಿಯ ಉತ್ಪನ್ನಗಳು ಬ್ಲೀಚಿಂಗ್ ಪಾಲಿಮರ್ ಆಧಾರಿತ ವಸ್ತುಗಳನ್ನು ಹೊಂದಿದ್ದು, ಇದು ಪರಿಸರಕ್ಕೆ ಅಪಾಯಕಾರಿ ಮಾತ್ರವಲ್ಲದೆ ಮಾನವ ದೇಹಗಳಿಗೆ ತುಂಬಾ ಅನಾರೋಗ್ಯಕರವಾಗಿದೆ. ನಮ್ಮಿಂದ ಉತ್ಪತ್ತಿಯಾಗುವ ನೈರ್ಮಲ್ಯ ಕರವಸ್ತ್ರವು ಜೈವಿಕ ವಿಘಟನೀಯ ವಸ್ತುಗಳಿಂದ ತಯಾರಿಸಲ್ಪಟ್ಟಿದೆ, ಅದು ಮಹಿಳಾ ಸ್ನೇಹಿಯಾಗಿದೆ,” ಎಂದು ರಾಜೇಂದ್ರ ಹೇಳುತ್ತಾರೆ ವರದಿ ಎನ್‌ಡಿಟಿವಿ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.