ವೈಲ್ಡ್‌ ಕರ್ನಾಟಕಕ್ಕೆ ಧ್ವನಿಯಾದ ರಿಷಭ್‌ ಶೆಟ್ಟಿ, ರಾಜ್‌ಕುಮಾರ್‌ ರಾವ್‌ ಮತ್ತು ಪ್ರಕಾಶ್‌ ರಾಜ್‌

ಜೂನ್‌ 5 ವಿಶ್ವ ಪರಿಸರ ದಿನದಂದು ಡಿಸ್ಕವರಿ ವಾಹಿನಿಯಲ್ಲಿ ಪ್ರಸಾರಗೊಳ್ಳಲಿರುವ ವೈಲ್ಡ್‌ ಕರ್ನಾಟಕ ಸಾಕ್ಷ್ಯಚಿತ್ರಕ್ಕೆ ತಾರೆಗಳಾದ ರಾಜಕುಮಾರ್‌ ರಾವ್‌, ಪ್ರಕಾರ ರಾಜ್‌ ಮತ್ತು ರಿಷಭ್‌ ಶೆಟ್ಟಿ ಧ್ವನಿ ನೀಡಲಿದ್ದಾರೆ.

ವೈಲ್ಡ್‌ ಕರ್ನಾಟಕಕ್ಕೆ ಧ್ವನಿಯಾದ ರಿಷಭ್‌ ಶೆಟ್ಟಿ, ರಾಜ್‌ಕುಮಾರ್‌ ರಾವ್‌ ಮತ್ತು ಪ್ರಕಾಶ್‌ ರಾಜ್‌

Thursday May 28, 2020,

2 min Read

ಅಮೋಘವರ್ಷ ಜೆ.ಎಸ್. ಮತ್ತು ಕಲ್ಯಾಣ ವರ್ಮಾ ಕರ್ನಾಟಕ ಅರಣ್ಯ ಇಲಾಖೆಯೊಂದಿಗೆ ಸೇರಿ ನಿರ್ಮಿಸಿದ ಸಾಕ್ಷ್ಯಚಿತ್ರದ ಆಂಗ್ಲ ಭಾಷೆಯ ಅವತರಣಿಕೆಯನ್ನು ಸರ್‌ ಡೇವಿಡ್‌ ಅಟೆನ್ಬರ್ಗ್‌ ನಿರೂಪಣೆ ಮಾಡಿದ್ದರು.


q

ಚಿತ್ರಕೃಪೆ: ವೈಲ್ಡ್‌ ಕರ್ನಾಟಕ/ಇನ್ಸ್ಟಾಗ್ರಾಂ

ಈಗ ಅದರ ಕನ್ನಡದ ಅವತರಿಣಿಕೆಗೆ ರಿಷಭ್‌ ಶೆಟ್ಟಿ ಧ್ವನಿಯಾಗಲಿದ್ದಾರೆ. ನಟ ರಾಜ್‌ಕುಮಾರ ರಾವ್‌ ಹಿಂದಿ ನಿರೂಪಣೆಗೆ ಧ್ವನಿಯಾಗುತ್ತಿದ್ದರೆ, ಪ್ರಕಾಶ್‌ ರಾಜ್‌ ತಮಿಳು ಅವತರಣಿಕೆಗೆ ಧ್ವನಿ ನೀಡಲಿದ್ದಾರೆ.


ದೇಶದ ಶ್ರೀಮಂತ ನೈಸರ್ಗಿಕ ಸಂಪತ್ತಿನ ಬಗ್ಗೆ ಹೆಮ್ಮೆ ಪಡಲು ಮತ್ತು ಅದನ್ನು ಕಾಪಾಡಿಕೊಂಡು ಮುಂದಿನ ತಲೆಮಾರಿಗೆ ಸಾಗಿಸಬೇಕೆಂಬುದನ್ನು ನೆನಪಿಸುತ್ತದೆ ಈ ಸಾಕ್ಷ್ಯಚಿತ್ರ ಎಂದರು ರಾವ್‌.

ಒಬ್ಬ ನಟನಾಗಿ, ನಾವು ಯಾವಾಗಲೂ ಒಳ್ಳೇಯ ಕಥೆಗಳನ್ನು ಹೇಳಲು ಕಾಯುತ್ತಿರುತ್ತೇವೆ. ಅದರಲ್ಲೂ ದೇಶದ ಶ್ರೀಮಂತ ವಣ್ಯ ಸಂಪತ್ತಿನ ಈ ಸಾಕ್ಷ್ಯಚಿತ್ರಕ್ಕೆ ಧ್ವನಿಯಾಗುವುದು ನನಗೆ ಉತ್ಕೃಷ್ಟವಾದ ಅನುಭವ ನೀಡಿದೆ. ಹೊಸ ವಿಷಯಗಳನ್ನು ಕಲಿಯಬೇಕೆಂದಾಗೆಲ್ಲ ನಾನು ಡಿಸ್ಕವರಿ ವಾಹಿನಿಯನ್ನು ನೋಡುತ್ತಿದ್ದೆ. ದೇಶದ ವಣ್ಯ ಜೀವನವನ್ನು ಅಷ್ಟೂ ಮನೋಹರವಾಗಿ ಸೆರೆಹಿಡಿದಿರುವ ಸಾಕ್ಷ್ಯಚಿತ್ರದ ಮೂಲಕ ವಾಹಿನಿಯ ಜೊತೆ ಕೆಲಸ ಮಾಡುವುದು ಹೆಮ್ಮೆ ಎನಿಸುತ್ತದೆ, ಎಂದರು ಅವರು.


ವಣ್ಯ ಜೀವನ ಆಧರಿತ ಈ ಮೇರು ಕೃತಿಯ ಅಗಾಧತೆಯು 400 ಗಂಟೆಗಳಷ್ಟು ಸೆರೆಹಿಡಿಯಲಾದ ಫೂಟೇಜ್‌ಗಳಿಂದ ಕೂಡಿದೆ. ನೈಸರ್ಗಿಕ ಸಂಪತ್ತಿನ ಸೌಂದರ್ಯ ಮತ್ತು ವಿವಧತೆಯ ಬಗ್ಗೆ ಜಾಗೃತಿ ಮೂಡಿಸಲು ಕೌಶಲ್ಯವನ್ನು ಬಳಸಿರುವುದು ತುಂಬಾ ಒಳ್ಳೇಯ ಕೆಲಸ, ಈಗ ಇದನ್ನು ವಿಕ್ಷಿಸುವವರು ಮತ್ತು ಭಾರತೀಯರು ಇದನ್ನು ನೋಡಿ ಬರೀ ಕಣ್ಣು ತುಂಬಿಸಿಕೊಳ್ಳದೆ, ಇದನ್ನು ಉಳಿಸಿ ಕಾಪಾಡಿಕೊಳ್ಳುವ ಬಗೆಗೆ ಗಮನಹರಿಸಬೇಕು ಎಂದರು ರಾಜ್‌ಕುಮಾರ್ ರಾವ್.‌



4ಕೆ ಅಲ್ಟ್ರಾ ಎಚ್‌ ಡಿ ತಂತ್ರಜ್ಞಾನದಲ್ಲಿ 20 ಕ್ಯಾಮೆರಾ ಮ್ಯಾನ್‌ಗಳ ಗುಂಪೊಂದು ಡ್ರೋನ್‌ ಕ್ಯಾಮೆರಾ ಬಳಸಿ ಮತ್ತು ಕರ್ನಾಟಕದ 15 ಪ್ರದೇಶಗಳಲ್ಲಿ ಕ್ಯಾಮೆರಾಗಳನ್ನಿಟ್ಟು ನಾಲ್ಕು ವರ್ಷ ಈ ಸಾಕ್ಷ್ಯಚಿತ್ರವನ್ನು ಚಿತ್ರಿಕರಿಸಿದ್ದಾರೆ.


ಜೂನ್‌ 5 ರಂದು ಡಿಸ್ಕವರಿ ಪ್ಲಸ್‌ ಮೊಬೈಲ್‌ ಆ್ಯಪ್ನಲ್ಲಿ ಸಾಕ್ಷ್ಯಚಿತ್ರ ಬಿಡುಗಡೆಗೊಳ್ಳುತ್ತಿದ್ದು, ಡಿಸ್ಕವರಿ, ಡಿಸ್ಕವರಿ ಎಚ್‌ಡಿ, ಡಿ ತಮಿಳ ಮತ್ತು ಅನಿಮಲ್‌ ಪ್ಲಾನೆಟ್‌ ವಾಹಿನಿಯಲ್ಲಿ ಅದೇ ದಿನ ರಾತ್ರಿ 8 ಗಂಟೆಗೆ ಕಿರು ಪರದೆಯಲ್ಲಿ ಪ್ರಥಮ ಬಾರಿಗೆ ಪ್ರಸಾರವಾಗಲಿದೆ.


ವೈಲ್ಡ್‌ ಕರ್ನಾಟಕ ಚಿತ್ರದ ಪ್ರಸರಣವು ಉನ್ನತ ಗುಣಮಟ್ಟದ ಕೆಲಸ ಮಾಡುತ್ತಿರುವ ನಮ್ಮ ಭಾರತೀಯ ಚಿತ್ರಕಾರರಿಗೆ ಪ್ರೋತ್ಸಾಹ ನೀಡುವ ನಮ್ಮ ಬಹುದಿನಗಳ ಕನಸಿನ ಭಾಗವಾಗಿದೆ ಎಂದರು ಫ್ಯಾಕ್ಚುಯಲ್ ಹಾಗೂ ಲೈಫ್‌ಸ್ಟೈಲ್ ಎಂಟರ್‌ಟೈನ್‌ಮೆಂಟ್ ದಕ್ಷಿಣ ಏಷ್ಯಾ, ಡಿಸ್ಕವರಿಯ ಕಂಟೆಂಟ್ ಡೈರೆಕ್ಟರ್ ಆದ ಸಾಯಿ ಅಭಿಷೇಕ.


ತಮ್ಮದೇ ರಾಜ್ಯದಲ್ಲಿ ಚಿತ್ರೀಕರಣಗೊಂಡಿರುವ ಈ ಸಾಕ್ಷ್ಯಚಿತ್ರ ತಮ್ಮ ರಾಜ್ಯವನ್ನು ಸುಂದರವಾಗಿ ಪ್ರತಿನಿಧಿಸುತ್ತಿರುವುದರಿಂದ ರಿಷಭ್‌ ಶೆಟ್ಟಿಯವರಿಗೆ ಈ ಚಿತ್ರ ಹೃದಯಕ್ಕೆ ತುಂಬಾ ಹತ್ತಿರವಾಗಿದೆ.

ಚಿತ್ರಕ್ಕೆ ನನ್ನ ಧ್ವನಿಯನ್ನು ನೀಡಿರುವುದು ಒಂದು ರೀತಿಯಲ್ಲಿ ಚಿತ್ರವು ಕರ್ನಾಟಕದ ಜನರಿಗೆ ಹತ್ತಿರವಾಗಲು ಸಹಾಯ ಮಾಡುತ್ತದೆ. ಅಲ್ಲದೆ ರಾಜ್ಯದ ಸುಂದರವಾದ ವನ್ಯಜೀವನದ ವೈವಿಧ್ಯತೆಯನ್ನು ತಮ್ಮದೇ ಭಾಷೆಯಲ್ಲಿ ನೋಡಬಹುದು. ನಮ್ಮ ಅರಣ್ಯ ಸಂಪತ್ತನ್ನು ಉಳಿಸುವುದು ಬಹಳ ಮುಖ್ಯವಾಗಿದೆ. ಅಭಿವೃದ್ಧಿ ಮತ್ತು ಅಪಾರ ಮಾನವ ಜನಸಂಖ್ಯೆಯ ಒತ್ತಡಗಳ ನಡುವೆಯೂ ಕರ್ನಾಟಕ ಸರ್ಕಾರ ಮತ್ತು ಅರಣ್ಯ ಇಲಾಖೆ ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ಹೇಳಿದರು.