ಡಿ ರೂಪಾ ಮೌಡ್ಗಿಲ್‌: ಕರ್ನಾಟಕದ ಮೊದಲ ಮಹಿಳಾ ಗೃಹ ಕಾರ್ಯದರ್ಶಿ

20 ವರ್ಷಗಳಲ್ಲಿ 41 ಬಾರಿ ವರ್ಗವಾಗಿರುವ ರೂಪಾ, ಕರ್ನಾಟಕ ಸರ್ಕಾರದ ಗೃಹ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ, ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳಾ ಅಧಿಕಾರಿಯೂ ಇವರಾಗಿದ್ದಾರೆ.

ಡಿ ರೂಪಾ ಮೌಡ್ಗಿಲ್‌: ಕರ್ನಾಟಕದ ಮೊದಲ ಮಹಿಳಾ ಗೃಹ ಕಾರ್ಯದರ್ಶಿ

Wednesday August 05, 2020,

1 min Read

ಹರ್‌ಸ್ಟೋರಿಯ ವೂಮನ್‌ ಆನ್‌ ಎ ಮಿಷನ್‌ ಸಮ್ಮಿಟ್‌ 2019 ರ ಕಾರ್ಯಕ್ರಮದಲ್ಲಿ ಕರ್ನಾಟಕದ ಮೊದಲ ಮಹಿಳಾ ಐಪಿಎಸ್‌ ಅಧಿಕಾರಿಯಾದ ರೂಪಾ ಮೌಡ್ಗಿಲ್‌ ಅವರು, “ನಿಮಗೇನಾದರೂ ಇತಿಹಾಸ ಸೃಷ್ಠಿಸಬೇಕೆಂದೆನಿಸದರೆ, ‘ಆʼ ಒಳ್ಳೆಯ ಹುಡುಗಿಯಾಗಬೇಡಿ. ನಾಚಿಕೆ ಪಟ್ಟುಕೊಳ್ಳುವುದು, ಲಜ್ಜೆಯಿಂದಿರುವುದು, ಎಲ್ಲರಿಗೂ ತಲೆಬಾಗುವುದು ಹೆಣ್ಣಿನ ಲಕ್ಷಣವೆಂದು ಹೇಳುತ್ತಾ ಬಂದಿದ್ದಾರೆ. ನಿಮಗಾಗಿ ನೀವು ಧ್ವನಿಯೆತ್ತಿ! ಹೆಣ್ಣು ಭೂಮಿತಾಯಿಯಂತೆ ಎಲ್ಲ ಸಹಿಸಿಕೊಂಡು, ಅನ್ಯಾಯದ ವಿರುದ್ಧ ಧ್ವನಿ ಎತ್ತದೆ ಸುಮ್ಮನಿರಬೇಕೆಂದು ತಿಳಿದಿದ್ದಾರೆ. ಇದು ಬದಲಾಗಬೇಕು,” ಎಂದು ಮಾತನಾಡಿ ಚೆಪ್ಪಾಳೆ ಗಿಟ್ಟಿಸಿಕೊಂಡಿದ್ದರು.


20 ವರ್ಷಗಳಲ್ಲಿ 41 ಬಾರಿ ವರ್ಗವಾಗಿರುವ ರೂಪಾ, ಕೆಲಸ ಬೇಡುವ ಎಲ್ಲ ಕಾರ್ಯಗಳನ್ನು ಮಾಡಲು ಪ್ರತಿ ಹೆಣ್ಣು ಸಿದ್ಧವಾಗಿರಬೇಕು, ಮತ್ತು ಹೆಣ್ಣು ಹೀಗೆ ಇರಬೇಕು ಎಂಬ ಸಮಾಜದ ನಿರೀಕ್ಷೆಗೆ ಬಂಧಿಸಿಕೊಳ್ಳಬಾರದು ಎನ್ನುವುದನ್ನು ನಂಬುತ್ತಾರೆ.


ಡಿ ರೂಪಾ ಮೌಡ್ಗಿಲ್‌

ರೂಪಾ ಅವರನ್ನು ಈಗ ಕರ್ನಾಟಕ ಸರ್ಕಾರದ ಗೃಹ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ, ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳಾ ಅಧಿಕಾರಿಯೂ ಇವರಾಗಿದ್ದಾರೆ.


2000 ಬ್ಯಾಚ್‌ನ ಅಧಿಕಾರಿಯಾದ ರೂಪಾ ಪ್ರಸ್ತುತ ಬೆಂಗಳೂರು ರೈಲ್ವೈ ಐಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇವರನ್ನು ಗೃಹ ಸಚಿವಾಲಯದ ಐಜಿಪಿ ಮತ್ತು ಪಿಸಿಎಎಸ್‌ ಹುದ್ದೆಗೆ ಉಮೇಶ್‌ ಕುಮಾರ್‌ ಅವರ ಸ್ಥಾನಕ್ಕೆ ನೇಮಿಸಲಾಗಿದೆ.


ಐಎಎಸ್‌ ಅಧಿಕಾರಿಗಳ ಮನೆಯಲ್ಲಿ ಜನಿಸಿದ ರೂಪಾ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶದಲ್ಲೆ 43 ಸ್ಥಾನದಲ್ಲಿ ತೇರ್ಗಡೆಹೊಂದಿದ್ದರು. ಆದರೆ ಹುದ್ದೆಯ ಮೇಲಿನ ಪ್ರೀತಿಯಿಂದ ಅವರು ಐಪಿಎಸ್‌ ಆಯ್ಕೆ ಮಾಡಿಕೊಂಡರು.


ಕಾರ್ಯಕ್ರಮದಲ್ಲಿ ಅವರು, “ನಮಗೆ ಕನಸುಗಳಿದ್ದರೆ, ಅವುಗಳನ್ನು ಎಡೆಬಿಡದೆ ಬೆನ್ನಟ್ಟಬೇಕು. ಕನಸಿನೆಡೆಗೆ ಕಾರ್ಯಮುಖರಾಗುವ ನಮ್ಮ ಧೈರ್ಯ ಮನೆಯಲ್ಲೆ ಹುಟ್ಟುತ್ತದೆ. ಯುವತಿಯರು ತಾಯಿಗೆ ಅಡುಗೆ ಮನೆಯಲ್ಲಿ ಸಹಾಯ ಮಾಡಬೇಕು, ಗಂಡು ಮಕ್ಕಳು ತಂದೆಗೆ ಸಂತೆಯಲ್ಲಿ ಜತೆಯಾಗಬೇಕು ಎಂದು ಗಂಡು- ಹೆಣ್ಣಿಗೆ ಸಮಾಜ ನೀಡಿರುವ ಪಾತ್ರಗಳಿಂದ ನಾವು ದೂರ ಉಳಿಯಬೇಕು,” ಎಂದರು.

2004 ರಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಗಳನ್ನು ಬಂಧಿಸಿದ್ದು, ಬೆಂಗಳೂರಿನ ಕಾರಾಗೃಹಗಳಲ್ಲಿನ ಅಕ್ರಮಗಳು ಮತ್ತು ಭ್ರಷ್ಟಾಚಾರಗಳನ್ನು ಬಯಲಿಗೆಳೆದಿದ್ದು, ಹಲವು ಬಾರಿ ವರ್ಗಗೊಂಡಿದ್ದು ಇಂತಹ ಅನೇಕ ಘಟನೆಗಳಿಗೆ ರೂಪಾ ಅವರ ವೃತ್ತಿ ಜೀವನ ಸಾಕ್ಷಿಯಾಗಿದೆ. ವರ್ಗಾವಣೆಗಳಿಗೆ ಆಶ್ಚರ್ಯಪಡದ ರೂಪಾ ಅವರು ಬೇರೆ ಕಡೆ ಹೋಗಲು ಯಾವಾಗಲೂ ಸಿದ್ಧವೆನ್ನುತ್ತಾರೆ.