ಭಯ ಜನರ ಸಾಧ್ಯತೆಗಳನ್ನು ಕಟ್ಟಿಹಾಕುತ್ತಿದೆ: ಬಿಟಿಎಸ್‌ನಲ್ಲಿ ಸದ್ಗುರು

ವಿಜ್ಞಾನ ಮತ್ತು ಆಧ್ಯಾತ್ಮದ ಸಮಾಗಮ ಮತ್ತು ಮಾನವರ ಸಾಧ್ಯತೆಗಳ ಮೇಲೆ ಹೂಡಿಕೆ ಮಾಡುವುದರ ಬಗ್ಗೆ ಸುದ್ಗುರು ಇಂಟೆಲ್‌ ಇಂಡಿಯಾದ ನಿವೃಥಿ ರೈ ಜತೆ ಮಾತನಾಡಿದರು.
1 CLAP
0

ಭಾರತದ 50 ಪ್ರಭಾವಶಾಲಿಗಳಲ್ಲಿ ಒಬ್ಬರಾಗಿರುವ ಸದ್ಗುರು ಬೆಂಗಳೂರು ಟೆಕ್‌ ಸಮ್ಮಿಟ್‌ನಲ್ಲಿ ಪಾಲ್ಗೊಂಡು ಹಲವು ವಿಷಯಗಳ ಬಗ್ಗೆ ಮಾತನಾಡಿದರು.

ವಿಜ್ಞಾನ ಮತ್ತು ಆಧ್ಯಾತ್ಮದ ಸಮಾಗಮ ಮತ್ತು ಮಾನವರ ಸಾಧ್ಯತೆಗಳ ಮೇಲೆ ಹೂಡಿಕೆ ಮಾಡುವುದರ ಬಗ್ಗೆ ಸುದ್ಗುರು ಇಂಟೆಲ್‌ ಇಂಡಿಯಾದ ಮುಖ್ಯಸ್ಥೆ ನಿವೃಥಿ ರೈ ಜತೆ ಸಂವಾದ ನಡೆಸಿದರು.

ಭಯ ಎಂದರೇನು, ಮತ್ತು ಏಕೆ ಅದೊಂದು ದುರ್ಬಲ ಭಾವನೆಯಾಗಿದೆ?

ಭಯ ಹೇಗೆ ಮಾನವನನ್ನು ದುರ್ಬಲಗೊಳಿಸುತ್ತದೆ ಎಂದು ಮಾತು ಆರಂಭಿಸಿದ ಸದ್ಗುರು “ಮಾನವ ಪ್ರತಿಭೆ, ಮಾನವ ಅರ್ಹತೆ ಮತ್ತು ಮಾನವ ಸಾಮರ್ಥ್ಯವು ದುಃಖದ ಭಯದಿಂದಾಗಿ ತೀವ್ರವಾಗಿ ದುರ್ಬಲಗೊಂಡಿದೆ.”

“ಭಯ ನಿಮ್ಮ ಸುತ್ತಲು ಒಂದು ಗಡಿಯನ್ನು ನಿರ್ಮಿಸುತ್ತದೆ. ದುಃಖದ ಭಯದಿಂದ ಹೊರ ಬರುವುದು ತುಂಬಾ ಮುಖ್ಯ. ಒಂದು ಪ್ರತಿಶತಕ್ಕಿಂತ ಕಡಿಮೆ ಜನ ತಮ್ಮ ನಿಜವಾದ ಸಾಮರ್ಥ್ಯವನ್ನು ಕಂಡುಕೊಳ್ಳುತ್ತಾರೆ,” ಎಂದರು.

ನೀತಿಶಾಸ್ತ್ರದ ಅಡಿಪಾಯದ ಮೇಲೆ ಕೃತಕ ಬುದ್ಧಿಮತ್ತೆಯನ್ನು ನಿರ್ಮಿಸಬಹುದೆ?

“ಮಾನವನ ರಚನೆಯೆ ಭೂಮಿಯ ಮೇಲಿರುವ ಉತ್ಕೃಷ್ಟವಾದ ತಂತ್ರಜ್ಞಾನ. ಪ್ರಸ್ತುತ ಮನುಷ್ಯರು ತಮ್ಮ ಬುದ್ಧಿಮತ್ತೆ ಮತ್ತು ಅರ್ಹತೆಯನ್ನು ಹಾಳು ಮಾಡುತ್ತಿದ್ದಾರೆ.”

“ಮಾನವ ಬುದ್ಧಿಶಕ್ತಿ ಬಳಕೆಯಾಗದೆ ಹಾಗೆ ಉಳಿದಿದೆ, ಅಲ್ಲದೆ ಅದನ್ನು ನಮ್ಮ ವಿರುದ್ಧವೆ ವಿವಿಧ ರೀತಿಯಲ್ಲಿ ದುರ್ಬಳಕೆ ಮಾಡಲಾಗಿದೆ. ತಂತ್ರಜ್ಞಾನ ಏನೇ ಆಗಿರಲಿ, ಆದರೆ ಅದರ ಪ್ರಭಾವವನ್ನು ತಂತ್ರಜ್ಞಾನ ಮಾತ್ರದಿಂದಲೆ ನಿರ್ಧರಿಸಲಾಗದು, ಅದನ್ನು ಬಳಸುವವರು ಅದಕ್ಕೆ ಹೊಣೆಯಾಗುತ್ತಾರೆ,” ಎಂದರು ಅವರು.

ಯಾವುದೇ ಕ್ರಾಂತಿಕಾರಿ ತಂತ್ರಜ್ಞಾನವು ಮೊದಲು ಸೇರುವುದು ಸೇನೆಗೆ. ತಂತ್ರಜ್ಞಾನದಿಂದ ಹೇಗೆ ಮನುಷ್ಯನನ್ನು ಕೊಲ್ಲಬಹುದು ಎಂದು ಗೊತ್ತಾದ ನಂತರವೆ ಅದರಿಂದ ಹೇಗೆ ಉಳಿಸಬಹುದು, ಜಗತ್ತಿಗೆ ಹೇಗೆ ಒಳ್ಳೇಯದನ್ನು ಮಾಡಬಹುದು ಎಂದು ನಾವು ಯೋಚಿಸುತ್ತೇವೆ. ನಾವಿದನ್ನು ಕೇವಲ ನೈತಿಕತೆಯಿಂದ ಬದಲಾಯಿಸಲು ಸಾಧ್ಯವಿಲ್ಲ ಎಂದು ಅವರು ವಿವರಿಸದರು.

ಹಾಗಾಗಿ ಆಧ್ಯಾತ್ಮದ ಪ್ರಕ್ರಿಯೆ ತುಂಬಾ ಮುಖ್ಯವಾದದ್ದು, ಅದು ನಿಮ್ಮ ದೈಹಿಕ ಸ್ವರೂಪವನ್ನು ಮೀರಿದ ನಿಮ್ಮ ಜೀವನಾನುಭವ ಎಂದರು ಅವರು.

ಮನಸ್ಸಿನ ಹಲವು ಸಾಧ್ಯತೆಗಳು

ಮನಸ್ಸಿನ ಹಲವು ಸಾಧ್ಯತೆಗಳನ್ನು ಹೇಗೆ ಕಂಡುಕೊಳ್ಳಬೇಕು ಎಂಬುದರ ಬಗ್ಗೆ ಚರ್ಚಿಸಿದ ಸದ್ಗುರು ಅದರ ನಾಲ್ಕು ಆಯಾಮಗಳಾದ ಬುದ್ಧಿ, ಮನಸ್‌, ಅಹಂಕಾರ ಮತ್ತು ಚಿತ್ತದ ಬಗ್ಗೆ ಮಾತನಾಡಿದರು. ಅಲ್ಲದೆ ಹೇಗೆ ಆಧುನಿಕ ಶಿಕ್ಷಣ ಪದ್ಧತಿ ಮತ್ತು ವಿಜ್ಞಾನ ಎಲ್ಲವನ್ನು ಬುದ್ಧಿಗೆ ಸೀಮಿತಗೊಳಿಸಿದೆ ಎಂಬುದರ ಬಗ್ಗೆಯು ಅವರು ತಿಳಿಸಿದರು.

“ನಮ್ಮ ಶಿಕ್ಷಣ ಪದ್ಧತಿ ನೆನಪೆ ಬುದ್ಧಿಮತ್ತೆ ಎಂದು ಬಿಂಬಿಸುವ ಭಾವನೆಯನ್ನು ನಾಟಿದೆ. ಇದು ಮಾನವಕುಲಕ್ಕೆ ಮಾಡಿದ ದೊಡ್ಡ ತೊಡಕು. ನಾನು ಪುಸ್ತಕ ಓದಿ, ಎಲ್ಲ ಶಬ್ದಗಳನ್ನು ನೆನಪಿಟ್ಟುಕೊಂಡರೆ, ಎಲ್ಲರೂ ನನ್ನನ್ನು ಬುದ್ಧಿವಂತ ಎಂದುಕೊಳ್ಳುತ್ತಾರೆ. ಆದರೆ ಅದನ್ನು ಒಂದು ಚಿಪ್‌ ಕೂಡಾ ಮಾಡಬಹುದು.”

ಬುದ್ಧಿಮತ್ತೆಗೆ ಚಿತ್ತ ಎಂಬ ನಾಲ್ಕನೆ ಆಯಾಮವಿದೆ. ಚಿತ್ತ ಪರಿಶುದ್ಧ ಬುದ್ಧಿ, ಅಲ್ಲಿ ನೆನಪಿಲ್ಲ. ನೀವು ನಿಮ್ಮ ಚಿತ್ತವನ್ನು ತಟ್ಟಿದರೆ ನಿಮ್ಮ ಗ್ರಹಿಕೆ ಮಿತಿರಹಿತವಾಗುತ್ತದೆ ಎಂದು ಅವರು ವಿವರಿಸಿದರು.

ಕೋವಿಡ್‌-19 ಲಸಿಕೆಯನ್ನು ಯಾರಿಗೆ ಮೊದಲು ನೀಡಬೇಕು?

“ಸೋಂಕು ತಗಲುವ ಅಪಾಯ ಹೆಚ್ಚಿರುವವರಿಗೆ, ವೈದ್ಯಕೀಯ ಕ್ಷೇತ್ರದವರಿಗೆ ಮತ್ತು ಪೊಲೀಸರಿಗೆ ಮೊದಲು ಲಸಿಕೆ ಸಿಗಬೇಕು ಎಂಬ ತಾರ್ಕಿಕ ಉತ್ತರವನ್ನು ನಾನು ನಂಬುತ್ತೇನೆ. ಇತರ ಖಾಯಿಲೆಗಳಿರುವ 65-70 ವರ್ಷದ ಮೆಲ್ಪಟ್ಟರಿವರಿಗೆ ಮತ್ತು ದಿನ ಕೆಲಸ ಮಾಡುವವರಿಗೆ, ಅವರು ರೈಲ್ವೈ ನಿಲ್ದಾಣದಲ್ಲಿ ಕಸ ಗುಡಿಸುವವರು ಆಗಿರಬಹುದು, ಅಂಥವರಿಗೆ ಲಸಿಕೆ ಮೊದಲು ಸಿಗಬೇಕು. ಸಾಂಕ್ರಾಮಿಕಕ್ಕೆ ತೆರೆ ಎಳೆಯಬೇಕೆಂದರೆ ಇದು ತುಂಬಾ ಮುಖ್ಯ,” ಎಂದರು ಸದ್ಗುರು.

Latest

Updates from around the world