ಪರಿಸರಸ್ನೇಹಿ ಮತ್ತು ಮರುಬಳಕೆ ಮಾಡಬಹುದಾದಂತಹ ಸಾನಿಟರಿ ಪ್ಯಾಡ್‌ ತಯಾರಿಸುತ್ತಿರುವ 18 ರ ಬಾಲಕಿ

ಇಶಾನಾ, ಮರುಬಳಕೆ ಮಾಡಬಹುದಾದ ಮತ್ತು ರಾಸಾಯನಿಕ ಮುಕ್ತ ಹತ್ತಿಯ ನ್ಯಾಪ್‌ಕಿನ್‌ಗಳನ್ನು ತಯಾರಿಸುತ್ತಿದ್ದು, ಇದು ಸಾಂಪ್ರದಾಯಿಕ ನ್ಯಾಪ್‌ಕಿನ್‌ಗಳಿಗಿಂತ ಭಿನ್ನವಾಗಿವೆ. ಏಕೆಂದರೆ ಕೊಳೆಯಲು ಇವು ಹಲವು ವರ್ಷಗಳನ್ನು ತೆಗೆದುಕೊಳ್ಳುತ್ತವೆ. ಆದರೆ ಇಶಾನಾ ತಯಾರಿಸಿದ ನ್ಯಾಪ್‌ಕಿನ್‌ಗಳು ಕೇವಲ ಆರು ದಿನಗಳನ್ನು ತೆಗೆದುಕೊಳ್ಳುತ್ತದೆ.

ಪರಿಸರಸ್ನೇಹಿ ಮತ್ತು ಮರುಬಳಕೆ ಮಾಡಬಹುದಾದಂತಹ ಸಾನಿಟರಿ ಪ್ಯಾಡ್‌ ತಯಾರಿಸುತ್ತಿರುವ 18 ರ ಬಾಲಕಿ

Wednesday November 20, 2019,

2 min Read

ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ನೈರ್ಮಲ್ಯ ನ್ಯಾಪ್‌ಕಿನ್‌ಗಳು ಬಹಳಷ್ಟು ರಾಸಾಯನಿಕಗಳಿಂದ ತುಂಬಿರುತ್ತವೆ ಮತ್ತು ಅವುಗಳನ್ನು ಪ್ಲಾಸ್ಟಿಕ್ ಬಳಸಿ ತಯಾರಿಸಲಾಗುತ್ತದೆ, ಇದು ದೀರ್ಘಕಾಲದ ಬಳಕೆಯ ನಂತರ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದಲ್ಲದೆ, ಪ್ರತಿ ಬಳಕೆಯ ನಂತರ, ಸ್ಥಳದಲ್ಲಿ ಮರುಬಳಕೆ ಯಾಂತ್ರಿಕ ವ್ಯವಸ್ಥೆ ಇಲ್ಲದಿರುವುದರಿಂದ ಅವುಗಳನ್ನು ಕಸದ ಬುಟ್ಟಿಗೆ ಹಾಕಬೇಕಾಗುತ್ತದೆ, ಮತ್ತು ಅವು ಭೂಮಿಯೊಳಗೆ ಸೇರಿಕೊಂಡು, ಕೊಳೆಯದೆ, ಭೂಮಲಿನ ಮಾಡುತ್ತವೆ.


ಅತ್ತ, ನೈರ್ಮಲ್ಯ ಕರವಸ್ತ್ರದ ಹಾನಿಕಾರಕ ಪರಿಣಾಮಗಳ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆಯುತ್ತಿದ್ದರೆ, ಕೊಯಮತ್ತೂರಿನ ಈ 18 ವರ್ಷದ ಬಾಲಕಿ ನ್ಯಾಪ್‌ಕಿನ್‌ಗಳನ್ನು ವಿಲೇವಾರಿ ಮಾಡುವ ಮಾರ್ಗವನ್ನು ತೋರಿಸುತ್ತಿದ್ದಾರೆ.


ಇಶಾನಾ (ಚಿತ್ರಕೃಪೆ: ದಿ ಕೋವಿಯಾ ಪೋಸ್ಟ್)


12 ನೇ ತರಗತಿ ಮುಗಿದ ನಂತರ ಇಶಾನಾ ಫ್ಯಾಶನ್ ಡಿಸೈನಿಂಗ್‌ನಲ್ಲಿ ಕೋರ್ಸ್ ಆಯ್ಕೆ ಮಾಡಿಕೊಂಡರು. ಆಗ ಅವರಿಗೆ ಈ ಪರಿಸರ ಸ್ನೇಹಿ ಪರ್ಯಾಯವನ್ನು ಮಾಡುವ ಹಂಬಲವಾಯಿತು. ಆವರು, ತಮ್ಮ ಅಂಗಡಿಯನ್ನು ಸ್ಥಾಪಿಸಲು ಹೋದಾಗ, ಅಲ್ಲಿ ತಮ್ಮ ವೈಯಕ್ತಿಕ ಬಳಕೆಗಾಗಿ ನೈರ್ಮಲ್ಯ ನ್ಯಾಪ್‌ಕಿನ್‌ಗಳನ್ನು ತಯಾರಿಸುವ ಆಲೋಚನೆ ಬಂದಿತು.


ಅನಾ ಕ್ಲಾತ್ ಪ್ಯಾಡ್ ಎಂದು ಕರೆಯಲ್ಪಡುವ ಈ ಪ್ಯಾಡ್‌ಗಳನ್ನು, ಇಶಾನಾ ಅವರು ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸಿಕೊಂಡು ಆರೋಗ್ಯ ಸಮಸ್ಯೆಗಳನ್ನು ಎದುರಿಸಲಾರಂಭಿಸಿದಾಗ ತಯಾರಿಸಲು ಪ್ರಾರಂಭಿಸಿದರು. ಇದೇ ರೀತಿಯ ಸಮಸ್ಯೆಗಳನ್ನು ಎದುರಿಸಿದ ತಮ್ಮ ಸ್ನೇಹಿತರಿಗೆ ಅವರು ಆರಂಭದಲ್ಲಿ ಪ್ಯಾಡ್‌ಗಳನ್ನು ಪರಿಚಯಿಸಿದರು. ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆದ ನಂತರ, ಅವರು ಪ್ಯಾಡ್‌ಗಳನ್ನು ಹೆಚ್ಚಿನ ಜನರಿಗೆ ಲಭ್ಯವಾಗುವಂತೆ ಮಾಡಲು ಪ್ರಾರಂಭಿಸಿದರು.


ಅನಾ ಕ್ಲಾತ್ ಪ್ಯಾಡ್ಸ್ ಎಂಬ ತನ್ನ ಸ್ಥಳೀಯ ಬ್ರಾಂಡ್ ಅಡಿಯಲ್ಲಿ ಉತ್ಪಾದಿಸುವ, ಇಶಾನಾ,


“ನಾನು ಇದನ್ನು ಭಾರತದ ಜನರಿಗಾಗಿ ಮಾಡುತ್ತಿದ್ದೇನೆ. ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟ ನಿಯಮಿತ ನೈರ್ಮಲ್ಯ ನ್ಯಾಪ್‌ಕಿನ್‌ಗಳಿಂದಾಗಿ ಪ್ರತಿ ಹುಡುಗಿಯೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದು ದದ್ದುಗಳಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ” ವರದಿ ದಿ ಲಾಜಿಕಲ್ ಇಂಡಿಯನ್.


(ಚಿತ್ರಕೃಪೆ : ದಿ ನ್ಯೂಸ್ ಮಿನಿಟ್)



120 ರೂ.ಗಳ ಬೆಲೆಯ ಮರುಬಳಕೆ ಮಾಡಬಹುದಾದ ಹತ್ತಿ ನ್ಯಾಪ್‌ಕಿನ್‌ಗಳು ಸಾಂಪ್ರದಾಯಿಕವಾದವುಗಳಿಗಿಂತ ಭಿನ್ನವಾಗಿ ಕೊಳೆಯಲು ಕೇವಲ ಆರು ದಿನಗಳನ್ನು ತೆಗೆದುಕೊಳ್ಳುತ್ತದೆ, ಅಲ್ಲದೆ, ಒಬ್ಬರು ಇದನ್ನು ಕನಿಷ್ಠ 12 ಬಾರಿ ಬಳಸಬಹುದು.


ಇಶಾನಾ ಪ್ರಕಾರ, ಪ್ಯಾಡ್‌ಗಳನ್ನು ಅರಿಶಿನ ಪುಡಿ ನೀರಿನಲ್ಲಿ ನೆನೆಸಿ ಸೂರ್ಯನ ಬೆಳಕಿನಲ್ಲಿ ಒಣಗಿಸಬೇಕಾಗುತ್ತದೆ. "ಮುಂದಿನ ತಿಂಗಳು ಅವುಗಳನ್ನು ಬಳಸುವ ಮೊದಲು, ಹೆಚ್ಚುವರಿ ಆರಾಮಕ್ಕಾಗಿ ಪ್ಯಾಡ್‌ಗಳ ಮೇಲೆ ಒದ್ದೆಯಾದ ಬಟ್ಟೆಯನ್ನು ಇರಿಸಿ ಕನಿಷ್ಠ ಎರಡು ದಿನಗಳ ಮೊದಲು ಅದನ್ನು ಇಸ್ತ್ರಿ ಮಾಡಲು ನಾನು ಶಿಫಾರಸು ಮಾಡುತ್ತೇವೆ" ಎಂದು ಅವರು ಹೇಳಿದರು.


ಮಹಿಳೆಯರ ಆರೋಗ್ಯದ ಮೇಲೆ ಕೇಂದ್ರೀಕರಿಸುವುದರ ಹೊರತಾಗಿ, ಇಶಾನಾ ಅವರ ಉದ್ಯಮವು ತನ್ನ ನೆರೆಹೊರೆಯ ಮಹಿಳೆಯರನ್ನು ಸಬಲೀಕರಣಗೊಳಿಸುತ್ತಿದೆ. ಪ್ಯಾಡ್‌ಗಳನ್ನು ಇಶಾನಾ ಅವರ ಸಣ್ಣ ಕಾರ್ಯಾಗಾರದಲ್ಲಿ ತಯಾರಿಸಲಾಗುತ್ತದೆ, ಇದರಲ್ಲಿ ಸುಮಾರು 25 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿ ಟೈಲರಿಂಗ್ ಯಂತ್ರಗಳನ್ನು ಹೊಂದಿರುವ ಈ ಮಹಿಳೆಯರಿಗೆ ಇಶಾನಾ ಕತ್ತರಿಸಿದ ತುಂಡುಗಳನ್ನು ಕಳುಹಿಸುತ್ತಾರೆ, ತದನಂತರ ತಮ್ಮ ಮನೆಯಲ್ಲಿ ಆರಾಮವಾಗಿ ಪ್ಯಾಡ್‌ಗಳನ್ನು ಹೊಲಿಯುತ್ತಾರೆ .


(ಚಿತ್ರ ಕೃಪೆ : ದಿ ಲಾಜಿಕಲ್ ಇಂಡಿಯನ್)


ಲಾಭದ ದೃಷ್ಟಿಯಿಂದ, ಇಶಾನಾ ತಮ್ಮ ಪರಿಸರ ಸ್ನೇಹಿ ನೈರ್ಮಲ್ಯ ನ್ಯಾಪ್‌ಕಿನ್‌ಗಳ ಮೂಲಕ ತಿಂಗಳಿಗೆ 5,000 ರೂಗಳನ್ನು ಗಳಿಸುತ್ತಾರೆ ಎಂದು ನ್ಯೂಸ್ 18 ವರದಿ ಮಾಡಿದೆ.


"ಈಗ, ಹತ್ತಿ ಬಟ್ಟೆಯಿಂದ ನೈರ್ಮಲ್ಯ ಪ್ಯಾಡ್ಗಳನ್ನು ಹೇಗೆ ತಯಾರಿಸಬೇಕೆಂಬುದರ ಬಗ್ಗೆ ಹೆಚ್ಚು ಹೆಚ್ಚು ಜನರಿಗೆ ಶಿಕ್ಷಣ ನೀಡಲು ನಾನು ಬಯಸುತ್ತೇನೆ" ವರದಿ ಎಎನ್ಐ.


ತಮ್ಮ ಪ್ರದೇಶಗಳಲ್ಲಿ ಪ್ಯಾಡ್ ವಿತರಣೆಗಾಗಿ ಸೇಲಂ, ಹೈದರಾಬಾದ್, ಮತ್ತು ಕೇರಳದ ವ್ಯಾಪಾರಿಗಳಿಂದ ಇಶಾನಾ ಅವರನ್ನು ಸಂಪರ್ಕಿಸಲಾಗುತ್ತಿದೆ. ತಮ್ಮ ಯೋಜನೆಗಳ ಬಗ್ಗೆ ಮಾತನಾಡಿದ ಇಶಾನಾ,


"ಭವಿಷ್ಯದಲ್ಲಿ, ಹಾಸಿಗೆ ಹಿಡಿದವರಿಗೆ ಪ್ಯಾಡ್‌ಗಳನ್ನು ತಯಾರಿಸಲು ಮತ್ತು ಮಕ್ಕಳ ಒರೆಸುವ ಬಟ್ಟೆಗಳನ್ನು ಮಾಡಲು ನಾನು ಬಯಸುತ್ತೇನೆ,” ಎಂದಿದ್ದಾರೆ‌.

ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.