ಹಾಡು ಹಾಡುತ್ತಾ ತಾಜ್ಯ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಪುಣೆಯ ಸ್ವಚ್ಛತಾ ಕೆಲಸಗಾರ

ಪುಣೆ ಮೂಲದ ಸ್ವಚ್ಛತಾ ಕಾರ್ಯಕರ್ತ ಮಹಾದೇವ್ ಜಾಧವ್ ಅವರು ತಮ್ಮ ವಿಶಿಷ್ಟ ಶೈಲಿಯಿಂದ ಹಳೆಯ ಬಾಲಿವುಡ್ ಗೀತೆಗಳ ಅಣಕು ಹಾಡುಗಳನ್ನು ಸೃಸ್ಟಿಸಿ ಹಾಡುವ ಮೂಲಕ ನಾಗರಿಕರನ್ನು ಸಾರ್ವಜನಿಕವಾಗಿ ಕಸ ಎಸೆಯದಂತೆ ಪ್ರೇರೇಪಿಸುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.

ಹಾಡು ಹಾಡುತ್ತಾ ತಾಜ್ಯ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಪುಣೆಯ ಸ್ವಚ್ಛತಾ ಕೆಲಸಗಾರ

Tuesday November 19, 2019,

2 min Read

ಹಳೆಯ ಹಾಡುಗಳನ್ನು ಮರುಸೃಷ್ಟಿಸುವ ಆಲೋಚನೆ ಪುಣೆ ಮುನ್ಸಿಪಲ್ ಕಾರ್ಪೊರೇಶನ್‌ನ (ಪಿಎಮ್‌ಸಿ) 57 ವರ್ಷದ ಉದ್ಯೋಗಿಗೆ ಕೆಲವು "ವಿದ್ಯಾವಂತರು" ಬೆಳಿಗ್ಗೆ ವಾಯುವಿಹಾರಕ್ಕೆ ಹೋಗುವಾಗ ಪಾರ್ವತಿ ಪ್ರದೇಶದ ರಸ್ತೆಗಳಲ್ಲಿ ಕಸ ಎಸೆಯುತ್ತಿರುವುದನ್ನು ಕಂಡಾಗ ಹೊಳೆಯಿತು.


"ನಾನು ಕವಿತೆಗಳನ್ನು ಹಾಡುವ ಮತ್ತು ಬರೆಯುವ ಒಲವು ಹೊಂದಿದ್ದರಿಂದ, ತ್ಯಾಜ್ಯ ನಿರ್ವಹಣೆ ಮತ್ತು ಒಣ-ಹಸಿ ಕಸವನ್ನು ಮೂಲದಲ್ಲಿ ಬೇರ್ಪಡಿಸುವ ಬಗ್ಗೆ ಮತ್ತು ಸಾರ್ವಜನಿಕವಾಗಿ ಕಸವನ್ನು ಎಸೆಯುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಾನು ನನ್ನ ಆಸಕ್ತಿಯನ್ನು ಬಳಸುತ್ತಿದ್ದೇನೆ" ಎಂದು ತ್ಯಾಜ್ಯ ನಿರ್ವಹಣಾ ವಿಭಾಗಕ್ಕೆ ಸೇರಿದ ಜಾಧವ್ ಹೇಳಿದರು.


ಬೀದಿಗಳನ್ನು ಗುಡಿಸುವಾಗ ಹಾಡುವ ಮೂಲಕ ಜನರ ಗಮನ ಸೆಳೆಯುವ ಜಾಧವ್ ಅವರ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.


ತಮ್ಮ ಅನುಭವವನ್ನು ನೆನಪಿಸಿಕೊಂಡ ಜಾಧವ್, ಒಂದು ದಿನ ಬೆಳಿಗ್ಗೆ ಸುಶಿಕ್ಷಿತ ಜನರು ಬೆಳಿಗ್ಗೆ ವಾಯುವಿಹಾರ ಮಾಡಲು ಹೊರಟಾಗ ರಸ್ತೆಬದಿಯಲ್ಲಿ ಕಸವನ್ನು ಎಸೆಯುತ್ತಿರುವುದನ್ನು ನೋಡಿ ನೊಂದಿದ್ದೇನೆ.


"ಅವರ ಮನೋಭಾವದಿಂದ ಕೋಪಗೊಂಡ ನಾನು ಹಾಡುವ ಮೂಲಕ ಕೆಟ್ಟ ಅಭ್ಯಾಸದ ವಿರುದ್ಧ ಜಾಗೃತಿ ಮೂಡಿಸಲು ನಿರ್ಧರಿಸಿದೆ. ಹಳೆ ಹಿಂದಿ ಗೀತೆ 'ಕಜ್ರಾ ಮೊಹಬ್ಬತ್ ವಾಲಾ' ಅನ್ನು 'ಕಚರಾ ಸೂಖಾ ಔರ್ ಗೀಲಾ, ಸಬ್ನೆ ಮಿಲಾ ಕರ್ ಡಾಲಾ, ಕಚರೆ ನೆ ಲೆಲಿ ಸಬ್ಕಿ ಜಾನ್ ರೆ, ಗೌರ್ ಸೆ ಸುನಿಯೇ ಮೆಹರಭಾನ..,ʼ ಎಂದು ಬದಲಿಸಿದೆ" ಎಂದು ಅವರು ಹೇಳಿದರು.


ಪಿಎಮ್‌ಸಿ ಸಾಂಸ್ಕೃತಿಕ ಗುಂಪಿನ ಪ್ರಮುಖ ಸದಸ್ಯರಾದ ಜಾಧವ್ ಮತ್ತು ಅವರ ಸಮಾನ ಮನಸ್ಕ ಸಹೋದ್ಯೋಗಿಗಳು ಶಾಲೆಗಳು, ಕಾಲೇಜುಗಳು ಮತ್ತು ವಸತಿ ಸಂಘಗಳಿಗೆ ಭೇಟಿ ನೀಡಿ, ಅಲ್ಲಿ ಅವರು ಸಣ್ಣ ನಾಟಕಗಳನ್ನು ಪ್ರದರ್ಶಿಸುತ್ತಾರೆ ಮತ್ತು ತ್ಯಾಜ್ಯ ನಿರ್ವಹಣೆಯ ಮಹತ್ವದ ಬಗ್ಗೆ ಹಾಡುಗಳನ್ನು ಹಾಡುತ್ತಾರೆ.


'ಕಜ್ರಾ ಮೊಹಬ್ಬತ್ವಾಲಾ…" ಅಂತಹ ವಿಷಯವನ್ನು ಮುಂದಕ್ಕೆ ತೆಗೆದುಕೊಂಡು, ಜಾಧವ್," "ಕ್ಯಾರಿ ಬ್ಯಾಗ್ ಯೆ ಪ್ಲಾಸ್ಟಿಕ್ ವಾಲಾ, ಇಸ್ಕೊ ಆದತ್ ಕರ್ ದಲಾ, ಆಡತ್ ನೆ ಲೆ ಲಿ ಸಬ್ಕಿ ಜಾನ್, ಗೌರ್ ಸೆ ಸುನಿಯೆ ಮೆಹೆರಾಬನ್" (ಪ್ಲಾಸ್ಟಿಕ್ ಬಳಕೆಯ ಅಭ್ಯಾಸವು ನಮ್ಮನ್ನು ಕೊಂದಿದೆ)".


ತಮ್ಮ ವಿಶಿಷ್ಟ ಶೈಲಿಯ ಮೂಲಕ ತ್ಯಾಜ್ಯ ನಿರ್ವಹಣೆಯ ಬಗ್ಗೆ ನಿವಾಸಿಗಳಲ್ಲಿ ಜಾಗೃತಿ ಮೂಡಿಸಬೇಕೆಂದು ವಸತಿ ಸಂಘಗಳಿಂದ ಆಹ್ವಾನಗಳ ಹೊಳೆಯೇ ಹರಿದು ಬರುತ್ತಿದೆ ಎಂದು ಜಾಧವ್ ಹೇಳಿದ್ದಾರೆ।


ಪಿಎಂಸಿಯ ತ್ಯಾಜ್ಯ ನಿರ್ವಹಣಾ ವಿಭಾಗದ ಮುಖ್ಯಸ್ಥರಾಗಿರುವ ಜ್ಞಾನೇಶ್ವರ್ ಮೊಲಾಕ್, ಜಾಧವ್ ಅವರು ಸಾಮಾಜಿಕ ಕಾರಣವನ್ನು ವೈಯಕ್ತಿಕ ಪ್ರವೃತ್ತಿಯಾಗಿ ಪರಿವರ್ತಿಸಿರುವುದು ಹೆಮ್ಮೆಯ ವಿಷಯವಾಗಿದೆ.


"ನಾಗರಿಕ ಸಂಸ್ಥೆಯಿಂದ ನಡೆಯುವ ಕೇಂದ್ರ ಸರ್ಕಾರದ ಸ್ವಚ್ಚತಾ ಸಮೀಕ್ಷೆಗೆ ಅವರನ್ನು ನಮ್ಮ ಸ್ವಚ್ಛತೆ ಕಾರ್ಯಕ್ರಮದ ರಾಯಭಾರಿಯಾಗಿ ನೇಮಿಸಲು ನಾವು ಯೋಜಿಸುತ್ತಿದ್ದೇವೆ" ಎಂದು ಅವರು ಹೇಳಿದರು.


ಪರಿಸರದ ಬಗ್ಗೆ ಕಾಳಜಿ ವಹಿಸಲು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಈ ಹಿಂದಿನಿಂದ ಜನರಿಗೆ ಮನವಿ ಮಾಡುತ್ತ ಬಂದಿದ್ದಾರೆ.


ಕಳೆದ ತಿಂಗಳು ಬೆಳಿಗ್ಗೆ ಪಿಎಂ ಸ್ವತಃ ಮಾಮಲ್ಲಾಪುರಂ ಕಡಲ ತೀರದಲ್ಲಿ ಕಸ ಸಂಗ್ರಹಿಸಿ ಜನರಾಗಿ ಮಾದರಿಯಾದರು.