ಕೀಟನಾಶಕವಿಲ್ಲದೆ ಹೂಕೋಸು ಎಲೆಕೋಸುಗಳನ್ನು ಬೆಳೆದ ಬೆಂಗಳೂರಿನ ವಿಜ್ಞಾನಿಗಳು

ಬೆಂಗಳೂರಿನ ಐಐಎಚ್‌ಆರ್‌ನ ವಿಜ್ಞಾನಿಗಳು ರಾಸಾಯನಿಕ ಕೀಟನಾಶಕಗಳನ್ನು ಬಳಸದೆ, ನೈಸರ್ಗಿಕವಾದ ಬೇವಿನ ಬೀಜದಿಂದಲೇ ಆರೋಗ್ಯಕರವಾದ ಹೂಕೋಸು ಮತ್ತು ಎಲೆಕೋಸುಗಳನ್ನು ಬೆಳೆಯುವ ವಿಧಾನವೊಂದನ್ನು ಕಂಡುಕೊಂಡಿದ್ದಾರೆ.

20th Feb 2020
  • +0
Share on
close
  • +0
Share on
close
Share on
close

ಗೋಬಿ ಮಂಚೂರಿಯೆಂಬ ತಿಂಡಿಯಿಂದ ಆಹಾರಪ್ರೀಯರ ನೆಚ್ಚಿನ ಬೆಳೆಗಳಾದ ಹೂಕೋಸು ಮತ್ತು ಎಲೆಕೋಸು ಈಗ ಕೀಟನಾಶಕಗಳಿಲ್ಲದೆ ನೈಸರ್ಗಿಕವಾಗಿ, ರುಚಿಕರವಾಗಿಯೂ ಮತ್ತಷ್ಟು ಆರೋಗ್ಯಕರವಾಗಿಯೂ ದೊರಕಲಿದೆ. ಇದು ನಮ್ಮ ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ದಶಕದ ಪರಿಶ್ರಮ ಪ್ರಯೋಗಕ್ಕೆ ದೊರೆತ ಪ್ರತಿಫಲ.


ಈ ತರಕಾರಗಳಿಗೆ ಬಿಡದೆ ಕಾಡುವ ಕೀಟಗಳಾದ ವಜ್ರ ಬೆನ್ನಿನ ಪತಂಗ, ಕಾಯಿ ಕೊರಕ ಮತ್ತು ಹೇಣಿನಿಂದ ತಮ್ಮ ಬೆಳೆಯನ್ನು ರಕ್ಷಿಸಲು ರೈತೆರು ಕೀಟನಾಶಕಗಳ ಮೊರೆ ಹೋಗುತ್ತಾರೆ. ಅತೀಯಾದ ಕೀಟನಾಶಕದ ಸಿಂಪಡಿಕೆಯನ್ನು ಬೇಡುವ ಈ ತರಕಾರಿಗಳು ಕಟಾವಿನ ನಂತರವು ಎಷ್ಟೋ ದಿನಗಳವರೆಗೆ ವಿಷಕಾರಿ ರಾಸಾಯನಿಕಗಳನ್ನು ತಮ್ಮಲ್ಲೆ ಉಳಿಸಿಕೊಳ್ಳುವುದಲ್ಲದೆ, ಅದನ್ನು ಉಪಯೋಗಿಸುವವರ ಮೇಲೆ ದೀರ್ಘ ಕಾಲದ ಪರಿಣಾಮ ಬೀರುತ್ತದೆ.


ಐಐಎಚ್‌ಆರ್‌ನಲ್ಲಿ ಆರೋಗ್ಯಕರವಾಗಿ ಬೆಳೆದ ಎಲೆಕೋಸು


ಈ ಸಮಸ್ಯೆಯನ್ನು ಬಗೆ ಹರಿಸಲು ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಎರಡು ರೀತಿಯಲ್ಲಿ ಯೋಚಿಸಿದರೂ. ಒಂದು ಸಿಂಪಡಿಸುವಿಕೆಯ ಪುನರಾವರ್ತನೆಯನ್ನು ಹೇಗೆ ಕಡಿಮೆಗೋಳಿಸಬಹುದೆಂದು, ಮತ್ತೊಂದು ರಾಸಾಯನಿಕ ಕೀಟನಾಶಕದ ಬದಲಿಗೆ ಪರಿಸರ ಸ್ನೇಹಿ ಮಾರ್ಗವನ್ನು ಹೇಗೆ ಕಂಡುಕೊಳ್ಳುವುದು.


ವರ್ಷಗಳ ಪ್ರಯೋಗದ ಫಲವಾಗಿ ವಿಜ್ಞಾನಿಗಳು ಬೇವಿನ ಬೀಜವನ್ನು ನೀರಿನೊಂದಿಗೆ ಸೇರಿಸಿ ಸಿಂಪಡಿಸಿದಾಗ ಅದ್ಭುತವಾದ ಫಲಿತಾಂಶವನ್ನು ಕಂಡುಕೊಂಡಿದ್ದಲ್ಲದೆ ಕೋಸುಗಳು ಆರೋಗ್ಯಕರವಾಗಿ 600 ಗ್ರಾಂ ತೂಕದಷ್ಟು ದೊಡ್ಡದಾಗಿ ಬೆಳೆಯಲಾರಂಭಿಸಿದವು.


“ಬೇವಿನ ಹರಳುಗಳನ್ನು ನೀರಿನೊಂದಿಗೆ ರಾತ್ರಿಯಿಡಿ ನೆಣೆಸಿ, ನಂತರ ಶುದ್ಧಿಕರಿಸಿ ನಾಟಿ ಆದ 20 ದಿನಗಳ ನಂತರ 7-10 ದಿನಕ್ಕೊಮ್ಮೆಯಂತೆ 8 ಬಾರಿ ಸಿಂಪಡಿಸಿದರೆ ಸಾಕು ಗೆಡ್ಡೆಗಳು ಯಾವುದೇ ಕೀಟಗಳ ಕಾಟವಿಲ್ಲದೆ ಚೆನ್ನಾಗಿ ಬೆಳೆಯುತ್ತವೆ,” ಎನ್ನುತ್ತಾರೆ ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ. ಎನ್‌ ಆರ್‌ ಪ್ರಸನ್ನ ಕುಮಾರ.


ಬೇವಿನ ಬೀಜದ ಹರಳುಗಳು




ಬೇವಿನ ಬೀಜದ ಬಳಕೆ ಭಾರತೀಯರಿಗೆನು ಹೊಸದಲ್ಲ, ಭಾರತೀಯ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದಲ್ಲಿ ಬೇವಿನ ಮಹತ್ವದ ಉಲ್ಲೇಖವಿದೆ.


ಬೇವಿನ ಬೀಜದ ಪುಡಿಯನ್ನು ಬಹಳ ದಿನದವರೆಗೆ ಶೇಖರಿಸಿಡಲಾಗದ ಕಾರಣ ಅದನ್ನು ೧ ವರ್ಷದ ಶೇಲ್ಫ್‌ ಲೈಫ್‌ ಹೊಂದಿರುವ ಹರಳುಗಳ ರೂಪಕ್ಕೆ ತರಲಾಗಿದೆ. 1 ಲೀಟರ್‌ ನೀರಿಗೆ 30 ಗ್ರಾಂ ಬೇವಿನ ಹರಳನ್ನು ಮಿಶ್ರಣ ಮಾಡುವಂತೆ 1 ಎಕರೆಗೆ 200 ಲೀಟರ್‌ ನೀರು 6 ಕೆ ಜಿ ಹರಳುಗಳು ಬೇಕಾಗುತ್ತವೆ. ೬ ಕೆಜಿ ಹರಳನ್ನು 20 ಲೀಟರ್‌ ನೀರಿನೊಂದಿಗೆ ಸೇರಿಸಿ ನಂತರ 180 ಲೀಟರ್‌ ಗೆ ಅದನ್ನು ಸೇರಿಸಿ ಸಿಂಪಡಿಸಬಹುದು.


ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ಬೆಳೆಗಳನ್ನು ಪ್ರದರ್ಶಿಸಲಾಗುತ್ತಿದ್ದು ಇದರ ಹಿಂದೆ ಹಲವಾರು ವರ್ಷಗಳ ಪ್ರಯೋಗಗಳನ್ನು ಮಾಡಲಾಗಿದೆ.



“ಕೀಟಗಳು ಬೆಳೆಗಳಿಗೆ ಹತ್ತುವ ಮೊದಲೆ ಇದನ್ನು ಸಿಂಪಡಿಸಿದರೆ ಉತ್ತಮ, ಕೀಟಶಾಸ್ತ್ರದಲ್ಲಿ ಮಿತಿಯ ಮಟ್ಟವಿದೆ (ಥ್ರಿಶೋಲ್ಡ್‌ ಲೆವೆಲ್)‌, ಕೀಟಗಳು ಆ ಮಟ್ಟವನ್ನು ಮೀರಿದರೆ ನಷ್ಟ ಜಾಸ್ತಿಯಾಗುತ್ತಾ ಹೋಗುತ್ತದೆ, ಹಾಗಾಗಿ ಕೀಟಗಳ ಹರಡುವಿಕೆಯನ್ನು ಮುಂಚಿತವಾಗಿ ಹತ್ತಿಕ್ಕುವುದು ಪರಿಸರ ಮತ್ತು ಜೀವ ವೈವಿಧ್ಯತೆಯ ದೃಷ್ಟಿಯಿಂದ ಒಳ್ಳೆಯದು,” ಎನ್ನುತ್ತಾರೆ ಡಾ. ಎನ್‌ ಆರ್‌ ಪ್ರಸನ್ನ ಕುಮಾರ.


ಈ ಪರಿಹಾರ ಬರೀ ನೈಸರ್ಗಿಕವಾಗಿರುವುದಲ್ಲದೆ ವೆಚ್ಚ ಪರಿಣಾಮಕಾರಿಯೂ ಆಗಿದೆ. ಸಂಯೋಜಿತ ರಾಸಾಯನಿಕವನ್ನು 25 ಬಾರಿ ಸಿಂಪಡಿಸಬೇಕಾದರೆ ಈ ನೈಸರ್ಗಿಕ ಬೇವಿನ ಮಿಶ್ರಣವನ್ನು 8 ಬಾರಿ ಸಿಂಪಡಿಸಿದರೆ ಸಾಕು. ರೈತರ ಹೊಲದಲ್ಲೆ ಬೇವಿನ ಗಿಡವಿದ್ದರಂತೂ ಇನ್ನೂ ಕಡಿಮೆ ವೆಚ್ಚದಲ್ಲಿ ಈ ಕಾರ್ಯವಾಗುತ್ತದೆ.


ಇನ್ನೆರೆಡು ತಿಂಗಳಲ್ಲಿ ವಾಣಿಜ್ಯವಾಗಿ ಮಾರುಕಟ್ಟೆಯಲ್ಲಿ ಈ ಹರಳುಗಳು ಲಭ್ಯವಿರಲಿವೆ.



Want to make your startup journey smooth? YS Education brings a comprehensive Funding Course, where you also get a chance to pitch your business plan to top investors. Click here to know more.

  • +0
Share on
close
  • +0
Share on
close
Share on
close

Our Partner Events

Hustle across India