ವಿಜ್ಞಾನಿಗಳು 3ಡಿ ಕನ್ನಡಕವನ್ನು ಕಟಲ್‌ಫಿಶ್‌ಗೆ ಹಾಕಿ ಅವುಗಳ ದೃಷ್ಟಿಯು ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ಕಂಡುಕೊಂಡರು

By Press Trust of India|13th Jan 2020
ಚಲಿಸುವ ಬೇಟೆಯನ್ನು ಹಿಡಿಯಲು ಬೇಕಾದ ಉತ್ತಮ ಅಂತರವನ್ನು ಸೆಫಲೋಪಾಡ್‌ಗಳು ಹೇಗೆ ನಿರ್ಧರಿಸುತ್ತವೆ ಎಂಬುದನ್ನು ಅಭ್ಯಸಿಸಲು ವಿಜ್ಞಾನಿಗಳು ವಿಶೇಷ 3 ಡಿ ಕನ್ನಡಕವನ್ನು ಧರಿಸಲು ಕಟಲ್‌ಫಿಶ್‌ಗೆ ತರಬೇತಿ ನೀಡಿದ್ದಾರೆ.
Clap Icon0 claps
 • +0
  Clap Icon
Share on
close
Clap Icon0 claps
 • +0
  Clap Icon
Share on
close
Share on
close

ಸೈನ್ಸ್ ಅಡ್ವಾನ್ಸಸ್ ಜರ್ನಲ್ನಲ್ಲಿ ಪ್ರಕಟವಾದ ಸಂಶೋಧನೆಯು, ಕಟಲ್ ಫಿಶ್ಗಳು ಸ್ಟಿರಿಯೊಪ್ಸಿಸ್ ಅನ್ನು ಬಳಸುತ್ತವೆ ಎಂದು ಬಹಿರಂಗಪಡಿಸಿದೆ. ಸ್ಟಿರಿಯೊಪ್ಸಿಸ್ ಎಂದರೆ ಎರಡೂ ಕಣ್ಣುಗಳ ಸಂಯೋಜನೆಯಿಂದ ದೃಶ್ಯ ಪ್ರಚೋದಕಗಳು ಮೆದುಳಿನಲ್ಲಿ ಉಂಟುಮಾಡುವ ಆಳದ ಚಿತ್ರಣ, ಇದು ಚಲಿಸುವ ಗುರಿಯನ್ನು ಬೇಟೆಯಾಡುವಾಗ ಆಳವನ್ನು ಗ್ರಹಿಸಲು ಉಪಯುಕ್ತವಾಗುತ್ತದೆ.


ಕಟಲ್‌ಫಿಶ್‌ (ಚಿತ್ರಕೃಪೆ: ಟ್ವಿಟರ್)


ಕಟಲ್‌ಫಿಶ್ ತಮ್ಮ ಗ್ರಹಣಾಂಗಗಳ ಮುಖಾಂತರ ಬೇಟೆಯಾಡುತ್ತವೆ ಮತ್ತು ಅವು ಬೇಟೆಯಲ್ಲಿ ಯಶಸ್ವಿಯಾಗಲು ಬೇಟೆಯಿಂದ ಸರಿಯಾದ ಅಂತರದಲ್ಲಿ ತಮ್ಮನ್ನು ತಾವು ಇರಿಸಿಕೊಳ್ಳಲು ಆಳವನ್ನು ಲೆಕ್ಕಾಚಾರ ಹಾಕಬೇಕಾಗುತ್ತದೆ.


ಅವು ತುಂಬಾ ಹತ್ತಿರದಲ್ಲಿದ್ದರೆ, ಬೇಟೆಯು ಹೆದರಿ ದೂರವಾಗಬಹುದು ಮತ್ತು ಅವು ತುಂಬಾ ದೂರದಲ್ಲಿದ್ದರೆ, ಗ್ರಹಣಾಂಗಗಳು ತಲುಪುವುದಿಲ್ಲ ಎಂದು ಯುಎಸ್‌ನ ಮಿನ್ನೇಸೋಟ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ.


ಕಟಲ್‌ಫಿಶ್‌ನ ಮೆದುಳು ವಸ್ತುವಿನ ದೂರವನ್ನು ಹೇಗೆ ಲೆಕ್ಕಾಚಾರ ಮಾಡುತ್ತದೆ ಎಂಬುದನ್ನು ಪರೀಕ್ಷಿಸಲು, ತಂಡವು 3 ಡಿ ಕನ್ನಡಕವನ್ನು ಧರಿಸಲು ಮತ್ತು ಎರಡು ನಡೆದಾಡುವ ಸೀಗಡಿಗಳ ಚಿತ್ರಗಳನ್ನೂ ಬೇಟೆಯಾಡಲು ಕಟಲ್‌ಫಿಶ್‌ಗೆ ತರಬೇತಿ ನೀಡಿತು, ಯುಎಸ್‌ನ ವುಡ್ಸ್ ಹೋಲ್‌ನಲ್ಲಿರುವ ಸಾಗರ ಜೈವಿಕ ಪ್ರಯೋಗಾಲಯದಲ್ಲಿ ಕಂಪ್ಯೂಟರ್ ಪರದೆಯಲ್ಲಿ ಪ್ರದರ್ಶಿಸಲಾದ ಎರಡು ಸೀಗಡಿಗಳು ವಿಭಿನ್ನ ಬಣ್ಣದ್ದಾಗಿದ್ದವು.


ಚಿತ್ರಗಳು ಒಂದಕ್ಕಿತ ಒಂದು ವಿಭಿನ್ನವಾಗಿದ್ದವು, ಇದು ಕಟಲ್‌ಫಿಶ್ ತನ್ನ ಬೇಟೆಗೆ ಇರುವ ಅಂತರದ ಬಗೆಗಿನ ಮಾಹಿತಿಯನ್ನು ಸಂಗ್ರಹಿಸಲು ಎಡ ಮತ್ತು ಬಲ ಕಣ್ಣುಗಳ ಮೇಲಿನ ಚಿತ್ರಗಳನ್ನು ಹೋಲಿಸುತ್ತಿದೆ ಎಂದು ನಿರ್ಧರಿಸಲು ಸಂಶೋಧಕರಿಗೆ ಅನುವು ಮಾಡಿಕೊಡುತ್ತದೆ.


ಚಿತ್ರಗಳನ್ನು ಹೋಲಿಸುವ ಪ್ರಕ್ರಿಯೆಯನ್ನು ಸ್ಟೀರಿಯೋಪ್ಸಿಸ್ ಎಂದು ಕರೆಯಲಾಗುತ್ತದೆ ಮತ್ತು ಮಾನವರು ಸಹ ಆಳವನ್ನು ಇದೆ ರೀತಿ ನಿರ್ಧರಿಸುತ್ತಾರೆ.


ಚಿತ್ರಗಳ ಭಿನ್ನತೆಗಳಿಗೆ ಅನುಗುಣವಾಗಿ, ಕಟಲ್‌ಫಿಶ್ ಸೀಗಡಿಗಳನ್ನು ಪರದೆಯ ಮುಂದೆ ಅಥವಾ ಹಿಂದೆ ಇರುವುದನ್ನು ಗ್ರಹಿಸುತ್ತದೆ.


ಕಟಲ್‌ಫಿಶ್ ಚಿತ್ರಗಳ ಭಿನ್ನತೆಗಳ ಪ್ರಕಾರ ಪರದೆಯ ತುಂಬಾ ಹತ್ತಿರ ಅಥವಾ ತುಂಬಾ ದೂರದಲ್ಲಿ ಎಂದು ಭಾವಿಸಿತು.


"ಕಟಲ್‌ಫಿಶ್ ಅಸಮಾನತೆಗಳಿಗೆ ಹೇಗೆ ಪ್ರತಿಕ್ರಿಯಿಸಿತು ಎಂಬುದು ಕಟಲ್‌ಫಿಶ್ ಬೇಟೆಯಾಡುವಾಗ ಸ್ಟೀರಿಯೋಪ್ಸಿಸ್ ಅನ್ನು ಬಳಸುತ್ತದೆ ಎಂಬುದನ್ನು ಸ್ಪಷ್ಟವಾಗಿ ಸ್ಥಾಪಿಸುತ್ತದೆ," ಎಂದು ಮಿನ್ನೇಸೋಟ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಟ್ರೆವರ್ ವಾರ್ಡಿಲ್ ಹೇಳಿದರು.


"ಕೇವಲ ಒಂದೇ ಕಣ್ಣಿನಿಂದ ಸೀಗಡಿಯನ್ನು ನೋಡಿದಾಗ, ಅಂದರೆ ಸ್ಟಿರಿಯೊಪ್ಸಿಸ್ ಸಾಧ್ಯವಿಲ್ಲವೆಂದರ್ಥ ಅದ್ದರಿಂದ ಪ್ರಾಣಿಗಳು ತಮ್ಮನ್ನು ತಾವು ಬೇಟೆಯಾಡಲು ಉಪಯುಕ್ತ ಸ್ಥಾನಧರಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ.


"ಎರಡೂ ಕಣ್ಣುಗಳು ಸೀಗಡಿಯನ್ನು ನೋಡಿದಾಗ, ಅವು ಸ್ಟೀರಿಯೋಪ್ಸಿಸ್ ಅನ್ನು ಬಳಸಿದಂತೆ, ಅಂದರೆ ಕಟಲ್ ಫಿಶ್ ಆಕ್ರಮಣ ಮಾಡುವಾಗ ವೇಗವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸಹಾಯವಾಗುತ್ತದೆ. ಇದು ಬೇಟೆಯನ್ನು ಹಿಡಿಯುವಲ್ಲಿ ಅಜಗಜಾಂತರ ವ್ಯತ್ಯಾಸಗಳನ್ನು ಉಂಟುಮಾಡುತ್ತದೆ," ಎಂದು ವಾರ್ಡಿಲ್ ಹೇಳಿದರು.


ಈ ಪ್ರಕ್ರಿಯೆಯ ಮೂಲಕ, ಕಟಲ್‌ಫಿಶ್ ಸ್ಟೀರಿಯೋಪ್ಸಿಸ್ ಅನ್ನು ಆಧಾರವಾಗಿಟ್ಟುಕೊಳ್ಳುವ ಕಾರ್ಯವಿಧಾನವು ಸಂಶೋಧಕರಿಂದ ಕಂಡುಹಿಡಿಯಲಾಗಿದೆ, ಮತ್ತು ಇದು ಮನುಷ್ಯರಿಗಿಂತ ಭಿನ್ನವಾಗಿದೆ ಏಕೆಂದರೆ ಕಟಲ್‌ಫಿಶ್ ಪರಸ್ಪರ ಸಂಬಂಧ ಹೊಂದಿರುವ ಪ್ರಚೋದನೆಯಿಂದ ದೂರವನ್ನು ಯಶಸ್ವಿಯಾಗಿ ನಿರ್ಧರಿಸುತ್ತದೆ.


ಇದರ ಆರ್ಥ ಎಡ ಮತ್ತು ಬಲ ಕಣ್ಣಿನ ಚಿತ್ರಗಳು ಒಂದೇ ಮಾದರಿಯದ್ದಾಗಿವೆ, ಆದರೆ ಪ್ರಕಾಶದಲ್ಲಿ ವ್ಯತಿರಿಕ್ತವಾಗಿವೆ ಎಂದು ಸಂಶೋಧಕರು ಹೇಳಿದ್ದಾರೆ. ಮಾನವರಿಂದ ಇದು ಅಸಾಧ್ಯ ಎಂಬುದನ್ನು ಅವರು ಗಮನಿಸಿದರು.


"ಕಟಲ್‌ಫಿಶ್‌ ಮನುಷ್ಯರಿಗೆ ಸಮಾನವಾದ ಕಣ್ಣುಗಳನ್ನು ಹೊಂದಿದ್ದರು, ಅವರ ಮಿದುಳುಗಳು ಗಮನಾರ್ಹವಾಗಿ ಭಿನ್ನವಾಗಿವೆ," ಎಂದು ಮಿನ್ನೇಸೋಟ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪಾಲೋಮಾ ಗೊನ್ಜಾಲೆಜ್-ಬೆಲ್ಲಿಡೊ ಹೇಳಿದರು.


“ನಮ್ಮಲ್ಲಿ ಆಕ್ಸಿಪಿಟಲ್ ಲೋಬ್‌ ದೃಷ್ಟಿ ಸಂಸ್ಕರಣೆಗೆ ಮೀಸಲಾಗಿವೆ ಆದರೆ ಕಟಲ್‌ಫಿಶ್ ಮಿದುಳು ಮನುಷ್ಯರಿಗಿಂತ ಭಿನ್ನವಾಗಿದ್ದು ಮತ್ತು ವಿಂಗಡಿಸಲ್ಪಟ್ಟಿಲ್ಲ ಎಂದು ನಮಗೆ ತಿಳಿದಿದೆ. ನಮ್ಮ ಸಂಶೋಧನೆಯ ಪ್ರಕಾರ ಅವುಗಳ ಮೆದುಳಿನಲ್ಲಿರುವ ಯಾವದೋ ಒಂದು ಭಾಗವು ಕಟಲ್‌ಫಿಶ್‌ನ ಎಡ ಮತ್ತು ಬಲಗಣ್ಣಿನಿಂದ ಚಿತ್ರಗಳನ್ನು ಹೋಲಿಸುತ್ತದೆ ಮತ್ತು ಅವುಗಳ ವ್ಯತ್ಯಾಸಗಳನ್ನು ಲೆಕ್ಕಾಚಾರ ಮಾಡುತ್ತದೆ," ಎಂದು ಬೆಲ್ಲಿಡೋ ಹೇಳಿದರು.


ಕಟಲ್‌ಫಿಶ್‌ ತಮ್ಮ ಕಣ್ಣುಗಳನ್ನು ತಿರುಗಿಸಿ ಮುಂದಕ್ಕೆ ನೇರವಾಗಿ ನೋಡುವ ಸಾಮರ್ಥ್ಯವನ್ನು ಹೊಂದಿದೆ, ಈ ಒಂದು ಗುಣವು ಅವುಗಳ ಸೆಫಲೋಪಾಡ್ ಸಂಬಂಧಿಗಳಾದ ಸ್ಕ್ವಿಡ್ ಮತ್ತು ಆಕ್ಟೋಪಸ್‌ನಿಂದ ಅದನ್ನು ಪ್ರತ್ಯೇಕಿಸುತ್ತದೆ.


ಸ್ಟೀರಿಯೋಪ್ಸಿಸ್ ಅನ್ನು ಲೆಕ್ಕಾಚಾರ ಮಾಡುವ ಮತ್ತು ಬಳಸುವ ಸಾಮರ್ಥ್ಯವನ್ನು ಹೊಂದಿರುವ ಏಕೈಕ ಸೆಫಲೋಪಾಡ್‌ಗಳು ಕಟಲ್‌ಫಿಶ್ ಆಗಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಸ್ಟಿರಿಯೊಪ್ಸಿಸ್ ಅನ್ನು ಬಳಸುವ ಇತರ ಅಕಶೇರುಕ ಪ್ರಭೇದವೆಂದರೆ ಮಾಂಟಿಡ್ಸ್ ಮಾತ್ರ ಎಂದು ಅವರು ಹೇಳಿದರು.Want to make your startup journey smooth? YS Education brings a comprehensive Funding Course, where you also get a chance to pitch your business plan to top investors. Click here to know more.

Clap Icon0 Shares
 • +0
  Clap Icon
Share on
close
Clap Icon0 Shares
 • +0
  Clap Icon
Share on
close
Share on
close