ಜಪಾನ್, ಚೀನಾ, ಬಾಂಗ್ಲಾದೇಶ್, ಭಾರತದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಸಮುದ್ರ ಮಟ್ಟ ಏರುವ ಸಾಧ್ಯತೆ ಹೆಚ್ಚು: ವಿಶ್ವಸಂಸ್ಥೆ

By Press Trust of India|6th Nov 2019
ಹವಾಮಾನ ಬದಲಾವಣೆಯು ದೇಶದ ಸುಸ್ಥಿರತೆಗೆ ಅತಿದೊಡ್ಡ ಮಾರಕ ಎಂದು ವಿವರಿಸಿದ ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ಹೆಚ್ಚುತ್ತಿರುವ ಸಾಗರಗಳ ಮಟ್ಟದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಜಪಾನ್, ಚೀನಾ, ಬಾಂಗ್ಲಾದೇಶ ಮತ್ತು ಭಾರತದಲ್ಲಿ ಹೆಚ್ಚು ದುರ್ಬಲ ಪ್ರದೇಶಗಳಿವೆ ಎಂದು ಹೇಳಿಕೆ ನೀಡಿದ್ದಾರೆ.
Clap Icon0 claps
 • +0
  Clap Icon
Share on
close
Clap Icon0 claps
 • +0
  Clap Icon
Share on
close
Share on
close

ಬ್ಯಾಂಕಾಕ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಸಿಯಾನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಗುಟೆರೆಸ್, "ಇಂದು ಜಗತ್ತಿನಾದ್ಯಂತ ಸುಸ್ಥಿರತೆಗೆ ಹವಾಮಾನ ಬದಲಾವಣೆಯೇ ದೊಡ್ಡ ಅಪಾಯವಾಗಿದೆ" ಎಂದರು.


ಮುಂದುವರೆದು ಮಾತನಾಡಿದ ಅವರು, ಹವಾಮಾನ ವೈಪರೀತ್ಯದಿಂದಾಗಿ ಮುನ್ಸೂಚನೆಗಿಂತ ಮುಂಚಿತವಾಗಿಯೆ ಸಾಗರಗಳ ಮಟ್ಟವು ವೇಗವಾಗಿ ಏರುತ್ತಿದೆ ಎಂದು ಸಂಶೋಧನಾ ಕೇಂದ್ರದ ವರದಿಯೊಂದು ಉಲ್ಲೇಖಿಸಿದೆ. ರಾಷ್ಟ್ರಗಳು ಈ ಪ್ರವೃತ್ತಿಯನ್ನು ಹಿಮ್ಮೆಟ್ಟಿಸುವುದು ಕಷ್ಟಸಾಧ್ಯ, ಏಕೆಂದರೆ ಸರ್ಕಾರಗಳು ಕ್ರಮಕೈಗೊಳ್ಳುವುದಕ್ಕಿಂತಲೂ ವೇಗವಾಗಿ ಹವಾಮಾನ ಬದಲಾವಣೆಯಾಗುತ್ತಿದೆ ಎಂದು ಒತ್ತಿ ಹೇಳಿದರು. 2050 ರ ವೇಳೆಗೆ 300 ದಶಲಕ್ಷ ಜನರು ಸಮುದ್ರ ನೀರಿನ ಪ್ರವಾಹಕ್ಕೆ ಒಳಗಾಗುತ್ತಾರೆ ಎಂದು ಸಂಶೋಧನೆ ಮುನ್ಸೂಚನೆ ನೀಡಿದೆ ಎಂದು ಎಚ್ಚರಿಸಿದರು.


"ಬಹು ಮುಖ್ಯವಾಗಿ ಏಷ್ಯಾ, ಜಪಾನ್, ಚೀನಾ, ಬಾಂಗ್ಲಾದೇಶ ಮತ್ತು ಭಾರತದ ಆಗ್ನೇಯ ಭಾಗಗಳು ಹೆಚ್ಚು ದುರ್ಬಲ ಪ್ರದೇಶಗಳಾಗಿವೆ ಹಾಗೂ ಥೈಲ್ಯಾಂಡ್ ದೇಶದ ಜನಸಂಖ್ಯೆಯ ಶೇಕಡಾ 10 ರಷ್ಟು ಸಮುದ್ರದಿಂದ ಪ್ರವಾಹಕ್ಕೆ ಸಿಲುಕುವ ಅಪಾಯವನ್ನು ಹೊಂದಿದೆ" ಎಂದು ಹೇಳಿದರು‌.


q

ಈ ಕುರಿತು ಇತ್ತೀಚೆಗೆ ಅಧ್ಯಯನ ನಡೆಸಿದ್ದ ಕ್ಲೈಮೇಟ್ ಸೆಂಟ್ರಲ್ ಸಂಸ್ಥೆ, ನೇಚರ್ ಕಮ್ಯುನಿಕೇಷನ್ಸ್ ಜರ್ನಲ್ ನಲ್ಲಿ ಪ್ರಕಟಿಸಿರುವ ಅಂಕಿ-ಅಂಶವನ್ನು ಗಮನಿಸಿದರೆ ಹವಾಮಾನ ಬದಲಾವಣೆಯು ನಮ್ಮ ಊಹೆಗೂ ಮೀರಿದ ವೇಗದಲ್ಲಿ ಓಡುತ್ತಿದೆ. ಪ್ರಸ್ತುತ ಸ್ಥಿತಿಗತಿಗಳನ್ನು ಗಮನಿಸಿದರೆ ಇದರಿಂದ ನಮ್ಮ ಭೂಮಿಗೆ ದೊಡ್ಡ ಅಪಾಯವಿದೆ ಎಂಬುದು ಸ್ಪಷ್ಟವಾಗಿದೆ ಎಂದು ಗುಟೆರೆಸ್ ಹೇಳಿದ್ದಾರೆ.


ಈ ಕುರಿತು ಸಂಯುಕ್ತ ರಾಷ್ಟ್ರ ಸಂಸ್ಥೆ ಹೆಚ್ಚು ಬದ್ಧವಾಗಿದ್ದು, ಈಗಾಗಲೇ ವಿಜ್ಞಾನಿಗಳು ಹೇಳಿರುವಂತೆ ಶತಮಾನದ ಅಂತ್ಯದವರೆಗೂ 1.5 ಡಿಗ್ರಿಗಳಷ್ಟು ಹೆಚ್ಚುತ್ತಿರುವ ತಾಪಮಾನದಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮವನ್ನು ಅನುಸರಿಸುವಲ್ಲಿ ಸರ್ಕಾರಗಳು, ವ್ಯಾಪಾರ ಸಮುದಾಯ, ನಾಗರೀಕ ಸಮಾಜ ಹಾಗೂ ಸ್ಥಳೀಯ ಪ್ರಾಧಿಕಾರಗಳತ್ತ ಗಮನಹರಿಸಲು ಮುಂದಾಗಲು ಚಿಂತಿಸಿದೆ. ಅದು ಸಾಧ್ಯವಾಗಬೇಕಾದರೆ 2050 ರ ವೇಳೆಗೆ ನಮ್ಮಲ್ಲಿ ಇಂಗಾಲ ತಟಸ್ಥರಾಗಿರಬೇಕು ಹಾಗೂ ಮುಂದಿನ ದಶಕದಲ್ಲಿ ಹೊರಸೂಸುವಿಕೆಯನ್ನು 45% ರಷ್ಟು ಕಡಿಮೆಗೊಳಿಸಬೇಕು ಎಂದರು.


ಇದನ್ನು ಸಾಧಿಸಲು ಸಾಕಷ್ಟು ರಾಜಕೀಯ ಬದ್ಧತೆಗಳ ಅವಶ್ಯಕತೆಯಿದೆ. ಇದಕ್ಕಾಗಿ, ರಾಷ್ಟ್ರಗಳು ಇಂಗಾಲದ ಮೇಲೆ ಬೆಲೆ ನಿಗದಿಪಡಿಸಬೇಕು ಎಂದು ಒತ್ತಿ ಹೇಳಿದರು.


"ನಾವು ಪಳೆಯುಳಿಕೆ ಇಂಧನಗಳಿಗೆ ಸಬ್ಸಿಡಿಗಳನ್ನು ನಿಲ್ಲಿಸಬೇಕಾಗಿದೆ ಹಾಗೂ ಭವಿಷ್ಯದಲ್ಲಿ ಕಲ್ಲಿದ್ದಲನ್ನು ಆಧರಿಸಿದ ಹೊಸ ವಿದ್ಯುತ್ ಸ್ಥಾವರಗಳ ನಿರ್ಮಾಣವನ್ನು ನಿರ್ಬಂಧಿಸಬೇಕು. ಈ ವಿಚಾರವು ಪ್ರಪಂಚದ ಹಲವು ಭಾಗಗಳಲ್ಲಿ ಸೂಕ್ಷ್ಮ ಪ್ರಶ್ನೆಯಾಗಬಹುದು, ಏಕೆಂದರೆ ಪೂರ್ವ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ದಕ್ಷಿಣ ಏಷ್ಯಾದಲ್ಲಿ ವಿದ್ಯುತ್ ಉತ್ಪಾದನೆಗೆ ಹಲವಾರು ಕಲ್ಲಿದ್ದಲು ಸ್ಥಾವರಗಳನ್ನು ನಿರ್ಮಿಸುವ ಯೋಜನೆಗಳಿವೆ.


ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ರಾಷ್ಟ್ರಗಳು ಕಲ್ಲಿದ್ದಲಿನ ಅತಿಯಾದ ಅವಲಂಬನೆಯಿಂದ ಹೊರಬರಬೇಕಾಗಿದೆ ಎಂದು ಗುಟೆರೆಸ್ ಹೇಳಿದರು.


ಹವಾಮಾನ ವೈಪರೀತ್ಯಕ್ಕೆ ಕಾರಣವಾಗುವ ಅತ್ಯಂತ ದುರ್ಬಲ ಪ್ರದೇಶಗಳಲ್ಲಿರುವ ರಾಷ್ಟ್ರಗಳು ಇಂಗಾಲದ ಬೆಲೆಗಳು, ಪಳೆಯುಳಿಕೆ ಇಂಧನಗಳಿಗೆ ಸಬ್ಸಿಡಿಗಳನ್ನು ನಿಲ್ಲಿಸುವುದು ಮತ್ತು ಕಲ್ಲಿದ್ದಲು ವಿದ್ಯುತ್ ಸ್ಥಾವರಗಳ ನಿರ್ಮಾಣವನ್ನು ನಿಲ್ಲಿಸುವುದರಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಅವರು ಹೇಳಿದರು.

Want to make your startup journey smooth? YS Education brings a comprehensive Funding Course, where you also get a chance to pitch your business plan to top investors. Click here to know more.

Clap Icon0 Shares
 • +0
  Clap Icon
Share on
close
Clap Icon0 Shares
 • +0
  Clap Icon
Share on
close
Share on
close