ಕೋವಿಡ್-19‌ ಲಸಿಕೆ ಅಭಿವೃದ್ಧಿಪಡಿಸುತ್ತಿರುವ 7 ಭಾರತೀಯ ಔಷಧ ಸಂಸ್ಥೆಗಳು

ಭಾರತದಲ್ಲಿ ಕೊರೊನಾವೈರಸ್‌ಗೆ ಲಸಿಕೆ ಕಂಡುಹಿಡಿಯಲು ಭಾರತ್ ಬಯೋಟೆಕ್, ಸೇರಂ ಇನ್ಸ್ಟಿಟ್ಯೂಟ್, ಝೈಡಸ್ ಕ್ಯಾಡಿಲಾ, ಪ್ಯಾನೇಸಿಯಾ ಬಯೋಟೆಕ್, ಇಂಡಿಯನ್ ಇಮ್ಯುನೊಲಾಜಿಕಲ್ಸ್, ಮೈನ್ವಾಕ್ಸ್ ಮತ್ತು ಬಯೋಲಾಜಿಕಲ್ ಇ ಕಂಪನಿಗಳು ಸ್ಪರ್ಧಿಸುತ್ತಿವೆ.

ಕೋವಿಡ್-19‌ ಲಸಿಕೆ ಅಭಿವೃದ್ಧಿಪಡಿಸುತ್ತಿರುವ 7 ಭಾರತೀಯ ಔಷಧ ಸಂಸ್ಥೆಗಳು

Monday July 20, 2020,

2 min Read

14 ದಶಲಕ್ಷಕ್ಕೂ ಅಧಿಕ ಜನರನ್ನು ಸೋಂಕಿತರನ್ನಾಗಿಸಿದ ಕೊರೊನಾವೈರಸ್‌ ವಿರುದ್ಧ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಭಾರತದ 7 ಔಷಧ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿದೆ.


ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಸಂಸ್ಥೆಗಳಲ್ಲಿ ಭಾರತ್ ಬಯೋಟೆಕ್, ಸೇರಂ ಇನ್ಸ್ಟಿಟ್ಯೂಟ್, ಝೈಡಸ್ ಕ್ಯಾಡಿಲಾ, ಪ್ಯಾನೇಸಿಯಾ ಬಯೋಟೆಕ್, ಇಂಡಿಯನ್ ಇಮ್ಯುನೊಲಾಜಿಕಲ್ಸ್, ಮೈನ್ವಾಕ್ಸ್ ಮತ್ತು ಬಯೋಲಾಜಿಕಲ್ ಇ ಕಂಪನಿಗಳು ಸೇರಿವೆ.




ಸಾಮಾನ್ಯವಾಗಿ ಲಸಿಕೆ ಅಭಿವೃದ್ಧಿಪಡಿಸಲು ಹಲವಾರು ವರ್ಷಗಳ ಪರೀಕ್ಷೆ ಮತ್ತು ದೊಡ್ಡ ಮಟ್ಟದಲ್ಲಿ ಉತ್ಪಾದಿಸಲು ಹೆಚ್ಚಿನ ಸಮಯದ ಅಗತ್ಯವಿರುತ್ತದೆ. ಆದರೆ ಕೋವಿಡ್‌-19 ಮಾಹಾಮಾರಿಯನ್ನು ತಡೆಯುವ ಹೊಣೆ ವಿಜ್ಞಾನಿಗಳ ಮೇಲಿರುವುದರಿಂದ ಕೆಲವು ತಿಂಗಳ ಒಳಗೆ ಲಸಿಕೆ ಅಭಿವೃದ್ಧಿಪಡಿಸಬೇಕಾದ ಅನಿವಾರ್ಯತೆ ಎದುರಾಗಿದೆ.


ಭಾರತ ಬಯೋಟೆಕ್‌ನ ಕೋವಾಕ್ಸಿನ್‌ ಲಸಿಕೆಗೆ ಈಗಾಗಲೇ ಮಾನವ ಪ್ರಯೋಗದ ಹಂತ 1 ಮತ್ತು 2 ಕ್ಕೆ ಅನುಮತಿ ದೊರೆತಿದ್ದು, ಪರೀಕ್ಷೆಗಳು ಶುರುವಾಗಿವೆ.


ಸೇರಂ ಸಂಸ್ಥೆಯು ಅಸ್ಟ್ರಾಝೆನೆಕಾ ಆಕ್ಸ್‌ಫರ್ಢ್‌ ಎಂಬ ಲಸಿಕೆ ತಯಾರಿಸುತ್ತಿದ್ದು, ಈ ವರ್ಷದ ಅಂತ್ಯದೊಳಗೆ ಲಸಿಕೆ ಸಿದ್ಧವಾಗಬಹುದು ಎಂದು ತಿಳಿಸಿದೆ.


ಝೈಡಸ್‌ ಕ್ಯಾಡಿಲಾ ಸಂಸ್ಥೆಯು ಝೈಕೋವ್‌-ಡಿ ಲಸಿಕೆಯ ಕ್ಲಿನಿಕಲ್‌ ಟ್ರಯಲ್‌ಗಳನ್ನು ಮುಂದಿನ 7 ತಿಂಗಳುಗಳ ಒಳಗೆ ಪೂರ್ಣಗೊಳಿಸಲು ಬಯಸಿದ್ದು, ಕಳೆದ ವಾರದಲ್ಲಿ ಮಾನವರ ಮೇಲಿನ ಪ್ರಯೋಗವನ್ನು ಆರಂಭಿಸಿದೆ.


ಲಸಿಕೆ ಅಭವೃದ್ಧಿಪಡಿಸಲು ಯುಎಸ್‌ ಮೂಲದ ರೇಫನಾ ಇಂಕ್‌ನೊಂದಿಗೆ ಐರ್ಲೆಂಡ್‌ನಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ಯಾನೇಸಿಯಾ ಬಯೋಟೆಕ್ ಜೂನ್‌ನಲ್ಲಿ ತಿಳಿಸಿತ್ತು.


ಎನ್‌ಡಿಡಿಬಿಯ ಅಂಗಸಂಸ್ಥೆಯಾದ ಇಂಡಿಯನ್‌ ಇಮ್ಮ್ಯುನೊಲಾಜಿಕಲ್‌, ಆಸ್ಟ್ರೇಲಿಯಾದ ಗ್ರಿಫಿಥ್‌ ವಿಶ್ವವಿದ್ಯಾಲಯದ ಜತೆ ಕೋವಿಡ್‌-19 ಲಸಿಕೆ ಅಭಿವೃದ್ಧಿಪಡಿಸುವ ಒಪ್ಪಂದಕ್ಕೆ ಸಹಿ ಹಾಕಿದೆ.


ಇತರ ಪ್ರಮುಖ ಔಷಧ ಸಂಸ್ಥೆಗಳಾದ ಮಿನ್ವ್ಯಾಕ್ಸ್‌ ಮಾಗೂ ಬಯೊಲಾಜಿಕಲ್‌ ಈ ಕಂಪನಿಗಳ ಸಹ ಕೋವಿಡ್‌-19 ಲಸಿಕೆ ಅಭಿವೃದ್ದಿಪಡಿಸುವದರೆಡೆ ಕೆಲಸ ಮಾಡುತ್ತಿವೆ.


ಜಾಗತಿಕವಾಗಿ ವಿಶ್ವ ಆರೋಗ್ಯ ಸಂಸ್ಥೆ 140 ವ್ಯಾಕ್ಸಿನ್‌ ಕ್ಯಾಂಡಿಡೇಟ್‌ಗಳ ಮೇಲೆ ನಿಗಾ ಇರಿಸಿದ್ದು, ಅದರಲ್ಲಿ ಸುಮಾರ 24 ಲಸಿಕೆಗಳು ಮಾನವ ಪ್ರಯೋಗದ ವಿವಿಧ ಹಂತದಲ್ಲಿವೆ.


ಚೀನಾದ ಸಿನೊವಾಕ್‌ ಬಯೋಟೆಕ್‌ ಬ್ರೇಜಿಲ್‌ನಲ್ಲಿ 3 ನೇ ಹಂತದ ಪರೀಕ್ಷೆ ನಡೆಸುತ್ತಿದ್ದು, ಯುನಿವರ್ಸಿಟಿ ಆಫ್‌ ಆಕ್ಸ್‌ಫರ್ಡ್‌/ಅಸ್ಟ್ರಾಝೆನೆಕಾ ಯುಕೆನಲ್ಲಿ ಹಂತ 2/3 ರ ಪರೀಕ್ಷೆ ಮತ್ತು ಉತ್ತರ ಆಫ್ರಿಕಾ ಮತ್ತು ಬ್ರೇಜಿಲ್‌ನಲ್ಲಿ 3 ನೇ ಹಂತದ ಪರೀಕ್ಷೆಯಲ್ಲಿ ನಿರತವಾಗಿದೆ.


ಅಮೇರಿಕಾದ ಮಾಡರ್ನಾ ಸಂಸ್ಥೆ ಈ ತಿಂಗಳಿನಲ್ಲಿ 3 ನೇ ಹಂತದ ಪರೀಕ್ಷೆಯನ್ನು ಆರಂಭಿಸಲಿದೆ.