ಚಿತ್ರ ಪಟಗಳ ಕೂಲಂಕುಷವಾದ ಅಧ್ಯಯನದಿಂದ ವಿಕ್ರಂ ಲ್ಯಾಂಡರ್‌ ಪತ್ತೆಮಾಡಿದೆ: ಸುಬ್ರಮಣಿಯನ್

ಪ್ರತಿದಿನ ಸುಮಾರು ಎಂಟುಗಂಟೆಗಳ ಕಾಲ ತಪಸ್ಸಿನಂತೆ ಕುಳಿತು ತಮ್ಮ ಎರಡು ಲ್ಯಾಪ್ ಟಾಪ್ ಗಳ ಮೂಲಕವೇ ಚಂದ್ರಯಾನ 2 ರ ವಿಕ್ರಂ ಲ್ಯಾಂಡರ್ ನ ಅವಶೇಷಗಳನ್ನು ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಪತ್ತೆಮಾಡಿದವರು ಮಧುರೈ ಮೂಲದ ಸಾಫ್ಟವೇರ್ ಎಂಜಿನಿಯರ್ ಆದ ಷಣ್ಮುಗ ಸುಬ್ರಮಣಿಯನ್.

ಚಿತ್ರ ಪಟಗಳ ಕೂಲಂಕುಷವಾದ ಅಧ್ಯಯನದಿಂದ ವಿಕ್ರಂ ಲ್ಯಾಂಡರ್‌ ಪತ್ತೆಮಾಡಿದೆ: ಸುಬ್ರಮಣಿಯನ್

Thursday December 05, 2019,

2 min Read

33 ವರ್ಷದ ಷಣ್ಮುಗ ಅವರು ಮೂಲತಃ ಓರ್ವ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪಧವೀಧರರು. ಆದರೆ ಅವರ ಈ ಸಾಧನೆಯು ನಾಸಾ ಹೊರತಂದ ಚಂದ್ರನ ಅಂಗಳದ ದೈತ್ಯಗಾತ್ರದ ಚಿತ್ರ ಪಟಗಳ ಕೂಲಂಕುಷವಾದ ಅಧ್ಯಯನದಿಂದ ದಕ್ಕಿರುವುದೇ ಹೊರತು ಬೇರಾವುದೇ ಉತ್ತಮ ಗುಣಮಟ್ಟದ ತಂತ್ರಜ್ಞಾನ ಬಳಸಿದ ಉಪಕರಣಗಳಿಂದಾಗಿ ಅಲ್ಲ. ಸುಮಾರು ಮೂರು ವಾರಗಳ ಕಠಿಣ ಪರಿಶ್ರಮವೇ ಅವರ "ಯುರೇಕಾ" ಸಂದರ್ಭಕ್ಕೆ ಕಾರಣವಾಗಿದೆ.


ಷಣ್ಮುಗ ಸುಬ್ರಮಣಿಯನ್ (ಚಿತ್ರಕೃಪೆ: ಫೇಸ್‌ ಬುಕ್)




ದೇವಾಲಯಗಳ ನಗರ ಮಧುರೈ ನಿಂದ ಬಂದ ಷಣ್ಮುಗಮ್ ಚಂದ್ರನ ಮೇಲೆ ಅಪ್ಪಳಿಸಿದ ವಿಕ್ರಂ ಲ್ಯಾಂಡರ್ ನ ಭಾಗಗಳನ್ನು ಹುಡುಕಲು ತಾವು ತಮ್ಮ ಎರಡು ಲ್ಯಾಪ್ ಟಾಪ್ ಗಳನ್ನು ಹೊರತುಪಡಿಸಿ ಬೆರೆಯೇನು ಬಳಸಿಲ್ಲ ಎಂದಿದ್ದಾರೆ.


ಒಂದು ಹಂತದಲ್ಲಿ, ಚಂದ್ರನ ಮೇಲ್ಮೈಯಲ್ಲಿ ಒಂದು ನಿರ್ದಿಷ್ಟ ಸ್ಥಳವು ಲ್ಯಾಂಡರ್ ಅಪಘಾತದ ಸ್ಥಳವಲ್ಲದಿದ್ದರೆ, ಅದು ಬೇರೆ ಏನೂ ಆಗಿರಲಿಕ್ಕಿಲ್ಲ ಎನ್ನುವ ಮಟ್ಟದ ಆತ್ಮವಿಶ್ವಾಸ ಅವರ ಸಮಗ್ರ ವಿಶ್ಲೇಷಣೆಯನ್ನು ಕೈಗೊಂಡ ನಂತರ ಹುಟ್ಟಿತು.


ಪ್ರತಿ ದಿನ ಉನ್ನತ ಐಟಿ ಸಂಸ್ಥೆಯೊಂದರ ಕೆಲಸದಿಂದ ಹಿಂದಿರುಗಿದ ನಂತರ, ಅವರು ರಾತ್ರಿ 10 ರಿಂದ ಬೆಳಿಗ್ಗೆ 2 ರವರೆಗೆ ಡೇಟಾವನ್ನು ವಿಶ್ಲೇಷಿಸುತ್ತಿದ್ದರು ಮತ್ತು ಮತ್ತೆ ಕಚೇರಿಗೆ ಹೋಗುವ ಮೊದಲು ಬೆಳಿಗ್ಗೆ 8 ರಿಂದ ಬೆಳಿಗ್ಗೆ 10 ರವರೆಗೆ ಡೇಟಾವನ್ನು ವಿಶ್ಲೇಷಿಸುತ್ತಿದ್ದರು.


ನಾಸಾಗೆ ಇಮೇಲ್ ಕಳುಹಿಸುವ ಮೊದಲು, ಅವರು ಸಮಗ್ರವಾದ ವಿಶ್ಲೇಷಣೆಯನ್ನು ಕೈಗೊಂಡಿದ್ದರು.


ಈ ವಿಶ್ಲೇಷಣೆಯನ್ನು ತೆಗೆದುಕೊಳ್ಳಲು ಪ್ರೇರೇಪಿಸಿದ ವಿಷಯದ ಬಗ್ಗೆ, ಮಾತನಾಡಿದ ಅವರು "ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಇಸ್ರೋದ ಉಪಗ್ರಹ ಉಡಾವಣೆಯನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದೆ ಮತ್ತು ಈ ಉಡಾವಣೆಗಳನ್ನು ನೋಡುವುದರಿಂದ ಇನ್ನು ಮಹತ್ತರ ವಾದುದನ್ನು ಅನ್ವೇಷಿಸಲು ನನ್ನಲ್ಲಿ ಒಂದು ರೀತಿಯ ಆಸಕ್ತಿಯನ್ನು ಅದು ಹುಟ್ಟುಹಾಕಲು ಸಹಕರಿಸಿತು" ಎಂದು ಹೇಳಿದರು.


“ನನ್ನ ಕಚೇರಿ ಸಮಯದ ಹೊರತಾಗಿ (ಲೆನಾಕ್ಸ್ ಇಂಡಿಯಾ ಟೆಕ್ನಾಲಜಿ ಸೆಂಟರ್ನಲ್ಲಿ) ಉಳಿದ ಸಮಯದಲ್ಲಿ ನಾಸಾ ಮತ್ತು ಕ್ಯಾಲಿಫೋರ್ನಿಯಾ ಮೂಲದ ಸ್ಪೇಸ್‌ ಎಕ್ಸ್ ಏನು ಕೆಲಸ ಮಾಡುತ್ತಿದೆ ಎಂದು ನಾನು ಕುತೂಹಲದಿಂದ ವೀಕ್ಷಿಸುತ್ತಿದ್ದೆ" ಎಂದು ಸುಬ್ರಮಣಿಯನ್ ಹೇಳಿದರು.


ಈ ಆಸಕ್ತಿಯು ಅಂತಿಮವಾಗಿ ಅವರನ್ನು ಚಂದ್ರಯಾನ 2 ಉಪಗ್ರಹದ ದತ್ತಾಂಶದಲ್ಲಿ ಕೆಲಸ ಮಾಡಲು ಪ್ರೇರೇಪಿಸಿತು.


ಮೆಕ್ಯಾನಿಕಲ್ ಎಂಜಿನಿಯರಿಂಗ್‌ಗೆ ರಾಕೆಟ್ ವಿಜ್ಞಾನಕ್ಕೂ ಸಂಪರ್ಕವಿದೆ ಮತ್ತು ಅದು ನನ್ನ ರಾಕೆಟ್ ವಿಜ್ಞಾನದ ತಿಳುವಳಿಕೆಯಲ್ಲಿ ಒಂದು ಪಾತ್ರವನ್ನು ವಹಿಸಿದೆ ಎಂದು ಅವರು ಹೇಳಿದರು.


ಅವರ ಕುಟುಂಬದ ಸದಸ್ಯರಿಂದ ಮತ್ತು ಸ್ನೇಹಿತರಿಂದ "ಶಾನ್" ಎಂದು ಪ್ರೀತಿಯಿಂದ ಕರೆಯಲ್ಪಡುವ ಸುಬ್ರಮಣಿಯನ್, ಕ್ರ್ಯಾಶ್ ಸೈಟ್ ಅನ್ನು ಸಕಾರಾತ್ಮಕವಾಗಿ ಗುರುತಿಸಿ ಮಿಂಚಂಚೆ ಕಳುಹಿಸಿದ ಕೂಡಲೇ ನಾಸಾದಿಂದ ಉತ್ತರಕ್ಕಾಗಿ ಕಾಯುತ್ತಿದ್ದರು.


"ಅವರು ತಮ್ಮ ಕಡೆಯಿಂದ ಎಲ್ಲರೀತಿಯ ಪರಿಶೀಲನೆ ಮಾಡಿದ ನಂತರ ಉತ್ತರಿಸುತ್ತಾರೆ ಎಂಬುವುದು ನನಗೆ ತಿಳಿದಿದ್ದತು ಅಂತಿಮವಾಗಿ ಮಂಗಳವಾರ ಮುಂಜಾನೆ 3 ಗಂಟೆ ಸುಮಾರಿಗೆ ನಾನು ಅವರಿಂದ ಮಿಂಚಂಚೆ ಸ್ವೀಕರಿಸಿದೆ" ಎಂದು ಷಣ್ಮುಗಮ್ ಹೇಳಿದರು.


ಸುಬ್ರಹ್ಮಣಿಯನ್ ಅವರ ಕುಟುಂಬದ ಯಾವುದೇ ಸದಸ್ಯರು ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸೇರಿದವರಲ್ಲ, ಅವರಲ್ಲಿ ಮೊಳಕೆಯೊಡೆದ ಈ ಆಸಕ್ತಿಯೇ ಇದಕ್ಕೆಲ್ಲಾ ಕಾರಣ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.


ಮಾಜಿ ಇಸ್ರೋ ಉನ್ನತ ವಿಜ್ಞಾನಿ ಮಾಯಿಲ್ಸಾಮಿ ಅನ್ನದುರೈ ಅವರು ನನ್ನ ಕೆಲಸವನ್ನು ಮೆಚ್ಚಿ ಸಂದೇಶವನ್ನು ಕಳಿಸಿದ್ದಾರೆ ಮತ್ತು ನಾನು ಕೆಲಸ ಮಾಡುವ ಕಚೇರಿ ಕೂಡ ನನ್ನ ಬೆನ್ನುತಟ್ಟಿದೆ," ಎಂದು ಅವರು ಹೇಳಿದರು,


ವೃತ್ತಿಯಲ್ಲಿ ಅಪ್ಲಿಕೇಶನ್ ಡೆವಲಪರ್ ಆಗಿರುವ ಸುಬ್ರಮಣಿಯನ್ ಅವರುಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕ್ಷೇತ್ರಕ್ಕೆ ಸ್ಥಳಾಂತರಗೊಳ್ಳುತ್ತಾರೆಯೇ ಎಂದು ಕೇಳಿದಾಗ ತಮ್ಮ ಈ ಉತ್ಸಾಹವನ್ನು "ನನ್ನ ಕೆಲಸದ ಹೊರಗೆ" ಮಾತ್ರ ಮುಂದುವರಿಸುವುದಾಗಿ ಹೇಳಿದರು.


"ನಾನು ಇನ್ನೂ ಹೆಚ್ಚು ಅಧ್ಯಯನ ಮಾಡಬೇಕಾಗಿದೆ," ಎಂದು ವಿನಮ್ರವಾಗಿ ಹೇಳುವ ಷಣ್ಮುಗ ಸುಬ್ರಮಣಿಯನ್ ಅವರ ತಂದೆ ನಿವೃತ್ತ ಪ್ರೋವಿಡೆಂಟ್ ಫನ್ಡ್ ನಿರೀಕ್ಷಕರು ಮತ್ತು ತಾಯಿ ಶಾಲಾ ಶಿಕ್ಷಕಿ. ಅವರಿಗೆ ಚೆನ್ನೈನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಸಹೋದರಿಯೂ ಇದ್ದಾರೆ.


ನಾಸಾ ತನ್ನ ಆವಿಷ್ಕಾರಕ್ಕಾಗಿ ಸುಬ್ರಮಣಿಯನ್ ಅವರಿಗೆ ಕ್ರೆಡಿಟ್ ನೀಡುತ್ತಾ, ಕ್ರ್ಯಾಶ್ ಸೈಟ್ ನನ್ನು ‘ಎಸ್' ಎಂಬ ಹೆಸರಿನಿಂದ ಗುರುತಿಸಿದೆ.


"ವಿಕ್ರಮ್ ಲ್ಯಾಂಡರ್ ನ ಅವಶೇಷಗಳ ಆವಿಷ್ಕಾರವನ್ನು ಕೈಗೊಂಡ ನಿಮಗೆ ಧನ್ಯವಾದಗಳು” ಎಂದು ನಾಸಾ ಷಣ್ಮುಗಮ್ ಗೆ ಮಿಂಚಂಚೆ ಕಳಿಸಿದೆ.


ಎಲ್ ಆರ್ ಓ ಸಿ ಸಂಸ್ಥೆಯು ವಿಕ್ರಂ ಚಂದ್ರನಲ್ಲಿ ಅಪ್ಪಳಿಸುವ ಮೊದಲು ಮತ್ತು ನಂತರ ತೆಗೆದ ಚಿತ್ರಗಳಲ್ಲಿನ ಬದಲಾವಣೆಗಳನ್ನು ಅಧ್ಯಯನ ಮಾಡಿ ಷಣ್ಮುಗ ಸುಬ್ರಮಣಿಯನ್ ಅವರ ಆವಿಷ್ಕಾರ ವನ್ನು ದೃಢೀಕರಿಸಿದೆ.