ಮಹಿಳಾ ಭದ್ರತಾ ಸಿಬ್ಬಂದಿಗಳನ್ನು ಸಜ್ಜುಗೊಳಿಸುತ್ತಿರುವ ಹುಬ್ಬಳ್ಳಿಯ ಶ್ರಾವಣಿ ಪವಾರ ಅವರ ಸೇಫ್ ಹ್ಯಾಂಡ್ಸ್ 24x7

ಇಲ್ಲಿಯವರೆಗೆ, ಶ್ರಾವಣಿ ಪವಾರ ಅವರ ಸ್ಟಾರ್ಟಪ್ ‘ಸೇಫ್ ಹ್ಯಾಂಡ್ಸ್ 24x7ʼ ಸುಮಾರು 600 ಮಹಿಳೆಯರಿಗೆ ತರಬೇತಿ ನೀಡಿದೆ ಮತ್ತು ಕರ್ನಾಟಕ, ಗೋವಾ, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಸೇವೆಗಳನ್ನು ಒದಗಿಸುತ್ತಿದೆ.

ಮಹಿಳಾ ಭದ್ರತಾ ಸಿಬ್ಬಂದಿಗಳನ್ನು ಸಜ್ಜುಗೊಳಿಸುತ್ತಿರುವ ಹುಬ್ಬಳ್ಳಿಯ ಶ್ರಾವಣಿ ಪವಾರ ಅವರ ಸೇಫ್ ಹ್ಯಾಂಡ್ಸ್ 24x7

Tuesday February 18, 2020,

2 min Read

ಮಹಿಳಾ ಭದ್ರತಾ ಸಿಬ್ಬಂದಿಯನ್ನು ನೀವು ಎಷ್ಟು ಬಾರಿ ನೋಡಿದ್ದೀರಿ? ದೇಶದ ಪುರುಷರ ಭದ್ರತಾ ಸಿಬ್ಬಂದಿಗೆ ಹೋಲಿಸಿದರೆ ಈ ಸಂಖ್ಯೆ ಕಡಿಮೆ ಇರಬಹುದು. ಅನೇಕ ಉದ್ಯೋಗಗಳು - ಮುಂಬಯಿಯಲ್ಲಿ ಸ್ಥಳೀಯ ರೈಲನ್ನು ಚಾಲನೆ ಮಾಡುವ ಮೋಟಾರು ಚಾಲಕ ಅಥವಾ ಬಿಎಂಟಿಸಿ ಬಸ್‌ಗಳಲ್ಲಿ ಬಸ್ ಚಾಲಕವೃತ್ತಿಯನ್ನು - ಮುಖ್ಯವಾಗಿ ಪುರುಷರು ತೆಗೆದುಕೊಳ್ಳುತ್ತಾರೆ. ಮತ್ತು ದಶಕಗಳಲ್ಲಿ, ಇದು ಒಂದು ಮೂಢನಂಬಿಕೆಯಂತಾಗಿದ್ದು, ಈ ಯಾವ ವೃತ್ತಿಗಳೂ ಮಹಿಳೆಯರಿಂದ ಗಣನೀಯ ಮಟ್ಟದಲ್ಲಿ ಅಲಂಕೃತವಾಗಲಿಲ್ಲ.


ಈ ಒಂದೇ ತೆರನಾದ ಯೋಚನೆಯ ರೂಢಿಯನ್ನು ಮುರಿಯಲು, 33 ವರ್ಷದ ಉದ್ಯಮಿ ಮತ್ತು ಸೇಫ್ ಹ್ಯಾಂಡ್ಸ್ 24x7 ಸ್ಥಾಪಕಿ ಶ್ರಾವಣಿ ಪವಾರ ಮಹಿಳೆಯರಿಗೆ ಸೆಕ್ಯುರಿಟಿ ಗಾರ್ಡ್ ಆಗಲು ತರಬೇತಿ ನೀಡುತ್ತಿದ್ದಾರೆ. ಈ ಮಹಿಳೆಯರು ಹೆಚ್ಚಾಗಿ ಸಮಾಜದ ಆರ್ಥಿಕವಾಗಿ ಸದೃಢವಲ್ಲದ ಮತ್ತು ದುರ್ಬಲ ವರ್ಗದವರು, ಮತ್ತು ಈ ಸ್ಟಾರ್ಟ್‌ಅಪ್‌ ನೀಡುವ ತರಬೇತಿಯು ಅವರಿಗೆ ಅಧಿಕಾರ ನೀಡುತ್ತದೆ, ಜೊತೆಗೆ ಹಣಕಾಸಿನ ನೆರವು ನೀಡುತ್ತದೆ.


ಧಾರವಾಡದವರಾದ ಶ್ರಾವಣಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಸಾಮಾಜಿಕ ಕಾರ್ಯ ವಿಷಯದಲ್ಲಿ ಪದವಿ ಪಡೆದು, ಹುಬ್ಬಳ್ಳಿಯ ದೇಶಪಾಂಡೆ ಸಾಮಾಜಿಕ ಉದ್ಯಮ ಕೇಂದ್ರದಿಂದ ತರಬೇತಿ ಪಡೆದು ಸೇಫ್ ಹ್ಯಾಂಡ್ಸ್ 24x7 ಸ್ಥಾಪಿಸಿದ್ದಾರೆ.


ಗುಂಪಿನಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು (ಚಿತ್ರಕೃಪೆ: ದಿ ಲಾಜಿಕಲ್ ಇಂಡಿಯನ್)


ಅವರ ತರಬೇತಿಯ ನಂತರ, ಈ ಮಹಿಳಾ ಭದ್ರತಾ ಸಿಬ್ಬಂದಿಗಳು ಆರಂಭಿಕವಾಗಿ ಲೇಡೀಸ್ ಹಾಸ್ಟೆಲ್, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಕೆಲವು ವಾಣಿಜ್ಯ ಸಂಕೀರ್ಣಗಳಲ್ಲಿ ಕೆಲಸ ಮಾಡುತ್ತಾರೆ.


ದಿ ಲಾಜಿಕಲ್ ಇಂಡಿಯನ್ ಜೊತೆ ಮಾತನಾಡಿದ ಶ್ರಾವಣಿ, "ನಾವು ನಗರದೊಳಗಿನ ಗ್ರಾಹಕರ ಮೇಲೆ ಕೇಂದ್ರೀಕರಿಸುತ್ತೇವೆ ಇದರಿಂದ ನಮ್ಮ ಉದ್ಯೋಗಿಗಳಿಗೆ ಪ್ರಯಾಣಿಸಲು ಅನುಕೂಲವಾಗುತ್ತದೆ. ಸ್ಥಳೀಯ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ, ಇದರಿಂದ ಅವರು ತಮ್ಮ ಕುಟುಂಬದೊಂದಿಗೆ ಇರಲು ಮತ್ತು ಕೆಲಸ ಮಾಡಲು ಸಾಧ್ಯವಾಗುತ್ತದೆ. ನಾವು ಈ ಮಹಿಳೆಯರಿಗೆ ಸುರಕ್ಷಿತ ಮತ್ತು ಆರಾಮದಾಯಕವಾದ ರೀತಿಯಲ್ಲಿ ಸ್ಥಳಗಳನ್ನು ಆರಿಸಿಕೊಳ್ಳುತ್ತೇವೆ ಮತ್ತು ಅವರು ಸುತ್ತಮುತ್ತಲಿನ ಜನರಿಗೆ ಅದೇ ಭಾವನೆಯನ್ನು ನೀಡಬಹುದು," ಎಂದು ಅವರು ಹೇಳಿದರು.


ಖಾಸಗಿ ಕಾವಲುಗಾರರ ನಿಯಂತ್ರಣ ಕಾಯ್ದೆ 2005 (ಪಿಎಸ್‌ಎಆರ್‌ಎ) ಪ್ರಕಾರ ಈ ಕಾವಲುಗಾರರಿಗೆ ಭಾರತೀಯ ಸೇನೆಯ ಮಾಜಿ ಸೈನಿಕರು ತರಬೇತಿ ನೀಡುತ್ತಾರೆ. ಹೆಚ್ಚುವರಿಯಾಗಿ, ಈ ಅಭ್ಯರ್ಥಿಗಳಿಗೆ ದೈಹಿಕ, ಮಾನಸಿಕ ತರಬೇತಿಯೊಂದಿಗೆ ಮತ್ತು ದಾಖಲೆಗಳ ನಿರ್ವಹಣೆ ಮತ್ತು ಇತರ ಕರ್ತವ್ಯಗಳ ಬಗ್ಗೆ ನಾಮಮಾತ್ರ ಭದ್ರತಾ ಸಿಬ್ಬಂದಿಯ ಕರ್ತವ್ಯದೊಂದಿಗೆ ತರಬೇತಿ ನೀಡಲಾಗುತ್ತದೆ.


ಡೆಕ್ಕನ್ ಹೆರಾಲ್ಡ್ ಪ್ರಕಾರ, ಶ್ರಾವಣಿಯ ಸ್ಟಾರ್ಟಪ್, ಸೇಫ್ ಹ್ಯಾಂಡ್ಸ್ 24x7, ಸುಮಾರು 600 ಮಹಿಳೆಯರಿಗೆ ತರಬೇತಿ ನೀಡಿದೆ ಮತ್ತು ವಾರ್ಷಿಕ 6 ಕೋಟಿ ರೂ. ವಹಿವಾಟು ನಡೆಸಿದೆ. ಇದು ಕರ್ನಾಟಕ, ಗೋವಾ, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಸೇವೆಗಳನ್ನು ಒದಗಿಸುತ್ತದೆ.


ಶ್ರಾವಣಿ ಪವಾರ್ (ಚಿತ್ರಕೃಪೆ: ಡೆಕ್ಕನ್ ಹೆರಾಲ್ಡ್)


ಪ್ರಾರಂಭದ ಫಲಾನುಭವಿಗಳಲ್ಲಿ ಒಬ್ಬರಾದ ರೂಪಾ ಚಲ್ವಾಡಿ (ಹೆಸರು ಬದಲಾಯಿಸಲಾಗಿದೆ) ಡೆಕ್ಕನ್ ಹೆರಾಲ್ಡ್‌ ಜೊತೆ ಮಾತನಾಡುತ್ತಾ,


“ನನ್ನ ಪತಿ, ಪಾರ್ಶ್ವವಾಯುವಿಗೆ ಒಳಗಾದಾಗ, ನಮ್ಮ ಕುಟುಂಬವು ಆರ್ಥಿಕ ಬಿಕ್ಕಟ್ಟಿಗೆ ಇಳಿಯಿತು. ನನಗೆ ಕೇವಲ 30 ವರ್ಷ. ಅನಾರೋಗ್ಯದ ಪತಿ ಮತ್ತು ಇಬ್ಬರು ಶಾಲೆಗೆ ಹೋಗುವ ಮಕ್ಕಳೊಂದಿಗೆ, ನಾನು ಜೀವನವನ್ನು ನಡೆಸಬೇಕಾಗಿತ್ತು. ಆದರೆ ಅಶಿಕ್ಷಿತೆಯಾಗಿರುವುದರಿಂದ, ನನಗೆ ದೇಶೀಯ ಸಹಾಯಕಳಾಗಿ ಕೆಲಸ ಮಾಡುವಂತಹ ಸೀಮಿತ ಆಯ್ಕೆಗಳಿವೆ, ಅದು ಕಡಿಮೆ ಆದಾಯ ಮತ್ತು ಉದ್ಯೋಗ ಭದ್ರತೆಯನ್ನು ಹೊಂದಿರಲಿಲ್ಲ. ಶ್ರಾವಣಿ ಮೇಡಂ ನನಗೆ ನೈತಿಕ ಬೆಂಬಲ ನೀಡಿದರು ಮತ್ತು 2010 ರಲ್ಲಿ ಮಹಿಳೆಯರ ವಸತಿ ನಿಲಯದಲ್ಲಿ ಭದ್ರತಾ ಸಿಬ್ಬಂದಿಯ ಕೆಲಸವನ್ನು ನೀಡಿದರು. ಇದು ನನಗೆ ಯೋಗ್ಯವಾದ ಆದಾಯ, ಇಎಸ್‌ಐ ಮತ್ತು ಇತರ ಪ್ರಯೋಜನಗಳನ್ನು ನೀಡಿತು. ಈಗ, ನಾನು ಚೆನ್ನಾಗಿ ನೆಲೆಸಿದ್ದೇನೆ ಮತ್ತು ಸೇಫ್‌ ಹ್ಯಾಂಡ್ಸ್‌ನ ಭಾಗವಾಗಲು ಹೆಮ್ಮೆಪಡುತ್ತೇನೆ," ಎಂದರು


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.