ನೋಯ್ಡಾ ಮೂಲದ ಸ್ಪೇಸ್‌ಟೆಕ್ ಸ್ಟಾರ್ಟ್‌ ಅಪ್ 20 ಮಿಲಿಯನ್ ರೈತರಿಗೆ ಉಪಗ್ರಹ ದತ್ತಾಂಶ ಮತ್ತು ನೆಲದ ಸಂವೇದಕಗಳ ಮೂಲಕ ಸಹಾಯ ಮಾಡುತ್ತಿದೆ

ಸ್ಪೇಸ್‌ ಟೆಕ್ ಸ್ಟಾರ್ಟ್ಅಪ್ ಕಂಪೆನಿಯಾದ ಸ್ಕೈಮೆಟ್ ಭಾರತದಾದ್ಯಂತ 20 ದಶಲಕ್ಷಕ್ಕೂ ಹೆಚ್ಚು ರೈತರಿಗೆ ತನ್ನ ಡೇಟಾ ಆಧಾರಿತ ಹವಾಮಾನ ಮುನ್ಸೂಚನೆಗಳೊಂದಿಗೆ ವಿವಿಧ ಬೆಳೆ ಬೆಳೆಯಲು ಸಹಾಯ ಮಾಡಿದೆ.

ನೋಯ್ಡಾ ಮೂಲದ ಸ್ಪೇಸ್‌ಟೆಕ್ ಸ್ಟಾರ್ಟ್‌ ಅಪ್ 20 ಮಿಲಿಯನ್ ರೈತರಿಗೆ ಉಪಗ್ರಹ ದತ್ತಾಂಶ ಮತ್ತು ನೆಲದ ಸಂವೇದಕಗಳ ಮೂಲಕ ಸಹಾಯ ಮಾಡುತ್ತಿದೆ

Friday December 06, 2019,

5 min Read

ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ವಿಕ್ರಮ್ ಸಾರಾಭಾಯ್ ಅವರ ಒಂದು ಅದ್ಭುತ ಮಾತನ್ನು ಹೇಳಿದ್ದಾರೆ,


“ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ ಬಾಹ್ಯಾಕಾಶ ಚಟುವಟಿಕೆಗಳ ಕುರಿತು ಪ್ರಶ್ನಿಸುವ ಕೆಲವರು ಇದ್ದಾರೆ. ನಮಗೆ ನಮ್ಮ ಉದ್ದೇಶದಲ್ಲಿ ಯಾವುದೇ ಅಸ್ಪಷ್ಟತೆ ಇಲ್ಲ. ಚಂದ್ರನ ಅನ್ವೇಷಣೆಯಲ್ಲಿ ಅಥವಾ ಗ್ರಹಗಳು ಅಥವಾ ಮಾನವಸಹಿತ ಬಾಹ್ಯಾಕಾಶ ಹಾರಾಟದಲ್ಲಿ ಆರ್ಥಿಕವಾಗಿ ಮುಂದುವರಿದ ರಾಷ್ಟ್ರಗಳೊಂದಿಗೆ ಸ್ಪರ್ಧಿಸುವ ಯೋಜನೆ ನಮಗಿಲ್ಲ. ಆದರೆ ನಾವು ರಾಷ್ಟ್ರೀಯವಾಗಿ ಅರ್ಥಪೂರ್ಣವಾದ ಪಾತ್ರವನ್ನು ವಹಿಸಬೇಕಾದರೆ, ಮನುಷ್ಯ ಮತ್ತು ಸಮಾಜದ ನೈಜ ಸಮಸ್ಯೆಗಳಿಗೆ ಸುಧಾರಿತ ತಂತ್ರಜ್ಞಾನಗಳನ್ನು ಅನ್ವಯಿಸುವಲ್ಲಿ ನಾವು ಯಾರಿಗೂ ಕಡಿಮೆಯಾಗಿರಬಾರದು ಎಂದು ನಮಗೆ ತಿಳಿದಿದೆ.”


ಜಾಗತಿಕ ನಾಯಕರೊಂದಿಗೆ ಸ್ಪರ್ಧಿಸುವ ಬಾಹ್ಯಾಕಾಶ ಚಟುವಟಿಕೆಗಳ ವಿಷಯದಲ್ಲಿ ನಾವು ಛಾಪು ಮೂಡಿಸಿದ್ದರೂ, ವಿಕ್ರಮ್ ಸಾರಾಭಾಯ್ ಅವರ ದೃಷ್ಟಿಯನ್ನು ಮರೆಯಲಾಗುವುದಿಲ್ಲ. ಇಸ್ರೋ ಮತ್ತು ಹಲವಾರು ಸ್ಪೇಸ್‌ಟೆಕ್ ಉದ್ಯಮಿಗಳು ಸಮಾಜ ಮತ್ತು ರಾಷ್ಟ್ರದ ಸುಧಾರಣೆಗಾಗಿ ಬಾಹ್ಯಾಕಾಶ ಆಧಾರಿತ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದಾರೆ. ನೋಯ್ಡಾ ಮೂಲದ ಸ್ಕೈಮೆಟ್ ಇದಕ್ಕೆ ಉದಾಹರಣೆಯಾಗಿದೆ.


ಇಷ್ಟು ವರ್ಷಗಳಲ್ಲಿ, ಅನಿರೀಕ್ಷಿತ ಮತ್ತು ಅನಿಯಮಿತ ಹವಾಮಾನ ಪರಿಸ್ಥಿತಿಗಳು ಹಾಕಿದ ಬಂಡಾವಾಳ ಮತ್ತು ಉತ್ಪನ್ನಗಳ ನಷ್ಟಕ್ಕೆ ಕಾರಣವಾಗಿವೆ. ಇದು ಹಣದುಬ್ಬರ ಮತ್ತು ರೈತರ ಆತ್ಮಹತ್ಯೆಗೆ ಕಾರಣವಾಗಿದೆ. ಈ ಬಿಕ್ಕಟ್ಟನ್ನು ತಗ್ಗಿಸುವಲ್ಲಿ ನಿಖರವಾದ ಹವಾಮಾನ ಮುನ್ಸೂಚನೆಗಳು ಸಹಾಯವಾಗಬಹುದು.


ಜತಿನ್ ಸಿಂಗ್ (ಎಡ) ಸಂವೇದಕ ಪಕ್ಕದಲ್ಲಿ ನಿಂತಿರುವುದು.


ಈ ಸಮಸ್ಯೆಯನ್ನು ಪರಿಹರಿಸಲು, ಸ್ಕೈಮೆಟ್ 7,000 ಎ ಡಬ್ಲೂ ಎಸ್ (ಸ್ವಯಂಚಾಲಿತ ಹವಾಮಾನ ಕೇಂದ್ರಗಳು) ಗಳನ್ನು ನೈಜ-ಸಮಯದ ಹವಾಮಾನ ಮತ್ತು ಬೆಳೆಯ ಮಾಹಿತಿಯನ್ನು ಪಡೆಯಲು ಹವಾಮಾನ ನಿಯತಾಂಕಗಳನ್ನು ಸಮೀಪದಲ್ಲಿ ಸ್ಥಾಪಿಸಿದೆ.


ಹವಾಮಾನ ಮಾಹಿತಿಯಲ್ಲದೆ, ನೈಜ-ಸಮಯದ ಹವಾಮಾನ ಆಧಾರಿತ ಸಲಹೆಯೂ ಕೂಡ ಲಭ್ಯವಿದೆ. ಬೆಳೆಗಳು, ನೀರಾವರಿ ವಿಧಾನಗಳು, ಕೀಟನಾಶಕಗಳು, ರಸಗೊಬ್ಬರಗಳು ಇತ್ಯಾದಿಗಳಿಗೆ ಸಂಬಂಧಿಸಿದಂತೆ ರೈತರಿಗೆ ಸಮಯಕ್ಕೆ ಸರಿಯಾಗಿ ಸೂಕ್ಷ್ಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸಹಾಯ ಮಾಡುತ್ತದೆ.


2003 ರಲ್ಲಿ ಜತಿನ್ ಸಿಂಗ್ ಸ್ಥಾಪಿಸಿದ ಸ್ಕೈಮೆಟ್ ಈಗ ಭಾರತದ 20 ರಾಜ್ಯಗಳಲ್ಲಿ ಕೆಲಸ ಮಾಡುತ್ತಿದೆ, ಹೆಚ್ಚಾಗಿ ದೇಶದ ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿ ಇದು ಕಾರ್ಯ ನಿರ್ವಹಿಸುತ್ತಿದೆ. ಈ ಕಂಪನಿಯು ಕೃಷಿ ಮತ್ತು ವಿಮೆಯಂತಹ ಕ್ಷೇತ್ರಗಳಲ್ಲಿ ಉಪಗ್ರಹ ಡೇಟಾವನ್ನು ಬಳಸಿ ಕೆಲಸ ಮಾಡುತ್ತದೆ.


ಸೋಷಿಯಲ್ ಸ್ಟೋರಿಯೊಂದಿಗೆ ಮಾತನಾಡಿದ ಜತಿನ್, "ನಾವು ಬ್ಯಾಂಕಿಂಗ್, ಕೃಷಿ ವಿಮೆ ಮತ್ತು ಮರುವಿಮೆ ಸೇವೆಗಳಲ್ಲಿನ ಅಪಾಯ ತಡೆಗಟ್ಟುವಿಕೆ, ಬೆಳೆ ಕಣ್ಗಾವಲು ಮತ್ತು ಮೇಲ್ವಿಚಾರಣೆ, ನವೀಕರಿಸಬಹುದಾದ ಇಂಧನ ಪೂರೈಕೆ ಮುನ್ಸೂಚನೆ ಮತ್ತು ಮಾಧ್ಯಮ ಪರಿಹಾರಗಳಂತಹ ಕ್ಷೇತ್ರಗಳಲ್ಲಿ ನಮ್ಮ ಸೇವೆಗಳನ್ನು ಒದಗಿಸುತ್ತೇವೆ" ಎಂದು ಹೇಳಿದರು.


ಸ್ಪೇಸ್‌ಟೆಕ್ ಕಂಪನಿಯು ಇಲ್ಲಿಯವರೆಗೆ ಭಾರತದಾದ್ಯಂತ 20 ದಶಲಕ್ಷಕ್ಕೂ ಹೆಚ್ಚು ರೈತರಿಗೆ ಸಹಾಯ ಮಾಡಿದೆ. ಅಲ್ಲದೆ, ಪಿಎಂ 2.5 ಮತ್ತು ಪಿಎಂ 10 ಅನ್ನು ಪತ್ತೆಹಚ್ಚಲು 55 ನಗರಗಳಲ್ಲಿ 300 ಕ್ಷೇತ್ರ ಆಧಾರಿತ ವಾಯು ಗುಣಮಟ್ಟದ ಮಾನಿಟರ್‌ಗಳನ್ನು ಸ್ಥಾಪಿಸಿದೆ.


ಎಲ್ಲರನ್ನು ಒಂದುಗೂಡಿಸುವುದು


ಸ್ಕೈಮೆಟ್‌ ‘ಅಭ್ಯಾಸ ಸಮುದಾಯ’ ಎಂಬ ಹೆಸರಿನ ಸಭೆಯನ್ನು ನಡೆಸುತ್ತದೆ. ಅಲ್ಲಿ ಅದು ರೈತರನ್ನು ಒಟ್ಟುಗೂಡಿಸಿ ಚರ್ಚೆ ನಡೆಸುತ್ತದೆ. ಅಲ್ಲಿ ಹೆಚ್ಚು ಉತ್ಪಾದನೆಮಾಡಲು ಮತ್ತು ಪರಿಣಾಮಕಾರಿಯಾಗಿರಲು ಬೇಕಾಗುವ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಕುರಿತು ಚರ್ಚೆಗಳು ನಡೆಯುತ್ತವೆ.


“ಆ ಸಭೆಯಲ್ಲಿ ಕೃಷಿ ಕ್ಷೇತ್ರದ ವಿವಿಧ ಅಧಿಕಾರಿಗಳಾದ ಜಿಲ್ಲಾ ಕೃಷಿ ಅಧಿಕಾರಿಗಳು, ಕೃಷಿ ಸಂಶೋಧನಾ ಸಂಸ್ಥೆಗಳು, ಬ್ಯಾಂಕುಗಳು, ರೈತ ಸಂಸ್ಥೆಗಳು ಮತ್ತು ಎನ್‌ಜಿಒಗಳನ್ನು ಸೇರಿಸಲಾಗುತ್ತದೆ" ಎಂದು ಜತಿನ್ ಹೇಳುತ್ತಾರೆ.


ಕಂಪನಿಯು ಕೃಷಿಯಲ್ಲಿನ ಅಪಾಯವನ್ನು ತಡೆಗಟ್ಟುವಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗಿರುವ ಕೃಷಿ-ವಿಮೆಯ ಕುರಿತು ಸಹ ಕೆಲಸ ಮಾಡುತ್ತದೆ. ಸ್ಕೈಮೆಟ್ ಭಾರತದ ಪ್ರಮುಖ ಕಾರ್ಯಕ್ರಮಗಳಾದ ಪ್ರಧಾನ್ ಮಂತ್ರಿ ಫಸಲ್ ಬೀಮಾ ಯೋಜನೆಗಳ (ಪಿಎಂಎಫ್‌ಬಿವೈ) ಮೂಲಕ ವಿಮೆಯನ್ನು ಸುಗಮವಾಗಿ ಸಿಗುವಂತೆ ಮಾಡುತ್ತದೆ. ಹವಾಮಾನದಿಂದ ಉಂಟಾಗುವ ಆಘಾತಗಳನ್ನು ನಿಭಾಯಿಸಲು ಇದು ರೈತರಿಗೆ ಸಹಾಯ ಮಾಡುತ್ತದೆ.


ಹಳ್ಳಿಯ ಒಂದು ಪ್ರದೇಶದಲ್ಲಿನ ಹವಾಮಾನ ಕೇಂದ್ರ.


2009 ರಲ್ಲಿ, ಸ್ಕೈಮೆಟ್‌ನ ಹವಾಮಾನ ಮುನ್ಸೂಚನೆ ಸೇವೆಗಳನ್ನು ಭಾರತದ ರೈತರಿಗೆ ತಂತ್ರಜ್ಞಾನ ಮತ್ತು ದತ್ತಾಂಶ ವಿಶ್ಲೇಷಣಾ ಪರಿಹಾರಗಳನ್ನು ಒದಗಿಸಲು ಪ್ರಾರಂಭಿಸಲಾದ ಕಾರ್ಪೊರೇಟ್ ಉತ್ಪನ್ನದ ಒಂದು ಭಾಗವಾಗಿ ಸೇರಿಸಲಾಯಿತು.


ಇದಕ್ಕೂ ಮೊದಲು 2008 ರಲ್ಲಿ, ಗ್ರಾಮೀಣ ಭಾರತೀಯರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಹವಾಮಾನವನ್ನು ಮೊದಲೇ ಊಹಿಸಲು ಸಾಧ್ಯವಾಗುವ ಸ್ಪೇಸ್‌ ಟೆಕ್ ಸ್ಟಾರ್ಟ್ಅಪ್ ಅಪ್ಲಿಕೇಶನ್ ಅನ್ನು ಕಿಪ್ಯಾಡ್ ಫೋನ್ ಅಪ್ಲಿಕೇಶನ್‌ಗಾಗಿ ವಿನ್ಯಾಸಗೊಳಿಸಿದೆ.


ಉಪಗ್ರಹದ ಮಾಹಿತಿಯ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು

ಸ್ಕೈಮೆಟ್ ಉಪಗ್ರಹ ಡೇಟಾವನ್ನು ಹೇಗೆ ಬಳಸುತ್ತದೆ ಎಂಬುದರ ಕುರಿತು, ಜತಿನ್,


“ಪ್ರಾಥಮಿಕ ಮಾಹಿತಿಯ ಮೂಲಗಳನ್ನು ಎರಡು ವಿಶಾಲ ವರ್ಗಗಳಾಗಿ ವಿಂಗಡಿಸಬಹುದು - ವಿವಿಧ ದೇಶಗಳ ರಾಷ್ಟ್ರೀಯ ಬಾಹ್ಯಾಕಾಶ ಏಜೆನ್ಸಿಗಳು ಮತ್ತು ವಾಣಿಜ್ಯ ಉಪಗ್ರಹಗಳು,” ಎಂದು ವಿವರಿಸುತ್ತಾರೆ.


ದತ್ತಾಂಶಗಳು ಮತ್ತು ಸೆರೆಹಿಡಿಯಲಾದ ಚಿತ್ರಗಳು ಮತ್ತು ಮೊದಲಿನಿಂದ ತಯಾರಿಸಿದ ವಿಶ್ಲೇಷಣಾತ್ಮಕ ಉತ್ಪನ್ನಗಳು ಸಾಮಾನ್ಯವಾಗಿ ವಾಣಿಜ್ಯ ಉಪಗ್ರಹಗಳಿಗೆ ಹೋಲಿಸಿದರೆ ಉಚಿತ ಅಥವಾ ಕಡಿಮೆ ವೆಚ್ಚದಲ್ಲಿರುತ್ತವೆ.


ಸ್ವಯಂಚಾಲಿತ ಹವಾಮಾನ ಕೇಂದ್ರ, ಸ್ಕೈಸೆನ್ಸ್, ಸ್ಕೈಮೆಟ್


ಸಂಸ್ಥಾಪಕರ ಪ್ರಕಾರ,


"ಬೆಳೆ ಪ್ರಕಾರದ ನಕ್ಷೆಯನ್ನು ಸಿದ್ಧಪಡಿಸಬೇಕಾದರೆ, ನಾವು ಕಚ್ಚಾ ಚಿತ್ರಗಳನ್ನು ಉಪಗ್ರಹದಿಂದ ಸಂಗ್ರಹಿಸುತ್ತೇವೆ, ಅದನ್ನು ನಮ್ಮ ಉಪಗ್ರಹ ದತ್ತಾಂಶ ತಜ್ಞರು ಅಧ್ಯಯನ ಮಾಡುತ್ತಾರೆ. ಅವರ ಒಳಹರಿವು ಮತ್ತು ವಿಸ್ತೃತ ಕ್ಷೇತ್ರ ಸಮೀಕ್ಷೆಗಳ ಜೊತೆಗೆ, ಸೋಯಾಬೀನ್, ಭತ್ತ, ಹತ್ತಿ, ನೆಲಗಡಲೆ ಮುಂತಾದ ಪ್ರಮುಖ ಬೆಳೆಗಳ ಪ್ರದೇಶವಾರು ಎಕರೆ ಅಂದಾಜುಗಳನ್ನು ನಾವು ಮಾರುಕಟ್ಟೆಗೆ ತಲುಪುವ ಮೊದಲೇ ಹೇಳುತ್ತೇವೆ. ಇದರಿಂದಾಗಿ ರೈತರಿಗೆ ತಮ್ಮ ಸಂಬಂಧಿತ ಬೆಳೆಗಳನ್ನು ಉತ್ತಮವಾಗಿಬೆಳೆಸಲು ಮೊದಲೇ ಸಹಾಯ ಮಾಡುತ್ತದೆ.


ಒಂದು ವಾರದ ಹಿಂದೆ ಸ್ಕೈಮೆಟ್‌ ನಡೆಸಿದ ದೆಹಲಿಯ ಎಕ್ಯೂಐ.


ನಮ್ಮ ಆರ್ಕೈವ್‌ನಲ್ಲಿ ಒಂದು ದಶಕಕ್ಕೂ ಹೆಚ್ಚು ಉಪಗ್ರಹ ಮಾಹಿತಿಯನ್ನು ನಾವು ಹೊಂದಿದ್ದೇವೆ, ಇದನ್ನು ಸುಧಾರಿತ ತಂತ್ರಜ್ಞಾನ ಮತ್ತು ದೊಡ್ಡ ದತ್ತಾಂಶ ವಿಶ್ಲೇಷಕರು, ಶ್ರುತಿ ಯಂತ್ರ ಕಲಿಕೆ (ಎಂಎಲ್) ಉಪಕರಣಗಳು ಮತ್ತು ಕೃತಕ ಬುದ್ಧಿಮತ್ತೆ (ಎಐ) ಮೂಲಕ ವಿಶ್ಲೇಷಿಸಲಾಗುತ್ತದೆ,” ಎಂದು ಜತಿನ್ ಹೇಳುತ್ತಾರೆ.


ಆರಂಭ

ಜತಿನ್ ಬೋಸ್ಟನ್ ವಿಶ್ವವಿದ್ಯಾಲಯದಿಂದ ಇಂಟರ್ನ್ಯಾಷನಲ್ ರಿಲೇಶನ್ಸ್ ಅಂಡ್ ಅಫೇರ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಮತ್ತು ದೂರದರ್ಶನದಲ್ಲಿ ನಿರ್ಮಾಪಕರೊಂದಿಗೆ ಕೆಲಸ ಮಾಡಿದ್ದಾರೆ. ಆದರೆ ಭಾರತದಲ್ಲಿ ಹವಾಮಾನ ಮುನ್ಸೂಚನೆಯ ಸ್ಥಿತಿಯ ಬಗ್ಗೆ ತಿಳಿದುಕೊಂಡ ನಂತರ, ಆದರ ಬಗ್ಗೆ ಅವರ ಆಸಕ್ತಿ ಹೆಚ್ಚಾಯಿತು.


ಇದಲ್ಲದೆ, ಅವರ ತಂದೆ ಭಾರತ ಹವಾಮಾನ ಇಲಾಖೆಯೊಂದಿಗೆ (ಐಎಂಡಿ) ದೀರ್ಘಕಾಲದ ಸಂಬಂಧವನ್ನು ಹೊಂದಿದ್ದರಿಂದ ಹವಾಮಾನದ ಬಗೆಗಿನ ಅವರ ಆಸಕ್ತಿ ಇನ್ನು ಹೆಚ್ಚಾಗುತ್ತದೆ.


ಐಎಂಡಿ ಹವಾಮಾನ ದತ್ತಾಂಶವನ್ನು ಹೇಗೆ ನಿಭಾಯಿಸುತ್ತದೆ ಎಂಬುದರ ಬಗ್ಗೆ ಈಗಾಗಲೇ ಪರಿಚಿತವಾಗಿರುವ ಸ್ಕೈಮೆಟ್‌ನ ಹಿಂದಿನ ಜತಿನ್‌ ರವರ ಕಲ್ಪನೆ ತುಂಬಾ ಸರಳವಾಗಿತ್ತು - ಐಎಮ್‌ಡಿ ಮಾಡಿದ್ದಕ್ಕಿಂತ ಹೆಚ್ಚಿನ ದಕ್ಷತೆಯ ಮೋಡಿಕಮ್‌ನೊಂದಿಗೆ ಹವಾಮಾನ ಮುನ್ಸೂಚನೆಯನ್ನು ಒದಗಿಸುವುದಾಗಿತ್ತು.


ಸವಾಲುಗಳನ್ನು ಜಯಿಸುವುದು ಮತ್ತು ಮುಂದಿನ ದಾರಿ

ಸ್ಟಾರ್ಟ್ ಅಪ್ ಕಂಪನಿಗಳು ಎದುರಿಸುತ್ತಿರುವ ನಿರಂತರ ಸಮಸ್ಯೆಗಳಲ್ಲಿ ಹೆಚ್ಚಿನ ಬಜೆಟ್ ಹೊಂದಿರುವ ಸಾರ್ವಜನಿಕ ಸಂಸ್ಥೆಗಳ ಸ್ಪರ್ಧೆ ಎದುರಿಸುವುದು ಪ್ರಮುಖವಾಗಿದೆ.


ಅದೃಷ್ಟವಶಾತ್, ಸ್ಕೈಮೆಟ್ ತನ್ನ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಸೀಮಿತ ಬಜೆಟ್‌ನಲ್ಲಿ ನಿರ್ವಹಿಸಲು ಸಾಧ್ಯವಾಯಿತು. ಕಂಪನಿಯು ಮೂರು ಸುತ್ತಿನ ಹಣವನ್ನು ಸಂಗ್ರಹಿಸಿದೆ ಮತ್ತು ಅನೇಕ ರಾಜ್ಯ ಸರ್ಕಾರಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದೆ, ಮತ್ತು ಯೂನಿವರ್ಸಿಟಿ ಕಾರ್ಪೊರೇಶನ್ ಫಾರ್ ಅಟ್ಮಾಸ್ಫಿಯರಿಕ್ ರಿಸರ್ಚ್ (ಯುಸಿಎಆರ್), ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (ಯುಎಸ್ಎಐಡಿ), ವಿಶ್ವ ಬ್ಯಾಂಕ್, ಹಲವಾರು ಎನ್ಜಿಒಗಳು ಮತ್ತು ವಿಶ್ವವಿದ್ಯಾಲಯಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದೆ.


ಯಂತ್ರಾಂಶವು ಯಾವುದೇ ಹವಾಮಾನ ಆಧಾರಿತ ಕೆಲಸದ ಪ್ರಮುಖ ಶಕ್ತಿ. ಸ್ಕೈಮೆಟ್ ತನ್ನದೇ ಆದ ಸಂವೇದಕಗಳನ್ನು ತಯಾರಿಸುವ ಮೂಲಕ ಮತ್ತು ಸ್ಥಾಪಿಸುವ ಮೂಲಕ ಇದನ್ನು ನಿವಾರಿಸಿದೆ ಎಂದು ಜತಿನ್ ಹೇಳುತ್ತಾರೆ.”


ಕಂಪನಿಯ ಟೈಮ್‌ಲೈನ್

ಸ್ಟಾರ್ಟ್‌ ಅಪ್ 300 ಕ್ಕೂ ಹೆಚ್ಚು ಜನರ ತಂಡವನ್ನು ಹೊಂದಿದೆ. ಇದು ಇಂಡಿಯಾ ಬಿಸಿನೆಸ್ ಲೀಡರ್ ಅವಾರ್ಡ್ಸ್, ಗ್ಲೋಬಲ್ ಇಂಡೆಕ್ಸ್ ಇನ್ಶುರೆನ್ಸ್ ಫೆಸಿಲಿಟಿ (ವಿಶ್ವ ಬ್ಯಾಂಕ್ ಸಮೂಹದಿಂದ ನಿರ್ವಹಿಸಲ್ಪಟ್ಟಿದೆ), ಕೃಷಿ-ವ್ಯವಹಾರ ಶೃಂಗಸಭೆ ಮತ್ತು ಕೃಷಿ ಪ್ರಶಸ್ತಿಗಳು 2019, ಕೋಡ್ ಸ್ಟುಡಿಯೋ 2019 - ಇಂಡಿಯಾ ಟೆಕ್ನಾಲಜಿ ಪ್ರಶಸ್ತಿಗಳು (ಕೃಷಿಯಿಂದ / ತಂತ್ರಜ್ಞಾನದ ಅತ್ಯುತ್ತಮ ಅನುಷ್ಠಾನ) ಸೇರಿದಂತೆ ಪ್ರಶಸ್ತಿಗಳನ್ನು ಗೆದ್ದಿದೆ. ಸೆಕ್ಟರ್ ಎಂಟರ್ಪ್ರೈಸ್), ಮತ್ತು ಇಂಡಿಯಾ ಅಗ್ರಿ-ಬ್ಯುಸಿನೆಸ್ ಅವಾರ್ಡ್ ಅನ್ನು (ಇಂಡಿಯನ್ ಚೇಂಬರ್ ಆಫ್ ಫುಡ್ ಅಂಡ್ ಅಗ್ರಿಕಲ್ಚರ್ ನಿಂದ ನೀಡಲ್ಪಟ್ಟಿದೆ) ಸಹ ತನ್ನ ಮುಡಿಗೇರಿಸಿಕೊಂಡಿದೆ.


ಮಾರುಕಟ್ಟೆ ಬೆಳೆಯುತ್ತಿದೆ ಎಂದು ಹೇಳುತ್ತ,


"ಹವಾಮಾನ ಬದಲಾವಣೆಯು ಪ್ರಕೃತಿಯನ್ನು ಘಾಸಿಗೊಳಿಸುತ್ತಿದೆ, ಡೇಟಾ ಮತ್ತು ವಿಶ್ಲೇಷಣೆಗಳು ಇದಕ್ಕೆ ಏಕೈಕ ಪರಿಹಾರವಾಗಿದೆ. ಈ ಮಾರುಕಟ್ಟೆ ಏರಿಕೆಯಾಗಲಿದೆ - ಪ್ರತಿಯೊಂದು ವಲಯವು ಈಗ ನಿಖರವಾದ ಹವಾಮಾನ ಪರಿಹಾರಗಳನ್ನು ಪಡೆಯುವುದರ ಮೇಲೆ ಅವಲಂಬಿತವಾಗಿದೆ” ಎನ್ನುತ್ತಾರೆ ಜತಿನ್.


ಭವಿಷ್ಯದಲ್ಲಿ, ಸ್ಕೈಮೆಟ್ ರೈತರಿಗೆ ಮಾತ್ರವಲ್ಲದೆ ಮಾಲಿನ್ಯದಂತಹ ಸಮಸ್ಯೆಗಳನ್ನು ನಿಗ್ರಹಿಸಲು ಸರ್ಕಾರ ಮತ್ತು ಇತರ ಸಂಸ್ಥೆಗಳಿಗೆ ಸಹಾಯ ಮಾಡಲು ಉತ್ತಮ ವಿಶ್ಲೇಷಣೆ ಮತ್ತು ಡೇಟಾವನ್ನು ಒದಗಿಸಲು ಸಜ್ಜಾಗುತ್ತಿದೆ.


ಗಾಳಿಯ ಉಷ್ಣತೆ, ತೇವಾಂಶ, ಗಾಳಿಯ ವೇಗ, ಗಾಳಿಯ ದಿಕ್ಕು, ಮಳೆ, ಮಿಂಚು, ಸೌರ ವಿಕಿರಣ, ಮಣ್ಣಿನ ತೇವಾಂಶ, ಮಣ್ಣಿನ ಉಷ್ಣತೆ, ಎಲೆಗಳ ತೇವ ಮತ್ತು ಬೆಳೆ ತೊಂದರೆಗಳಿಗೆ ಈ ತಂಡವು ಹಲವಾರು ಇತರ ಪರಿಹಾರಗಳನ್ನು ಹುಡುಕುತ್ತಿದೆ.


ಸ್ಕೈಮೆಟ್ ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಆಧಾರಿತ ಕಸ್ಟಮೈಸ್ ಮಾಡಿದ ಪರಿಹಾರಗಳನ್ನು ಸಹ ಒದಗಿಸುತ್ತದೆ, ಇದು ಗ್ರಾಹಕರು ವಿನಂತಿಸಿದ ಡೇಟಾಸೆಟ್‌ಗಳ ಸಂಯೋಜನೆಯನ್ನು ಅವಲಂಬಿಸಿರುತ್ತದೆ.