ಸೌರಶಕ್ತಿಯನ್ನು ಬಳಸುತ್ತಿರುವ ಬೆಂಗಳೂರಿನ ಈ ಅಪಾರ್ಟಮೆಂಟ್, ವಿದ್ಯುತ್ ಶುಲ್ಕದ ಶೇಖಡ 70 ರಷ್ಟು ಹಣವನ್ನು ಉಳಿಸುತ್ತಿದೆ.

ಬೆಂಗಳೂರಿನ ಎ ಆರ್ ಕೆ ಸೆರಿನ್ ಕೌಂಟಿ ಅಪಾರ್ಟಮೆಂಟ್ ಇತ್ತೀಚೆಗೆ 106-ಕಿ. ವ್ಯಾ. ಸಾಮರ್ಥ್ಯದ ಸೌರಶಕ್ತಿ ಉತ್ಪಾದನಾ ಘಟಕವನ್ನು ಅಪಾರ್ಟ್ ಮೆಂಟ್ ನ ಮೇಲ್ಛಾವಣಿಯಲ್ಲಿ 57 ಲಕ್ಷ ವೆಚ್ಚದಲ್ಲಿ ಅಳವಡಿಸಿಕೊಂಡಿತು, ಅದೀಗ ಪ್ರತಿ ತಿಂಗಳಿಗೆ 12,720 ಯುನಿಟ್ಸ್ ಕರೆಂಟನ್ನು ಉತ್ಪಾದಿಸುತ್ತಿದೆ.

ಸೌರಶಕ್ತಿಯನ್ನು ಬಳಸುತ್ತಿರುವ ಬೆಂಗಳೂರಿನ ಈ ಅಪಾರ್ಟಮೆಂಟ್, ವಿದ್ಯುತ್ ಶುಲ್ಕದ ಶೇಖಡ 70 ರಷ್ಟು ಹಣವನ್ನು ಉಳಿಸುತ್ತಿದೆ.

Monday July 15, 2019,

2 min Read

ನಾವೀಗ, ಬರಿ ನೀರಿನ ಬಿಕ್ಕಟ್ಟಿನಿಂದಷ್ಟೆ ಬಳಲದೆ, ದಿನನಿತ್ಯದ ಅವಶ್ಯಕತೆಗೆ ಬೇಕಾಗಿರುವ ನೈಸರ್ಗಿಕ ಸಂಪನ್ಮೂಲಗಳು ಖಾಲಿಯಾಗುವ ಹಂತದಲ್ಲಿದ್ದೇವೆ. ವರದಿಯ ಪ್ರಕಾರ, ಮುಂದಿನ 53 ವರ್ಷಗಳಲ್ಲಿ ಪೆಟ್ರೋಲಿಯಂ, 54 ವರ್ಷಗಳಲ್ಲಿ ನೈಸರ್ಗಿಕ ಅನಿಲ ಮತ್ತು 110 ವರ್ಷಗಳಲ್ಲಿ ಕಲ್ಲಿದ್ದಲು ಖಾಲಿಯಾಗಿರುತ್ತದೆ.


ಇದರ ನಡುವೆ, ಬೆಳೆಯುತ್ತಿರುವ ನೈಸರ್ಗಿಕ ಸಂಪನ್ಮೂಲಗಳ ಬಳಕೆಯ ಅರಿವಿಗೂ ನಾವು ಸಾಕ್ಷಿಯಾಗುತ್ತಿದ್ದೇವೆ. ಬೆಂಗಳೂರಿನ ವೈಟ್ ಪೀಲ್ಡ್ ನಲ್ಲಿರುವ ಎ ಆರ್ ಕೆ ಸೆರಿನ್ ಕೌಂಟಿ ಅಪಾರ್ಟಮೆಂಟ್, ಸೌರಶಕ್ತಿಯನ್ನು ವಿಧ್ಯುತ ಶಕ್ತಿಯನಾಗಿ ಮಾರ್ಪಡಿಸುತ್ತ ನವೀಕರಿಸಬಹುದಾದ ಶಕ್ತಿಗೆ ಹೆಚ್ಚಿನ ಮಹತ್ವ ನೀಡುತ್ತಿದೆ. 280 ಪ್ಲಾಟ್ ಗಳಿರುವ ಈ ಅಪಾರ್ಟಮೆಂಟ್ ಸೌರಶಕ್ತಿಗೆ ಮಹತ್ವ ನೀಡಿ, ಅದರ ಛಾವಣಿಯ ಮೇಲೆ ಸೌರ ಫಲಕಗಳನ್ನು ಆಳವಡಿಸಿದೆ, ಇದರಿಂದ ಬರಿ ವಿದ್ಯುತ್ ಶುಲ್ಕವನ್ನು ಮಾತ್ರ ಕಡಿಮೆ ಮಾಡದೆ, ಕಾರ್ಬನ್ ಪುಟಪ್ರಿಂಟ್ ನ್ನು ಕೂಡ ಕಡಿಮೆ ಮಾಡುತ್ತಿದೆ.


Apartment

(ಚಿತ್ರ:ದಿ ನ್ಯೂಸ್ ಮಿನಿಟ್)

57 ಲಕ್ಷ ವೆಚ್ಚದಲ್ಲಿ ಅಳವಡಿಸಿರುವ 106 ಕಿ.ವ್ಯಾ. ನ ಸೌರ ಘಟಕವು ಅಪಾರ್ಟಮೆಂಟ್ ನ ವಿದ್ಯುತ್ ಶುಲ್ಕದಲ್ಲಿ ಶೇಖಡ 70 ರಷ್ಟು ಹಣವನ್ನು ಉಳಿಸುತ್ತಿದೆ.


ಇದರ ಬಗ್ಗೆ ಅಪಾರ್ಟಮೆಂಟ್ ನ ನಿವಾಸಿ ಅಮಿತ ಕುಮಾರ ದಿ ನ್ಯೂಸ್ ಮಿನಿಟ್ ನೊಂದಿಗೆ ಮಾತನಾಡುತ್ತಾ, ಹೀಗೆ ಹೇಳಿದರು,


“ಸಾಮಾನ್ಯವಾಗಿ ಅಪಾರ್ಟಮೆಂಟ್ ನ ಶುಲ್ಕವು ಪ್ರತಿ ತಿಂಗಳಿಗೆ 1.6 ಲಕ್ಷದಷ್ಟು ಬರುತ್ತದೆ. ಬೆಸ್ಕಾಮ್ ಇಲ್ಲಿಯವರೆಗೆ 68 ದಿನಗಳ ಅಂದರೆ ಮಾರ್ಚ್ 22 ರಿಂದ 1 ರ ತನಕ ವಿಧಿಸಿರುವ ಶುಲ್ಕ ಕೇವಲ 1,13,007 ರೂ ಮಾತ್ರ. ಅಂದರೆ ಶುಲ್ಕದಲ್ಲಿ ತಿಂಗಳಿಗೆ ಶೇಖಡ 70 ರಷ್ಟು ಸೇವನೆಯಾದಂತೆ. ಸೌರ ಘಟಕವು ನಾವು ಗುರಿ ಇಟ್ಟುಕೊಂಡಿದ್ದ 1 ಲಕ್ಷಕ್ಕಿಂತ ಹೆಚ್ಚು ವಿದ್ಯುತ್ ಶಕ್ತಿಯನ್ನು ಉತ್ಪಾದಿಸುತ್ತಿದೆ. ಇಲ್ಲಿ ಸೇವನೆಯಾಗುತ್ತಿರುವ ಹಣವನ್ನು ಕಾರ್ಪಸ್ ಫಂಡ್ ನಲ್ಲಿ ಕೂಡಿಡುತ್ತೇವೆ.”


ಸೌರ ಘಟಕವು ಸರಾಸರಿ ತಿಂಗಳಿಗೆ 12,720 ಯುನಿಟ್ ಗಳನ್ನು ನೀಡುತ್ತದೆ, ಇದರಿಂದ 25,250 ಕೆ. ಜಿ, ಯ ವರೆಗೆ ಕಾರ್ಬನ್ ನ ಹೊರಸೂಸುವಿಕೆಯನ್ನು ತಡೆಹಿಡಿಯುತ್ತದೆ. ಎಕೊಸೊಚ್ ನ ಪ್ರಕಾರ ಇದು ತಿಂಗಳಿಗೆ 85 ಗಿಡಗಳನ್ನು ನೆಡುವುದಕ್ಕೆ ಸಮವಾಗಿದೆ. ಈ ವ್ಯವಸ್ಥೆಯನ್ನು 25 ವರ್ಷ ಬಾಳಿಕೆ ಬರುವಂತೆ ವಿನ್ಯಾಸಗೋಳಿಸಲಾಗಿದೆ ಮತ್ತು ಇದಕ್ಕಾಗಿ ವಿನಿಯೋಗಿಸಿದ ಹಣವು ಬರೀ ಆರೇ ವರ್ಷಗಳಲ್ಲಿ ಮರುಪಾವತಿಯಾಗುತ್ತದೆ.


ಬೆಸ್ಕಾಂನ ಅಧಿಕಾರಿ ಹೀಗೆ ಹೇಳುತ್ತಾರೆ,

“ಮನೆ ಮೇಲಿನ ಖಾಲಿ ಜಾಗವನ್ನು ಬಳಸಿ ವಿಧ್ಯುತ್ ಉತ್ಪಾದನೆ ಮಾಡವುದಕ್ಕೆ, ಸರಕಾರ ಮತ್ತು ನಮ್ಮ ಕಡೆಯಿಂದ ಸಂಪೂರ್ಣ ಪ್ರೋತ್ಸಾಹವಿದೆ. ಪ್ರತಿ ಗ್ರಾಹಕರೊಂದಿಗೆ ನಾವು ನಿಯಂತ್ರಣ ಪ್ರಾಧಿಕಾರ ಕೆ ಇ ಆರ್ ಸಿ ಯ ಸಮನ್ವಯದೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇವೆ. ಪ್ರಸ್ತುತವಾಗಿ ಗ್ರಾಹಕರು ಗ್ರಿಡ್ ಗೆ ನೀಡುವ ಪ್ರತಿ ಯುನಿಟ್ ಗೆ ನಾವು ಸರಾಸರಿ 3.50 ರೂ. ನೀಡುತ್ತಿದ್ದೇವೆ. ಇದರ ಅರ್ಥ ನಾವು ಮಾರುಕಟ್ಟೆಯ ಬೆಲೆಗೆ ಮಾರಬಹುದಾದ ಯುನಿಟ್ ಗಳ ಸಂಖ್ಯೆಯನ್ನು ಕಳೆದು ಕೊಳ್ಳುತ್ತಿದ್ದೇವೆ.”