ಹಗಲಿನಲ್ಲಿ ಕಲಾವಿದ ರಾತ್ರಿಯಲ್ಲಿ ಫುಡ್ ಡೆಲಿವರಿ ಬಾಯ್ ಈ 39 ವರ್ಷದ ವ್ಯಕ್ತಿ

ಮೂವತ್ತೊಂಬತ್ತು ವರ್ಷದ ವಿಶಾಲ್ ಸಂಜಿರವರು ರಾತ್ರಿಯಲ್ಲಿ ಆಹಾರ ವಿತರಣಾ ಕಾರ್ಯನಿರ್ವಾಹಕರಾಗಿ ಹಾಗೂ ಬೆಳಗಿನ ಸಮಯದಲ್ಲಿ ಕಲಾವಿದರಾಗಿ ಕೆಲಸ ನಿರ್ವಹಿಸುತ್ತಾರೆ.

15th Feb 2020
  • +0
Share on
close
  • +0
Share on
close
Share on
close

ಒಬ್ಬರೂ ತಮ್ಮ ಜೀವನದಲ್ಲಿ ಅನೇಕ ವಿಷಯಗಳ ಕುರಿತಾಗಿ ಆಸಕ್ತಿಯನ್ನು ಹೊಂದಿರುತ್ತಾರೆ. ನೀವು ನಿಮ್ಮ ವೃತ್ತಿಯಲ್ಲಿ ತೊಡಗಿಕೊಂಡು ಕೂಡ ಕಲೆ, ಸಂಗೀತ, ನೃತ್ಯ ಮುಂತಾದ ಹವ್ಯಾಸಗಳಿಗೆ ಸಮಯ ಕೊಡಬಹುದು. ಇಂತಹ ಸಂದರ್ಭಗಳಲ್ಲಿ ಸರಿಯಾಗಿ ಸಮಯ ನಿರ್ವಹಣೆ ಮಾಡುವುದು ಮುಖ್ಯ. 39ರ ಹರೆಯದ ವಿಶಾಲ್ ಸಂಜಿರವರು ಆಹಾರ ವಿತರಣಾ ಕಾರ್ಯನಿರ್ವಾಹಕರಾಗಿಯೂ ಕಾರ್ಯ ನಿರ್ವಹಿಸುತ್ತಾ ಚಿತ್ರಕಲೆಯೆಡೆಗೆ ಇರುವ ಉತ್ಸಾಹವನ್ನು ಕಡಿಮೆ ಮಾಡಿಲ್ಲ. ರಾತ್ರಿಯಲ್ಲಿ ಆಹಾರವನ್ನು ತಲುಪಿಸುತ್ತಾ, ಬೆಳಿಗ್ಗೆ ಕಲಾವಿದರಾಗಿ ಬಹುಮುಖ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.


ಮುಂಬೈನ ನಿವಾಸಿಯಾದ ಇವರು ಸುಮಾರು ಮೂರು ದಶಕಗಳ ಕಾಲದಿಂದಲೂ ಚಿತ್ರಕಲೆಯಲ್ಲಿಯೂ ತೊಡಗಿದ್ದರೂ ಕೂಡ ಅದನ್ನು ಉದ್ಯೋಗವಾಗಿ ತೆಗೆದುಕೊಳ್ಳಲಿಲ್ಲ.


ವಿಶಾಲ್ ಸಂಜಿ (ಚಿತ್ರಕೃಪೆ: ದಿ ಬೆಟರ್ ಇಂಡಿಯಾ)

"ಹಗಲಿನಲ್ಲಿ‌ ನಾನು ಜಾಹೀರಾತು ಸಂಸ್ಥೆಯೊಂದರಲ್ಲಿ ಕಲಾವಿದನಾಗಿ ಮತ್ತು ರಾತ್ರಿಯ ವೇಳೆಯಲ್ಲಿ ಸ್ವಿಗ್ಗಿಯೊಂದಿಗೆ ಆಹಾರ ವಿತರಣಾ ಕಾರ್ಯನಿರ್ವಾಹಕನಾಗಿ ಕೆಲಸ ಮಾಡುತ್ತೇನೆ. ಎರಡು ವರ್ಷದ ಹಿಂದೆ ನಾನು ಸ್ವೀಕರಿಸುವ ಆರ್ಟ್ ಆರ್ಡರ್‌ಗಳಿಂದ ಕೇವಲ 10,000 ರೂ.ಗಳನ್ನು ಗಳಿಸುತ್ತಿದ್ದ ಕಾರಣದಿಂದ ಎರಡನೇಯ ಕೆಲಸವನ್ನು ಕೈಗೆತ್ತಿಕೊಂಡೆ. ಆ ಮೊತ್ತದೊಂದಿಗೆ ಐದು ಜನರಿರುವ ಕುಟುಂಬವನ್ನು ನಡೆಸುವುದು ಸುಲಭವಾಗಿರಲಿಲ್ಲ. ಆದ್ದರಿಂದ ನನಗೆ ಬಹುಮುಖಿ ಉದ್ಯೋಗಗಳನ್ನು ಮಾಡುವುದು ಬಿಟ್ಟು ಬೇರೆ ದಾರಿಯಿಲ್ಲ," ಎಂದು ವಿಶಾಲ್ ಹೇಳುತ್ತಾರೆ, ವರದಿ ದಿ ಬೆಟರ್ ಇಂಡಿಯಾ.


ಟ್ವಿಟರ್ ಬಳಕೆದಾರರಾದ ನಿಖಿಲ್ ಜಾರ್ಜ್‌ ಎಂಬುವವರು ವಿಶಾಲ್ ಅವರ ಬಗ್ಗೆ ಬರೆದು ಅವರ ದ್ವಿಪಾತ್ರಗಳನ್ನು ಹೇಳಿ ಅವರನ್ನು ಜನಪ್ರಿಯಗೊಳಿಸಿದರು. "ಇವರು ವಿಶಾಲ್, ಇಂದು ಅವರು ನನಗೆ ನಾನು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ ಆಹಾರವನ್ನು ತಲುಪಿಸಿದರು. ಅವರು ಕಲಾವಿದರೂ ಹೌದು ಮತ್ತು ಸರಿಯಾದ ಕೆಲಸ ಹುಡುಕುತ್ತಿದ್ದಾರೆ. ನೀವು ಚಿತ್ರಕಲೆ/ವಾಲ್ ಆರ್ಟ್ ಮಾಡುವುದಕ್ಕಾಗಿ ಹುಡುಕುತ್ತಿದ್ದರೆ ನನಗೆ ತಿಳಿಸಿ, ನಾನು ಅವರೊಂದಿಗೆ ನಿಮ್ಮನ್ನು ಸಂಪರ್ಕಿಸುವುದಕ್ಕೆ ಸಹಾಯ ಮಾಡುವೆ. ಈ ವಿಷಯವನ್ನು ಮತ್ತಷ್ಟು ಹಂಚಿ ಅವರಿಗೆ ಸಹಾಯ ಮಾಡಿ!," ಎಂದು‌ ವಿಶಾಲ್‌ ಟ್ವೀಟ್ ಮಾಡಿದ್ದಾರೆ.


ಈ ಟ್ವೀಟ್‌ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು 5,800ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಮಾಡಲಾಗಿದೆ. ಅಲ್ಲದೆ, ಸ್ವತಃ ಸ್ವಿಗ್ಗಿಯೂ ಕೂಡ ರಿಟ್ವೀಟ್ ಮಾಡಿದ್ದು, ಈ ಕಲಾವಿದನ ಪ್ರತಿಭೆಯನ್ನು ಎತ್ತಿ ಹಿಡಿದಿದ್ದು, ಅಗತ್ಯ ಬೆಂಬಲವನ್ನು ನೀಡಿದೆ.


ಚಿತ್ರಕೃಪೆ: ದಿ ಬೆಟರ್ ಇಂಡಿಯಾ

ತಮ್ಮ ವರ್ಣಚಿತ್ರಗಳ ಬೆಲೆ ಮತ್ತು ತಾವು ಆಹಾರ ವಿತರಣಾ ಕಾರ್ಯನಿರ್ವಾಹಕರಾದ ಕಾರಣದ ಕುರಿತಾಗಿ ಮಾತನಾಡಿದ ವಿಶಾಲ್,


"ನಾನು ಭಾವಚಿತ್ರಗಳು, ಲ್ಯಾಂಡಸ್ಕೇಪ್‌ಗಳು ಮತ್ತು ವಾಲ್ ಆರ್ಟ್‌ಗಳನ್ನು ಚಿತ್ರಿಸಲು ಮಾತ್ರ ಆರ್ಡರ್ ಪಡೆಯುತ್ತೇನೆ.‌ ಅದಾಗ್ಯೂ ಕೇವಲ ಕಲೆಯನ್ನು ನೆಚ್ಚಿಕೊಂಡು ಜೀವನ ಮಾಡುವುದು ದೊಡ್ಡ ಸವಾಲಾಗಿದೆ. ನಾನು ಆರ್ಡರ್ ಪಡೆಯಲು ಪ್ರಾರಂಭಿಸಿದಾಗ ನಾನು 500 ರಿಂದ 1,000 ರೂಗಳವರೆಗೆ ಶುಲ್ಕ ವಿಧಿಸುತ್ತೇನೆ. ಈಗ ಸ್ವಲ್ಪ ದರಗಳು ಏರಿಕೆಯಾಗಿದೆ. ಈಗ ನೀವೆ ಹೇಳಬಹುದು ನಾನ್ಯಾಕೆ ಫುಡ್ ಡೆಲಿವರಿ ಎಕ್ಸಿಕ್ಯೂಟಿವ್ ಆಗಿದ್ದೆನೆಂದು," ಎಂದೆನ್ನುತ್ತಾರೆ, ವರದಿ ದಿ ಬೆಟರ್ ಇಂಡಿಯಾ.
  • +0
Share on
close
  • +0
Share on
close
Share on
close

Our Partner Events

Hustle across India