ತಮ್ಮ ಸೀರೆ ಎಸೆದು ಮುಳುಗುತ್ತಿದ್ದ ಯುವಕರನ್ನು ಕಾಪಾಡಿದ ಮಹಿಳೆಯರು

ತಮಿಳುನಾಡಿನ ಮೂರು ಮಹಿಳೆಯರು ಮರುಡೈಯಾರು ನದಿಯಲ್ಲಿ ಮುಳುಗುತ್ತಿದ್ದ 2 ಯುವಕರನ್ನು ತಮ್ಮ ಸೀರೆಯನ್ನು ಉಪಯೋಗಿಸಿ ರಕ್ಷಿಸಿದ್ದಾರೆ.

ತಮ್ಮ ಸೀರೆ ಎಸೆದು ಮುಳುಗುತ್ತಿದ್ದ ಯುವಕರನ್ನು ಕಾಪಾಡಿದ ಮಹಿಳೆಯರು

Wednesday August 12, 2020,

1 min Read

ಇತ್ತೀಚೆಗೆ ತಮಿಳು ನಾಡಿನ ಕೊಟ್ಟರಾಯಿ ಹಳ್ಳಿಯ ಡ್ಯಾಂ ಒಂದರಲ್ಲಿ ಮುಳುಗುತ್ತಿದ್ದ ಇಬ್ಬರು ಯುವಕರನ್ನು ತಮ್ಮ ಸೀರೆಯನ್ನು ಬಳಸಿ ಕಾಪಾಡಿದ್ದಾರೆ.


ಸೆಂಥಾಮಿಜ್ ಸೆಲ್ವಿ (38), ಮುಥಮಾಲ್ (34) ಮತ್ತು ಅನಂತವಳ್ಳಿ (34) | (ಚಿತ್ರ: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌)


ಅಗಸ್ಟ್‌ 6 ರಂದು ಸಿರುವಚ್ಚುರ ಹಳ್ಳಿಯ 12 ಯುವಕರು ಕ್ರಿಕೆಟ್‌ ಆಡಲು ಕೊಟ್ಟಾರಾಯಿ ಡ್ಯಾಂ ಬಳಿ ಹೋಗಿದ್ದರು. ಆ ಸ್ಥಳದಲ್ಲಿ ಅದನುರಾಯಿ ಹಳ್ಳಿಯವರಾದ ಸೆಂಥಾಮಿಜ್ ಸೆಲ್ವಿ (38), ಮುಥಮಾಲ್ (34) ಮತ್ತು ಅನಂತವಳ್ಳಿ (34) ಆಗತಾನೇ ತಮ್ಮ ಬಟ್ಟೆಗಳನ್ನು ಒಗೆದು ಒಣಗಿಸುತ್ತಿದ್ದರು.


“ಹುಡುಗರ ಗುಂಪು ಬಂದಾಗ ನಾವು ಮನೆಗೆ ಹೊರಡಲು ಸಿದ್ಧವಾಗಿದ್ದೆವು. ಅವರು ಡ್ಯಾಂ ಅನ್ನು ಒಮ್ಮೆ ನೋಡಿ ಇಲ್ಲಿ ಸ್ನಾನ ಮಾಡಬಹುದೆ ಎಂದು ನಮಗೆ ಕೇಳಿದರು. ನೀರು ಆಳದವರೆಗೂ ಇದೆ ಎಂದು ಎಚ್ಚರಿಕೆ ನೀಡಿದೆವು. ಆದರೂ ನಾಲ್ಕು ಹುಡುಗರು ಜಾರಿ ನೀರಿಗೆ ಬಿದ್ದರು,” ಎಂದು ಸೆಂಥಾಮಿಜ್ ಸೆಲ್ವಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಹೇಳಿದರು.


ಮರುಡೈಯಾರು ನದಿಗೆ ಅಡ್ಡಲಾಗಿ 108 ಕೋಟಿ ರೂ. ಖರ್ಚಿನಲ್ಲಿ ಕೊಟ್ಟರಾಯಿ ಡ್ಯಾಂ ಅನ್ನು ಕಟ್ಟಲಾಗುತ್ತಿದ್ದು, ಕಳೆದ ಕೆಲ ದಿನಗಳಲ್ಲಿ ಭಾರೀ ಮಳೆಯಿಂದ ಡ್ಯಾಂನಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.


“ನಾವು ಜಾಸ್ತಿ ಯೋಚಿಸದೆ ನಮ್ಮ ಸೀರೆಗಳನ್ನು ಬಿಚ್ಚಿ ನೀರಿಗೆ ಎಸೆದೆವು. ಇಬ್ಬರನ್ನು ಕಾಪಾಡುವಲ್ಲಿ ಯಶಸ್ವಿಯಾದೆವು, ಅದೇ ಸಮಯದಲ್ಲಿ ಉಳಿದ ಇಬ್ಬರು ಹುಡುಗರು ನದಯಲ್ಲಿ ಮುಳುಗಿದರು. ನಾವು ನೀರಿನಲ್ಲಿದ್ದರು ಅವರನ್ನು ತಲುಪಲಾಗಲಿಲ್ಲ,” ಎಂದರು ಅವರು.


ಆ ಮೂರು ಮಹಿಳೆಯರ ಸಮಯ ಪ್ರಜ್ಞೆಯಿಂದ ಕಾರ್ಥಿಕ್‌ ಮತ್ತು ಸೆಂಥಿವೆಲನ್‌ ಪ್ರಾಣಾಪಾಯದಿಂದ ಬದುಕುಳಿದರೆ, ಪವಿಥ್ರನ್‌ ಮತ್ತು ರಂಜಿಥ್‌ ಡ್ಯಾಂನಲ್ಲಿ ಮುಳುಗಿ ಅಸುನೀಗಿದರು.


ಮಹಿಳೆಯರ ಈ ಸಾಹಸಗಾಥೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ಹಲವರು ಟ್ವಿಟ್ಟರ್‌ನಲ್ಲಿ ಪೊಸ್ಟ್‌ ಮಾಡಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ, ಜೂನ್ 1 ರಿಂದ ಆಗಸ್ಟ್ 10 ರ ವರೆಗೆ ತಮಿಳುನಾಡಿನಲ್ಲಿ ಶೇಕಡಾ 56 ರಷ್ಟು ಹೆಚ್ಚು ಮಳೆಯಾಗಿದೆ, ಮತ್ತು ರಾಜ್ಯದ ಹೆಚ್ಚಿನ ಅಣೆಕಟ್ಟುಗಳು ನೀರಿನ ಮಟ್ಟದಲ್ಲಿ ಏರಿಕೆ ಕಂಡಿದ್ದು, ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.