[TechSparks 2020] ಭಾರತದಿಂದ ವಿಶ್ವಕ್ಕಾಗಿ ನಿರ್ಮಾಣ: ಶುರುವಾಯ್ತು ಭಾರತದ ಅತಿ ದೊಡ್ಡ ಸ್ಟಾರ್ಟಪ್‌ ಮತ್ತು ಟೆಕ್‌ ಕಾನ್ಫೆರೆನ್ಸ್‌

ಯುವರ್‌ಸ್ಟೋರಿಯ ಪ್ರಮುಖ ಕಾರ್ಯಕ್ರಮವಾದ ಟೆಕ್‌ಸ್ಪಾರ್ಕ್ಸ್‌ ಭಾರತದ ಬಹುದೊಡ್ಡ ಮತ್ತು ಅತ್ಯಂತ ಪ್ರಭಾವಶಾಲಿ ಉದ್ಯಮಶೀಲತೆಯ ಕಾನ್ಫೆರೆನ್ಸ್‌ ಆಗಿದೆ. 11 ನೇ ವರ್ಷದ ಟೆಕ್‌ಸ್ಪಾರ್ಕ್ಸ್‌ 2020ರಲ್ಲಿ ನೀತಿ ನಿರೂಪಕರು, ಪ್ರಭಾವಿಗಳು, ಸ್ಟಾರ್ಟಪ್‌ಗಳು ಮತ್ತು ಚೆಂಜ್‌ಮೇಕರ್‌ಗಳು ಭಾಗವಹಿಸಲಿದ್ದು, ವರ್ಚುಅಲ್‌ ಆಗಿ ನಡೆಯಲಿದೆ.

[TechSparks 2020] ಭಾರತದಿಂದ ವಿಶ್ವಕ್ಕಾಗಿ ನಿರ್ಮಾಣ: ಶುರುವಾಯ್ತು ಭಾರತದ ಅತಿ ದೊಡ್ಡ ಸ್ಟಾರ್ಟಪ್‌ ಮತ್ತು ಟೆಕ್‌ ಕಾನ್ಫೆರೆನ್ಸ್‌

Monday October 26, 2020,

3 min Read

“ಜಗತ್ತು ಕತೆಗಳಿಂದಾಗಿದೆ, ಅಣುಗಳಿಂದಲ್ಲ,” ಎಂದಿದ್ದಾರೆ ಕವಿ ಮತ್ತು ರಾಜಕೀಯ ಚಳುವಳಿಗಾರರಾದ ಮುರಿಯೆಲ್‌ ರುಕೆಯ್ಸರ್‌. ಎಲ್ಲ ಕತೆಗಳು ಹೇಳಲು ಅರ್ಹವಾಗಿವೆ ಎಂದು ನಾನು ಭಾವಿಸುತ್ತೇನೆ.


ಇದೆ ಸಂಕಲ್ಪದೊಂದಿಗೆ ಜಗತ್ತನ್ನು ಬದಲಾಯಿಸುತ್ತಿರುವವರ ಕತೆಯನ್ನು ಹೇಳುತ್ತ ನಾನು ಯುವರ್‌ಸ್ಟೋರಿ ಕಟ್ಟಿದ್ದು. ಇಷ್ಟು ವರ್ಷಗಳಲ್ಲಿ ನಾವು 1,00,000 ಕ್ಕೂ ಅಧಿಕ ಕತೆಗಳನ್ನು ನಿಮ್ಮ ಮುಂದಿಟ್ಟಿದ್ದೇವೆ.


ಇದೆ ನಿಟ್ಟಿನಲ್ಲಿ ಯುವರ್‌ಸ್ಟೋರಿಯ ಪ್ರಮುಖ ಕಾರ್ಯಕ್ರಮವಾದ ಟೆಕ್‌ಸ್ಪಾರ್ಕ್ಸ್‌ ಸಂಪರ್ಕ, ಮಾತುಕತೆಗಳು, ಸಹಯೋಗಗಳಿಗೆ ಪುಷ್ಠಿ ನೀಡುತ್ತಾ, ಭಾರತದಿಂದ ವಿಶ್ವಕ್ಕಾಗಿ ನಿರ್ಮಾಣ ಎಂಬ ಧ್ಯೇಯದೊಂದಿಗೆ ನಿಮ್ಮ ಮುಂದಿದೆ.

ಮತ್ತಷ್ಟು ಹಿರಿದಾಗಿರುವ, ಉತ್ತಮವಾಗಿರುವ ಇದೆ ಮೊದಲ ಬಾರಿಗೆ ವರ್ಚುಅಲ್‌ ಆಗಿರುವ ಟೆಕ್‌ಸ್ಪಾರ್ಕ್ಸ್‌ 2020 ಅನ್ನು ನಿಮ್ಮ ಮುಂದೆ ಸಾದರಪಡಿಸಲು ಹೆಮ್ಮೆಯೆನಿಸುತ್ತದೆ, ಭಾರತದಿಂದ ವಿಶ್ವಕ್ಕಾಗಿ ನಿರ್ಮಾಣದ ಮೇಲೆ ಕೇಂದ್ರಿತವಾಗಿರುವ ಇಲ್ಲಿ ಭಾರತದಿಂದಷ್ಟೆ ಅಲ್ಲದೆ ವಿಶ್ವದ ಅದ್ಭುತ ಸ್ಪೀಕರ್‌ಗಳ ದಂಡೆ ಇದೆ.


ನಮ್ಮ ಸ್ಪೀಕರ್‌ಗಳ ಸಾಲಿನಲ್ಲಿ ಭಾರತ ಸರ್ಕಾರದ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಕಾನೂನು ಮತ್ತು ನ್ಯಾಯ ಸಚಿವ ರವಿಶಂಕರ್ ಪ್ರಸಾದ್, ಭಾರತ ಸರ್ಕಾರದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್, ಸಿಸ್ಕೋನ ಅಧ್ಯಕ್ಷ ಎಮೆರಿಟಸ್ ಮತ್ತು ಜೆಸಿ 2 ವೆಂಚರ್ಸ್ನ ಸಿಇಒ ಜಾನ್ ಚೇಂಬರ್ಸ್, ಟಾಟಾ ಟ್ರಸ್ಟ್ಸ್ನ ಅಧ್ಯಕ್ಷರಾದ ರತನ್ ಟಾಟಾ ಸೇರಿದಂತೆ 200+ ಕ್ಕೂ ಹೆಚ್ಚು ವಿಶೇಷ ವ್ಯಕ್ತಿಗಳು ಸೇರಿದ್ದಾರೆ.



ಟೆಕ್‌ಸ್ಪಾರ್ಕ್ಸ್‌ನ ಇಷ್ಟು ವರ್ಷದ ಪ್ರಯಾಣದಲ್ಲಿ 1.5 ಮಿಲಿಯನ್‌ ಕನೆಕ್ಷನ್‌ಗಳನ್ನು, 2.5 ಮಿಲಿಯನ್‌ ಉದ್ಯೋಗಗಳನ್ನು ಮತ್ತು ಸ್ಟಾರ್ಟಪ್‌ಗಳಿಗೆ $1 ಬಿಲಿಯನ್‌ಗು ಅಧಿಕ ಫಂಡಿಂಗ್‌ ನೀಡಲು ನೆರವಾಗಿದೆ.


5 ದಿನದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇರುವ ಕಾರಣಗಳು ಹಲವು, ನನಗಿಷ್ಟವಾದ ಕೆಲವು ಕಾರಣಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ.

  • ಭಾರತದಿಂದ ವಿಶ್ವಕ್ಕಾಗಿ ನಿರ್ಮಾಣದ ಕುರಿತಾಗಿ ಮಾತುಕತೆಗಳು ಮತ್ತು ಕ್ರಿಯಾತ್ಮಕ ಸೂಕ್ಷ್ಮಗಳು
  • 2020ರ ಟೆಕ್‌ ಲೋಕದ ಹೊಸ ಟ್ರೆಂಡ್‌ಗಳ ಸೂಕ್ಷ್ಮಗಳು
  • ಉದ್ಯೋಗ ಸೃಷ್ಠಿಗೆ ವೇಗ ನೀಡಿ, ಭಾರತದ ಉದ್ಯೋಗದಾತರೆಡೆಗೆ ಗಮನ ಸೆಳೆದು. ಭಾರತದ ಕೌಶಲ್ಯ ಪೂರೈಕೆದಾರರನ್ನು ಪ್ರದರ್ಶಿಸುವ ಯುವರ್‌ಸ್ಟೋರಿಯ ಜಾಬ್‌ ಫಾರ್‌ ಆಲ್‌ (ಎಲ್ಲರಿಗಾಗಿ ಉದ್ಯೋಗ)
  • ಟೆಕ್‌30 2020: ಪ್ರಾರಂಭದ ಹಂತದಲ್ಲಿರುವ 30 ನವೀನ ಸ್ಟಾರ್ಟಪ್‌ಗಳ ವಾರ್ಷಿಕ ಪಟ್ಟಿ
  • ಎಂಟರ್ಪ್ರೈಸ್ ಮತ್ತು ವಿಸಿ ಕನೆಕ್ಟ್ಸ್‌
  • ಭವಿಷ್ಯದ ಬಿಲಿಯನ್‌ ಡಾಲರ್ ಅವಕಾಶಗಳ ನೋಟ
  • ತಜ್ಞರು ಮತ್ತು ಪ್ರಮುಖರಿಂದ ಮಾಸ್ಟರ್‌ಕ್ಲಾಸ್‌ ಮತ್ತು ಕೀ ನೋಟ್ಸ್‌


ಇದರ ಹೊರತಾಗಿ ಮತ್ತೆ ಏನನ್ನು ನಿರೀಕ್ಷಿಸಬಹುದು ಎಂಬುದರ ಒಂದು ನೋಟ

  • ವಿಶೇಷ ಫೈರ್‌ಸೈಡ್ ಚಾಟ್‌ಗಳು
  • ನೀತಿ ನಿರೂಪಕರು, ಉದ್ಯಮದ ಮುಖಂಡರ ಕೀನೋಟ್ಸ್
  • 200+ ಸ್ಪೀಕರ್‌ಗಳು
  • 200+ ವಿಸಿಗಳು
  • 10,000+ ಸ್ಟಾರ್ಟ್ಅಪ್‌ಗಳು
  • ~ 15 ದೇಶಗಳು
  • 5 ದಿನಗಳ ತಡೆರಹಿತ ಕಲಿಕೆ, ಸಂಭಾಷಣೆ ಮತ್ತು ಸಂಪರ್ಕಗಳು


ಮುಖ್ಯ ಸ್ಪೀಕರ್‌ಗಳು

  • ಭಾರತ ಸರ್ಕಾರದ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಕಾನೂನು ಮತ್ತು ನ್ಯಾಯ ಸಚಿವ ರವಿಶಂಕರ್ ಪ್ರಸಾದ್ ಅವರಿಂದ ಉದ್ಘಾಟನಾ ಭಾಷಣ
  • ಗೌರವ ಅತಿಥಿ: ಭಾರತ ಸರ್ಕಾರದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್
  • ಜಾಗತಿಕ ಪ್ರಮುಖ ನಾಯಕರು: ಜಾನ್‌ ಚೆಂಬರ್ಸ್‌, ರತನ್‌ ಟಾಟಾ ಮತ್ತು ಇತರರು
  • ಕೈಗಾರಿಕೆ ಮತ್ತು ವ್ಯಾಪಾರ ಮುಖಂಡರು: ಪುನೀತ್ ಚಂದೋಕ್, ಗುರುರಾಜ್ ದೇಶಪಾಂಡೆ, ಸೀಸರ್ ಸೇನ್‌ಗುಪ್ತಾ, ದಾಜಿ - ಕಮಲೇಶ್ ಪಟೇಲ್ ಮತ್ತು ಇತರರು
  • ಹೂಡಿಕೆದಾರರು: ಶೈಲೇಂದ್ರ ಸಿಂಗ್, ಅನು ಹರಿಹರನ್, ಹ್ಯಾನ್ಸ್ ತುಂಗ್, ವರ್ಷಾ ಟಾಗರೆ, ಪೀಟರ್ ಕೆಂಪ್ಸ್, ಕಾರ್ತಿಕ್ ರೆಡ್ಡಿ, ರಿತು ವರ್ಮಾ, ರೋಹಿತ್ ಸೂದ್, ಸಂಜಯ್ ನಾಥ್, ಅನುಪ್ ಜೈನ್, ಆಶಿಶ್ ಡೇವ್, ಸಂಜಯ್ ಮೆಹ್ತಾ, ಮತ್ತು ಇತರರು
  • ಭಾರತೀಯ ಉದ್ಯಮಿಗಳು ಮತ್ತು ಯುನಿಕಾರ್ನ್ ಸಂಸ್ಥಾಪಕರು: ಶ್ರೀಧರ್ ವೆಂಬು, ಭಾವೀಶ್ ಅಗರ್‌ವಾಲ್, ಬೈಜು ರವೀಂದ್ರನ್, ನಿತಿನ್ ಕಾಮತ್, ಸುಜೀತ್ ಕುಮಾರ್, ಆಶಿಶ್ ಹೇಮ್ರಾಜನಿ, ಗೌರವ್ ಮುಂಜಾಲ್, ಕುನಾಲ್ ಷಾ, ಕವಿನ್ ಭಾರತಿ ಮಿತ್ತಲ್, ಅಭಿನವ್ ಅಸ್ತನಾ
  • ಮಹಿಳೆಯರು: ಸಪ್ನಾ ಚಾಧಾ, ಅರ್ಚನಾ ವೊಹ್ರಾ, ಶೀನಮ್ ಓಹ್ರಿ, ರಿತು ಆನಂದ್, ಗೀತಾ ಮಂಜುನಾಥ್, ಪ್ರಶಾಂತಿ ಬೊಡುಗುಮ್, ಗಜಲ್ ಅಲಾಗ್, ಸಾಕ್ಷಿ ಚೋಪ್ರಾ, ಮತ್ತು ಇತರರು
  • ಪ್ರಮುಖ ವ್ಯಕ್ತಿಗಳು: ಕುನಾಲ್ ಕಪೂರ್, ಸುನೀಲ್ ಶೆಟ್ಟಿ, ತಾಹಿರಾ ಕಶ್ಯಪ್, ಮತ್ತು ಇತರರು

ಟೆಕ್‌ಸ್ಪಾರ್ಕ್ಸ್‌ 2020ರ ಕುರಿತಾದ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಕ್‌ಸ್ಪಾರ್ಕ್ಸ್‌ 2020 ವೆಬ್‌ಸೈಟ್‌ ನೋಡಿ. ಕಾರ್ಯಕ್ರಮದಲ್ಲಿ ಭಾಗವಹಿಸಲು ಇಲ್ಲಿ ಸೈನ್‌ ಅಪ್‌ ಮಾಡಿ.