ಟೆಕ್‌ಸ್ಪಾರ್ಕ್ಸ್‌ 2020 ರಲ್ಲಿ ಕೇಂದ್ರ ಸಚಿವ ರವಿ ಶಂಕರ ಪ್ರಸಾದ್: ಬದಲಾವಣೆಯಲ್ಲಿ ಯುವರ್‌ಸ್ಟೋರಿಯ ಪಾತ್ರವನ್ನು ಗುರುತಿಸಿದ ಸಚಿವರು

ಕೇಂದ್ರ ಐಟಿ ಸಚಿವರಾದ ರವಿ ಶಂಕರ ಪ್ರಸಾದ್‌ ಟೆಕ್‌ಸ್ಪಾರ್ಕ್ಸ್‌ 2020ರಲ್ಲಿ ಮಾತನಾಡುತ್ತಾ ಆತ್ಮನಿರ್ಭರ ಭಾರತ ಸಂಕಲ್ಪದಲ್ಲಿ ಸ್ಟಾರ್ಟಪ್‌ಗಳ ಪಾತ್ರ, ಹೊಸ ಯುಗದ ಆರ್ಥಿಕತೆ ಮತ್ತು ಡಿಜಿಟಲ್‌ ಭಾರತದ ಭವಿಷ್ಯದ ಬಗ್ಗೆ ಮಾತನಾಡುತ್ತಾ ಧನಾತ್ಮಕ, ಸ್ಪೂರ್ತಿದಾಯಕ ಕತೆಗಳ ಮೂಲಕ ಬದಲಾವಣೆಗೆ ಕಾರಣವಾಗುತ್ತಿರುವ ಯುವರ್‌ಸ್ಟೋರಿಯ ಪಾತ್ರದ ಬಗ್ಗೆ ಮಾತನಾಡಿದರು.

ಟೆಕ್‌ಸ್ಪಾರ್ಕ್ಸ್‌ 2020 ರಲ್ಲಿ ಕೇಂದ್ರ ಸಚಿವ ರವಿ ಶಂಕರ ಪ್ರಸಾದ್: ಬದಲಾವಣೆಯಲ್ಲಿ ಯುವರ್‌ಸ್ಟೋರಿಯ ಪಾತ್ರವನ್ನು ಗುರುತಿಸಿದ ಸಚಿವರು

Wednesday October 28, 2020,

2 min Read

ಕೇಂದ್ರದ ಕಾನೂನು ಮತ್ತು ನ್ಯಾಯ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ಭಾರತದ ಅತಿದೊಡ್ಡ ಟೆಕ್-ಸ್ಟಾರ್ಟ್ಅಪ್ ಸಮ್ಮೇಳನವಾದ ಯುವರ್‌ಸ್ಟೋರಿಯ ಟೆಕ್ಸ್‌ಪಾರ್ಕ್ಸ್ 2020 ರಲ್ಲಿ ಮುಖ್ಯ ಭಾಷಣ ಮಾಡಿದರು. ಇದೆ ಮೊದಲ ಬಾರಿಗೆ ಟೆಕ್‌ಸ್ಪಾರ್ಕ್ಸ್‌ ವರ್ಚುಅಲ್‌ ಆಗಿ ನಡೆಯುತ್ತಿದ್ದು ಜಾಗತಿಕ ಪ್ರೇಕ್ಷಕರನ್ನು ತಲುಪುತ್ತಿದೆ.


“ಇದು 11 ನೇ ಟೆಕ್‌ಸ್ಪಾರ್ಕ್ಸ್‌ ಮತ್ತು ಈ ಅದ್ಭುತ ಸಮ್ಮೇಳನಕ್ಕೆ ಸುಮಾರು 15 ದೇಶಗಳಿಂದ 70,000 ಜನರು ನೋಂದಾಯಿಸಿಕೊಂಡಿದ್ದಾರೆ ಎಂದು ನನಗೆ ತಿಳಿಸಿದ್ದಾರೆ. ಶ್ರದ್ಧಾ ಶರ್ಮಾ ಅವರು ಪ್ರಾರಂಭಿಸಿದ ಯುವರ್‌ಸ್ಟೋರಿ ತನ್ನದೆ ಕತೆಗೆ ಸಾಕ್ಷಿಯಾಗುತ್ತಿದೆ,” ಎಂದು ವೀಕ್ಷಕರನ್ನುದ್ದೇಶಿಸಿ ರವಿ ಶಂಕರ್‌ ಪ್ರಸಾದ್‌ ಮಾತನಾಡಿದರು.

ವಿಶ್ವಕ್ಕಾಗಿ ಭಾರತದಿಂದ ನಿರ್ಮಾಣ ಎಂಬ ಧ್ಯೇಯದೊಂದಿಗೆ 5 ದಿನ ನಡೆಯಲಿರುವ ಟೆಕ್‌ಸ್ಪಾರ್ಕ್ಸ್‌ 2020 ಸೋಮವಾರ ಅಕ್ಟೋಬರ್‌ 26 2020 ರಂದು ಪ್ರಾರಂಭವಾಗಿದೆ. ಇಲ್ಲಿ ಬಾರತದಿಂದಷ್ಟೆ ಅಲ್ಲದೆ ವಿಶ್ವದ ಅದ್ಭುತ ವ್ಯಕ್ತಿಗಳು ಮಾತನಾಡಲಿದ್ದಾರೆ. ಈ ಸಮ್ಮೇಳನಕ್ಕೆ ಜಾಗತಿಕವಾಗಿ 70,000 ಜನರು ನೋಂದಾಯಿಸಿಕೊಂಡಿದ್ದಾರೆ.


“ತಂತ್ರಜ್ಞಾನ ಕ್ಷೇತ್ರವು ಯಾವತ್ತೂ ಜನರಿಗೆ ಬಲ ನೀಡಿ, ಆವಿಷ್ಕಾರಕ್ಕೆ ತೊಡಗಿಸಿಕೊಳ್ಳುವಂತೆ ಮಾಡಿ ತಮ್ಮದೆ ಕತೆಯನ್ನು ಬರೆಯುವಂತೆ ಪ್ರೇರೆಪಿಸುತ್ತದೆ. ಶ್ರದ್ಧಾ ಅವರು ತಮ್ಮ ವೇದಿಕೆಗೆ ಯುವರ್‌ಸ್ಟೋರಿ ಎಂದು ಸರಿಯಾಗಿ ಹೆಸರಿಟ್ಟಿರುವುದಕ್ಕೆ ಪ್ರಶಂಸಿಸುತ್ತೇನೆ, ಏಕೆಂದರೆ ಉತ್ತಮ ಸಾಧನೆ ಮಾಡುವ ಜನರ ಕತೆಯನ್ನು ಹೇಳಲು ಒಂದು ವೇದಿಕೆಯ ಅವಷ್ಯಕತೆಯಿರುತ್ತದೆ ಹಾಗಾಗಿ ಯುವರ್‌ ಸ್ಟೋರಿ ಮುಖ್ಯವಾಗಿದೆ. ಹಾಗೆ ಈ ಕಾರ್ಯಕ್ರಮವು ಮುಖ್ಯವಾಗಿದೆ,” ಎಂದರು ಅವರು.


ಅವರ ಭಾಷಣದಲ್ಲಿ ಸಚಿವರು ಆತ್ಮನಿರ್ಭರ ಭಾರತ ಸಂಕಲ್ಪದಲ್ಲಿ ಭಾರತೀಯ ಸ್ಟಾರ್ಟಪ್‌ ವ್ಯವಸ್ಥೆ ಮತ್ತು ಹೊಸ ಯುಗದ ಆರ್ಥಿಕತೆಯ ಪಾತ್ರವನ್ನು ಬಣ್ಣಿಸಿದರು. ಅದರ ಜತೆಗೆ ಡಿಜಿಟಲ್‌ ಭಾರತ ಮತ್ತು ಅದಕ್ಕಾಗಿ ನಮ್ಮದೆ ನೆಲದ ಸುಧಾರಿತ ತಂತ್ರಜ್ಞಾನದ ಮತ್ತು ಆವಿಷ್ಕಾರಗಳ ಅವಷ್ಯಕತೆಯ ಬಗ್ಗೆ ಒತ್ತಿ ಹೇಳಿದರು.


ಭಾರತ ಜಾಗತಿಕ ನಾಯಕನಾಗುವುದರಲ್ಲಿ ಭಾರತದ ಯುವ ಜನತೆಯ ಮತ್ತು ಸ್ಟಾರ್ಟಪ್‌ ಸಮುದಾಯದ ಮೇಲಿರುವ ದೊಡ್ಡ ಭರವಸೆಯ ಬಗ್ಗೆ ಅವರು ಮಾತನಾಡಿದರು.


“ಈಗ ನನ್ನ ಮಾತನ್ನು ಕೇಳುತ್ತಿರುವ ಗೆಳೆಯರು ಮತ್ತು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು ಹೆಚ್ಚಾಗಿ ಯುವಕರೆ. ಭಾರತದ ಜನಸಂಖ್ಯಾ ಲಾಭಾಂಶದಿಂದ ಭಾರತ ಒಂದು ದೊಡ್ಡ ಆರ್ಥಿಕತೆಯಾಗುವ ಎಲ್ಲ ಸಾಮರ್ಥ್ಯ ಹೊಂದಿದೆ. ಹಾಗೆಯೆ ಪೂರೈಕೆ ಸರಪಳಿಯಲ್ಲಿ ಮುಖ್ಯ ಪಾತ್ರ ವಹಿಸಬೇಕು. ಅದೆ ನಮ್ಮ ಆಸೆ,” ಎಂದರು ಅವರು.


ತಮ್ಮ ಭಾಷಣದಲ್ಲಿ, ಭಾರತೀಯ ನಾವೀನ್ಯಕಾರರು, ಉದ್ಯಮಿಗಳು ಮತ್ತು ಬದಲಾವಣೆ ಮಾಡುವವರಲ್ಲಿ ನಾವೀನ್ಯತೆಯ ಕಿಡಿಯನ್ನು ಹೊತ್ತಿಸುವ ಮೂಲಕ ಲಕ್ಷಾಂತರ ಭಾರತೀಯರ ಮೇಲೆ ಪ್ರಭಾವ ಬೀರುವಲ್ಲಿ ಯುವರ್‌ಸ್ಟೋರಿ ಮತ್ತು ಅದರ ಪ್ರಮುಖ ಕಾರ್ಯಕ್ರಮವಾದ ಟೆಕ್‌ಸ್ಪಾರ್ಕ್ಸ್‌ನ ಪಾತ್ರವನ್ನು ಸಚಿವರು ಗುರುತಿಸಿದರು.


“ಟೆಕ್‌ಸ್ಪಾರ್ಕ್ಸ್‌ ಪರಿಹಾರಗಳನ್ನು ಕಂಡುಕೊಳ್ಳಲು ಹಲವರನ್ನು ಪ್ರೇರೆಪಿಸುವುದಂತೆ ನಿಜ,” ಎಂದರು ಅವರು.


ಕಳೆದ ದಶಕದಲ್ಲಿ ಟೆಕ್‌ಸ್ಪಾರ್ಕ್ಸ್‌ 1.5 ಮಿಲಿಯನ್‌ ಸಂಪರ್ಕಗಳನ್ನು, 2.5 ಮಿಲಿಯನ್‌ ಉದ್ಯೋಗಗಳನ್ನು ಮತ್ತು ಸ್ಟಾರ್ಟಪ್‌ಗಳಿಗೆ $1 ಬಿಲಿಯನ್‌ಗೂ ಅಧಿಕ ಫಂಡಿಂಗ್‌ ಪಡೆಯಲು ನೆರವಾಗಿದೆ.


ತಮ್ಮ ಮಾತನ್ನು ಮುಗಿಸುತ್ತಾ ಸಚಿವರು “ಎಲ್ಲರಿಗೂ ಒಳ್ಳೇಯದಾಗಲಿ. ಶ್ರದ್ಧಾ ಅವರ ಕತೆಯೆ ಯುವರ್‌ಸ್ಟೋರಿಯ ವ್ಯಾಖ್ಯಾನ. ಟೆಕ್‌ಸ್ಪಾರ್ಕ್ಸ್‌ ಹೇಗೆ ಒಂದು ದೊಡ್ಡ ವೇದಿಕೆಯಾಗಿ ಬೆಳೆದಿದೆಯೊ ಅದೆ ದೊಡ್ಡ ಭರವಸೆಯನ್ನು ನೀಡುತ್ತಿದೆ,” ಎಂದರು ಅವರು.