ನಿಷ್ಕ್ರಿಯ ಟ್ಯೂಬ್ ಲೈಟ್‌ಗಳನ್ನು ಮತ್ತೆ ಹೊತ್ತಿಸುವ ತೆಲಂಗಾಣದ ಎಂಜಿನೀಯರ್

ಮೂವತ್ತೊಂಬತ್ತು ವರ್ಷದ ನರಸಿಂಹಚಾರಿ ವಿವಿಧ ಪಂಚಾಯಿತಿಗಳು ಮತ್ತು ನಾಗರಿಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ಭಾರತದಾದ್ಯಂತ 10 ಲಕ್ಷಕ್ಕೂ ಹೆಚ್ಚು ಟ್ಯೂಬ್ ಲೈಟ್‌ಗಳನ್ನು ಯಶಸ್ವಿಯಾಗಿ ಬೆಳಗಿಸಿದ್ದಾರೆ.

10th Feb 2020
  • +0
Share on
close
  • +0
Share on
close
Share on
close

ಬಾಲ್ಯದಲ್ಲಿ, ನರಸಿಂಹ ಚಾರಿ ಆಟದ ಸಮಾನುಗಳಿಗಿಂತ ಪ್ಲಾಸ್ಟಿಕ್, ಸಿಲಿಕಾನ್ ಮತ್ತು ಲಿಥಿಯಂನಿಂದ ಕೂಡಿದ ವಸ್ತುಗಳೊಂದಿಗೆ ಹೆಚ್ಚು ಸಮಯ ಕಳೆದವರು. ಅವರ ನೆರೆಹೊರೆಯ ಮಕ್ಕಳು ಹಾಪ್‌ಸ್ಕಾಚ್ ಮತ್ತು ಖೋ-ಖೋ ಆಡುವುದರಲ್ಲಿ ನಿರತರಾಗಿದ್ದಾಗ, ಅವರು ತಮ್ಮ ಚಿಕ್ಕಪ್ಪನ ದುರಸ್ತಿ ಅಂಗಡಿಯಲ್ಲಿನ ಮೋಟಾರ್‌ಗಳ ಪ್ರಯೋಗ ಮತ್ತು ವಿದ್ಯುತ್ಕಾಂತೀಯ ಆಟಿಕೆ ರೈಲುಗಳನ್ನು ನಿರ್ಮಿಸುವಲ್ಲಿ ನಿರತರಾಗಿದ್ದರು.


ಇಂದು, 39 ವರ್ಷ ವಯಸ್ಸಿನ ನರಸಿಂಹ, ನಿಷ್ಕ್ರಿಯ ಟ್ಯೂಬ್ ಲೈಟ್‌ಗಳನ್ನು ಮತ್ತೆ ಹೊತ್ತಿಸುವ ಮೂಲಕ ಜಗತ್ತನ್ನು ಬೆಳಗಿಸುವ ಪ್ರಕ್ರಿಯೆಯಲ್ಲಿದ್ದಾರೆ.


ತ್ಯಜಿಸಿದ ಟ್ಯೂಬ್ ಲೈಟ್‌ಗಳನ್ನು ಮರು-ಬೆಳಗಿಸುವ ಉದ್ದೇಶವನ್ನು ಪೂರೈಸಲು ನರಸಿಂಹ ಚಾರಿ ಏಳು ವರ್ಷಗಳನ್ನು ತೆಗೆದುಕೊಂಡರು.


2000 ನೇ ಇಸವಿಯಲ್ಲಿ ಅವರು ಇಂಟಿಗ್ರೇಟೆಡ್ ಸರ್ಕ್ಯೂಟ್ ಅನ್ನು ಕಂಡುಹಿಡಿದಾಗ ಅದರಿಂದ ಚಾಕ್ ಮತ್ತು ಸ್ಟಾರ್ಟರ್ ಅನ್ನು ಬಳಸದೆ ವಿಫಲವಾದ ಟ್ಯೂಬ್ ಲೈಟ್‌ಗಳನ್ನು ಮತ್ತೆ ಪ್ರಜ್ವಲಿಸುವಂತೆ ಮಾಡಬಹುದಾಗಿತ್ತು. ಆದಾಗ್ಯೂ, ನರಸಿಂಹರ ಪ್ರಯಾಣ ಸುಲಭವಾಗಿರಲಿಲ್ಲ. ಈ ಸಾಧನೆ ಮಾಡಲು ಅವರಿಗೆ ಏಳು ವರ್ಷಗಳ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಬೇಕಾಯಿತು.


ಜಾಗೃತಿ ಯಾತ್ರಾ ದಲ್ಲಿ ಅವರು ತಮ್ಮ ಪ್ರಯತ್ನದ ಬಗ್ಗೆ ಮಾತನಾಡುತ್ತ,


"ನನ್ನ ಮಿಷನ್ ಯಶಸ್ವಿಯಾದರೆ, ದೇಶಾದ್ಯಂತ ಕತ್ತಲೆಯಲ್ಲಿ ಮಲಗಿರುವ ಅನೇಕ ಪ್ರದೇಶಗಳನ್ನು ವಿದ್ಯುದ್ದೀಕರಿಸಲು ಸಹಾಯ ಮಾಡುತ್ತದೆ ಎಂಬುದು ನನಗೆ ತಿಳಿದಿದೆ. ಆದ್ದರಿಂದ, ಗ್ರಂಥಾಲಯದಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಹಿಡಿದು ಮನೆಯಲ್ಲಿ ಸಂಶೋಧನೆ ಮತ್ತು ಪ್ರಯೋಗಗಳನ್ನು ನಡೆಸುವವರೆಗೆ, ನಾನು ಯಾವುದೇ ಪ್ರಯತ್ನವನ್ನು ಸಹ ಬಿಡಲಿಲ್ಲ,” ಎಂದರು.


ಇಲ್ಲಿಯವರೆಗೆ, ನರಸಿಂಹ ವಿವಿಧ ಪಂಚಾಯಿತಿಗಳು, ನಾಗರಿಕ ಸಂಸ್ಥೆಗಳು ಮತ್ತು ಪುರಸಭೆ ಸಂಸ್ಥೆಗಳ ಸಹಭಾಗಿತ್ವದಲ್ಲಿ ಭಾರತದಾದ್ಯಂತ 10 ಲಕ್ಷಕ್ಕೂ ಹೆಚ್ಚು ಟ್ಯೂಬ್ ಲೈಟ್‌ಗಳನ್ನು ಯಶಸ್ವಿಯಾಗಿ ಬೆಳಗಿಸಿದ್ದಾರೆ. ಇದಲ್ಲದೆ, ಅವರು ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆ (ಎನ್‌ಐಆರ್‌ಡಿ) ಯೊಂದಿಗೆ ಕೆಲಸ ಮಾಡುವ ಮೂಲಕ ವಿದ್ಯುದ್ದೀಕರಣದ ಈ ಪ್ರಯತ್ನವನ್ನು ಮುಂದುವರಿಸುತ್ತಿದ್ದಾರೆ.


ಅವರು ತಮ್ಮ ಆವಿಷ್ಕಾರಕ್ಕಾಗಿ ಸಾಕಷ್ಟು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ ಅದರಲ್ಲಿ ಪ್ರಮುಖವಾದುದು - ತಳಮಟ್ಟದಲ್ಲಿ ಪರಿಣಾಮಕಾರಿ ಆವಿಷ್ಕಾರಗಳನ್ನು ಹುಡುಕಲು ಸೀಮೆನ್ಸ್ ನಡೆಸುತ್ತಿರುವ ಉಪಕ್ರಮದ ಭಾಗವಾಗಿ, ‘ಗ್ರೇಟ್ ಮೈಂಡ್ಸ್, ಲಾಂಗ್ ಮೈಲ್ಸ್ - ಕ್ವೆಸ್ಟ್ ಫಾರ್ ಆನ್ಸರ್ಸ್ʼ ಪ್ರಶಸ್ತಿ. 39 ವರ್ಷದ ಇವರು ಡಿಸ್ಕವರಿ ಚಾನೆಲ್‌ನಲ್ಲಿ ಸಹ ಕಾಣಿಸಿಕೊಂಡಿದ್ದರು.


ಆರಂಭಿಕ ಪ್ರಯಾಣ

ನಾಲ್ಕು ಒಡಹುಟ್ಟಿದವರಲ್ಲಿ ನರಸಿಂಹ ಕಿರಿಯರು ಮತ್ತು ಅವರು ತೆಲಂಗಾಣದ ನವಪೇಟೆಯ ನಿಜಾಮಾಬಾದ್ ಜಿಲ್ಲೆಯಲ್ಲಿ ಹುಟ್ಟಿ ಬೆಳೆದವರು. ಹಗಲಿನಲ್ಲಿ, ಅವರ ತಂದೆ ಮೆಟಲ್-ಹಾಗೂ-ಪೀಠೋಪಕರಣಗಳ ಕೆಲಸದ ಅಂಗಡಿಯೊಂದನ್ನು ನಡೆಸುತ್ತಿದ್ದರು ಮತ್ತು ಅಗತ್ಯತೆಗಳನ್ನು ಪೂರೈಸಲು ಹಗಲು ರಾತ್ರಿಯೆನ್ನದೆ ಶ್ರಮಿಸಬೇಕಾಗಿರುತ್ತಿತ್ತು. ವಿಜ್ಞಾನದ ವಿಷಯದಲ್ಲಿ ಅವರ ಆಸಕ್ತಿಯಿಂದಾಗಿ, ಅವರು ಯಾವಾಗಲೂ ಪ್ರಯೋಗ ಮಾಡುತ್ತಾ ತಪ್ಪು ತಿದ್ದಿಕೊಳ್ಳುವ ಅಭ್ಯಾಸವನ್ನು ಅನುಸರಿಸುತ್ತ ಅನ್ವೇಷಿಸುತ್ತಿದ್ದರು.


ಕೋಕಾ ಕೋಲಾ ಮತ್ತು ಜಾಗೃತಿ ಯಾತ್ರಾ 2019 ರ ‘ಸಸ್ಟೈನಬಲ್ ಎಂಟರ್ಪ್ರೈಸ್ ಪ್ರಶಸ್ತಿ' ಗೆದ್ದ ನಂತರ ನರಸಿಂಹ ಚಾರಿ


ನರಸಿಂಹ ಝೆಡ್‌ ಪಿ ಸೆಂಟ್ರಲ್ ಪ್ರೈಮರಿ ಶಾಲೆಯಲ್ಲಿ 3 ನೇ ತರಗತಿಯಲ್ಲಿದ್ದಾಗ, ಭೂಮಿಯ ಸುತ್ತುವಿಕೆಯನ್ನು ಪ್ರದರ್ಶಿಸಲು ಅದರ ಅಕ್ಷದ ಸುತ್ತ ಹಗುರವಾದ ಪ್ಲಾಸ್ಟಿಕ್ ಚೆಂಡುಗಳನ್ನು ಬಳಸಿ ಅವರು ಒಂದು ಮಾದರಿಯನ್ನು ವಿನ್ಯಾಸಗೊಳಿಸಿದರು. ಇದು ಜಿಲ್ಲಾ ಮಟ್ಟದ ವಿಜ್ಞಾನ ಮೇಳದಲ್ಲಿ ಅವರಿಗೆ ಪ್ರಶಸ್ತಿ ತಂದು ಕೊಟ್ಟಿತು. 1991 ರಲ್ಲಿ ನಾವಿಪೇಟೆ ವಿದ್ಯುತ್ ಮಂಡಳಿಯ ಆವರಣದಲ್ಲಿ ಕಾರ್ಯನಿರ್ವಹಿಸದ ಟ್ಯೂಬ್ ಲೈಟ್‌ಗಳ ಮೇಲೆ ಬಿದ್ದಾಗ ಅದರೊಂದಿಗೆ ಅವರ ಪ್ರಯೋಗದ ವ್ರವಾಸ ಪ್ರಾರಂಭವಾಯಿತು.


"ನೂರಾರು ಟ್ಯೂಬ್ ಲೈಟ್‌ಗಳು ಎಲ್ಲೆಡೆ ಹರಡಿಕೊಂಡಿರುವುದನ್ನು ನಾನು ನೋಡಿದೆ ಮತ್ತು ಇವುಗಳನ್ನು ಹೇಗೆ ಮರುಬಳಕೆ ಮಾಡಬಹುದು ಎಂಬುದರ ಬಗ್ಗೆ ಆಲೋಚನೆಗಳು ಸುಳಿದಾಡಲಾರಂಭಿಸಿದವು. ಆ ದಿನ, ಅವುಗಳನ್ನು ಮತ್ತೆ ಬೆಳಗಿಸುವ ಮಾರ್ಗವನ್ನು ಕಂಡುಕೊಳ್ಳಲು ನಿರ್ಧರಿಸಿದೆ. ನಾನು ಆಗ ನವಿಪೇಟೆಯ ಮಾಡರ್ನ್ ಪಬ್ಲಿಕ್ ಶಾಲೆಯಲ್ಲಿ 7 ನೇ ತರಗತಿ ಓದುತ್ತಿದ್ದೆ. ತರಗತಿಯ ನಂತರ, ನಾನು ವಿವಿಧ ವಿದ್ಯುತ್ ಘಟಕಗಳ ಬಗ್ಗೆ ಸಾಧ್ಯವಾದಷ್ಟು ಓದಲು ಕೇಂದ್ರ ಗ್ರಂಥಾಲಯಕ್ಕೆ ಹೋಗುತ್ತಿದ್ದೆ. ದುರದೃಷ್ಟವಶಾತ್, ಆ ಸಮಯದಲ್ಲಿ ಗೂಗಲ್ ಅಸ್ತಿತ್ವದಲ್ಲಿರಲಿಲ್ಲ,” ಎಂದು ನರಸಿಂಹ ಹೇಳುತ್ತಾರೆ.


ಮುಂದಿನ ಏಳು ವರ್ಷಗಳವರೆಗೆ, ನರಸಿಂಹರ ಪ್ರಪಂಚವು ತಂತುಗಳು, ಗಾಜು ಮತ್ತು ವಿದ್ಯುದ್ವಾರಗಳ ಸುತ್ತ ಸುತ್ತಿತು. ಸಂಶೋಧನಾ ಕಾರ್ಯದಲ್ಲಿ ಹೆಚ್ಚಿನ ಸಮಯವನ್ನು ಮೀಸಲಿಡಬಹುದೆಂದು ಅವರು ಮುಕ್ತ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್‌ನಲ್ಲಿ ಪದವಿ ಪಡೆದರು.


ನರಸಿಂಹ ತೆಲಂಗಾಣದ ಐಟಿ ಮತ್ತು ಕೈಗಾರಿಕಾ ಸಚಿವ ಕೆ.ಟಿ.ರಾಮರಾವ್ ಅವರಿಂದ ಇಂಟಿಂಟಾ ಇನ್ನೋವೇಟರ್ ರಾಜ್ಯ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
2000 ರಲ್ಲಿ, ಸರಣಿ ಪ್ರಯೋಗಗಳ ನಂತರ, ಇಂಟಿಗ್ರೇಟೆಡ್ ಸರ್ಕ್ಯೂಟ್ ಅನ್ನು ಅಭಿವೃದ್ಧಿಪಡಿಸುವ ಮೂಲಕ ತಿರಸ್ಕರಿಸಿದ ಟ್ಯೂಬ್ ಲೈಟ್‌ಗಳನ್ನು ಮತ್ತೆ ಬೆಳಗಿಸುವ ವಿಧಾನವನ್ನು ಅವರು ರೂಪಿಸಿದರು. "ಇದು ನನ್ನ ಜೀವನದ ಅತ್ಯಂತ ಸಂತೋಷದಾಯಕ ದಿನ," ಎಂದು ಅವರು ಉದ್ಗರಿಸುತ್ತಾರೆ.


“ಅವುಗಳ ತಂತುಗಳು ತೆರೆದ ನಂತರ ಟ್ಯೂಬ್ ಲೈಟ್‌ಗಳು ವಿಫಲಗೊಳ್ಳುತ್ತವೆ. ಬೆಳಗಲು ಅಗತ್ಯವಾದ ವೋಲ್ಟೇಜ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಅವು ಕಳೆದುಕೊಂಡಾಗಲೂ ಇದು ಸಂಭವಿಸುತ್ತದೆ. ಹಾಗಾಗಿ ನಾನು ರೆಸಿಸ್ಟರ್‌ಗಳು, ಕೆಪಾಸಿಟರ್‌ಗಳು, ನಿಕ್ರೋಮ್ ಸ್ಪ್ರಿಂಗ್‌ಗಳನ್ನು ಬಳಸಿ ಸರ್ಕ್ಯೂಟ್ ಮಾಡಿದ್ದೇನೆ. ಇದು ಎಲೆಕ್ಟ್ರಾನ್ ಅನ್ನು ಕ್ಯಾಥೋಡ್‌ನಿಂದ ಆನೋಡ್‌ಗೆ ಚಲಿಸುವಂತೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ, ಅದನ್ನು ಮಾಡಲು ಐದು ಮಿಲಿಗ್ರಾಂ ಬಳಕೆಯಾಗದ ಪಾದರಸವನ್ನು ವಿದ್ಯುತ್ ಉತ್ಪಾದಿಸಲು ಬಳಸುತ್ತದೆ. ಮೇಲಿನ ಪ್ರಕ್ರಿಯೆಗೆ ಯಾವುದೇ ತಂತು, ಇಂಡಕ್ಷನ್ ಕಾಯಿಲ್, ಚಾಕ್ ಅಥವಾ ಸ್ಟಾರ್ಟರ್ ಅಗತ್ಯವಿಲ್ಲ, ಮತ್ತು ಇದನ್ನು ‘ಚಾರಿ ಫಾರ್ಮುಲಾ’ ಎಂದು ಕರೆಯಲಾಯಿತು,” ಎಂದು ನರಸಿಂಹ ವಿವರಿಸುತ್ತಾರೆ.


ನರಸಿಂಹರ ಕೆಲಸವನ್ನು ಮೊದಲು ತೆಲುಗು ಪತ್ರಿಕೆ ಈನಾಡು ಪ್ರಕಟಿಸಿತು. ಶೀಘ್ರದಲ್ಲೇ, ಇತರ ಅನೇಕ ಮಾಧ್ಯಮ ಸಂಸ್ಥೆಗಳು ಅವರ ಆವಿಷ್ಕಾರವನ್ನು ಪ್ರದರ್ಶಿಸಲು ಪ್ರಾರಂಭಿಸಿದವು. ಏತನ್ಮಧ್ಯೆ, ಅವರು ವಿಜಯ್ ಗ್ರಾಮೀಣ ಎಂಜಿನಿಯರಿಂಗ್ ಕಾಲೇಜಿನಿಂದ ಪ್ರಾಧ್ಯಾಪಕರಾಗಿ ಸೇರಲು ಪ್ರಸ್ತಾಪವನ್ನು ಪಡೆದರು, ನಂತರ ಅವರು ಅದನ್ನು ಒಪ್ಪಿಕೊಂಡರು. 39 ವರ್ಷ ವಯಸ್ಸಿನ ಅವರು 2004-05ರಲ್ಲಿ ನಡೆದ ರಾಜ್ಯ ಯುವ ಪ್ರದರ್ಶನ, 2007-08ರಲ್ಲಿ ಜನರಲ್ ಎಲೆಕ್ಟ್ರಿಕ್ ಇನ್ನೋವೇಶನ್ ಸ್ಪರ್ಧೆ ಇತ್ಯಾದಿಗಳ ಭಾಗವಾಗಿ ವರ್ಷಗಳಲ್ಲಿ ‘ಅತ್ಯುತ್ತಮ ಯೋಜನೆ’ ವಿಭಾಗದಲ್ಲಿ ಅನೇಕ ಪುರಸ್ಕಾರಗಳನ್ನು ಪಡೆದರು.


ಇತರರ ಜೀವನವನ್ನು ಬೆಳಗಿಸುವುದು

ನರಸಿಂಹರನ್ನು ಇತರರಿಂದ ಬೇರ್ಪಡಿಸುವ ಅಂಶವೆಂದರೆ ಅವರ ಸೋಲೊಪ್ಪಿಕೊಳ್ಳದ ಮನೋಭಾವ. ತನ್ನ ಪ್ರಯಾಣದಲ್ಲಿ ಅನೇಕ ವೈಫಲ್ಯಗಳನ್ನು ಎದುರಿಸಿದರೂ, ಅವರು ಯಶಸ್ಸನ್ನು ಪಡೆಯುವವರೆಗೂ ಪ್ರಯತ್ನಿಸುತ್ತಲೇ ಇದ್ದರು. ತನ್ನ ಕೆಲಸವು ತನ್ನ ಸುತ್ತಲಿನ ಸಮುದಾಯಕ್ಕೆ ಅನುಕೂಲವಾಗಬೇಕೆಂದು ಅವರು ಬಯಸಿದರು.


ಮಾದರಿ ಪ್ರದರ್ಶಿಸುತ್ತಿರುವ ನರಸಿಂಹಾಚಾರಿ


ನಮ್ಮಲ್ಲಿ ಹೆಚ್ಚಿನವರು ಟ್ಯೂಬ್ ಲೈಟ್‌ಗಳನ್ನು ಮತ್ತು ಸಿಎಫ್‌ಎಲ್ ಬಲ್ಬ್‌ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ ನಂತರ ಅದರ ಹಾನಿಕಾರಕ ಪರಿಣಾಮಗಳ ಬಗ್ಗೆ ಅರಿವಿಲ್ಲದೆ ಎಸೆಯುತ್ತಾರೆ. ಅದರಲ್ಲಿರುವ ಪಾದರಸದ ಆವಿ ಮಣ್ಣು, ನೀರು ಮತ್ತು ನಾವು ಉಸಿರಾಡುವ ಗಾಳಿಯನ್ನು ಸಹ ಕಲುಷಿತಗೊಳಿಸುತ್ತದೆ. ಚಾರಿ ಫಾರ್ಮುಲಾ ಇದನ್ನು ಹಾಳಾಗಿರುವ ಟ್ಯೂಬ್ ಲೈಟ್ಗಳನ್ನು ಕನಿಷ್ಠ ಮೂರು ವರ್ಷಗಳವರೆಗೆ ಮತ್ತೆ ಬೆಳಗಿಸಲು ಸಹಾಯ ಮಾಡುವ ಮೂಲಕ ಮತ್ತು ಅದರಲ್ಲಿರುವ ಎಲ್ಲಾ ಪಾದರಸವನ್ನು ತೆರವುಗೊಳಿಸುವ ಮೂಲಕ ಸಹಾಯ ಮಾಡುತ್ತದೆ. ಇದಲ್ಲದೆ, ನರಸಿಂಹನ ಇಂಟಿಗ್ರೇಟೆಡ್ ಸರ್ಕ್ಯೂಟ್ ಬಳಸಿ ಟ್ಯೂಬ್ ಲೈಟ್‌ಗಳನ್ನು ಮರು-ಬೆಳಗಿಸುವ ವೆಚ್ಚವು 50 ರೂ.ಗಳಷ್ಟು ಕಡಿಮೆಯಾಗಿದೆ, ಆದರೆ ಹೊಸದನ್ನು ಖರೀದಿಸುವುದರಿಂದ ಕನಿಷ್ಠ 500 ರೂ. ಖರ್ಚಾಗುತ್ತದೆ.


“ಪ್ರತಿ ವರ್ಷ ಸರ್ಕಾರವು ವಿದ್ಯುತ್‌ಗಾಗಿ ಲಕ್ಷಾಂತರ ಕೋಟಿ ಖರ್ಚು ಮಾಡುತ್ತದೆ. ಇನ್ನೂ ಭಾರತ 100 ಪ್ರತಿಶತ ವಿದ್ಯುದ್ದೀಕರಣವನ್ನು ಸಾಧಿಸಿಲ್ಲ. ಜನರಿಗೆ ವೆಚ್ಚ-ಪರಿಣಾಮಕಾರಿ ಶಕ್ತಿಯನ್ನು ಒದಗಿಸುವಾಗ ಸೇವೆಯಲ್ಲಿರುವುದು ನನ್ನ ಗುರಿ. ಇದರ ಭಾಗವಾಗಿ, ತಿರಸ್ಕರಿಸಿದ ಟ್ಯೂಬ್ ಲೈಟ್‌ಗಳನ್ನು ವಿದ್ಯುದ್ದೀಕರಿಸಲು ಮತ್ತು 1,000 ಹಳ್ಳಿಗಳಲ್ಲಿ ಬೀದಿಗಳನ್ನು ಬೆಳಗಿಸಲು ಅವುಗಳನ್ನು ಸ್ಥಾಪಿಸಲು ನಾನು ನಿಜಾಮಾಬಾದ್ ಮಹಾನಗರ ಪಾಲಿಕೆಯ ಜೊತೆಗೆ ಜಿಲ್ಲಾ ಪಂಚಾಯತ್ ಕಚೇರಿಯ ಸಹಯೋಗದೊಂದಿಗೆ ಯೋಜನೆಗಳನ್ನು ಕೈಗೆತ್ತಿಕೊಂಡೆ. ಸರ್ಕಾರವು ಸುಮಾರು 12.5 ಲಕ್ಷ ರೂ.ಗಳನ್ನು ಉಳಿಸಲು ಸಾಧ್ಯವಾಯಿತು,” ಎಂದು ನರಸಿಂಹ ಹೇಳುತ್ತಾರೆ.


ಪ್ರಸ್ತುತ ತನ್ನ ಆವಿಷ್ಕಾರಕ್ಕೆ ಪೇಟೆಂಟ್ ಹೊಂದಿರುವ ನರಸಿಂಹ, ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ಉಳಿದುಕೊಂಡಿರುವ ದೇಶದ ವಿವಿಧ ಭಾಗಗಳನ್ನು ವಿದ್ಯುದ್ದೀಕರಿಸಲು ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆ (ಎನ್‌ಐಆರ್‌ಡಿ) ಯೊಂದಿಗೆ ಕೆಲಸ ಮಾಡುತ್ತಿದ್ದಾರೆ.


ಅವರ ಜೀವನದಲ್ಲಿ ಅವರ ಅತಿದೊಡ್ಡ ಕಲಿಕೆಯ ಬಗ್ಗೆ ಕೇಳಿದಾಗ, "ಕುತೂಹಲ ಮತ್ತು ಕಠಿಣ ಪರಿಶ್ರಮವು ನಿಮಗೆ ಸ್ಥಾನಗಳನ್ನು ನೀಡುತ್ತದೆ," ಎಂದರು.Want to make your startup journey smooth? YS Education brings a comprehensive Funding Course, where you also get a chance to pitch your business plan to top investors. Click here to know more.

  • +0
Share on
close
  • +0
Share on
close
Share on
close

Our Partner Events

Hustle across India