ಕೊನೆಗೂ ಭಾರತಕ್ಕೆ ಬಂತು ಟೆಸ್ಲಾ; ಬೆಂಗಳೂರಿನಲ್ಲೆ ಘಟಕ

ಗ್ಲೋಬಲ್ ಸೀನಿಯರ್ ಡೈರೆಕ್ಟರ್ ಡೇವಿಡ್ ಜಾನ್ ಫೆಯಿನ್ಸ್ಟೈನ್, ಮುಖ್ಯ ಅಕೌಂಟಿಂಗ್ ಆಫೀಸರ್ ವೈಭವ್ ತನೇಜಾ, ಮತ್ತು ಉದ್ಯಮಿ ವೆಂಕಟ್‌ರಂಗಂ ಶ್ರೀರಾಮ್ ಅವರನ್ನು ಹೊಸದಾಗಿ ರೂಪುಗೊಂಡ ಘಟಕದ ನಿರ್ದೇಶಕರಾಗಿ ಟೆಸ್ಲಾ ನೇಮಿಸಿದೆ.

ಕೊನೆಗೂ ಭಾರತಕ್ಕೆ ಬಂತು ಟೆಸ್ಲಾ; ಬೆಂಗಳೂರಿನಲ್ಲೆ ಘಟಕ

Wednesday January 13, 2021,

1 min Read

ಕೊನೆಗೂ ಭಾರತಕ್ಕೆ ಟೆಸ್ಲಾ ಪಾದಾರ್ಪಣೆ ಮಾಡಿದೆ. ಅದು ಬೆಂಗಳೂರಿನಲ್ಲಿ ಘಟಕ ತೆರೆದಿರುವುದು ವಿಶೇಷ.


ಕಂಪನಿಯ ರಿಜಿಸ್ಟ್ರಾರ್‌ಗಳ ಪ್ರಕಾರ ಟೆಸ್ಲಾ ಬೆಂಗಳೂರಿನಲ್ಲಿ ಅದರ ಅಂಗಸಂಸ್ಥೆಯಾಗಿ ಟೆಸ್ಲಾ ಇಂಡಿಯಾ ಮೊಟರ್ಸ್‌ ಆ್ಯಂ‍ಡ್ ಎನರ್ಜಿ ಪ್ರೈ ಲಿ. ಎಂಬ ಹೆಸರಿನಲ್ಲಿ ಜನೇವರಿ 8 ರಂದು ಹೊಸ ಕಚೇರಿಯನ್ನು ತೆರೆದಿದೆ.


ಗ್ಲೋಬಲ್ ಸೀನಿಯರ್ ಡೈರೆಕ್ಟರ್ ಡೇವಿಡ್ ಜಾನ್ ಫೆಯಿನ್ಸ್ಟೈನ್, ಮುಖ್ಯ ಅಕೌಂಟಿಂಗ್ ಆಫೀಸರ್ ವೈಭವ್ ತನೇಜಾ, ಮತ್ತು ಉದ್ಯಮಿ ವೆಂಕಟ್‌ರಂಗಂ ಶ್ರೀರಾಮ್ ಅವರನ್ನು ಹೊಸದಾಗಿ ರೂಪುಗೊಂಡ ಘಟಕದ ನಿರ್ದೇಶಕರಾಗಿ ಟೆಸ್ಲಾ ನೇಮಿಸಿದೆ.

ಬಿಡಿಭಾಗಗಳು, ಘಟಕಗಳು, ಉಪಕರಣಗಳು ಮತ್ತು ಪರಿಕರಗಳು ಸೇರಿದಂತೆ ವಿದ್ಯುತ್‌ ವಾಹನಗಳು ಮತ್ತು ಉತ್ಪನ್ನಗಳ ಮಾರಾಟದ ಜವಾಬ್ದಾರಿ ಈ ಘಟಕದ ಮೇಲಿರುತ್ತದೆ. ವಾಹನ ಭಾಗಗಳು, ಘಟಕಗಳು, ಪರಿಕರಗಳ ಖರೀದಿ ಮತ್ತು ಸಂಗ್ರಹಣೆ ಮತ್ತು ಎಂಜಿನಿಯರಿಂಗ್, ತಾಂತ್ರಿಕ ನೆರವು ಮತ್ತು ತರಬೇತಿ ಸೇವೆಗಳನ್ನು ಒದಗಿಸುವುದು ಸೇರಿದಂತೆ ಚಟುವಟಿಕೆಗಳಲ್ಲಿ ಈ ಘಟಕ ಭಾಗಿಯಾಗಲಿದೆ.


ಇತ್ತೀಚೆಗೆ 160 ಬಿಲಿಯನ್‌ ಡಾಲರ್‌ ಸಂಪತ್ತು ಗಳಿಸುವ ಮೂಲಕ ಅಮೆಜಾನ್‌ನ ಜೆಫ್‌ ಬೆಜೋಸ್‌ ಅವರನ್ನು ಹಿಂದಕ್ಕಿ ವಿಶ್ವದ ಅತಿ ಶ್ರೀಮಂತನೆಂಬ ಪಟ್ಟ ಪಡೆದುಕೊಂಡ ಎಲಾನ್‌ ಮಸ್ಕ್‌ ಕಳೆದೆರಡು ವರ್ಷಗಳಿಂದ ಭಾರತಕ್ಕೆ ಬರುವ ಆಸೆಯನ್ನು ವ್ಯಕ್ತಪಡಿಸುತ್ತಿದ್ದರು.


2018 ರಲ್ಲಿ 2019 ರ ಒಳಗಾಗಿ ಟೆಸ್ಲಾ ಭಾರತದಲ್ಲಿರುತ್ತದೆ ಎಂದಿದ್ದರು.


ಮಾಧ್ಯಮ ವರದಿಗಳ ಪ್ರಕಾರ ಹೂಡಿಕೆಗಾಗಿ ಕರ್ನಾಟಕ ಸರ್ಕಾರ ಟೆಸ್ಲಾದೊಂದಿಗೆ ಮಾತುಕತೆ ನಡೆಸುತ್ತಿದೆ. ಕಂಪನಿ ಜಾಗಕ್ಕಾಗಿ ಹುಡುಕಾಡುತ್ತಿದ್ದು, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌, ತಮಿಳುನಾಡು ಮತ್ತು ಆಂಧ್ರ ಪ್ರದೇಶ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.


ಸುದ್ದಿಗಳ ಪ್ರಕಾರ ಭಾರತದಲ್ಲಿ ಟೆಸ್ಲಾ ಮಾಡಲ್‌ 3 ಕಾರು ಖರೀದಿಗೆ ಲಭ್ಯವಿರಲಿದ್ದು, ಅದರ ಬೆಲೆ 55 ರಿಂದ 60 ಲಕ್ಷವಿರಲಿದೆ.