ಭೂಮಿಯ ಅತ್ಯಂತ ವಾಸಯೋಗ್ಯವಲ್ಲದ ಸ್ಥಳ ಕಂಡುಬಂದಿದೆ

ಯಾವುದೇ ರೀತಿಯ ಜೀವಗಳಿಲ್ಲದ ಭೂಮಿಯ ಮೇಲಿನ ಜಲಪ್ರದೇಶವನ್ನು ಸಂಶೋಧಕರು ಕಂಡುಕೊಂಡಿದ್ದಾರೆ, ಈ ಸಂಶೋಧನೆಯಿಂದಾಗಿ ವಾಸಯೋಗ್ಯತೆಯ ಮಿತಿಗಳ ಕುರಿತ ತಿಳುವಳಿಕೆ ಸುಧಾರಿತಗೊಳ್ಳಲಿದೆ.

ಭೂಮಿಯ ಅತ್ಯಂತ ವಾಸಯೋಗ್ಯವಲ್ಲದ ಸ್ಥಳ ಕಂಡುಬಂದಿದೆ

Monday November 25, 2019,

2 min Read

ನೇಚರ್ ಎಕಾಲಜಿ ಮತ್ತು ಎವಲ್ಯೂಷನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು, ಇಥಿಯೋಪಿಯಾದ ಡಲ್ಲೋಲ್ ಭೂಶಾಖ ಕ್ಷೇತ್ರದ ಸುಡುವ, ಲವಣಯುಕ್ತ, ಹೈಪರಾಸಿಡ್ ಕೊಳಗಳಲ್ಲಿ ಯಾವುದೇ ರೀತಿಯ ಸೂಕ್ಷ್ಮಜೀವಿಗಳು ವಾಸಿಸುವುದಿಲ್ಲ ಎಂದು ಬಹಿರಂಗಪಡಿಸಿದೆ.


ಸ್ಪ್ಯಾನಿಷ್ ಫೌಂಡೇಶನ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ (ಎಫ್‌ಇಸಿವೈಟಿ)ಯ ಸಂಶೋಧಕರು ಸೇರಿದಂತೆ, ಡಲ್ಲೋಲ್‌ನ ಭೂಪ್ರದೇಶವು ಉಪ್ಪು ತುಂಬಿದ ಜ್ವಾಲಾಮುಖಿ ಕುಳಿಯ ಮೇಲೆ ವ್ಯಾಪಿಸಿ, ತೀವ್ರವಾದ ಜಲವಿದ್ಯುತ್ ಚಟುವಟಿಕೆಯಿಂದಾಗಿ ಕುದಿಯುವ ನೀರಿನೊಂದಿಗೆ ವಿಷಕಾರಿ ಅನಿಲಗಳನ್ನು ನಿರಂತರವಾಗಿ ಬಿಡುಗಡೆ ಮಾಡುತ್ತದೆ.


ನಡುಕತರಿಸುವ ಚಳಿಗಾಲದಲ್ಲಿಯೂ 45 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಭೂ ಗ್ರಹದ ಅತ್ಯಂತ ಭಯಂಕರ ಪರಿಸರದಲ್ಲಿ ಇದೂ ಒಂದು ಎಂದು ಅವರು ಹೇಳಿದರು.


ಈ ಭೂ ಪ್ರದೇಶವು, ಸಂಶೋಧಕರು ಹೇಳುವಂತೆ, ಹೇರಳವಾದ ಪಿಹೆಚ್‌ನೊಂದಿಗೆ ಹೈಪರ್‌ಸಲೈನ್ ಮತ್ತು ಹೈಪರ್‌ಸಿಡ್ ಪೂಲ್‌ಗಳನ್ನು ಹೊಂದಿದೆ - ಇದನ್ನು 0 (ಬಹಳ ಆಮ್ಲೀಯ) ದಿಂದ 14 (ಬಹಳ ಕ್ಷಾರೀಯ) ವರೆಗೆ ಅಳೆಯಲಾಗುತ್ತದೆ - ಋಣಾತ್ಮಕ ಗುರುತು ಕೂಡ ಕೆಲವೊಮ್ಮೆ ತಲುಪುತ್ತದೆ.


ಹಿಂದೊಮ್ಮೆ ಈ ಬಹು-ವಿಪರೀತ ಪರಿಸರದಲ್ಲಿ ಕೆಲವು ಸೂಕ್ಷ್ಮಜೀವಿಗಳು ಬೆಳೆಯಬಹುದು ಎಂದು ಅಧ್ಯಯನಗಳು ಸೂಚಿಸಿದ್ದವು ಮತ್ತು ಸಂಶೋಧಕರು ಈ ಸ್ಥಳವನ್ನು ಜೀವನವನ್ನು ಬೆಂಬಲಿಸುವ ಪರಿಸ್ಥಿತಿಗಳ ಮಿತಿಗಳಿಗೆ ಉದಾಹರಣೆಯಾಗಿ ಪ್ರಸ್ತುತಪಡಿಸಿದ್ದರು.


ಆರಂಭದಲ್ಲಿ ಮಂಗಳ ಗ್ರಹದ ಭೂಮಿಯ ಸದೃಶವಾಗಿ ಈ ಸ್ಥಳವನ್ನು ಪ್ರಸ್ತಾಪಿಸಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.


"ಹಿಂದಿನ ವರದಿಗಳಿಗಿಂತ ಹೆಚ್ಚಿನ ಮಾದರಿಗಳನ್ನು ಅವುಗಳನ್ನು ಕಲುಷಿತಗೊಳಿಸದಂತೆ ಸಾಕಷ್ಟು ಉತ್ತಮವಾಗಿ ಮಾಪನಾಂಕ ನಿರ್ಣಯಿಸುವ ವಿಧಾನದೊಂದಿಗೆ ವಿಶ್ಲೇಷಿಸಿದಾಗ, ಈ ಉಪ್ಪು, ಬಿಸಿ ಮತ್ತು ಹೈಪರಾಸಿಡ್ ಪೂಲ್‌ಗಳಲ್ಲಿ ಅಥವಾ ಪಕ್ಕದ ಮಾಗ್ನೇಶಿಯಮ್ ಸಮೃದ್ಧವಾಗಿರುವ ಉಪ್ಪು ನೀರಿನ ಕೆರೆಯಲ್ಲಿ ಯಾವುದೇ ಸೂಕ್ಷ್ಮಜೀವಿಯು ಜೀವಿಸಿಲ್ಲ ಎಂದು ನಾವು ಪರಿಶೀಲಿಸಿದ್ದೇವೆ,” ಎಂದು ಎಫ್‌ಇಸಿವೈಟಿ ಅಧ್ಯಯನದ ಸಹ-ಲೇಖಕ ಪ್ಯೂರಿಫೇಶಿಯನ್ ಲೋಪೆಜ್ ಗಾರ್ಸಿಯಾ ಹೇಳಿದರು.


ಮರುಭೂಮಿಯಲ್ಲಿ ಒಂದು ರೀತಿಯ ಪ್ರಾಚೀನ ಉಪ್ಪು-ಪ್ರೀಯ ಸೂಕ್ಷ್ಮಜೀವಿಗಳ ದೊಡ್ಡ ವೈವಿಧ್ಯತೆಯನ್ನು ಸಂಶೋಧಕರು ಜಲವಿದ್ಯುತ್ ತಾಣದ ಸುತ್ತಲಿನ ಲವಣಯುಕ್ತ ಕಂದಕಗಳಲ್ಲಿ ಕಂಕೊಡಂಡಿದ್ದಾರೆ, ಆದರೆ ಹೈಪರ್‌ಸಿಡ್ ಮತ್ತು ಹೈಪರ್‌ಸಲೈನ್ ಕೊಳಗಳಲ್ಲಿ ಅಥವಾ ಮೆಗ್ನೀಸಿಯಮ್ ಸಮೃದ್ಧವಾಗಿರುವ ಡಲ್ಲೋಲ್‌ನ ಕಪ್ಪು ಮತ್ತು ಹಳದಿ ಸರೋವರಗಳಲ್ಲಿ ಸಂಶೋಧಕರಿಗೆ ಹೆಚ್ಚಿನ ವೈವಿಧ್ಯತೆ ಸಿಕ್ಕಿಲ್ಲ.


"ಗಾಳಿಯಿಂದಾಗಿ ಮತ್ತು ಮನುಷ್ಯರ ಭೇಟಿಯಿಂದಾಗಿ ಈ ಪ್ರದೇಶದಲ್ಲಿ ಸೂಕ್ಷ್ಮಜೀವಿಯ ಪ್ರಸರಣವು ತೀವ್ರವಾಗಿದೆ" ಎಂದು ಲೋಪೆಜ್ ಗಾರ್ಸಿಯಾ ಹೇಳಿದರು.


ಸೂಕ್ಷ್ಮಜೀವಿಗಳನ್ನು ಪತ್ತೆಹಚ್ಚಲು ಮತ್ತು ವರ್ಗೀಕರಿಸಲು ಆನುವಂಶಿಕ ಗುರುತುಗಳ ದೊಡ್ಡ ಪ್ರಮಾಣದ ಅನುಕ್ರಮ, ಸೂಕ್ಷ್ಮಜೀವಿಯ ಸಂಸ್ಕೃತಿಯ ಸಂಶೋಧನಾ ಪ್ರಯತ್ನಗಳು, ಪ್ರತ್ಯೇಕ ಕೋಶಗಳನ್ನು ಗುರುತಿಸಲು ಪ್ರತಿದೀಪಕ ಶೋಧಕಗಳನ್ನು ಬಳಸುವುದು, ಹೈಪರ್ಸಲೈನ್ ನೀರಿನ ರಾಸಾಯನಿಕ ವಿಶ್ಲೇಷಣೆ ಸೇರಿದಂತೆ ಹಲವಾರು ಇತರ ವಿಧಾನಗಳೊಂದಿಗೆ ಸಂಶೋಧಕರು ಸಂಶೋಧನೆಗಳನ್ನು ದೃಢಪಡಿಸಿದ್ದಾರೆ.


ಅವರು ಜೀವಿಗಳ ಚಿಹ್ನೆಗಳನ್ನು ಹುಡುಕುವಾಗ, ನೀರಿನ ಮಾದರಿಗಳನ್ನು ಪರೀಕ್ಷಿಸಲು ಸ್ಕ್ಯಾನಿಂಗ್ ಎಲೆಕ್ಟ್ರಾನ್ ಮೈಕ್ರೋಸ್ಕೋಪಿ ಮತ್ತು ಎಕ್ಸರೆ ಸ್ಪೆಕ್ಟ್ರೋಸ್ಕೋಪಿಯನ್ನು ಸಹ ಬಳಸಿದರು.


ಸಂಶೋಧಕರ ಪ್ರಕಾರ, ಅಧ್ಯಯನವು ವಾಸಯೋಗ್ಯತೆಯ ಮಿತಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಭೂಮಿಯ ಮೇಲ್ಮೈಯಲ್ಲಿಯೂ ಸಹ ದ್ರವರೂಪದ ನೀರನ್ನು ಹೊಂದಿದ್ದರೂ ಬರಡಾದಂತಹ ಸ್ಥಳಗಳಿವೆ ಎಂಬುದಕ್ಕೆ ಪುರಾವೆಗಳನ್ನು ಒದಗಿಸುತ್ತದೆ.


ಗ್ರಹದಲ್ಲಿ ದ್ರವ ನೀರಿನ ಉಪಸ್ಥಿತಿಯು - ಇದನ್ನು ಸಾಮಾನ್ಯವಾಗಿ ವಾಸಯೋಗ್ಯ ಮಾನದಂಡವಾಗಿ ಬಳಸಲಾಗುತ್ತದೆ - ಆದರೆ ಜೀವನದ ಉಪಸ್ಥಿತಿಯನ್ನು ನೇರವಾಗಿ ಸೂಚಿಸುವುದಿಲ್ಲ ಎಂದು ಅವರು ಹೇಳಿದರು.