ಇನ್ಮುಂದೆ ಆನ್‌ ಲೈನ್‌ ನಿಂದಲೆ ಸಂಗ್ರಹಿಸುತ್ತಾರೆ ಕಸ

ಹೈದರಾಬಾದ್ ಸ್ಟಾರ್ಟ್ಅಪ್ ಆದ ಕ್ರ್ಯಾಪ್ಬಿನ್, ಆನ್ಲೈನ್ ಮೂಲಕ ತ್ಯಾಜ್ಯವನ್ನು ಸಂಗ್ರಹಿಸಿ, ಅದನ್ನು ಬೇರ್ಪಡಿಸಿ‌ ಮರುಬಳಕೆ ಮಾಡುವ ಮೂಲಕ ಪರಿಸರ ರಕ್ಷಣೆ ಮಾಡುವ ವಿನೂತನ ಕಾಳಜಿ ಹೊಂದಿದೆ.

ಇನ್ಮುಂದೆ ಆನ್‌ ಲೈನ್‌ ನಿಂದಲೆ ಸಂಗ್ರಹಿಸುತ್ತಾರೆ ಕಸ

Monday November 04, 2019,

3 min Read

ಇಂದು ದೊಡ್ಡ ದೊಡ್ಡ ನಗರಗಳಲ್ಲಿ ತ್ಯಾಜ್ಯ ಹಾಗೂ ಅದರ ನಿರ್ವಹಣೆಯ ಸಮಸ್ಯೆ ಬಹಳಷ್ಟಿದೆ. ಸರಿಯಾಗಿ ತ್ಯಾಜ್ಯ ನಿರ್ವಹಿಸದಿರುವುದು ಪರಿಸರಕ್ಕೆ ಬಹಳಷ್ಟು ಹಾನಿಯನ್ನುಂಟು ಮಾಡುತ್ತದೆ.


ಕಳೆದ ದಶಕದಿಂದ‌ ಪ್ರತಿಯೊಂದು ಆನ್ಲೈನ್ ಅಲ್ಲಿ ಲಭ್ಯವಾಗುವುದು. ಹಾಗಿರುವಾಗ ಆನ್ಲೈನ್ ಮೂಲಕವೇ ಯಾಕೆ ತ್ಯಾಜ್ಯ ನಿರ್ವಹಣೆ ಮಾಡಬಾರದು? ಇಂತಹದ್ದೊಂದು ಆಲೋಚನೆ ತಲೆಗೆ ಮಾತ್ರ ಬರದೇ ಚಾಲ್ತಿಯಲ್ಲಿಯೂ ಬಂದಿದೆ. ಅದುವೇ "ಕ್ರ್ಯಾಪ್ಬಿನ್". ಇದರ ಮೂಲಕ ಸುಲಭವಾಗಿ ತ್ಯಾಜ್ಯ ನಿರ್ವಹಣೆ ಮಾಡಬಹುದು.

ಏನಿದು ಕ್ರ್ಯಾಪ್ಬಿನ್

ಕ್ರ್ಯಾಪ್ಬಿನ್ ತಂಡ ತ್ಯಾಜ್ಯ ಸಂಗ್ರಹಿಸುತ್ತಿರುವುದು (ಚಿತ್ರಕೃಪೆ: ಎಡೆಕ್ಸ್ ಲೈವ್)


ಕ್ರ್ಯಾಪ್ಬಿನ್ ಇದು ಮೂಲತಃ ಹೈದರಾಬಾದ್ ಸ್ಟಾರ್ಟ್ಅಪ್ ಆಗಿದ್ದು,‌ ಇಲ್ಲಿ ಆನ್ಲೈನ್ ಮೂಲಕವೇ ತ್ಯಾಜ್ಯವನ್ನು ಸಂಗ್ರಹಿಸಿ‌ ಅದನ್ನು ಬೇರ್ಪಡಿಸಿ ಮರುಬಳಕೆ ಮಾಡಲಾಗುತ್ತದೆ. ತ್ಯಾಜ್ಯ ವಿಲೇವಾರಿಯನ್ನು ಹಗುರಗೊಳಿಸಿ ಪರಿಸರಸ್ನೇಹಿಯಾಗಿದೆ. ಹೈದರಾಬಾದ್‌ನ ಪ್ರಮುಖ ಸ್ಕ್ರ್ಯಾಪ್ ಖರೀದಿದಾರರೆಂದು ಕರೆಯಲ್ಪಡುವ ಅವರು ಹೈದರಾಬಾದ್‌ನ "ಆನ್‌ಲೈನ್ ಕಬಾಡಿವಾಲಾ" ಎಂಬ ವಿಶಿಷ್ಟ ಗುರುತನ್ನು ಹೊಂದಿದ್ದಾರೆ.

ಶುರುವಾಗಿದ್ದು ಹೀಗೆ

ಈ ಕ್ರ್ಯಾಪ್ಬಿನ್ ಅನ್ನು ನಿಸಾರ್ ಅಹ್ಮದ್ (29), ಮುಕ್ವಾಯರ ಅಹ್ಮದ್ (29) ಮತ್ತು ಜುಬರ್ ಖುರೇಶ್ (26) ಮೂವರು ಸಹೋದರರು 2018ರ ನವೆಂಬರ್‌ನಲ್ಲಿ ಪ್ರಾರಂಭಿಸಿದರು. ನಿಸಾರ್ ಅವರಿಗೆ ದುಬೈನ‌ ತ್ಯಾಜ್ಯ ನಿರ್ವಹಣಾ ಕ್ಷೇತ್ರದಲ್ಲಿ‌ ಆರು ವರ್ಷಗಳ ಕಾಲ ಕೆಲಸ‌‌ ಮಾಡಿದ ಅನುಭವವಿತ್ತು. ಮುಕ್ವಾಯರ್‌ ಕಳೆದ ಐದು ವರ್ಷಗಳಿಂದ ಕಾರ್ಪೋರೆಟ್ ಕ್ಷೇತ್ರದಲ್ಲಿದ್ದರು.‌ ಡೇಟಾ ವಿಜ್ಞಾನಿಯಾಗಿದ್ದ ಜುಬರ್ ಈ ಪರಿಕಲ್ಪನೆಯನ್ನು ರೂಪಿಸಿದರು.


ಜಬರ್ ಅಹ್ಮದ್ (ಎಡ), ನಿಸಾರ್ ಅಹ್ಮದ್ (ಮಧ್ಯ), ಮುಕ್ವಾಯರ ಅಹ್ಮದ್ (ಬಲ) (ಚಿತ್ರಕೃಪೆ: ಎಡೆಕ್ಸ್ ಲೈವ್)




ಎಡೆಕ್ಸ್ ಲೈವ್ ಜೊತೆಗೆ ಮಾತನಾಡಿದ ಜುಬರ್ ಅವರು,


"ನಾನು‌ ಮೊದಲು ಸ್ಥಳೀಯ ಕಬಾಡಿವಾಲಾ ಅವರಿಗೆ ಮನೆಗೆ ಬಂದು ಸ್ಕ್ರ್ಯಾಪ್ ತೆಗೆದುಕೊಳ್ಳಲು ಹೇಳಿದಾಗ, ಅವರು ನಿರಾಕರಿಸಿ ಎಲ್ಲವನ್ನೂ ಅಂಗಡಿಗೆ ತರಲು ಹೇಳಿದರು. ಆಗಲೂ ಅವರು ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ತೆಗೆದುಕೊಳ್ಳಲಿಲ್ಲ. ಇಂತಹ ಸಂದರ್ಭದಲ್ಲಿ ಉಳಿದೆಲ್ಲವನ್ನು ನಾವು ಆನ್‌ಲೈನ್‌ನಲ್ಲಿ ಮಾಡುತ್ತಿರುವಾಗ, ಆನ್ಲೈನ್ ಅಲ್ಲಿ ಯಾಕೆ ಸ್ಕ್ರ್ಯಾಪ್ ಪಿಕಪ್ ಸೇವೆಯಿಲ್ಲ ಎಂದು ನಾನು ಯೋಚಿಸಿದೆ" ಎನ್ನುತ್ತಾರೆ.


ಈ ಯೋಜನೆಯನ್ನು ಕೈಗೆತ್ತಿಕೊಂಡ ಇವರಿಗೆ ಪ್ರಮುಖ‌ ಪ್ರೇರಣೆ ಪರಿಸರವನ್ನು ರಕ್ಷಿಸುವುದಾಗಿತ್ತು. "ಜನರು ತ್ಯಾಜ್ಯವನ್ನು ವಿಲೇವಾರಿ ಮಾಡಲು ಕಷ್ಟವಾದಾಗ ಅದನ್ನು ಡಂಪ್ ಯಾರ್ಡ್, ನದಿಗಳು, ಖಾಲಿ ಪ್ರದೇಶದಲ್ಲಿ ಎಸೆಯುತ್ತಾರೆ." ಒಣತ್ಯಾಜ್ಯವನ್ನು ಸುಲಭವಾಗಿ ವಿಲೇವಾರಿ ಮಾಡಲು‌ ಜನರಿಗೆ ಕೊನೆಯ ಹಂತದ‌‌ ಅನುಕೂಲವನ್ನು‌‌ ಮಾಡಬೇಕಿತ್ತು.‌ ತ್ಯಾಜ್ಯ ನಿರ್ವಹಣೆಯ ಕುರಿತಾಗಿ ಸಂಶೋಧನೆ ನಡೆಸಿ ನಂತರ ಅಂತಿಮವಾಗಿ 2018ರಲ್ಲಿ ಕ್ರ್ಯಾಪ್ಬಿನ್ ಅನ್ನು ಪ್ರಾರಂಭಿಸಲಾಯಿತು.

ಕಾರ್ಯ ನಿರ್ವಹಿಸುವುದು ಹೀಗೆ

ಗ್ರಾಹಕರು ತಮ್ಮ ಪಿಕಪ್ ವಿನಂತಿಯನ್ನು ಮೂರು ಸುಲಭ ಹಂತಗಳಲ್ಲಿ crapbin.com ನಲ್ಲಿ ಕಾಯ್ದಿರಿಸಬಹುದು. ಪಿಕಪ್ ವಿನಂತಿಯನ್ನು ಕಾಯ್ದಿರಿಸಿದ ನಂತರ, ಕ್ರಾಪ್ಬಿನ್‌ನಲ್ಲಿನ ಕಾರ್ಯನಿರ್ವಾಹಕರೊಬ್ಬರು ಸ್ಥಳ ಮತ್ತು ದಿನಾಂಕ ಗ್ರಾಹಕ ಆಯ್ಕೆ ಆಧರಿಸಿ ಗ್ರಾಹಕರಿಗೆ ಸಂಪರ್ಕ ಕಲ್ಪಿಸುತ್ತಾರೆ. ಕಾರ್ಯನಿರ್ವಾಹಕನು ನಂತರ ನಿಮ್ಮ ಮನೆ ಬಾಗಿಲಿಗೆ ಬಂದು ಗ್ರಾಹಕರ ಮುಂದೆ ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಬಳಸಿ ತೂಗುತ್ತಾನೆ ಮತ್ತು ಅವುಗಳನ್ನು ಆಧರಿಸಿ ನಗದು ರೂಪದಲ್ಲಿ ಪಾವತಿಸುತ್ತಾನೆ. ಗ್ರಾಹಕರು ತಮ್ಮ ಲಾಗ್ ಇನ್ ಮಾಡಿದ ನಂತರ ಅವರ ಡ್ಯಾಶ್‌ಬೋರ್ಡ್‌ನಲ್ಲಿರುವ ಸಂಪೂರ್ಣ ಮೊತ್ತವನ್ನು ತಿಳಿಯಲು ಅವರ ವೆಬ್‌ಸೈಟ್‌ನಲ್ಲಿ ಪ್ರತಿದಿನ ನವೀಕರಿಸಲಾಗುತ್ತದೆ. ಇದರೊಂದಿಗೆ, ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವಲ್ಲಿ ಅವರು ತಮ್ಮ ಕೊಡುಗೆ ವಿವರಗಳನ್ನು ಸಹ ಪಡೆಯುತ್ತಾರೆ. ಗ್ರಾಹಕರಿಗೆ ಅವರ ಅಗತ್ಯಗಳಿಗೆ ಅನುಗುಣವಾಗಿ ಸೇವೆ ಸಲ್ಲಿಸಲು ಕ್ರಾಪ್ಬಿನ್ ವಾರದ ಎಲ್ಲಾ 7 ದಿನಗಳಲ್ಲಿ ಕಾರ್ಯನಿರ್ವಹಿಸುತ್ತದೆ, ವರದಿ, ಸ್ಟಾರ್ಟ್ಅಪ್ ಹೈದರಾಬಾದ್.


ಕ್ರ್ಯಾಪ್ಬಿನ್ ತಂಡವು ಮೊದಲಿಗೆ ಮನೆಯಿಂದ ಸ್ಕ್ರ್ಯಾಪ್ ಅನ್ನು ಸಂಗ್ರಹಿಸಿ ಅದನ್ನು ತಮ್ಮ ಅಂಗಳಕ್ಕೆ ಸಾಗಿಸುತ್ತದೆ. ಅಲ್ಲಿ ಸ್ಕ್ರ್ಯಾಪ್ ಅನ್ನು ವಸ್ತುಗಳ ಆಧಾರದ ಮೇಲೆ ಬೇರ್ಪಡಿಸಿ, ಅದನ್ನು ಅಧಿಕೃತ ಮರುಬಳಕೆ ಪಾಲುದಾರರಿಗೆ ಕಳಿಸುತ್ತದೆ. ಸ್ಥಳೀಯ ಕಬಾಡಿವಾಲಗಳು‌ ನಿಗದಿತ ದರವನ್ನು ಹೊಂದಿಲ್ಲ,‌ ಆದರೆ ಕ್ರ್ಯಾಪ್ಬಿನ್ ಇಲ್ಲಿ ಎಲ್ಲಾ ವಸ್ತುಗಳಿಗೆ ಪ್ರಮಾಣಿತ ಮಾರುಕಟ್ಟೆ ದರಗಳನ್ನು‌ ನಿಗದಿಪಡಿಸಿ‌ ಅವುಗಳನ್ನು ಕ್ರ್ಯಾಪ್ಬಿನ್ ವೆಬ್ಸೈಟ್ ಅಲ್ಲಿ ಉಲ್ಲೇಖಿಸಲಾಗಿದೆ.


ತ್ಯಾಜ್ಯವನ್ನು ಸರಿಯಾಗಿ ಸಂಸ್ಕರಿಸದಿದ್ದರೆ ಅದರಿಂದಾಗುವ ಅಪಾಯವೇ ಹೆಚ್ಚು. ಇದು ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತದೆ. ರೆಫ್ರಿಜರೇಟರ್‌ಗಳು, ಎಸಿಗಳು ಲೋಹವನ್ನು ಹೊಂದಿರುತ್ತವೆ. ಪ್ಲಾಸ್ಟಿಕ್ ಕ್ಲೋರೊಫ್ಲೋರೋಕಾರ್ಬನ್ ಮತ್ತು ಹೈಡ್ರೋಕ್ಲೋರೊಫ್ಲೋರ್‌ನಂತಹ ಹಾನಿಕಾರಕ ವಸ್ತುಗಳನ್ನು ಒಳಗೊಂಡಿರುತ್ತವೆ. ಇದು ಹೆಚ್ಚಿನ ಓಝೋನ್‌‌ ಸವಕಳಿ ಸಾಮರ್ಥ್ಯವನ್ನು ಹೊಂದಿದೆ. ಸೀಸ, ಪಾದರಸ, ಕ್ಯಾಡ್ಮಿಯಂನಂತಹ ಲೋಹಗಳು ಮನುಷ್ಯನ ಕೇಂದ್ರ ಹಾಗೂ ಬಾಹ್ಯ ನರಮಂಡಲಗಳಿಗೆ ಹಾಗೂ‌ ಮೆದುಳಿನ ಬೆಳವಣಿಗೆಯ ಮೇಲೆ‌ ಪರಿಣಾಮವನ್ನುಂಟು ಮಾಡುತ್ತವೆ.


"ನಾವು ಮರುಬಳಕೆ‌ ಮಾಡಬಹುದಾದ ವಸ್ತುಗಳನ್ನು ಬಳಸಲು ಪ್ರಾರಂಭಿಸಬೇಕು. ಪಾಲಿಥಿನ್ ಚೀಲಗಳ ಬದಲಾಗಿ ಬಟ್ಟೆಯ ಚೀಲವನ್ನು ಬಳಸುವುದು. ಸಮರ್ಥ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದನ್ನು ಅರಿಯಬೇಕು," ಎನ್ನುತ್ತಾರೆ.


“ಪ್ರಸ್ತುತ ಹೈದರಾಬಾದ್ ಹಾಗೂ ಸಿಕಂದರಾಬಾದ್ ಅಲ್ಲಿ ಒಣತ್ಯಾಜ್ಯದ ಮೇಲೆ ಕ್ರ್ಯಾಪ್ಬಿನ್ ಕಾರ್ಯ ನಿರ್ವಹಿಸುತ್ತಿದ್ದು, ನಂತರ ಆರ್ದ್ರ ತ್ಯಾಜ್ಯ ವಿಭಜನೆಯನ್ನು ಕೈಗೊಳ್ಳುವ ಯೋಚನೆಯಿದ್ದು,‌ ಮುಂದೆ ಪುಣೆ ನಗರದಲ್ಲಿ ಈ ಸೇವೆಯನ್ನು ಪ್ರಾರಂಭಿಸುವ ಯೋಜನೆಯಿದೆ" ಎಂದು ಜುಬರ್ ಹೇಳುತ್ತಾರೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.