ಆತ್ಮ ನಿರ್ಭರ ಭಾರತ ಆ್ಯಪ್ ಸ್ಪರ್ಧೆಯ ವಿಜೇತರ ಪಟ್ಟಿ ಪ್ರಕಟ

ಜುಲೈ 4 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಆತ್ಮ ನಿರ್ಭರ ಭಾರತ್ ಆಪ್ ಇನ್ನೋವೇಶನ್ ಚಾಲೆಂಜ್ನ, ಒಂದು ದಿನದ ಲೈವ್ ಹ್ಯಾಕಥಾನ್ ನಂತರ ಒಂಬತ್ತು ವಿಭಾಗಗಳಲ್ಲಿ 24 ವಿಜೇತರನ್ನು ಕಂಡಿತು.

ಆತ್ಮ ನಿರ್ಭರ ಭಾರತ ಆ್ಯಪ್ ಸ್ಪರ್ಧೆಯ ವಿಜೇತರ ಪಟ್ಟಿ ಪ್ರಕಟ

Monday August 10, 2020,

2 min Read

ಚೀನಿ ಆ್ಯಪ್ಗಳ ನಿಷೇಧದ ಹಿನ್ನೆಲೆಯಲ್ಲೆ ದೇಶದಲ್ಲಿ ಸ್ವದೇಶಿ, ಮೇಡ್‌ ಇನ್‌ ಇಂಡಿಯಾ ಅಲೆ ಬೀಸುತ್ತಿದೆ. ದೇಶದಲ್ಲಿ ಬೆಳೆಯುತ್ತಿರುವ ಹೊಸ ತಂತ್ರಜ್ಞಾನ ಆ್ಯಪ್ಗಳೇ ಮುಂದೆ ಜಗತ್ತಿನಲ್ಲಿ ಉತ್ತಮ ಸ್ಥಾನವನ್ನಲಂಕರಿಸುತ್ತವೆ. ಈ ಕಾರ್ಯಕ್ಕೆ ದೇಶದೆಲ್ಲೆಡೆ ಬೆಂಬಲ ವ್ಯಕ್ತವಾಗಿದ್ದು, ಭಾರೀ ನೀರಿಕ್ಷೆಯನ್ನು ಹುಟ್ಟುಹಾಕಿದೆ.

ಈ ಉಪಕ್ರಮ ಈಗಾಗಲೇ ಜನರು ಬಳಸುತ್ತಿರುವ ಉತ್ತಮ ಭಾರತೀಯ ಆ್ಯಪ್ಗಳಲ್ಲಿ ವಿಶ್ವಮಟ್ಟದಲ್ಲಿ ಅಭಿವೃದ್ಧಿಹೊಂದಬಲ್ಲಂತಹ ಸಾಮರ್ಥ್ಯವಿರುವವನ್ನು ಗುರುತಿಸುವ ಉದ್ದೇಶವನ್ನು ಹೊಂದಿದೆ.


9 ವಿಭಾಗಗಳಲ್ಲಿ ಗೆಲುವು ಸಾಧಿಸಿದ ಆ್ಯಪ್ಗಳ ಪಟ್ಟಿ ಈ ಕೆಳಗಿನಂತಿದೆ.


ಕ್ಯಾಪ್ಶನ್‌ಪ್ಲಸ್, ಮೆಮೆ ಚಾಟ್ ಮತ್ತು ಎಫ್‌ಟಿಸಿ ಟ್ಯಾಲೆಂಟ್ ಅಪ್ಲಿಕೇಶನ್ಗಳು ಮನರಂಜನಾ ವಿಭಾಗದಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ಮೂರನೇ ಸ್ಥಾನವನ್ನು ಪಡೆದಿವೆ. ಬೂಮ್ ಮತ್ತು ಡೊಕುಬೇ ಆ್ಯಪ್ಗಳನ್ನು ವಿಶೇಷ ವಿಭಾಗದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.


ಸುದ್ದಿ ವಿಭಾಗದಲ್ಲಿ ಲಾಜಿಕಲ್ಲಿ ಮತ್ತು ಇಸ್‌ಇಕ್ವಲ್‌ಟು ಮೊದಲ ಮತ್ತು ಎರಡನೆ ಸ್ಥಾನ ಪಡೆದರೆ ವಿಶೇಷ ವಿಭಾಗಕ್ಕೆ ಲೆಟ್ಸ್‌ಅಪ್‌ ಮತ್ತು ಪೇಪರ್‌ಬಾಯ್‌ ಆಯ್ಕೆ ಮಾಡಲಾಗಿದೆ.


ಗೇಮ್ಸ್‌ ವಿಭಾಗದಲ್ಲಿ, ಹಿಟ್‌ವಿಕೆಟ್ ™ ಸೂಪರ್‌ಸ್ಟಾರ್ ಪ್ರಥಮ ಸ್ಥಾನ ಪಡೆದರೆ, ಸ್ಕಾರ್‌ಫಾಲ್: ರಾಯಲ್ ಕಾಂಬಾಟ್‌ & ವರ್ಲ್ಡ್ ಕ್ರಿಕೆಟ್ ಚಾಂಪಿಯನ್‌ಶಿಪ್ 2 (ಡಬ್ಲ್ಯುಸಿಸಿ 2) ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ. ಮ್ಯಾಥ್‌ ಗೇಮ್ಸ್‌, ಲರ್ನ್‌ಆಡ್‌, ಸಬ್‌ಸ್ಟ್ರಾಕ್ಟ್‌, ಮಲ್ಟಿಪ್ಲೈ & ಡಿವೈಡ್‌; ಡಾಂಕಿ ಮಾಸ್ಟರ್; ಮತ್ತು ಕೈಟ್ ಫ್ಲೈ ವಿಶೇಷ ವಿಭಾಗದ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿವೆ.


ಆಫೀಸ್ ವಿಭಾಗದಲ್ಲಿ, ಜೊಹೊ ವರ್ಕ್‌ಪ್ಲೇಸ್ ಮತ್ತು ಕ್ಲಿಕ್ ಮತ್ತು ಶುಯರ್‌ಎಂಡಿಎಂ ಕ್ರಮವಾಗಿ ಪ್ರಥಮ ಮತ್ತು ಎರಡನೇ ಸ್ಥಾನವನ್ನು ಗಳಿಸಿದರೆ, ಸ್ಪಾರ್ಕ್.ಲೈವ್, ಐಯಾಮ್‌ಹೆರೆ ಮತ್ತು ಕಾಗಾಜ್ ಸ್ಕ್ಯಾನರ್ ವಿಶೇಷ ವಿಭಾಗದ ಪ್ರಶಸ್ತಿಗೆ ಆಯ್ಕೆಯಾಗಿವೆ.


ಆರೋಗ್ಯ ವಿಭಾಗದಲ್ಲಿ, ಸ್ಟೆಪ್‌ಸೆಟ್‌ಗೊ (ಎಸ್‌ಎಸ್‌ಜಿ) ಪ್ರಥಮ ಸ್ಥಾನದಲ್ಲಿದ್ದರೆ, ಐಮಮ್ಜ್ ಎರಡನೇ ಸ್ಥಾನದಲ್ಲಿದೆ. ಸಾಸ್ತಾ ಸುಂದರ್ ಆ್ಯಂ‍ಡ್ ರಮ್ ಅನ್ನು ವಿಶೇಷ ಉಲ್ಲೇಖಿಸಲಾಗಿದೆ.


ಇ-ಲರ್ನಿಂಗ್ ವಿಭಾಗದಲ್ಲಿ, ಡಿಸ್ಪ್ರಿಜ್, ಕುಟುಕಿ ಕಿಡ್ಸ್ ಲರ್ನಿಂಗ್ ಅಪ್ಲಿಕೇಶನ್ ಮತ್ತು ಹಲೋ ಇಂಗ್ಲಿಷ್: ಲರ್ನ್ ಇಂಗ್ಲಿಷ್ ಅಪ್ಲಿಕೇಶನ್‌ಗಳು ಮೊದಲ, ಎರಡನೆಯ ಮತ್ತು ಮೂರನೇ ಸ್ಥಾನದಲ್ಲಿವೆ. ವಿಶೇಷ ವಿಭಾಗ ಪ್ರಶಸ್ತಿಗೆ ಚಾಕ್‌ಲಿಟ್ ಮತ್ತು ಇಮೆಡಿಕೋಜ್ ನಾಮನಿರ್ದೇಶನಗೊಂಡಿದೆ.


ಬಿಸಿನೆಸ್ ವಿಭಾಗದಲ್ಲಿ ಜೊಹೊ ಇನ್‌ವಾಯ್ಸ್, ಬುಕ್ಸ್ & ಎಕ್ಸ್‌ಪೆನ್ಸ್ ಮೊದಲ ಸ್ಥಾನದಲ್ಲಿದ್ದರೆ, ಮಾಲ್91 ಮತ್ತು ಗಿಮ್‌ಬುಕ್ಸ್ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದೆ. ಬೂಮರ್ ಮತ್ತು ಲಿಂಕ್ ಮೈ ಬಿಸಿನೆಸ್‌ಗೆ ವಿಶೇಷ ಉಲ್ಲೇಖ ಲಭಿಸಿದೆ.


ಸಾಮಾಜಿಕ ವಿಭಾಗದಲ್ಲಿ, ಚಿಂಗಾರಿಗೆ ಪ್ರಥಮ ಸ್ಥಾನ ಲಭಿಸಿದರೆ, ಯುವರ್‌ಕೋಟ್ ಮತ್ತು ಕೂ ಎರಡನೇ ಸ್ಥಾನದಲ್ಲಿವೆ. ವಿಶೇಷ ವರ್ಗ ಪ್ರಶಸ್ತಿಗಳಲ್ಲಿ ಹಿಡೋಕ್ ಡಾ ಮತ್ತು ಮಿತ್ರೋ ಅಪ್ಲಿಕೇಶನ್‌ಗಳು ಸೇರಿವೆ.


ಇತರೆ ವಿಭಾಗದಲ್ಲಿ, ಮ್ಯಾಪ್‌ಮೈಇಂಡಿಯಾ ಮೂವ್, ಆಸ್ಕ್ ಸರ್ಕಾರ್, ಮತ್ತು ಮೈಟ್ರೆಟರ್ನ್ ಸೇರಿದಂತೆ ಮೂರು ವಿಜೇತರು ಕ್ರಮವಾಗಿ ಮೊದಲ, ಎರಡನೇ ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಎಕ್ಸ್‌ಪ್ಲೋರಿ ಎಐ ಕೀಬೋರ್ಡ್ ಮತ್ತು ಲೈಫ್‌ಹ್ಯಾಕ್ಸ್ ವಿಶೇಷ ಉಲ್ಲೇಖಗಳನ್ನು ಪಡೆದಿವೆ.


ಪ್ರತಿ ವಿಭಾಗದ ಅಡಿಯಲ್ಲಿ ಅಗ್ರ-ಮೂರು ವಿಜೇತರಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ 20 ಲಕ್ಷ, 15 ಲಕ್ಷ, ಮತ್ತು 10 ಲಕ್ಷ ರೂ ಸರ್ಕಾರದ ಕಡೆಯಿಂದ ನಗದು ಬಹುಮಾನ ಸಿಗಲಿದೆ.