ಟಿಕ್‌ಟಾಕ್‌, ಶೇರ್‌ಈಟ್‌, ವಿ ಚಾಟ್‌ ಸೇರಿದಂತೆ 59 ಚೀನಿ ಆ್ಯಪ್‌ಗಳ ಮೇಲೆ ನಿಷೇಧ ಹೇರಿದ ಭಾರತ ಸರ್ಕಾರ

ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ಮತ್ತು ಗೃಹ ಸಚಿವಾಲಯವು ದುರುದ್ದೇಶಪೂರಿತ ಆ್ಯಪ್‌ಗಳನ್ನು ನಿಷೇಧಿಸಲು ಸಮಗ್ರ ಶಿಫಾರಸು ಕಳುಹಿಸಿದೆ.
0 CLAPS
0

ದೇಶದ ಸಾರ್ವಭೌಮತ್ವ, ಸಮಗ್ರತೆ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುತ್ತದೆ ಎಂಬ ಅಪವಾದದಡಿಯಲ್ಲಿ ಸೋಮವಾರ ಭಾರತ ಸರ್ಕಾರ 59 ಚೀನಿ ಆ್ಯಪ್‌ಗಳ ಮೇಲೆ ನಿಷೇಧ ಹೇರಿದ್ದು, ಅದರಲ್ಲಿ ಟಿಕ್‌ಟಾಕ್‌, ಶೇರ್‌ಈಟ್‌ ಮತ್ತು ವಿ ಚಾಟ್‌ ಸೇರಿದೆ.

ಅಂಡ್ರಾಯ್ಡ್‌ ಮತ್ತು ಐಒಎಸ್‌ನಲ್ಲಿರುವ ಕೆಲವು ಆ್ಯಪ್‌ಗಳು ಬಳಕೆದಾರರ ದತ್ತಾಂಶವನ್ನು ಕದ್ದು, ರಹಸ್ಯವಾಗಿ ಭಾರತದ ಹೊರಗೆ ಇರುವ ಸರ್ವರ್‌ಗಳಿಗೆ ರವಾನಿಸುತ್ತಿರುವ ಬಗೆಗೆ ವಿವಿಧ ಮೂಲಗಳಿಂದ ಹಲವಾರು ವರದಿಗಳು ಮತ್ತು ದೂರುಗಳು ಬಂದಿವೆ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

"ಈ ದತ್ತಾಂಶಗಳ ಸಂಕಲನ, ಪ್ರೊಫೈಲಿಂಗ್ ಭಾರತದ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆಗೆ ಪ್ರತಿಕೂಲವಾಗಿದ್ದು, ಇದು ಅಂತಿಮವಾಗಿ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆ ತರುತ್ತದೆ, ಅಲ್ಲದೇ ಇದು ಅತ್ಯಂತ ಆಳವಾದ ಮತ್ತು ತಕ್ಷಣದ ಗಮನ ಹರಿಸಬೇಕಾದ ವಿಷಯವಾಗಿದ್ದು ತುರ್ತು ಕ್ರಮಗಳ ಅಗತ್ಯವಿದೆ," ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ಮತ್ತು ಗೃಹ ಸಚಿವಾಲಯವು ಈ ದುರುದ್ದೇಶಪೂರಿತ ಆ್ಯಪ್‌ಗಳನ್ನು ನಿಷೇಧಿಸಲು ಸಮಗ್ರ ಶಿಫಾರಸನ್ನು ಕಳುಹಿಸಿದೆ.

“ಇವುಗಳ ಆಧಾರದ ಮೇಲೆ ಮತ್ತು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಈ ಆ್ಯಪ್‌ಗಳು ಧಕ್ಕೆ ತರಬಹುದೆಂದು ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಬಂದಿರುವುದಿಂದ, ಭಾರತ ಸರ್ಕಾರ ಮೊಬೈಲ್‌ ಮತ್ತು ನಾನ್‌-ಮೊಬೈಲ್‌ ಇಂಟರ್ನೆಟ್‌ ಸಾಧನಗಳಲ್ಲಿ ಉಪಯೋಗಿಸುವ ಕೆಲವು ಆ್ಯಪ್‌ಗಳ ಬಳಕೆಯನ್ನು ತಡೆಹಿಡಿಯಲು ನಿರ್ಧರಿಸಿದೆ,” ಎಂದು ಪ್ರಕಟಣೆ ತಿಳಿಸಿದೆ.

ಭಾರತ ಸರ್ಕಾರ ನಿಷೇಧಿಸಿರುವ 59 ಚೀನಿ ಆ್ಯಪ್‌ಗಳು (ಮೂಲ: ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ)

“ಈ ನಡೆ ಕೋಟ್ಯಾಂತರ ಭಾರತೀಯ ಮೊಬೈಲ್‌ ಮತ್ತು ಅಂತರ್ಜಾಲ ಬಳಕೆದಾರರ ಹಿತಾಸಕ್ತಿಗಳನ್ನು ಕಾಪಾಡಲಿದೆ. ಈ ನಿರ್ಧಾರ ಭಾರತೀಯ ಸೈಬರ್‌ ವಲಯದ ಸುರಕ್ಷತೆ ಮತ್ತು ಸಾರ್ವಭೌಮತ್ವತೆಯನ್ನು ಕಾಪಾಡಿಕೊಳ್ಳುವ ಗುರಿಯನ್ನು ಹೊಂದಿದೆ,” ಎಂದು ಪ್ರಕಟಣೆಯಲ್ಲಿ ಉಲ್ಲೇಖಸಿಲಾಗಿದೆ.

ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟವು(ಸಿಎಐಟಿ) 59 ಚೀನಿ ಆ್ಯಪ್‌ಗಳ ಮೇಲೆ ನಿಷೇಧ ಹೇರಿದ ಪ್ರಧಾನಿ ಮತ್ತು ಭಾರತ ಸರ್ಕಾರದ ನಡೆಯನ್ನು ಶ್ಲಾಷಿಸಿದೆ. ಈ ನಡೆಯು ಒಕ್ಕೂಟದ ಚೀನಿ ಸರಕುಗಳ ನಿಷೇಧ ಅಭಿಯಾನಕ್ಕೆ ಬಲ ನೀಡಿದೆ.

"ಸಿಎಐಟಿಯ ಚೀನಾ ಸರಕುಗಳ ಬಹಿಷ್ಕಾರ ಅಭಿಯಾನವನ್ನು ಬಲಪಡಿಸುವಲ್ಲಿ ಈ ಅಭೂತಪೂರ್ವ ನಡೆ ಬಹಳ ದೂರ ಸಾಗಲಿದೆ. ಚೀನಾ ಸರಕುಗಳ ಬಹಿಷ್ಕರಿಸುವುದು ಈಗ ನಿಜವಾದ ರಾಷ್ಟ್ರೀಯ ವಾಸ್ತವವಾಗಿದೆ, ಮತ್ತು ಭಾರತದ ಏಳು ಕೋಟಿ ವ್ಯಾಪಾರಿಗಳು ಕೇಂದ್ರ ಸರ್ಕಾರದ ಜತೆ ಒಗ್ಗಟ್ಟಿನಿಂದ ನಿಂತಿದ್ದಾರೆ," ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದರು.

Latest

Updates from around the world