ಚೀನಾಕ್ಕೆ ಡೇಟಾ ವರ್ಗಾವಣೆ ಮಾಡಿದ ಆರೋಪದ ಹಿನ್ನಲೆಯಲ್ಲಿ ಟಿಕ್‌ಟಾಕ್ ಮೇಲೆ ಯುಎಸ್‌ನಲ್ಲಿ ಮೊಕದ್ದಮೆ

ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬರು ಟಿಕ್‌ಟಾಕ್ ವಿರುದ್ಧ ಕ್ಲಾಸ್-ಆಕ್ಷನ್ ಮೊಕದ್ದಮೆ ಹೂಡಿದ್ದು, ವಿಡಿಯೋ ಆ್ಯಪ್ ದೊಡ್ಡ ಪ್ರಮಾಣದ ಬಳಕೆದಾರರ ದತ್ತಾಂಶಗಳನ್ನು ಒಂದುಗೂಡಿಸಿ ಚೀನಾದಲ್ಲಿ ಸಂಗ್ರಹಿಸಿದೆ ಎಂದು ಆರೋಪಿಸಿದೆ.

ಚೀನಾಕ್ಕೆ ಡೇಟಾ ವರ್ಗಾವಣೆ ಮಾಡಿದ ಆರೋಪದ ಹಿನ್ನಲೆಯಲ್ಲಿ ಟಿಕ್‌ಟಾಕ್ ಮೇಲೆ ಯುಎಸ್‌ನಲ್ಲಿ ಮೊಕದ್ದಮೆ

Thursday December 05, 2019,

2 min Read

ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬರು ಟಿಕ್‌ಟಾಕ್ ವಿರುದ್ಧ ಕ್ಲಾಸ್-ಆಕ್ಷನ್ ಮೊಕದ್ದಮೆ ಹೂಡಿದ್ದು, ವಿಡಿಯೋ ಆ್ಯಪ್ ದೊಡ್ಡ ಪ್ರಮಾಣದ ಬಳಕೆದಾರರ ದತ್ತಾಂಶಗಳನ್ನು ಒಂದುಗೂಡಿಸಿ ಚೀನಾದಲ್ಲಿ ಸಂಗ್ರಹಿಸುತ್ತಿದೆ ಎಂದು ಆರೋಪಿಸಿದೆ.


"ಟಿಕ್‌ಟಾಕ್ ರಹಸ್ಯವಾಗಿ ಚೀನಾದಲ್ಲಿನ ಸರ್ವರ್‌ಗಳಿಗೆ ಹೆಚ್ಚಿನ ಪ್ರಮಾಣದ ಖಾಸಗಿ ಮತ್ತು ವೈಯಕ್ತಿಕವಾಗಿ ಗುರುತಿಸಬಹುದಾದ ಬಳಕೆದಾರ ದತ್ತಾಂಶಗಳನ್ನು ವರ್ಗಾಯಿಸಿದೆ" ಎಂದು ನ್ಯಾಯಾಲಯದ ದಾಖಲಾತಿಗಳಿಂದ ತಿಳಿದು ಬಂದಿದೆ.


ಕ್ಯಾಲಿಫೋರ್ನಿಯಾದ ಪಾಲೊ ಆಲ್ಟೊದ ವಿದ್ಯಾರ್ಥಿ ಮಿಸ್ಟಿ ಹಾಂಗ್ ಅವರು ಕಳೆದ ವಾರ ಕ್ಯಾಲಿಫೋರ್ನಿಯಾ ಫೆಡರಲ್ ನ್ಯಾಯಾಲಯದಲ್ಲಿ ಚೀನಾ ಮೂಲದ ಆ್ಯಪ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ ಎಂದು ದಿ ಡೈಲಿ ಬೀಸ್ಟ್‌ ಸೋಮವಾರ ವರದಿಮಾಡಿದೆ.


ವಿಶ್ವದಾದ್ಯಂತ ಹದಿಹರೆಯದವರಲ್ಲಿ ಹೆಚ್ಚು ಜನಪ್ರಿಯವಾಗಿರುವ ವೀಡಿಯೊ ಪ್ಲಾಟ್‌ಫಾರ್ಮ್ ಅನ್ನು ಚೀನಾದ ಸಂಸ್ಥೆ ಬೈಟ್‌ಡ್ಯಾನ್ಸ್ ಸೆಪ್ಟೆಂಬರ್ 2017 ರಲ್ಲಿ ಪ್ರಾರಂಭಿಸಿತು. ಇದು ಬಳಕೆದಾರರಿಗೆ 15 ಸೆಕೆಂಡುಗಳ ವೀಡಿಯೊಗಳನ್ನು ರಚಿಸಲು ಮತ್ತು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ.


ಈ ವರ್ಷದ ಅಕ್ಟೋಬರ್‌ನಲ್ಲಿ ಟಿಕ್‌ಟಾಕ್ ಇಸ್ಲಾಮಿಕ್ ಸ್ಟೇಟ್ ಗುಂಪಿನ ಪ್ರಚಾರ ವೀಡಿಯೊಗಳನ್ನು ಪೋಸ್ಟ್ ಮಾಡುವ ಖಾತೆಗಳನ್ನು ತೆಗೆದುಹಾಕಿದೆ ಎಂದು ಕಂಪನಿಯ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ.


"ಟಿಕ್‌ಟಾಕ್ ಬಳಕೆದಾರರ ಒಪ್ಪಿಗೆಯಿಲ್ಲದೆ, ಪ್ರಕಟಣೆಗೆ ಎಂದಿಗೂ ಉದ್ದೇಶಿಸದ ಡ್ರಾಫ್ಟ್ ವೀಡಿಯೊಗಳನ್ನು ಸಹ ಬಳಕೆದಾರರ ಖಾತೆಯಿಂದ ರಹಸ್ಯವಾಗಿ ತೆಗೆದುಕೊಂಡಿದೆ" ಎಂದು ಮೊಕದ್ದಮೆ ಆರೋಪಿಸಿದೆ.


"ಸಂಕ್ಷಿಪ್ತವಾಗಿ ಹೇಳುವುದಾದರೆ, ಟಿಕ್‌ಟಾಕ್‌ನ ಲಘು ಹೃದಯದ ವಿನೋದವು ಭಾರಿ ವೆಚ್ಚವನ್ನು ತಂದಿದೆ" ಎಂದು ಧಾವೆ ಹೇಳಿದೆ.


ಧಾವೆಯು ಅಪ್ಲಿಕೇಶನ್‌ನ ಇತ್ತೀಚಿನ ಕಾನೂನು ಹೋರಾಟವನ್ನು ಗುರುತಿಸುತ್ತದೆ. ನವೆಂಬರ ಆರಂಭದಲ್ಲಿ, ಅಮೇರಿಕಾ ಸರ್ಕಾರವು ಟಿಕ್ ಟಾಕ್ ಬಗ್ಗೆ ರಾಷ್ಟ್ರೀಯ ಭದ್ರತಾ ತನಿಖೆಯಿಂದ ಹೊಸ ತನಿಖೆ ಮಾಡಲು ಹೇಳಿತು ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ, ಈ ಅಪ್ಲಿಕೇಶನ್ ಚೀನಾಕ್ಕೆ ಡೇಟಾವನ್ನು ಕಳುಹಿಸುತ್ತಿದೆಯೇ ಎಂದು ಈ ಧಾವೆಯು ಪರಿಶೀಲಿಸುತ್ತದೆ.


ತನ್ನ ಧಾವೆಯಲ್ಲಿ, ಆ್ಯಪ್ ತನ್ನ ದತ್ತಾಂಶವನ್ನು ಅಂದರೆ ಅವಳು ರಚಿಸಿದ ಆದರೆ ಆನ್‌ಲೈನ್‌ನಲ್ಲಿ ಹಂಚಿಕೊಳ್ಳದಿರುವ ವೀಡಿಯೊಗಳನ್ನು ಒಳಗೊಂಡಂತೆ-ಅನುಮತಿಯಿಲ್ಲದೆ ಪಡೆದುಕೊಂಡಿದೆ ಮತ್ತು ಅವುಗಳನ್ನು ಚೀನಾ ಸರ್ಕಾರದೊಂದಿಗೆ ಸಹಕರಿಸುವ ಕಂಪನಿಗಳೊಂದಿಗೆ ನಡೆಸುವ ಸರ್ವರ್‌ಗಳಿಗೆ ವರ್ಗಾಯಿಸಿದೆ ಎಂದು ಆರೋಪಿಸಿದೆ. ಆ್ಯಪ್ ಡೌನ್‌ಲೋಡ್ ಮಾಡಿದ ಸುಮಾರು 110 ಮಿಲಿಯನ್ ಅಮೇರಿಕಾ ನಿವಾಸಿಗಳ ಪರವಾಗಿ ಅವರು ಮೊಕದ್ದಮೆ ಹೂಡಿದ್ದಾರೆ.


ಎಎಫ್‌ಪಿಯ ಕೋರಿಕೆಗೆ ಟಿಕ್‌ಟಾಕ್ ತಕ್ಷಣ ಉತ್ತರಿಸಲಿಲ್ಲ.


ಇಲ್ಲಿ ನಮ್ಮ ದೇಶದಲ್ಲಿ ಗಮನಿಸಿದರೆ, ಟಿಕ್‌ಟಾಕ್‌ನ ಮೂಲ ಕಂಪನಿ, ಬೈಟ್‌ಡ್ಯಾನ್ಸ್, ಎಫ್‌ವೈ 19 ಗಾಗಿ ತನ್ನ ಭಾರತದಲ್ಲಿನ ಕಾರ್ಯಾಚರಣೆಯಲ್ಲಿ ತನ್ನ ಮೊದಲ ಲಾಭವನ್ನು ವರದಿ ಮಾಡಿದೆ.


ನಿಯಂತ್ರಕ ದಾಖಲಾತಿಗಳ ಪ್ರಕಾರ 75 ಬಿಲಿಯನ್ ಚೀನೀ ಸಂಸ್ಥೆಯು ದೇಶದ ಮೊದಲ ಪೂರ್ಣ ವರ್ಷದ ಕಾರ್ಯಾಚರಣೆಯ ನಂತರ, ಒಟ್ಟು 43.7 ಕೋಟಿ ರೂ.ಗಳ ಆದಾಯದ ಮೇಲೆ 3.4 ಕೋಟಿ ರೂ.ಗಳ ಲಾಭವನ್ನು ವರದಿ ಮಾಡಿದೆ. ಎಫ್‌ವೈ 18 ರಲ್ಲಿ ಬೈಟ್‌ಡ್ಯಾನ್ಸ್ 7 ಲಕ್ಷ ರೂ ನಷ್ಟವನ್ನು ವರದಿ ಮಾಡಿತ್ತು.


ಬೈಟ್‌ಡ್ಯಾನ್ಸ್ ಇಂಡಿಯಾದ ಮೇಲಿನ ಸೇವೆಯನ್ನು ಸೇವಾ ಶುಲ್ಕದಿಂದ ನಡೆಸಲಾಗುತ್ತದೆ, ಆದರೆ ಒಂದು ಸಣ್ಣ ಪಾಲು ಜಾಹೀರಾತಿನಿಂದ ಬರುತ್ತದೆ. (ಕಂಪನಿಯು ಎರಡೂ ಆದಾಯದ ಬಗ್ಗೆ ವಿಸ್ತಾರವಾಗಿ ಹೇಳಿಲ್ಲ.)