ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 95% ಅಂಕಗಳಿಸಿ ಸಾಧನೆ ಮಾಡಿದ ಕೇರಳದ ಬುಡಕಟ್ಟು ಯುವತಿ

ಕಚ್ಚಾ ರಸ್ತೆಗಳಿಂದ ಕೂಡಿರುವ ಶ್ರೀದೇವಿ ವಾಸವಾಗಿರುವ ಬುಡಕಟ್ಟು ಸಮುದಾಯದಲ್ಲಿ ವಿದ್ಯುತ್‌ ಮತ್ತು ಸಂಪರ್ಕವ್ಯವಸ್ಥೆ ಸರಿಯಾಗಿಲ್ಲ. ತನ್ನ ಸಮುದಾಯದಿಂದ ಶಾಲೆಗೆ ಹೋದ ಕೆಲವರಲ್ಲಿ ಶ್ರೀದೇವಿ ಕೂಡ ಒಬ್ಬಳು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 95% ಅಂಕಗಳಿಸಿ ಸಾಧನೆ ಮಾಡಿದ ಕೇರಳದ ಬುಡಕಟ್ಟು ಯುವತಿ

Friday July 10, 2020,

2 min Read

ಈ ವರ್ಷದ ಮಾರ್ಚ್‌ ತಿಂಗಳಲ್ಲಿ ಎಲ್ಲ ಶಾಲೆಗಳು ಇನ್ನೇನು ಪರೀಕ್ಷೆಗಳನ್ನು ನಡೆಸಬೇಕು ಎನ್ನುವ ಸಮಯದಲ್ಲಿ ಕೊರೊನಾವೈರಸ್‌ ಭಾರತದಲ್ಲಿ ಹರಡಲು ಪ್ರಾರಂಭಿಸಿತು. ಇದನ್ನು ತಡೆಗಟ್ಟುವ ಸಲುವಾಗಿ ದೇಶವ್ಯಾಪಿ ಲಾಕ್‌ಡೌನ್‌ ಜಾರಿಯಾಯಿತು, ಮಕ್ಕಳ ಪರೀಕ್ಷೆಗಳನ್ನು ಮುಂದೂಡಬೇಕಾಯಿತು.


ನಿಗದಿತ ಪರೀಕ್ಷಾ ದಿನಾಂಕಗಳನ್ನು ಹಲವಾರು ಬಾರಿ ಮುಂದೂಡಿದ್ದು ಹಲವು ವಿದ್ಯಾರ್ಥಿಗಳು ಗೊಂದಲಕ್ಕೆ ಕಾರಣವಾಯಿತು. ಆದರೆ ಕೇರಳದ ಸಿ. ಶ್ರೀದೇವಿ ಎಂಬ ವಿದ್ಯಾರ್ಥಿತಿ 10 ನೇ ತರಗತಿಯಲ್ಲಿ 95 ಪ್ರತಿಶತ ಅಂಕಗಳಿಸುವ ಮೂಲಕ ಕೊರೊನಾ ನಡುವೆಯೂ ಕಷ್ಟಪಟ್ಟು ಶ್ರದ್ಧೆಯಿಂದ ಯಶಸ್ಸು ಗಳಿಸಿದ್ದಾರೆ.


q

ಚಿತ್ರಕೃಪೆ: ದಿ ಹಿಂದೂ




ತಿರುಪುರ್ ಜಿಲ್ಲೆಯ ಅನಾಮಲೈ ಟೈಗರ್ ರಿಸರ್ವ್ (ಎಟಿಆರ್) ನ ಉದುಮಾಲ್ಪೆಟ್ ಶ್ರೇಣಿಯಲ್ಲಿರುವ ಪೂಚುಕೊಟ್ಟಂಪರೈ ಬುಡಕಟ್ಟು ವಸಾಹತು ಪ್ರದೇಶದವಳಾದ ಶ್ರೀದೇವಿ ಕೇರಳದ ಚಲಕುಡಿಯಲ್ಲಿರುವ ಶಾಲೆಯಲ್ಲಿ ಓದುತ್ತಿದ್ದಳು.


ಇಂಡಿಯಾ ಟುಡೇ ಜತೆ ಮಾತನಾಡುತ್ತಾ ಶ್ರೀದೇವಿ, “ಒಂದನೇ ತರಗತಿಯಿಂದಲೂ ನಾನು ಕೇರಳದಲ್ಲೆ ಓದಿದ್ದೇನೆ, ಮತ್ತು ಶಿಕ್ಷಕರೆಲ್ಲರೂ ತುಂಬಾ ಬೆಂಬಲವಾಗಿದ್ದರು. ಈ ಕಾರಣದಿಂದ 10 ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು,” ಎಂದಳು.


ಕಚ್ಚಾ ರಸ್ತೆಗಳಿಂದ ಕೂಡಿರುವ ಶ್ರೀದೇವಿ ವಾಸವಾಗಿರುವ ಬುಡಕಟ್ಟು ಸಮುದಾಯದಲ್ಲಿ ವಿದ್ಯುತ್‌ ಮತ್ತು ಸಂಪರ್ಕವ್ಯವಸ್ಥೆ ಸರಿಯಾಗಿಲ್ಲ. ತನ್ನ ಸಮುದಾಯದಿಂದ ಶಾಲೆಗೆ ಹೋದ ಕೆಲವರಲ್ಲಿ ಶ್ರೀದೇವಿ ಕೂಡ ಒಬ್ಬಳು.


ತಮ್ಮ ಮಗಳನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಲುವುದಕ್ಕಾಗಿ ಪೂಚುಕೊಟ್ಟಂಪರೈಯಿಂದ ಪ್ರತಿದಿನ ದ್ವಿಚಕ್ರ ವಾಹನದಲ್ಲಿ 80 ಕಿ.ಮೀ. ಸಾಗಿ ತಮಿಳುನಾಡು-ಕೇರಳ ಗಡಿಯಲ್ಲಿ ಬಿಡುತ್ತಿದ್ದೆ ಎಂದು ಶ್ರೀದೇವಿಯ ತಂದೆ ಚೆಲ್ಲಮುತ್ತು ಹೇಳುತ್ತಾರೆ. ಅಲ್ಲಿಂದ ಕೇರಳ ಸರ್ಕಾರ ನಿಗದಿಪಡಿಸಿದ ವಿಶೇಷ ಬಸ್ಸೊಂದು ಪರೀಕ್ಷಾ ಕೇಂದ್ರಕ್ಕೆ ಅವಳನ್ನು ಕರೆದುಕೊಂಡು ಹೋಗುತ್ತಿತ್ತು.


ಚೆಲ್ಲುಮುತ್ತು ಅವರ ಹಿರಿಯ ಮಗುವಿನ ವಿದ್ಯಾಭ್ಯಾಸ ಕೌಟುಂಬಿಕ ಸಮಸ್ಯೆಯಿಂದ 6 ನೇ ತರಗತಿಗೆ ನಿಲ್ಲುವಂತಾಯಿತು. ಶ್ರೀದೇವಿಗೂ ಇದೇ ಪರಿಸ್ಥಿತಿ ಬರಲು ಅವರು ಬಿಟ್ಟಿಲ್ಲ.


ಕೇರಳ ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ ಶ್ರೀದೇವಿಯ ಪ್ರಯತ್ನವನ್ನು ಗುರುತಿಸಿದ ಎಟಿಆರ್ ಉಪ ಕ್ಷೇತ್ರ ನಿರ್ದೇಶಕ ಅರೋಕಿಯರಾಜ್ ಕ್ಸೇವಿಯರ್ ಸನ್ಮಾನಿಸಿದರು.

“ಹುಡುಗಿ ಲಾಪ್‌ಟಾಪ್‌ ಬೇಕೆಂದು ಕೇಳಿದ್ದಾಳೆ, ಶೀಘ್ರದಲ್ಲೆ ಕ್ಸೇವಿಯರ್ ಅದನ್ನು ಉಡುಗೋರೆಯಾಗಿ ನೀಡುತ್ತೇನೆ ಎಂದು ಮಾತು ಕೊಟ್ಟಿದ್ದಾರೆ. ಶ್ರೀದೇವಿಯ ಉನ್ನತ ಶಿಕ್ಷಣಕ್ಕಾಗಿ ಎಲ್ಲ ರೀತಿಯ ಸಹಾಯವನ್ನು ಅರಣ್ಯ ಇಲಾಖೆ ನೀಡಲಿದೆ,” ಎಂದರು ಎಟಿಆರ್ನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ ಸೆಲ್ವನ್.