ಕೋವಿಡ್‌-19 ನಂತಹ ಸಂಕಷ್ಟ ಕಾಲದಲ್ಲಿ ಉದ್ಯಮಗಳು ತೋರಿದ ಧೈರ್ಯವನ್ನು ಕೊಂಡಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

ಟೆಕ್‌ಸ್ಪಾರ್ಕ್ಸ್‌ 2020 ರಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಮುಕ್ತ ಸಂವಾದವಿರಬೇಕು ಎಂದರು. ಸಾಂಕ್ರಾಮಿಕದ ನಡುವೆ ಉದ್ಯಮಗಳು ತೋರಿದ ಧೈರ್ಯವನ್ನು ಶ್ಲಾಘಿಸಿದ ಅವರು ಸರ್ಕಾರ ನಿಮ್ಮ ಸಮಸ್ಯೆಗಳನ್ನು ಕೇಳುತ್ತಿದೆ ಏನು ಬೇಕು ಎಂದು ಕೇಳಿ ಪಡೆಯಿರಿ ಎಂದರು.

ಕೋವಿಡ್‌-19 ನಂತಹ ಸಂಕಷ್ಟ ಕಾಲದಲ್ಲಿ ಉದ್ಯಮಗಳು ತೋರಿದ ಧೈರ್ಯವನ್ನು ಕೊಂಡಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

Wednesday October 28, 2020,

2 min Read

ಕೊರೊನಾವೈರಸ್ ಸಾಂಕ್ರಾಮಿಕದ ಮಧ್ಯೆ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಭಾರತದಲ್ಲಿ ವ್ಯವಹಾರಗಳು ಕೈಗೊಂಡಿರುವ ಪ್ರಯತ್ನಗಳ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಮಾತನಾಡಿ ದೇಶಕ್ಕೆ ಏನು ಬೇಕು ಎಂದು ಸರ್ಕಾರಕ್ಕೆ ತಿಳಿಸುವಲ್ಲಿ ಸಾರ್ವಜನಿಕ ವಲಯದ ಭಾಗವಹಿಸುವಿಕೆ ಹೆಚ್ಚಾಗಬೇಕು ಎಂದು ಕೋರಿದರು.


“ಬಿರುಗಾಳಿಯ ವಿರುದ್ಧ ಹೋರಾಡಿ ಸ್ವಯಂ ಪ್ರೇರಣೆಯಿಂದ ದೃಢವಾಗಿ ನಿಂತಿರುವ ಉದ್ಯಮ ನಾಯಕರಿಗೆ ಶುಭ ಕೋರಲು ನಾನು ಈ ಅವಕಾಶವನ್ನು ಉಪಯೋಗಿಸಿಕೊಳ್ಳುತ್ತೇನೆ,” ಎಂದು ನಿರ್ಮಲಾ ಸೀತಾರಾಮನ್‌ ಯುವರ್‌ಸ್ಟೋರಿ ಆಯೋಜಿಸಿದ್ದ ಟೆಕ್‌ಸ್ಪಾರ್ಕ್ಸ್‌ 2020ನ ವರ್ಚುಅಲ್‌ ಫೈರ್‌ಸೈಡ್‌ ಚಾಟ್‌ನಲ್ಲಿ ಹೇಳಿದರು.


ವ್ಯವಹಾರಗಳು ಮತ್ತು ಭಾರತೀಯರು ತೋರಿಸಿದ ದೃಢನಿಶ್ಚಯ ಮತ್ತು ನೈತಿಕ ಧೈರ್ಯ ಅದ್ಭುತವಾದದ್ದು ಎಂದರು.


ಪ್ರಧಾನಿ ನರೇಂದ್ರ ಮೋದಿಯವರ ‘ಆತ್ಮನಿರ್ಭರ ಭಾರತ' ಸಂದೇಶವನ್ನು ಪ್ರಚಾರ ಮಾಡಿದ ಅವರು, ಚಳವಳಿಯ ಉದ್ದೇಶವು ಭಾರತದ ಆರ್ಥಿಕತೆಯನ್ನು ರಫ್ತು ಅಥವಾ ವಿದೇಶಿ ವ್ಯಾಪಾರಕ್ಕೆ ಮುಚ್ಚುವುದಲ್ಲ, ಬದಲು ಪೂರೈಕೆ ಮತ್ತು ಬೇಡಿಕೆ ಎರಡೂ ವ್ಯವಹಾರವನ್ನು ಕಂಡುಕೊಳ್ಳುವಂತಹ ದೇಶೀಯ ಮಾರುಕಟ್ಟೆಯನ್ನು ಅನ್ವೇಷಿಸಲು ಮತ್ತು ವಿಸ್ತರಿಸಲು ಉದ್ದೇಶಿಸಿದೆ ಎಂದು ಅವರು ಸ್ಪಷ್ಟಪಡಿಸಿದರು.


"ಆತ್ಮನಿರ್ಭರ ಭಾರತದ ಉದ್ದೇಶವು ಆಮದುಗಳನ್ನು ನಿಲ್ಲಿಸುವುದು ಅಥವಾ ದೇಶವನ್ನು ಮುಚ್ಚಿ ಒಳಮುಖವಾಗಿ ಮಾಡುವುದಲ್ಲ. ಜಾಗತಿಕ ಮೌಲ್ಯ ಸರಪಳಿಯ ಭಾಗವಾಗಲು ಭಾರತ ಶ್ರಮಿಸಬೇಕಾದರೆ, ಆ ಶ್ರಮ ಹಾಗೆ ಹೋಗಲು ನಾವು ಬಿಡುವುದಿಲ್ಲ," ಎಂದು ಹಣಕಾಸು ಸಚಿವರು ಹೇಳಿದರು.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

ನಿಜವಾಗಿ ಭಾರತ ಆತ್ಮ ನಿರ್ಭರವಾಗಬೇಕೆಂದರೆ ಆಮದುಗಳ ಮೇಲೆ ಅವಲಂಬಿತವಾಗದೆ ದೇಶದಲ್ಲೆ ಜಾಗತಿಕವಾಗಿ ಉತ್ಕ್ರಷ್ಟ ದರ್ಜೆಯ ಉತ್ಪನ್ನಗಳನ್ನು ತಯಾರಿಸಬೇಕು ಎಂದರು ಅವರು. ಈ ವಸ್ತುಗಳು ಸ್ಥಳೀಯ ಬೇಡಿಕೆಯನ್ನಷ್ಟೆ ಪೂರೈಸದೆ ಅಂತರಾಷ್ಟ್ರೀಯ ಬೇಡಿಕೆಯ ಗಮನವನ್ನು ಸೆಳೆಯಬೇಕು ಎಂದರು ಅವರು.


ಯುವಕರು, ಎಲ್ಲ ಗಾತ್ರದ ಉದ್ಯಮಗಳು ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ ಅವರು “ಸರ್ಕಾರ ಕೇಳುತ್ತಿದೆ, ನಿಮಗೇನು ಬೇಕು ಕೇಳಿ,” ಎಂದರು


“ಏನಾದರು ಹೊಸದನ್ನು ಮಾಡಲು ಇದೇ ಸುಸಮಯ. ಹಿಂಜರಿಯಬೇಡಿ; ಭಾರತ ನಿಮಗಾಗಿ ಏನು ಮಾಡಬೇಕೆಂದು ಹೇಳಿ. ನಾವು ಏನು ಮಾಡಬೇಕು ಅಂದುಕೊಂಡಿದ್ದೆವೊ ಅದಕ್ಕೆ ಯಾವುದೆ ಹಿಂಜರಿಕೆ ಇರಬಾರದು.”


“ದೇಶದ ಪ್ರಜೆಯಾಗಿ ಸರ್ಕಾರ ಏನು ಮಾಡುತ್ತಿಲ್ಲವೆಂದು ಹೇಳಿ. ನಾನು ಇದನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಪ್ರಶ್ನೆಗಳನ್ನು ಕೇಳಿ: ಉತ್ತರಿಸಲು ನಾವಿದ್ದೇವೆ. ಯಾವ ಕೆಲಸ ನಡೆಯುತ್ತಿಲ್ಲವೊ ಅದರ ಬಗ್ಗೆ ನೀವೆಲ್ಲ ಮಾತನಾಡಬೇಕು ಎಂಬುದು ನನ್ನಾಸೆ,” ಎಂದರು ಅವರು.


ಐಟಿ ಸಚಿವ ರವಿ ಶಂಕರ್‌ ಪ್ರಸಾದ್‌ ಅವರ ಮಾತನ್ನೆ ಪುನರಾವರ್ತಿಸುತ್ತ ಇಂದು ಅವರು ಉದ್ಯಮಗಳು ಕೇವಲ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದೆ ಹೊಸ ವಸ್ತುಗಳನ್ನು ಸೃಷ್ಟಿಸಿ.


“ನಮಗೆ ಹೊಸ ಬಾರತ ಬೇಕು, ನಾವು ಅದನ್ನು ಸುಗಮಗೊಳಿಸಲು ಸಿದ್ಧರಿದ್ದೇವೆ,” ಎಂದರು.


ಆರ್ಥಿಕತೆಗೆ ಬಲ ನೀಡಲು ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಈ ತಿಂಗಳ ಆರಂಭದಲ್ಲಿ, ಸೀತಾರಾಮನ್ ಅವರು 73,000 ಕೋಟಿ ರೂ.ಗಳ ಉದ್ದೀಪನ ಪ್ಯಾಕೇಜ್ ಅನ್ನು ಘೋಷಿಸಿದ್ದರು. ಮೇ ತಿಂಗಳಲ್ಲಿ ಆರ್ಥಿಕತೆಗೆ ಪುಷ್ಟಿ ನೀಡಲು 20 ಲಕ್ಷ ಕೋಟಿಯ ಪ್ಯಾಕೆಜ್‌ ಘೋಷಿಸಿದ್ದರು.