17.5 ಮಿಲಿಯನ್, ವಲಸೆಗಾರರೊಂದಿಗೆ ಪ್ರಪಂಚದ ಅತಿ ಹೆಚ್ಚು ವಲಸೆಗಾರರ ಮೂಲವಾದ ಭಾರತ

17.5 ಮಿಲಿಯನ್ ವಲಸಿಗರು ವಿದೇಶದಲ್ಲಿ ವಾಸಿಸುತ್ತಿರುವ ಕಾರಣ ಭಾರತವು ಅಂತರರಾಷ್ಟ್ರೀಯ ವಲಸಿಗರ ಅತಿದೊಡ್ಡ ಮೂಲ ದೇಶವಾಗಿದೆ, ನಂತರದ ಸ್ಥಾನದಲ್ಲಿ ಮೆಕ್ಸಿಕೊ ಮತ್ತು ಚೀನಾ ಇವೆ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ತಿಳಿಸಿದೆ.

2nd Dec 2019
  • +0
Share on
close
  • +0
Share on
close
Share on
close

ವಿಶ್ವದಾದ್ಯಂತ 17.5 ಮಿಲಿಯನ್ ವಲಸೆಗಾರರನ್ನು ಹೊಂದಿರುವ ಭಾರತವು ಅಂತರರಾಷ್ಟ್ರೀಯ ವಲಸಿಗರ ಮೂಲದ ಅತಿದೊಡ್ಡ ದೇಶವಾಗಿ ಮುಂದುವರೆದಿದೆ. ಇದು ವಿದೇಶದಲ್ಲಿ ವಾಸಿಸುವ ಭಾರತೀಯರಿಂದ 78.6 ಬಿಲಿಯನ್ ಹಣ ರವಾನೆಯಾಗಿದೆ ಎಂದು ಯುಎನ್ ವಲಸೆ ಸಂಸ್ಥೆ ತಿಳಿಸಿದೆ.


2019 ರಲ್ಲಿ ಅಂತರರಾಷ್ಟ್ರೀಯ ವಲಸಿಗರ ಸಂಖ್ಯೆ ಈಗ 270 ಮಿಲಿಯನ್ ಎಂದು ಅಂದಾಜಿಸಲಾಗಿದೆ ಮತ್ತು ಸುಮಾರು 51 ಮಿಲಿಯನ್ ವಲಸಿಗರು ಆಸರೆಪಡೆದಿರುವ ಯುಎಸ್ ಅಗ್ರ ಸ್ಥಾನದಲ್ಲಿದೆ ಎಂದು ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಶನ್ ತನ್ನ 'ಗ್ಲೋಬಲ್ ಮೈಗ್ರೇಶನ್ ರಿಪೋರ್ಟ್ 2020' ನಲ್ಲಿ ಹೇಳಿದೆ.


ಐಒಎಂ ತನ್ನ ಇತ್ತೀಚಿನ ಜಾಗತಿಕ ವರದಿಯಲ್ಲಿ, ಒಟ್ಟಾರೆ ಅಂಕಿ ಅಂಶವು ವಿಶ್ವದ ಜನಸಂಖ್ಯೆಯ ಕೇವಲ ಒಂದು ಸಣ್ಣ ಭಾಗದಷ್ಟಿದೆ ಎಂದು ಹೇಳಿದೆ. ಆದರೂ ಇದು ಎರಡು ವರ್ಷಗಳ ಹಿಂದೆ ಪ್ರಕಟವಾದ ಕೊನೆಯ ವರದಿಗೆ ಹೋಲಿಸಿದರೆ 0.1 ರಷ್ಟು ಹೆಚ್ಚಾಗಿದೆ.


ಈ ಅಂಕಿ ಅಂಶವು ವಿಶ್ವದ ಜನಸಂಖ್ಯೆಯ 3.5 ಪ್ರತಿಶತದಷ್ಟಿದೆ, ಅಂದರೆ ಜಾಗತಿಕವಾಗಿ 96.5 ಪ್ರತಿಶತ ಜನರು ತಾವು ಹುಟ್ಟಿದ ದೇಶದಲ್ಲಿ ವಾಸಿಸುತ್ತಿದ್ದಾರೆಂದು ಅಂದಾಜಿಸಲಾಗಿದೆ" ಎಂದು ಐಒಎಂನ ಜಾಗತಿಕ ವಲಸೆ ವರದಿ 2020 ಹೇಳಿದೆ.


ವಿಶ್ವಸಂಸ್ಥೆಯ ಪ್ರಕಾರ, ಎಲ್ಲಾ ಅಂತರರಾಷ್ಟ್ರೀಯ ವಲಸಿಗರಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ 141 ಮಿಲಿಯನ್ ವಲಸಿಗರು ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ವಾಸಿಸುತ್ತಿದ್ದಾರೆ. ಅದರಲ್ಲಿ ಅಂದಾಜು 52 ಪ್ರತಿಶತ ಪುರುಷರಿದ್ದಾರೆ, ಮತ್ತು ಎಲ್ಲಾ ವಲಸಿಗರಲ್ಲಿ ಮೂರನೇ ಎರಡರಷ್ಟು ಜನರು ಅಂದರೆ ಸುಮಾರು 164 ಮಿಲಿಯನ್ ಜನರು ಕೆಲಸ ಹುಡುಕುವ ಸಲುವಾಗಿ ವಲಸೆ ಹೋಗಿದ್ದಾರೆ.
ಭಾರತವು ಅಂತರರಾಷ್ಟ್ರೀಯ ವಲಸಿಗರ ಮೂಲದ ಅತಿದೊಡ್ಡ ದೇಶವಾಗಿ ಮುಂದುವರಿದಿದೆ. ಭಾರತವು ವಿದೇಶದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಅಂದರೆ 17.5 ಮಿಲಿಯನ್ ವಲಸಿಗರ ಮೂಲ ದೇಶವಾಗಿದೆ. ನಂತರದ ಸ್ಥಾನದಲ್ಲಿ ಮೆಕ್ಸಿಕೊ (11.8 ಮಿಲಿಯನ್), ಮತ್ತು ಚೀನಾ (10.7 ಮಿಲಿಯನ್) ದೇಶಗಳಿವೆ. ಅತಿ ಹೆಚ್ಚು ವಲಸಿಗರಿಗೆ ಆಶ್ರಯ ನೀಡಿರುವ ದೇಶವಾಗಿ ಯುಎಸ್ ಅಗ್ರಸ್ಥಾನದಲ್ಲಿದೆ. ಇಲ್ಲಿ 50.7 ಮಿಲಿಯನ್ ಅಂತರರಾಷ್ಟ್ರೀಯ ವಲಸಿಗರಿದ್ದಾರೆ.


ಅಂತರರಾಷ್ಟ್ರೀಯ ಹಣ ರವಾನೆಯು 2018 ರಲ್ಲಿ 689 ಡಾಲರ್ ಶತಕೋಟಿಗೆ ಏರಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮೊದಲ ಮೂರು ಹಣ ರವಾನೆದಾರರು ಭಾರತ ($78.6 ಬಿಲಿಯನ್), ಚೀನಾ ($67.4 ಬಿಲಿಯನ್), ಮತ್ತು ಮೆಕ್ಸಿಕೊ ($35.7 ಬಿಲಿಯನ್) ದೇಶಗಳಾಗಿವೆ.


ಹಣ ಕಳುಹಿಸುವ ದೇಶಗಳಲ್ಲಿ ಯುಎಸ್ ಅಗ್ರಸ್ಥಾನದಲ್ಲಿದೆ ($68.0 ಬಿಲಿಯನ್) ನಂತರ ಯುನೈಟೆಡ್ ಅರಬ್ ಎಮಿರೇಟ್ಸ್ ($44.4 ಬಿಲಿಯನ್) ಮತ್ತು ಸೌದಿ ಅರೇಬಿಯಾ ($36.1 ಬಿಲಿಯನ್) ದೇಶಗಳಿವೆ.


ಹೆಚ್ಚಿನ ವಲಸಿಗರು ಯುಎಸ್ ಗೆ ಪ್ರಯಾಣಿಸಿದ್ದರೂ, ಬಡ ದೇಶಗಳಿಂದ ಫ್ರಾನ್ಸ್, ರಷ್ಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸೌದಿ ಅರೇಬಿಯಾದಂತಹ ಶ್ರೀಮಂತ ರಾಷ್ಟ್ರಗಳಿಗೆ ವಲಸೆ ಹೋಗಿರುವುದು ದೃಢಪಟ್ಟಿದೆ.


ಈ ತರಹದ ವಲಸೆಯು ಭವಿಷ್ಯದಲ್ಲಿ ಹಲವು ವರ್ಷಗಳವರೆಗೆ ಮುಂದುವರಿಯುತ್ತದೆ. ವಿಶೇಷವಾಗಿ ಕೆಲವು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿನ ಜನಸಂಖ್ಯೆಯು ಮುಂಬರುವ ವರ್ಷಗಳಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ, ಇದು ಭವಿಷ್ಯದ ಪೀಳಿಗೆಗೆ ತೊಂದರೆಯನ್ನುಂಟು ಮಾಡುತ್ತದೆ" ಎಂದು ಐಒಎಂ ಹೇಳಿದೆ.


ಆಫ್ರಿಕಾ, ಏಷ್ಯಾ ಮತ್ತು ಯುರೋಪಿನಲ್ಲಿ, ಹೆಚ್ಚಿನ ವಲಸಿಗರು ತಮ್ಮ ಪ್ರದೇಶಗಳಲ್ಲಿಯೇ ಇರುತ್ತಾರೆ, ಆದರೆ ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ಮತ್ತು ಉತ್ತರ ಅಮೆರಿಕದಿಂದ ವಲಸೆ ಬಂದವರಲ್ಲಿ ಹೆಚ್ಚಿನವರು ತಾವು ಹುಟ್ಟಿದ ಪ್ರದೇಶಗಳಲ್ಲಿ ಇರುವುದಿಲ್ಲ.


ಮಧ್ಯಪ್ರಾಚ್ಯದ ಮೇಲೆ ಕೇಂದ್ರೀಕರಿಸಿದ ಮಾಹಿತಿಯ ಪ್ರಕಾರ ಗಲ್ಫ್‌ ದೇಶಗಳು ವಿಶ್ವದಲ್ಲೇ ಅತಿ ಹೆಚ್ಚು ತಾತ್ಕಾಲಿಕ ಕಾರ್ಮಿಕ ವಲಸಿಗರನ್ನು ಹೊಂದಿದೆ. ಇದರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ನ ಜನಸಂಖ್ಯೆಯು ಸುಮಾರು 90 ಪ್ರತಿಶತದಷ್ಟಿದೆ.


ಮಧ್ಯ ಆಫ್ರಿಕಾದ ಗಣರಾಜ್ಯ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ (ಡಿಆರ್‌ಸಿ), ಮ್ಯಾನ್ಮಾರ್, ದಕ್ಷಿಣ ಸುಡಾನ್, ಸಿರಿಯಾ ಮತ್ತು ಯೆಮನ್‌ನಲ್ಲಿ ನಡೆಯುತ್ತಿರುವ ಅಹಿಂಸೆ ಮತ್ತು ಒಳ ಜಗಳಗಳು ಕಳೆದ ಎರಡು ವರ್ಷಗಳಲ್ಲಿ ಹೇಗೆ ಭಾರಿ ಆಂತರಿಕ ಸ್ಥಳಾಂತರಕ್ಕೆ ಕಾರಣವಾಗಿದೆ ಎಂಬುದನ್ನು ಈ ವರದಿ ಎತ್ತಿ ತೋರಿಸಿದೆ. ಐಒಎಂನ ಇಂಟರ್ನಲ್ ಡಿಸ್ಪ್ಲೇಸ್ಮೆಂಟ್ ಮಾನಿಟರಿಂಗ್ ಸೆಂಟರ್ ಪ್ರಕಾರ. 1998 ರಲ್ಲಿ ಮೇಲ್ವಿಚಾರಣೆ ಪ್ರಾರಂಭವಾದಾಗಿನಿಂದ ಒಟ್ಟು 41.3 ಮಿಲಿಯನ್ ಜನರು 2018 ರ ಕೊನೆಯಲ್ಲಿ ಸ್ಥಳಾಂತರಗೊಂಡಿದ್ದಾರೆ.


ಆಂತರಿಕ ಸ್ಥಳಾಂತರದ ವಿಷಯಕ್ಕೆ ಬಂದಾಗ ಸಿರಿಯಾವು ಮೊದಲನೇ ಸ್ಥಾನದಲ್ಲಿದೆ (6.1 ಮಿಲಿಯನ). ನಂತರದ ಸ್ಥಾನದಲ್ಲಿ ಕೊಲಂಬಿಯಾ (5.8 ಮಿಲಿಯನ್) ಮತ್ತು ಕಾಂಗೋ (3.1 ಮಿಲಿಯನ್) ಇದೆ.


ಸುಮಾರು ಒಂಬತ್ತು ವರ್ಷಗಳ ಸಂಘರ್ಷದ ನಂತರ, ಸಿರಿಯಾವು ಅತಿ ಹೆಚ್ಚು ನಿರಾಶ್ರಿತರ ಮೂಲ ದೇಶವಾಗಿ ಬದಲಾಗಿದೆ, ಇದು ಸುಮಾರು 26 ದಶಲಕ್ಷದಷ್ಟು ನಿರಾಶ್ರಿತರ ಮೂಲವಾಗಿದೆ ಹಾಗೂ ಅಫ್ಘಾನಿಸ್ತಾನವನ್ನು ಮೀರಿಸಿದೆ. ಅಫ್ಘಾನಿಸ್ತಾನ ಸುಮಾರು 2.5 ಮಿಲಿಯನ್ ನಿರಾಶ್ರಿತರ ಮೂಲವಾಗಿದೆ.


ಅಂತಿಮವಾಗಿ, ಹವಾಮಾನ ಬದಲಾವಣೆ ಮತ್ತು ಹವಾಮಾನ ವಿಪತ್ತುಗಳ ಪ್ರಭಾವದಿಂದ, ಫಿಲಿಪೈನ್ಸ್‌ನ ಟೈಫೂನ್ ಮಾಂಗ್‌ಖುಟ್ ನಲ್ಲಿ 2018 ರ ಕೊನೆಯಲ್ಲಿ 3.8 ಮಿಲಿಯನ್ ಜನರನ್ನು ಹೊಸದಾಗಿ ಸ್ಥಳಾಂತರಿಸಲಾಯಿತು, ಇದು ಜಾಗತಿಕವಾಗಿ ಅತಿದೊಡ್ಡ ಸಂಖ್ಯೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

How has the coronavirus outbreak disrupted your life? And how are you dealing with it? Write to us or send us a video with subject line 'Coronavirus Disruption' to editorial@yourstory.com

  • +0
Share on
close
  • +0
Share on
close
Share on
close

Our Partner Events

Hustle across India