ಅನ್‌ಲಾಕ್‌-3: ಅಗಸ್ಟ್‌ 31 ರ ವರೆಗೆ ಶಾಲೆ, ಚಿತ್ರಮಂದಿರಗಳಿಲ್ಲ: ಜಿಮ್‌ಗೆ ಚಾಲನೆ

ಅಗಸ್ಟ್‌ 1 ರಿಂದ ಅನ್‌ಲಾಕ್‌-3 ಮಾರ್ಗಸೂಚಿಗಳು ದೇಶದಾದ್ಯಂತ ಜಾರಿಯಾಗಲಿದ್ದು, ಕಂಟೈನ್‌ಮೆಂಟ್‌ ವಲಯಗಳಲ್ಲಿ ಕಟ್ಟು ನಿಟ್ಟಿನ ನಿಷೇಧವು ಅಗಸ್ಟ್‌ 31 ರ ವರೆಗೆ ಮುಂದುವರೆಯಲಿದೆ.

30th Jul 2020
  • +0
Share on
close
  • +0
Share on
close
Share on
close

ಬುಧವಾರ ಅನ್‌ಲಾಕ್‌-3 ರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ಸರ್ಕಾರ ಕಂಟೈನ್‌ಮೆಂಟ್‌ ವಲಯಗಳನ್ನು ಬಿಟ್ಟು ಬೇರೆಡೆ ಹೆಚ್ಚಿನ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದ್ದು, ಶಾಲಾ-ಕಾಲೇಜು, ಮೆಟ್ರೊ ರೈಲು, ಚಿತ್ರಮಂದಿರಗಳು ಮತ್ತು ಬಾರ್‌ಗಳ ಮೇಲಿನ ನಿಷೇಧ ಮುಂದುವರೆದಿದ್ದು, ಅಗಸ್ಟ್‌ 31 ರ ವರೆಗೂ ಮುಚ್ಚಿರಲಿವೆ. ರಾಜಕೀಯ ಮತ್ತು ಧಾರ್ಮಿಕ ಕಾರಣಗಳಿಗಾಗಿ ಸಭೆ ಸೇರುವುದನ್ನೂ ನಿಷೇಧಿಸಲಾಗಿದೆ.


ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳೊಂದಿಗೆ ಜಿಮ್‌ ಮತ್ತು ಯೋಗ ಸಂಸ್ಥೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದೆ.


ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ವ್ಯಾಪಕವಾದ ಸಮಾಲೋಚನೆ ನಡೆಸಿ, ಶಾಲಾ-ಕಾಲೇಜು, ತರಬೇತಿ ಕೇಂದ್ರಗಳನ್ನು ಅಗಸ್ಟ್‌ 31 ರವರೆಗೂ ತೆರೆಯದಿರಲು ನಿರ್ಧರಿಸಲಾಗಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಆದರೆ ರಾತ್ರಿ ಓಡಾಟಕ್ಕೆ ಸರ್ಕಾರ ಈಗ ಅನುಮತಿ ನೀಡಿದ್ದು, ರಾತ್ರಿ ಕರ್ಫ್ಯೂ ಅನ್ನು ತೆರೆಯಲಾಗಿದೆ.


ಅಗಸ್ಟ್‌ 1 ರಿಂದ ಅನ್‌ಲಾಕ್‌-3 ಮಾರ್ಗಸೂಚಿಗಳು ದೇಶದಾದ್ಯಂತ ಜಾರಿಯಾಗಲಿದ್ದು, ಕಂಟೈನ್‌ಮೆಂಟ್‌ ವಲಯಗಳಲ್ಲಿ ಕಟ್ಟು ನಿಟ್ಟಿನ ನಿಷೇಧವು ಅಗಸ್ಟ್‌ 31 ರ ವರೆಗೆ ಮುಂದುವರೆಯಲಿದೆ.


ನಿಷೇಧಿತ ಚಟುವಟಿಕೆಗಳಲ್ಲಿ ಮೆಟ್ರೋ ರೈಲು ಸೇವೆಗಳು, ಸಿನೆಮಾ ಹಾಲ್‌ಗಳು, ಈಜುಕೊಳಗಳು, ಮನರಂಜನಾ ಉದ್ಯಾನವನಗಳು, ಚಿತ್ರಮಂದಿರಗಳು, ಬಾರ್‌ಗಳು, ಸಭಾಂಗಣಗಳು, ಅಸೆಂಬ್ಲಿ ಹಾಲ್‌ಗಳು ಸೇರಿವೆ. ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಗಳು ಮತ್ತು ಇತರ ದೊಡ್ಡ ಸಭೆಗಳನ್ನು ಆಗಸ್ಟ್ 31 ರವರೆಗೆ ನಿಷೇಧಿಸಲಾಗಿದೆ.


ಇವುಗಳನ್ನು ಹೊರತುಪಡಿಸಿ ಕಂಟೈನ್‌ಮೆಂಟ್‌ ಪ್ರದೇಶದ ಹೊರಗೆ ಇತರ ಎಲ್ಲ ಚಟುವಟಿಕೆಗಳಿಗೂ ಅನುಮತಿ ನೀಡಲಾಗಿದ್ದು, ಯಾವಾಗ ಯಾವ ಚಟುವಟಿಕೆಗಳು ತೆರೆಯಬೇಕು ಎಂಬ ದಿನಾಂಕವನ್ನು ಪರಿಸ್ಥಿತಿಯನ್ನು ಅವಲೋಕಿಸಿ ತಿಳಿಸಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದ


ಮುಖಗವಸುಗಳ ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತಹ ಇತರ ಸುರಕ್ಷತಾ ಆರೋಗ್ಯ ಕ್ರಮಗಳ ಪಾಲನೆ ಮಾಡುತ್ತ ಸ್ವಾತಂತ್ರ್ಯ ದಿನವನ್ನು ಆಚರಿಸಲು ಅನುಮತಿ ನೀಡಿಲಾಗಿದೆ.


ವಂದೇ ಭಾರತ್ ಮಿಷನ್ ಅಡಿಯಲ್ಲಿ ಪ್ರಯಾಣಿಕರ ಅಂತರರಾಷ್ಟ್ರೀಯ ವಿಮಾನ ಪ್ರಯಾಣವನ್ನು ಸೀಮಿತ ರೀತಿಯಲ್ಲಿ ಅನುಮತಿಸಲಾಗಿದ್ದು, ಮತ್ತಷ್ಟು ಸೇವೆಗಳನ್ನು ಪರಾಮರ್ಶಿಸಿ ತೆರೆಯಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


ರಾಜ್ಯಗಳ ಒಳಗೆ ಮತ್ತು ಇತರ ರಾಜ್ಯಗಳಿಗೆ ಪ್ರಯಾಣಿಸಲು ವ್ಯಕ್ತಿಗಳಿಗೆ ಅಥವಾ ಸರಕು ಸಾಗಣೆಗೆ ಯಾವುದೇ ರೀತಿಯ ನಿರ್ಬಂಧವಿರುವುದಿಲ್ಲ. ಹೀಗೆ ಪ್ರಯಾಣಿಸಲು ಯಾವುದೇ ರೀತಿಯ ಪ್ರತ್ಯೇಕ ಪರವಾನಗಿ, ಅನುಮತಿ, ಇ-ಅನುಮತಿಗಳ ಅವಷ್ಯಕತೆ ಇರುವುದಿಲ್ಲ.


ಪ್ರಯಾಣಿಕರ ರೈಲುಗಳು ಮತ್ತು ‘ಶ್ರಮಿಕ್' ವಿಶೇಷ ರೈಲುಗಳ ಚಲನೆ; ದೇಶೀಯ ಪ್ರಯಾಣಿಕರ ವಿಮಾನ ಪ್ರಯಾಣ; ದೇಶದ ಹೊರಗೆ ಸಿಲುಕಿರುವ ಭಾರತೀಯ ಪ್ರಜೆಗಳ ಚಲನೆ ಮತ್ತು ವಿದೇಶಕ್ಕೆ ಪ್ರಯಾಣಿಸಲಿರುವ ನಿರ್ದಿಷ್ಟ ವ್ಯಕ್ತಿಗಳ ಚಲನೆ; ವಿದೇಶಿ ಪ್ರಜೆಗಳ ಸ್ಥಳಾಂತರಿಸುವಿಕೆ; ಮತ್ತು ಕಡಲತೀರದ ಚಲನವಲನಗಳನ್ನು ಆರೋಗ್ಯ ಸಚಿವಾಲಯದ ಪ್ರಮಾಣಿತ ಕಾರ್ಯಾಚರಣಾ ವಿಧಾನದಂತೆ ನಡೆಸಲಾಗುವುದು.


ಆರೋಗ್ಯ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳನ್ನು ಪರಿಗಣಿಸಿ ಕೋವಿಡ್‌-19 ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರಾಡಳಿತ ಸರ್ಕಾರಗಳು ಕಂಟೈನ್‌ಮೆಂಟ್ ವಲಯಗಳನ್ನು ಎಚ್ಚರಿಕೆಯಿಂದ ಗುರುತಿಸಬೇಕಾಗಿದೆ.


ಕಂಟೈನ್‌ಮೆಂಟ್ ವಲಯಗಳಲ್ಲಿ, ಕಟ್ಟುನಿಟ್ಟಾದ ಪರಿಧಿಯ ನಿಯಂತ್ರಣವನ್ನು ಕಾಪಾಡಿಕೊಳ್ಳಬೇಕು ಮತ್ತು ಅಗತ್ಯ ಚಟುವಟಿಕೆಗಳನ್ನು ಮಾತ್ರ ಅನುಮತಿಸಲಾಗುತ್ತದೆ.


ಈ ಕಂಟೈನ್‌ಮೆಂಟ್ ವಲಯಗಳ ವಿವರಗಳನ್ನು ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಜಿಲ್ಲಾಧಿಕಾರಿಗಳ ವೆಬ್‌ಸೈಟ್‌ಗಳಲ್ಲಿ ತಿಳಿಸಲಾಗುವುದು. ಜತೆಗೆ ಮಾಹಿತಿಯನ್ನು ಆರೋಗ್ಯ ಸಚಿವಾಲಯದೊಂದಿಗೆ ಹಂಚಿಕೊಳ್ಳಲಾಗುವುದು.


ಕಂಟೈನ್‌ಮೆಂಟ್ ವಲಯಗಳ ಹೊರಗಿನ ಚಟುವಟಿಕೆಗಳನ್ನು ರಾಜ್ಯಗಳು ನಿರ್ಧರಿಸುತ್ತವೆ. ಪರಿಸ್ಥಿತಿಯ ಮೌಲ್ಯಮಾಪನದ ಆಧಾರದ ಮೇಲೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಂಟೈನ್‌ಮೆಂಟ್ ವಲಯಗಳ ಹೊರಗೆ ಕೆಲವು ಚಟುವಟಿಕೆಗಳನ್ನು ನಿಷೇಧಿಸಬಹುದು, ಅಥವಾ ಅಗತ್ಯವೆಂದು ಪರಿಗಣಿಸುವಂತಹ ನಿರ್ಬಂಧಗಳನ್ನು ವಿಧಿಸಬಹುದು.


ಮಾರ್ಗಸೂಚಿಗಳಲ್ಲಿ ಅಂಗಡಿಗಳು ಗ್ರಾಹಕರ ನಡುವೆ ಸಮರ್ಪಕವಾದ ದೈಹಿಕ ಅಂತರವನ್ನು ಕಾಯ್ದುಕೊಳ್ಳುವುದು. 65 ವರ್ಷಕ್ಕಿಂತ ಮೇಲ್ಪಟ್ಟವರು, ಸಹ-ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಂತಹ ದುರ್ಬಲ ವ್ಯಕ್ತಿಗಳು ಅಗತ್ಯ ಅವಶ್ಯಕತೆಗಳ ಪೂರೈಕೆ ಮತ್ತು ಆರೋಗ್ಯ ಉದ್ದೇಶಗಳನ್ನು ಹೊರತುಪಡಿಸಿ ಮನೆಯಲ್ಲಿಯೇ ಇರಬೇಕು ಎನ್ನುವ ಇತರೆ ಅಂಶಗಳು ಸೇರಿವೆ.


ಆರೋಗ್ಯ ಸೇತು ಆ್ಯಪ್ ಬಳಸುವುದನ್ನು ಎಂದಿನಂತೆ ಪ್ರೋತ್ಸಾಹಿಸಲಾಗುವುದು.


ವಿವಾಹಗಳಲ್ಲಿ, ಅತಿಥಿಗಳ ಸಂಖ್ಯೆ 50 ಮೀರಬಾರದು. ಅಂತ್ಯಕ್ರಿಯೆ ಮತ್ತು ಅಂತಿಮ ವಿಧಿಗಳಿಗೆ ಸಂಬಂಧಿಸಿದ ಕೂಟಗಳಲ್ಲಿ, 20 ಕ್ಕಿಂತ ಹೆಚ್ಚು ಜನ ಸೇರಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ, ಪಾನ್, ಗುಟ್ಕಾ ಮತ್ತು ತಂಬಾಕು ಸೇವನೆಯನ್ನು ನಿಷೇಧಿಸಲಾಗಿದೆ.

Want to make your startup journey smooth? YS Education brings a comprehensive Funding Course, where you also get a chance to pitch your business plan to top investors. Click here to know more.

  • +0
Share on
close
  • +0
Share on
close
Share on
close

Our Partner Events

Hustle across India