ತಮ್ಮ ಮದುವೆ ದಿನದಂದು ಕೋವಿಡ್‌-19 ಚಿಕಿತ್ಸಾ ಕೇಂದ್ರಕ್ಕೆ 50 ಹಾಸಿಗೆ, ಆಮ್ಲಜನಕ ಸಿಲಿಂಡರ್‌ಗಳನ್ನು ನೀಡಿದ ನವದಂಪತಿಗಳು

ಮುಂಬೈ ಮೂಲದ ಏರಿಕ್‌ ಲೊಬೊ ಮತ್ತು ಮರ್ಲಿನ್‌ ದಂಪತಿಗಳು ತಮ್ಮ ಮದುವೆ ದಿನದಂದು ಸತ್ಪಲಾ ಹಳ್ಳಿಯ ಕೋವಿಡ್‌-19 ಚಿಕಿತ್ಸಾ ಕೇಂದ್ರಕ್ಕೆ 50 ಹಾಸಿಗೆಗಳು ಮತ್ತು ಆಮ್ಲಜನಕ ಸಿಲಿಂಡರ್‌ಗಳನ್ನು ನೀಡಿ ತಮ್ಮ ಮದುವೆಯನ್ನು ಸಂಭ್ರಮಿಸಿದರು.

ತಮ್ಮ ಮದುವೆ ದಿನದಂದು ಕೋವಿಡ್‌-19 ಚಿಕಿತ್ಸಾ ಕೇಂದ್ರಕ್ಕೆ 50 ಹಾಸಿಗೆ, ಆಮ್ಲಜನಕ ಸಿಲಿಂಡರ್‌ಗಳನ್ನು ನೀಡಿದ ನವದಂಪತಿಗಳು

Wednesday July 01, 2020,

2 min Read

ಕೊರೊನಾವೈರಸ್‌ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಭಾರತದಲ್ಲಿ ಆಸ್ಪತ್ರೆಯಲ್ಲಿ ಬೆಡ್‌ಗಳು, ಆಮ್ಲಜನಕ ಸಿಲಿಂಡರ್‌ಗಳು ಮತ್ತು ವೆಂಟಿಲೇಟರ್‌ಗಳ ಕೊರತೆ ಎದುರಾಗಿದೆ. ಇಂದಿಗೆ ಭಾರತದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 5.5 ಲಕ್ಷವನ್ನು ದಾಟಿ ಮುನ್ನುಗ್ಗುತ್ತಿದೆ.


ರೋಗಿಗಳ ಸ್ಥಿತಿಯನ್ನು ಕಂಡು ಮುಂಬೈನ ವಸಾಯಿ ನಗರದ ನಂದಖಲ ಹಳ್ಳಿಯ ನವ ವಧುವರರಾದ ಎಇಕ್‌ ಆಂಟೋನ್‌ ಲೊಬೊ (28) ಹಾಗೂ ಮರ್ಲಿನ್‌ (27) ಸತ್ಪಾಲಾ ಹಳ್ಳಿಯ ಕೋವಿಡ್‌-19 ಚಿಕಿತ್ಸಾ ಕೇಂದ್ರಕ್ಕೆ 50 ಹಾಸಿಗೆಗಳು ಮತ್ತು ಆಮ್ಲಜನಕ ಸಿಲಿಂಡರ್‌ಗಳನ್ನು ದಾನವಾಗಿ ನೀಡಿ ತಮ್ಮ ಮದುವೆಯನ್ನು ಸಂಭ್ರಮಿಸಿದರು.


ಚಿತ್ರಕೃಪೆ: ಟೈಮ್ಸ್‌ ಆಪ್‌ ಇಂಡಿಯಾ




ವೇಗವಾಗಿ ಹರಡುತ್ತಿರುವ ಸೋಂಕಿನಿಂದ ಬಹು ಸಂಖ್ಯೆಯಲ್ಲಿ ಜನ ಸೇರುವಂತಿಲ್ಲವೆಂದು ಈ ಜೋಡಿ ಕೇವಲ 22 ಅತಿಥಿಗಳೊಂದಿಗೆ ಮುಖಗವಸನ್ನು ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ತಮ್ಮ ಮದುವೆ ಕಾರ್ಯಕ್ರಮವನ್ನು ಆಚರಿಸಿತು.


“ಕೋವಿಡ್‌-19 ಮಹಾಮಾರಿಯಿಂದ ವಸಾಯಿ-ವಿರಾರ್‌ನಲ್ಲಿ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪಾಲ್ಘರ್‌ ಜಿಲ್ಲೆಯಲ್ಲಿ 90 ಜನ ಮರಣಹೊಂದಿದ್ದು, 1,500 ಹೆಚ್ಚು ಜನರಿಗೆ ಸೋಂಕು ದೃಢಪಟ್ಟಿದೆ. ಹಾಗಾಗಿ ನಮ್ಮ ಕೈಲಾದ ಸಹಾಯ ಮಾಡಲು ನಾವು ಯೋಚಿಸಿದೆವು,” ಎಂದರು ಎರಿಕ್‌, ವರದಿ ದಿ ಲಾಜಿಕಲ್‌ ಇಂಡಿಯನ್.


ಮಾರ್ಚ್‌ನಲ್ಲಿ ಈ ಜೋಡಿಯು ಸ್ಥಳೀಯ ಸಚಿವರಾದ ಕ್ಷಿತಿಜ್‌ ಠಾಕುರ್‌ ಅವರನ್ನು ಸಂಪರ್ಕಿಸಿದ್ದರು, ಅವರು ಪಾಲ್ಘರ್‌ನ ಜಿಲ್ಲಾಧಿಕಾರಿ ಕೈಲಾಸ ಶಿಂದೆ ಅವರ ಹತ್ತಿರ ಕಳುಹಿಸದರು, ಅಲ್ಲಿ ಇವರ ಈ ಯೋಜನೆಗೆ ಅನುಮತಿ ಸಿಕ್ಕಿತು.


“ನಂತರ ನಾವು ಸರ್ಕಾರದ ಆರೋಗ್ಯ ಇಲಾಖೆಗೆ ಬೇಕಾದಂತೆ ಹಾಸಿಗೆಗಳನ್ನು ಸಿಧ್ಧಪಡಿಸಲು ವಸಾಯಿಯ ಹಲವು ಫಾಬ್ರಿಕೆಟರ್‌ಗಳನ್ನು ಸಂಪರ್ಕಿಸಿದೆವು ಮತ್ತು ಲಿನಿನ್‌ ತಯಾರಕರನ್ನು ಭೇಟಿ ಮಾಡಿ, ಒಳ್ಳೆಯ ದರದಲ್ಲಿ ಗಾದಿ, ಕಂಬಳಿ, ಹೊದಿಕೆ, ದಿಂಬು ಮತ್ತು ಇತರ ವಸ್ತುಗಳನ್ನು ಪಡೆದೆವು,” ಎಂದು ಎರಿಕ್‌ ದಿ ಹಿಂದೂಸ್ತಾನ್‌ ಟೈಮ್ಸ್‌ಗೆ ಹೇಳಿದರು.


“ಕೋವಿಡ್‌-19 ರೋಗಿಗಳಿಗೆ ಚಿಕಿತ್ಸೆ ನೀಡಲು ಆಮ್ಲಜನಕ ಸಿಲಿಂಡರ್‌ಗಳು ಅಗತ್ಯವಾಗಿರುವುದರಿಂದ ಅವುಗಳನ್ನು ನೀಡಲು ನಾನು ನಿರ್ಧರಿಸದೆವು,” ಎಂದು ಅವರು ವಿವರಿಸಿದರು.


ಮದುವೆ ಕಾರ್ಯಕ್ರಮಗಳು ಮುಗಿದ ನಂತರ ನವ ಜೋಡಿಯು ತಮ್ಮ ಮದುವೆಯ ಬಟ್ಟೆಯಲ್ಲಿಯೆ ಸತ್ಪಲಾ ಹಳ್ಳಿಯ ಕೋವಿಡ್‌-19 ಕೇಂದ್ರಕ್ಕೆ ಭೇಟಿ ನೀಡಿ ಹೊಸ ಹಾಸಿಗೆಗಳಿರುವ ಕೊಣೆಯನ್ನು ಉದ್ಘಾಟಿಸಿದರು.


“ಇಂತಹ ಒಳ್ಳೆಯ ಯೋಚನೆಯುಳ್ಳವರು ಕೋವಿಡ್‌-19 ವಿರುದ್ಧ ಹೋರಾಡಿ, ಹೊರಬರಲು ನೆರವಾಗುತ್ತಾರೆ. ವಸಾಯಿ-ವಿರಾರ್‌ ನ ನಿವಾಸಿಗಳು ಯಾವಾಗಲೂ ಸಮಾಜಕ್ಕೆ ಬೆಂಬಲವಾಗಿ ನಿಂತಿದ್ದಾರೆ ಮತ್ತೆ ಮುಂದೆಯೂ ಹೀಗೆ ಹಲವರು ಮುಂದೆ ಬಂದು ಸಹಾಯ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ,” ಎಂದರು ಸಚಿವರಾದ ಕ್ಷಿತಿಜ್‌ ಠಾಕುರ್‌.


ಲಾಕ್‌ಡೌನ್‌ ಘೋಷಣೆಯಾದಾಗಿನಿಂದಲೂ ಎರಿಕ್‌ ಮತ್ತಿ ಮರ್ವಿನ್‌ ತಮ್ಮನ್ನು ಈ ತರಹದ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಸರ್ಕಾರಕ್ಕೆ ವಲಸೆ ಕಾರ್ಮಿಕರ ಪಟ್ಟಿಯನ್ನು ನೀಡಿ ಮತ್ತು ವಲಸಿಗರು ಮನೆಗೆ ಮರಳುವಂತೆ ಶ್ರಮಿಕ ರೈಲುಗಳ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.