ಸಿಕಂದರಾಬಾದ್‌ನ ತರಕಾರಿ ಮಾರುಕಟ್ಟೆಯ ತ್ಯಾಜ್ಯದಿಂದ ಇಂಧನ, ವಿದ್ಯುತ್‌ ಉತ್ಪಾದನೆ

ಬೊವನ್‌ಪಲ್ಲಿ ಮಾರುಕಟ್ಟೆಯ ತ್ಯಾಜ್ಯದಿಂದ 500 ಯೂನಿಟ್‌ ವಿದ್ಯುತ್‌ ಮತ್ತು 30 ಕೆಜಿ ಜೈವಿಕ ಇಂಧನವನ್ನು ತಯಾರಿಸಲಾಗುತ್ತಿದೆ.

ಸಿಕಂದರಾಬಾದ್‌ನ ತರಕಾರಿ ಮಾರುಕಟ್ಟೆಯ ತ್ಯಾಜ್ಯದಿಂದ ಇಂಧನ, ವಿದ್ಯುತ್‌ ಉತ್ಪಾದನೆ

Wednesday January 20, 2021,

1 min Read

ತೆಲಂಗಾಣದ ಸಿಕಂದರಾಬಾದ್‌ನಲ್ಲಿರುವ ಬೊವನ್‌ಪಲ್ಲಿ ತರಕಾರಿ ಮಾರುಕಟ್ಟೆ ದೇಶದ ಇತರ ಮಾರುಕಟ್ಟೆಗಳಂತೆ ಯಾವತ್ತೂ ಜನರಿಂದ ತುಂಬಿರುತ್ತದೆ. ಚೀಲಗಟ್ಟಲೆ ತರಕಾರಿಗಳನ್ನು ಹೊತ್ತು ತರುವ ಲಾರಿಗಳು ಪ್ರತಿದಿನ ದೊಡ್ಡ ಪ್ರಮಾಣದ ತ್ಯಾಜ್ಯವನ್ನುಂಟು ಮಾಡುತ್ತವೆ. ಒಂದು ಅಂದಾಜಿನ ಪ್ರಕಾರ ಪ್ರತಿದಿನ ಈ ಮಾರುಕಟ್ಟೆಯಲ್ಲಿ 10 ಟನ್‌ ತ್ಯಾಜ್ಯ ಸೃಷ್ಟಿಯಾಗುತ್ತದೆ. ಆದರೆ ವಿಶೇಷವೆಂದರೆ ಈ ತ್ಯಾಜ್ಯದಿಂದ 500 ಯೂನಿಟ್‌ ವಿದ್ಯುತ್‌ ಮತ್ತು 30 ಕೆಜಿ ಜೈವಿಕ ಇಂಧನವನ್ನು ತಯಾರಿಸಲಾಗುತ್ತಿರುವುದು.


ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿಯ ಪ್ರಕಾರ ಇಲ್ಲಿ ಉತ್ಪಾದಿಸಲಾಗಿರುವ ಶಕ್ತಿಯಿಂದ ಆ ಪ್ರದೇಶದ 100 ಬೀದಿ ದೀಪಗಳನ್ನು, 170 ಅಂಗಡಿ, ಒಂದು ಆಡಳಿತ ಕಟ್ಟಡ ಮತ್ತು ನೀರು ಸರಬರಾಜು ಜಾಲವನ್ನು ನಡೆಸಲಾಗುತ್ತಿದೆ. ಜೈವಿಕ ಇಂಧನದಿಂದ ಮಾರುಕಟ್ಟೆಯ ಕ್ಯಾಂಟೀನ್‌ ಅನ್ನು ನಡೆಸಲಾಗುತ್ತಿದೆ.

ಚಿತ್ರಕೃಪೆ: ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌

“ತರಕಾರಿ ಕಸ ಇಷ್ಟೊಂದು ಬೆಲೆಬಾಳುತ್ತದೆ ಎಂದು ಯಾರಿಗೂ ಗೊತ್ತಿರಲಿಲ್ಲ. ಸಾವಯವ ತ್ಯಾಜ್ಯದಿಂದ ವಿದ್ಯುತ್‌ ತಯಾರಿಸುತ್ತಿರುವುದು ರಾಜ್ಯದಲ್ಲೆ ಮೊದಲು,” ಎಂದು ಬೋವನ್‌ಪಲ್ಲಿಯ ಸೆಲೆಕ್ಷನ್‌ ಗ್ರೇಡ್‌ ಸೆಕ್ರೆಟರಿ ಲೋಕಿನಿ ಶ್ರೀನಿವಾಸ ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಗೆ ತಿಳಿಸಿದರು. ಆರು ತಿಂಗಳ ಹಿಂದೆ ಪ್ರಾಯೋಗಿಕವಾಗಿ ಶುರುವಾದದ್ದು ಈಗ ಉತ್ತಮ ಫಲಿತಾಂಶ ನೀಡುತ್ತಿದೆ ಎಂದು ಅವರು ತಿಳಿಸಿದರು.


“ಜೈವಿಕ ತರಕಾರಿ ಪ್ಲ್ಯಾಂಟ್‌ಗೆ ನಾವು ಇಲ್ಲಿ ಉತ್ಪತ್ತಿಯಾಗಿರುವ ಶಕ್ತಿಯನ್ನೆ ಬಳಸುತ್ತಿದ್ದೇವೆ. ಹತ್ತಿರದ ಇತರ ಮಾರುಕಟ್ಟೆ ಮತ್ತು ಸೂಪರ್‌ ಮಾರ್ಕೆಟ್‌ಗಳಿಂದ ತರಕಾರಿ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ. ಬೊವನ್‌ಪಲ್ಲಿ ಮಾರುಕಟ್ಟೆಗೆ ಪ್ರತಿದಿನ 800 ರಿಂದ 900 ಯೂನಿಟ್‌ಗಳಷ್ಟು ವಿದ್ಯುತ್‌ ಬೇಕಾಗುತ್ತದೆ, ಅದರಲ್ಲಿ 500 ಯೂನಿಟ್‌ ತರಕಾರಿ ತ್ಯಾಜ್ಯದಿಂದಲೆ ಬರುತ್ತದೆ,” ಎಂದು ಅವರು ವಿವರಿಸಿದರು.


ಪ್ರಕ್ರಿಯೆಯ ಬಗ್ಗೆ ಮಾತನಾಡುತ್ತಾ ಅವರು ತರಕಾರಿ ತ್ಯಾಜ್ಯವನ್ನು ಶ್ರೆಡ್ಡರ್‌ನತ್ತ(ಚೂರುಚೂರು ಮಾಡುವ) ಒಯ್ಯುವ ಕನ್ವೆಯರ್‌ ಬೆಲ್ಟ್‌ ಮೇಲೆ ಮೊದಲು ಇಡಲಾಗುತ್ತದೆ. ಚೂರುಚೂರಾದ ತ್ಯಾಜ್ಯವನ್ನು ಸ್ಲರ್ರಿಯಾಗಿ ಮಾರ್ಪಡಿಸಿ ಆಮ್ಲಜನಕರಹಿತ ವಿಘಟನೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ದೊಡ್ಡ ಕಂಟೇನರ್‌ಗಳಲ್ಲಿ ಹಾಕಲಾಗುತ್ತದೆ.


ಉತ್ತತ್ತಿಯಾದ ಸಾವಯವ ತ್ಯಾಜ್ಯವನ್ನು ಮಿಥೇನ್‌ ಮತ್ತು ಕಾರ್ಬನ್‌ ಡೈ ಆಕ್ಸೈಡ್‌ ಇರುವ ಜೈವಿಕ ಇಂಧನವಾಗಿ ಮಾರ್ಪಡಿಸಲಾಗುತ್ತದೆ. ನಂತರ ಇಂಧನವನ್ನು 100 ಪ್ರತಿಶತ ಜೈವಿಕ ಇಂಧನ ಜನರೇಟರ್‌ಗಳಲ್ಲಿ ರವಾನಿಸಲಾಗುತ್ತದೆ, ಅಲ್ಲಿ ಅದು ವಿದ್ಯುತ್‌ ಆಗಿ ಪರಿವರ್ತನೆಗೊಳ್ಳುತ್ತದೆ.