ವಿದ್ಯುನ್ಮಾನ ತ್ಯಾಜ್ಯವನ್ನು ಮರುಬಳಕೆ ಮಾಡಿ ಇ-ಬೈಕುಗಳನ್ನು ತಯಾರಿಸಿ ಸಾಧನೆಯ ಶಿಖರವೇರುತ್ತಿರುವ ಗುಜರಾತಿನ 60 ವರ್ಷ ವಯಸ್ಸಿನ ವ್ಯಕ್ತಿ ವಿಷ್ಣು ಪಟೇಲ್

ತಮ್ಮ ದೈಹಿಕ ಮಿತಿಗಳಿಂದ ಕುಗ್ಗದ 60 ವರ್ಷ ವಯಸ್ಸಿನ ವಿಷ್ಣು ಪಟೇಲ್ ಸಮಾಜಕ್ಕೆ ತನ್ನಿಂದಾದ ಕೊಡುಗೆಯನ್ನು ನೀಡಬೇಕೆಂಬ ದೃಢನಿರ್ಧಾರ ಕೈಗೊಂಡು, ಇ-ತ್ಯಾಜ್ಯವನ್ನು ಮರುಬಳಕೆ ಮಾಡಿ ಏಳು ಇ-ಬೈಕುಗಳನ್ನು ತಯಾರಿಸಿದ್ದಾರೆ.

12th Aug 2019
  • +0
Share on
close
  • +0
Share on
close
Share on
close

ಗುಜರಾತಿನ ಸೂರತ್ ನಗರದಲ್ಲಿ ಹುಟ್ಟು ಕಿವುಡರಾಗಿ ಹುಟ್ಟಿದ 60 ವರ್ಷ ವಯಸ್ಸಿನ ವಿಷ್ಣು ಪಟೇಲ್ ಬಾಲ್ಯದಲ್ಲಿ ಪೋಲಿಯೋ ಪೀಡಿತರಾಗಿದ್ದರು. ಇದೆಲ್ಲವನ್ನೂ ಮೀರಿ, ಯಾವುದೇ ತರಬೇತಿ ಅಥವಾ ಹಣಸಹಾಯವಿಲ್ಲದೆ ಇ-ತ್ಯಾಜ್ಯದ ಮರುಬಳಕೆಯಿಂದ ಏಳು ಇ-ಬೈಕುಗಳನ್ನು ತಯಾರಿಸಿ ಯಶಸ್ಸಿನ ಮೆಟ್ಟಿಲು ಏರಿದ್ದಾರೆ.


ರಿಪಬ್ಲಿಕ್ ವರ್ಲ್ಡ್ ವರದಿಯ ಪ್ರಕಾರ ಪಟೇಲ್ ಇಲ್ಲಿಯವರಗೆ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳೂ ಸೇರಿದಂತೆ ಏಳು ಬ್ಯಾಟರಿ ಚಾಲಿತ ವಾಹನಗಳನ್ನು ತಯಾರಿಸಿದ್ದಾರೆ.


ಕ

ವಿಷ್ಣು ಪಟೇಲ್ ಇ-ಬೈಕ್ ತಯಾರಿಕೆಯಲ್ಲಿ ತೊಡಗಿರುವುದು (ಕೃಪೆ: ಔಟ್ ಲುಕ್ ಇಂಡಿಯಾ)

ಯುವರ್ ಸ್ಟೋರಿ ಯೊಂದಿಗೆ ಮಾತನಾಡುತ್ತಾ ವಿಷ್ಣು ಪಟೇಲರ ಪುತ್ರ ನಿಖಿಲ್ ಪಟೇಲ್ ಹೀಗೆ ಹೇಳುತ್ತಾರೆ “ಒಂದು ಬಾರಿ ಚಾರ್ಜ್ ಮಾಡಿದರೆ ನಮ್ಮ ಬ್ಯಾಟರಿ ಚಾಲಿತ ವಾಹನವು ಯಾವುದೇ ಕಾರ್ಬನ್ ಸಂಯುಕ್ತಗಳನ್ನು ವಾತಾವರಣಕ್ಕೆ ಉಗುಳದೇ 35 ರಿಂದ 45 ಕಿ. ಮೀ ಚಲಿಸಬಲ್ಲದಾಗಿದೆ. ಮತ್ತೊಂದು ವಿಶೇಷವೆಂದರೆ, ವಿಕಲಚೇತನ ವ್ಯಕ್ತಿಗಳಿಗೆ ವಾಹನವನ್ನು ಹಿಮ್ಮುಖವಾಗಿ ಚಲಿಸುವುದು ತ್ರಾಸದಾಯಕವಾದ್ದರಿಂದ ಆನ್ ಬೋರ್ಡ್ ಕಂಟ್ರೋಲ್ ಒಂದನ್ನು ವ್ಯವಸ್ಥೆ ಮಾಡಿದ್ದೇವೆ. ಇದರಿಂದಾಗಿ ವಾಹನವನ್ನು ಸರಾಗವಾಗಿ ಹಿಮ್ಮುಖವಾಗಿ ಚಲಿಸುವಂತೆ ಮಾಡಬಹುದು.”


ಕ

ವಿಷ್ಣುಪಟೇಲರ ವರ್ಕ್ ಶಾಪಿನಲ್ಲಿ ತಯಾರಾದ ಇ-ಬೈಕ್


ತ್ಯಜಿಸಿದ ವಾಹನಗಳ ಭಾಗಗಳು, ಟೀವಿ ರಿಮೋಟ್, ಮೊಬೈಲ್ ಫೋನುಗಳು ಮತ್ತು ಲ್ಯಾಪ್- ಟಾಪುಗಳನ್ನು ಉಪಯೋಗಿಸಿಕೊಂಡು ಇ-ವಾಹನಗಳನ್ನು ತಯಾರಿಸುತ್ತಿರುವ ಪಟೇಲರ ಸಂಶೋಧನೆಯು ನಿಜಕ್ಕೂ ಅದ್ವಿತೀಯವಾಗಿದೆ.


ಎ ಎನ್ ಐ ಸಂದರ್ಶನವೊಂದರಲ್ಲಿ ಪಟೇಲ್ ಹೀಗೆ ಹೇಳಿದ್ದಾರೆ:


“ಜನರು ವಿದ್ಯನ್ಮಾನ ತ್ಯಾಜ್ಯವನ್ನು ನಿಷ್ಪ್ರಯೋಜಕವೆಂದು ಎಸೆಯತ್ತಾರೆ. ಆದರೆ ನಾನು ಅದರಿಂದ ಬೈಕುಗಳನ್ನು ತಯಾರಿಸುತಿದ್ದೇನೆ. ವಿಕಲಚೇತನ ಸಮುದಾಯದ ವ್ಯಕ್ತಿಗಳಿಗಾಗಿ ತ್ರಿಚಕ್ರ ವಾಹನಗಳನ್ನು ತಯಾರಿಸುವ ಗುರಿಯನ್ನು ಹೊಂದಿದ್ದೇನೆ”


ಯು-ಟ್ಯೂಬಿನಲ್ಲಿ ಗುಜರಿ ವಸ್ತುಗಳಿಂದ ಬೈಕನ್ನು ತಯಾರಿಸುವುದು ಹೇಗೆಂದು ತೋರಿಸಿದ ವೀಡಿಯೋವೊಂದನ್ನು ನೋಡಿ ಉತ್ತೇಜಿತರಾದ ಪಟೇಲ್ ಇ-ಬೈಕುಗಳನ್ನು ತಯಾರಿಸಲು ಮುಂದಾಗಿ ಯಶಸ್ವಿಯಾದರು. ನಂತರ ವಿಕಲಚೇತನರಿಗಾಗಿ ಎಲೆಕ್ಟ್ರಿಕ್ ಬೈಕುಗಳನ್ನು ತಯಾರಿಸುವ ಹವ್ಯಾಸವನ್ನು ಬೆಳೆಸಿಕೊಂಡರು. ಕಳೆದ ಏಳು ತಿಂಗಳಿನಿಂದ ಅವರು ಈ ಹವ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ನಿಖಿಲ್ ಹೇಳುತ್ತಾರೆ.


ಬಹಳಷ್ಟು ಮಂದಿ ತ್ಯಾಜ್ಯ ವಸ್ತುಗಳಿಂದ ಕಲಾಕೃತಿಗಳನ್ನು ಸೃಷ್ಟಿಸುವುದನ್ನು ನಾವು ಕಂಡಿದ್ದೇವೆ. ಆದರೆ ತಮ್ಮ ದೈಹಿಕ ಮಿತಿಗಳ ನಡುವೆ ಯಾವುದೇ ಹಣಸಹಾಯವಿಲ್ಲದೇ ತ್ಯಾಜ್ಯದಿಂದ ಅದ್ವಿತೀಯವಾದುದೊಂದನ್ನು ತಯಾರಿಸುವುದು ನಿಜಕ್ಕೂ ಮಹತ್ತರವಾದ ಸಾಧನೆ. ಅಲ್ಲವೇ?

  • +0
Share on
close
  • +0
Share on
close
Share on
close
Report an issue
Authors

Related Tags

Latest

Updates from around the world

ಸೈನ್ ಅಪ್ ನಮ್ಮ ದೈನಂದಿನ ಸುದ್ದಿಪತ್ರಕ್ಕಾಗಿ

Our Partner Events

Hustle across India